ನಟಿ ಆಲಿಯಾ ಭಟ್ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್
ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟಿ ಆಲಿಯಾ ಭಟ್ ಈಗ ತಮ್ಮ ಜೀವನದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅದೇನದು?
ಬಾಲಿವುಡ್ ಚಿತ್ರದ ಖ್ಯಾತ ನಟಿಯರಲ್ಲಿ ಟಾಪರ್ ಸ್ಥಾನದಲ್ಲಿ ಇರುವಾಕೆ ಆಲಿಯಾ ಭಟ್ (Alia Bhatt). ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ಅವರ ಪುತ್ರಿ ಆಲಿಯಾ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎನ್ನುವ ಖ್ಯಾತಿಯನ್ನೂ ಗಳಿಸಿದ್ದಾರೆ. ಭಾರತೀಯ ಮೂಲದ ಮತ್ತು ಬ್ರಿಟಿಷ್ ಪೌರತ್ವದ ಈ ನಟಿಗೆ ಇದಾಗಲೇ ಮೂರು ಫಿಲ್ಮ್‌ಫೇರ್ (Filmfare) ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳೂ ದೊರೆತಿವೆ. ಈಕೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಈಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’(Gangubai Kathiawadi) ಯಲ್ಲಿನ ಆಲಿಯಾ ಅಭಿನಯಕ್ಕೆ ಮನಸೋಲದವರೇ ಇಲ್ಲ. ಮುಂಬೈನ ಕಾಮಾಟಿಪುರದ ವೇಶ್ಯೆ, ಮಾಫಿಯಾ ಡಾನ್ ಗಂಗೂಬಾಯಿ ಅವರ ಜೀವನಚರಿತ್ರೆಯೇ ಈ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಮ್ಯಾಜಿಕ್ ಮಾಡಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ ಬರೋಬ್ಬರಿ 10.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಹೀಗೆ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಆಲಿಯಾ ಭಟ್ ಈಗ ಎಲ್ಲರಿಗೂ ಶಾಕಿಂಗ್ (Shocking) ನ್ಯೂಸ್ ಕೊಟ್ಟಿದ್ದಾರೆ. ತಮ್ಮ ವೃತ್ತಿಜೀವನದ ಬಗ್ಗೆ ದೊಡ್ಡ ನಿರ್ಧಾರವನ್ನೇ ಅವರು ತೆಗೆದುಕೊಂಡು ಫ್ಯಾನ್ಸ್ ನಿರಾಸೆಗೆ ಕಾರಣರಾಗಿದ್ದಾರೆ. ಅಷ್ಟಕ್ಕೂ ಆಲಿಯಾ ತೆಗೆದುಕೊಂಡಿರುವ ನಿರ್ಧಾರ ಎಂದರೆ ಚಿತ್ರರಂಗದಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದು! ನಿಜ. ಆಲಿಯಾ ಸ್ವಲ್ಪ ವರ್ಷ ಚಿತ್ರರಂಗದಿಂದ ದೂರವಾಗಲಿದ್ದಾರಂತೆ. ಇದಕ್ಕೆ ಕಾರಣ ಅವರು ತಾಯ್ತನದ ಸಂಪೂರ್ಣ ಖುಷಿಯನ್ನು ಅನುಭವಿಸುವುದಕ್ಕಾಗಿ. ತಾಯ್ತನ ಅನುಭವಿಸುತ್ತಿರುವ ಆಲಿಯಾ ಭಟ್, ಮಗಳ ಲಾಲನೆ ಪಾಲನೆಗಾಗಿ ಕೆಲ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಲಿಯಾ, ತಮ್ಮ ವೃತ್ತಿಜೀವನದ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ. ಅನೇಕ ನಟಿಯರು ತಾಯಿಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದ ಅನೇಕ ಉದಾಹರಣೆಗಳಿವೆ. ಅವರ ಹಾದಿಯಲ್ಲಿ ಈಗ ಆಲಿಯಾ ಸಾಗಿದ್ದಾರೆ.
ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ: ನಿರ್ಮಾಪಕನ ಕರಾಳ ಕೃತ್ಯ ಬಿಚ್ಚಿಟ್ಟ Flora Saini
2022ರಲ್ಲಿ ಏಪ್ರಿಲ್ 14ರಂದು ನಟ ರಣಬೀರ್ ಕಪೂರ್ (Ranbeer Kapoor) ಅವರ ಜೊತೆ ಮದುವೆಯಾಗಿರುವ ಆಲಿಯಾ, ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು. ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
ನವೆಂಬರ್ ತಿಂಗಳಿನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿ ಅಮ್ಮನಾಗಿರುವ (motherhood) ಆಲಿಯಾ ಸಹಜವಾಗಿ ಹಲವು ನಟಿಯರಂತೆ ಸಿನಿಮಾದಿಂದ ತಾತ್ಕಾಲಿಕ ದೂರ ಇರುವ ಯೋಚನೆ ಮಾಡಿದ್ದಾರೆ. ಈ ಕುರಿತು ಹೇಳಿಕೊಂಡಿರುವ ನಟಿ, ತಾಯಿಯಾದ ಬಳಿಕ ನನ್ನ ಆದ್ಯತೆಗಳು ಬದಲಾಗಿವೆ. ಸದ್ಯ ಜೀವನದಲ್ಲಿ ನನ್ನ ಮೊದಲ ಆದ್ಯತೆ ಮಗಳು ಮಾತ್ರ ಎಂದಿದ್ದಾರೆ. ಮಗಳು ಮೊದಲ ಆದ್ಯತೆಯಾದರೆ, ನಟನೆ ನನ್ನ ಮೊದಲ ಪ್ರೀತಿ. ಆದರೆ ಸದ್ಯ ಪ್ರೀತಿಗಿಂತಲೂ ಆದ್ಯತೆ ಮೇಲು. ತಾತ್ಕಾಲಿಕವಾಗಿ ಬ್ರೇಕ್ (break) ತೆಗೆದುಕೊಳ್ಳುತ್ತಿದ್ದೇನೆ. ಆಮೇಲೆ ನಟನೆಗೆ ಮತ್ತೆ ಮರಳುತ್ತೇನೆ. ಈಗ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕಿಂತ ಚಿತ್ರದ ಗುಣಮಟ್ಟದ ಬಗ್ಗೆ ಯೋಚಿಸಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಅತ್ಯುತ್ತಮ ಚಿತ್ರಗಳನ್ನು ಮಾತ್ರ ಮಾಡಲು ಬಯಸುತ್ತೇನೆ ಎಂದಿದ್ದಾರೆ ಆಲಿಯಾ.
ಎದೆ ಭಾಗಕ್ಕೆ ಸರ್ಜರಿ- ಬಾಲಿವುಡ್ನ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ
ಇನ್ನು ಆಲಿಯಾ ಭಟ್ ಅವರ ಕುರಿತು ಹೇಳುವುದಾದರೆ, 1999ರರ ಥ್ರಿಲ್ಲರ್ ಸಂಘರ್ಷ ಚಿತ್ರದಲ್ಲಿ ಬಾಲ್ಯನಟಿಯಾಗಿ ನಟಿಸಿದ್ದ ಆಲಿಯಾ, ನಂತರ, ಭಟ್ ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್(2012) ನಲ್ಲಿ ನಾಯಕಿಯಾಗಿ ನಟಿಸಿದರು. 2 ಸ್ಟೇಟ್ಸ್ (2014), ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ (2014), ಮತ್ತು ಬದ್ರಿನಾಥ್ ಕಿ ದುಲ್ಹಾನಿಯಾ (2017) ಸೇರಿದಂತೆ ಜೋಹರ್ ಅವರ ಸ್ಟುಡಿಯೋ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ನಟಿಸಿದ ಪಾತ್ರಗಳೊಂದಿಗೆ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಡಿಯರ್ ಜಿಂದಗಿ (2016) , ಹೈವೇ (2014) ಚಿತ್ರದಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಆಲಿಯಾ ಭಟ್ಗೆ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ದಕ್ಕಿತ್ತು. ಇದೇ ಸಮಾರಂಭದಲ್ಲಿ ಮೂರು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನೂ ಅವರು ಗೆದ್ದರು. ಇದಾದ ಬಳಿಕ ಅವರಿಗೆ ಇನ್ನಷ್ಟು ಕೀರ್ತಿ ಕೊಟ್ಟ ಚಿತ್ರ ಉಡ್ತಾ ಪಂಜಾಬ್ (2016), ರಾಜಿ (2018) ಮತ್ತು ಗಲ್ಲಿ ಬಾಯ್ (2019) (Galli Boys) ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಅದ್ಭುತ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಆಲಿಯಾ ಸದ್ಯ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿ ಶಾಕ್ ಕೊಟ್ಟಿದ್ದಾರೆ. ಆದಷ್ಟು ಬೇಗ ತಮ್ಮ ನೆಚ್ಚಿನ ನಟಿ ಮತ್ತೆ ಬಣ್ಣ ಹಚ್ಚಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.