ಎದೆ ಭಾಗಕ್ಕೆ ಸರ್ಜರಿ- ಬಾಲಿವುಡ್ನ ಕರಾಳ ಮುಖ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ
ಬಾಲಿವುಡ್ನಲ್ಲಿ ನೆಲೆಯೂರಬೇಕಾದರೆ ಹೇಗೆ ಅಡ್ಜಸ್ಟ್ ಆಗಬೇಕು ಎನ್ನುವ ಇನ್ನೊಂದು ಕರಾಳಮುಖ ತೆರೆದಿಟ್ಟಿದ್ದಾರೆ ನಟಿ ಸಮೀರಾ ರೆಡ್ಡಿ. ಅವರು ಹೇಳಿದ್ದೇನು?
ಚಿತ್ರ ತಾರೆಯರ ಬದುಕು ಅಷ್ಟು ಸುಲಭವಲ್ಲ. ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ಅದರ ಹಿಂದೆ ಅವರು ಪಡುವ ಶ್ರಮ ಅಷ್ಟಿಷ್ಟಲ್ಲ. ಚಿತ್ರರಂಗದಲ್ಲಿ ಸದಾ ಕೆಲಸ ಗಿಟ್ಟಿಸಿಕೊಳ್ಳಲು ಯಾವ ಹಂತಕ್ಕಾದರೂ ಹೋಗಲು ಸೈ ಎನ್ನುವಂತಿರಬೇಕು ಎಂಬ ಬಗ್ಗೆ ಇದಾಗಲೇ ಹಲವು ನಟ-ನಟಿಯರು ಹೇಳಿಕೊಂಡಿದ್ದಾರೆ. ಮೀ-ಟೂ (Mee too) ಅಭಿಯಾನ, ಕಾಸ್ಟ್ ಕೌಚಿಂಗ್ ಕುರಿತು ಇತ್ತೀಚಿನ ದಿನಗಳಲ್ಲಿ ನಟಿಯರು ಮಾತ್ರವಲ್ಲದೇ ನಟರು ಕೂಡ ತಮಗಾಗಿರುವ ಭಯಾನಕ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಬಹುತೇಕ ಯಶಸ್ವಿ ನಟಿಯರು ನಿರ್ದೇಶಕ, ನಿರ್ಮಾಪಕರು (Producers) ಸೇರಿದಂತೆ ಚಿತ್ರರಂಗದ ಗಣ್ಯರ ಜೊತೆ 'ಅಡ್ಜಸ್ಟ್' ಆಗುತ್ತಿದ್ದಾರೆ ಎನ್ನುವುದು ಕೂಡ ಈಗೆನೂ ಗೌಪ್ಯವಾಗಿ ಉಳಿದಿಲ್ಲ. ಇದೀಗ ಬಾಲಿವುಡ್ನ ಇನ್ನೊಂದು ಮುಖವನ್ನು ಬಿಚ್ಚಿಟ್ಟಿದ್ದಾರೆ ಬಹುಭಾಷಾ ತಾರೆ ಸಮೀರಾ ರೆಡ್ಡಿ (Sameera Reddy)
ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿರುವ 42 ವರ್ಷದ ಸಮೀರಾ ರೆಡ್ಡಿ ಕನ್ನಡದಲ್ಲಿ ಕಿಚ್ಚ ಸುದೀಪ್ (Kiccha Sudeep) ಅಭಿನಯದ `ವರದನಾಯಕ' (Varadanayaka) ಚಿತ್ರ ಸೇರಿದಂತೆ ಕೆಲ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಈಕೆ ಸಕ್ರಿಯವಾಗಿರುವ ನಟಿ. ಪ್ರಥಮ ಬಾರಿಗೆ ಪಂಕಜ್ ಉದಾಸ್ ಅವರ ಮ್ಯೂಸಿಕ್ ಅಲ್ಬಮ್ನಲ್ಲಿ ಕಾಣಿಸಿಕೊಂಡ ಇವರು 2002 ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. 2002ರ ಮೈನೆ ದಿಲ್ ತುಝ್‌ಕೋ ದಿಯಾ ದ ಮೂಲಕ ಸಮೀರಾ ರೆಡ್ಡಿ ಅವರು ಬಾಲಿವುಡ್ಗೆ ಪದಾರ್ಪಣೆ ಮಾಡಿ ಅಲ್ಲಿಂದ ಡರ್‌ನಾ ಮನಾ ಹೈ (2003), ಅನಿಲ್ ಕಪೂರ್ ಜೊತೆಗಿನ ಮುಸಾಫಿರ್ (2004), ಜೈ ಚಿರಂಜೀವಾ (2005), ಟ್ಯಾಕ್ಸಿ ಸಂಖ್ಯೆ 9211 (2006), ಅಶೋಕ್ (2006), ರೇಸ್ (2008), ವಾರಣಮ್ ಆಯಿರಮ್ (2008) , ಡಿ ದಾನಾ ಡಾನ್ (2009), ಆಕ್ರೋಶ್ (2010), ವೆಟ್ಟೈ (2012) ಮತ್ತು ತೇಜ಼್ (2012) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಚಾನ್ಸ್ ಕೊಡುವ ನೆಪದಲ್ಲಿ ಹಾಸಿಗೆಗೆ ಕರೆದಿದ್ರು: ಸ್ಫೋಟಕ ಸತ್ಯ ಬಿಚ್ಚಿಟ್ಟ ನಯನತಾರ
ನಾನು 19 ರ ವಯಸ್ಸಿನವರೆಗೆ ಕನ್ನಡಕ ಧರಿಸಿದ ಧಡೂತಿ ಹುಡುಗಿಯಾಗಿದ್ದೆ. ಕುಟುಂಬದಲ್ಲಿ ಕುರೂಪಿ ಮಗು ನಾನು ಎಂದು ತಮ್ಮನ್ನು ತಾವು ಹೇಳಿಕೊಂಡಿದ್ದ ಸಮೀರಾ ಅವರು ಕೊನೆಗೆ ಸಾಕಷ್ಟು ಶ್ರಮಪಟ್ಟು, ವರ್ಕ್ಔಟ್ (workout) ಮಾಡಿ ಚಿತ್ರರಂಗಕ್ಕೆ ಸೈ ಎನಿಸುವಷ್ಟರ ಮಟ್ಟಿಗೆ ಬೆಳೆದು ನಿಂತರು. ಇದೀಗ ಅವರು ಹೇಳಿರುವ ಬಾಲಿವುಡ್ನ ಇನ್ನೊಂದು ಕರಾಳ ಮುಖದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅವರು ಹೇಳಿದ್ದು ದೇಹ ಸೌಂದರ್ಯದ ಕುರಿತು! ನಟಿಯರು ಎಂದರೆ ಹೀಗೆಯೇ ಇರಬೇಕು ಎನ್ನುವ ಸಾಮಾನ್ಯ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ದೇಹದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ ಎಂಬ ತಮ್ಮ ಅನುಭವವನ್ನು ನಟಿ ಸಮೀರಾ ಈಗ ತೆರೆದಿಟ್ಟಿದ್ದಾರೆ.
“ಸುಮಾರು 10 ವರ್ಷಗಳ ಹಿಂದೆ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಸರ್ಜರಿ (plastic surgery) ಮಾಡಿಸಿಕೊಳ್ಳುವ ಅನಿವಾರ್ಯತೆ ಇತ್ತು. ಮೂಗು, ಬಾಯಿ, ಮೂಳೆ... ಹೀಗೆ ಸಿನಿಮಾ ರಂಗಕ್ಕೆ ಅಗತ್ಯವಿರುವ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಬೇಕಾಗಿತ್ತು. ಬಾಲಿವುಡ್ನಲ್ಲಿ (bollywood) ನೆಲೆಯೂರಬೇಕು ಎಂದರೆ ಇದಕ್ಕೆ ಅಡ್ಜಸ್ಟ್ ಆಗಲೇಬೇಕು. ಇವೆಲ್ಲವನ್ನೂ ಒಂದು ಹಂತಕ್ಕೆ ಒಪ್ಪಿಕೊಳ್ಳಬಹುದೇನೋ. ಆದರೆ ಸ್ತನದ ಗಾತ್ರ ದೊಡ್ಡದಾಗಿ ಕಾಣಿಸುವಂತೆ ಮಾಡಲು ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ಅನಿವಾರ್ಯತೆಯೂ ಇಲ್ಲಿದೆ ಎಂಬ ಕರಾಳತೆಯನ್ನು ನಟಿ ಹೇಳಿದ್ದಾರೆ. 'ನನ್ನ ಎದೆಯ ಮೇಲೂ ನಿರ್ದೇಶಕರ ಕಣ್ಣು ನೆಟ್ಟಿತ್ತು. ಅದು ಸುಂದರವಾಗಿ ಕಾಣಿಸಬೇಕು ಎಂದರೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅದಕ್ಕೆ ನಾನು ರೆಡಿ ಇರಲಿಲ್ಲ. ಇದೇ ಕಾರಣಕ್ಕೆ ಆ ಭಾಗ ದೊಡ್ಡದಾಗಿ ಕಾಣಲು ಸದಾ ನಾನು ಎದೆಯನ್ನು ಪ್ಯಾಡ್ ಮಾಡಬೇಕಾಗಿತ್ತು, ಇದೊಂದು ರೀತಿಯಲ್ಲಿ ಮುಜುಗರ ಆಗುತ್ತಿದ್ದರೂ ಶಸ್ತ್ರಚಿಕಿತ್ಸೆ (operation) ಮಾಡಿಸಿಕೊಂಡು ಆ ಭಾಗವನ್ನು ದೊಡ್ಡದಾಗಿ ಕಾಣುವಂತೆ ಮಾಡುವ ಬದಲು ಇದೇ ಬೆಸ್ಟ್ ಎನಿಸಿತ್ತು ಎಂದಿದ್ದಾರೆ ನಟಿ.
ಕಾಸ್ಟ್ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!
ಇವೆಲ್ಲಾ ಮಾಡಿದ ಮೇಲೆ ನಾನೇಕೆ ಹೀಗೆಲ್ಲಾ ಮಾಡಬೇಕು ಎಂದು ಯೋಚಿಸಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಎಷ್ಟೇ ಹೇಳಿದರೂ ದೇವರ ದಯೆಯಿಂದ ನಾನು ಅದನ್ನು ಮಾಡಿಸಿಕೊಳ್ಳಲಿಲ್ಲ.ಈ ವಿಷಯದಲ್ಲಿ ನಾನು ದೇವರಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಅಂಥ ಒಂದು ದುರ್ಬದ್ಧಿಯನ್ನು ನನಗೆ ದೇವರು ಕೊಡದಿದುದ್ದಕ್ಕೆ ಆತನಿಗೆ ಧನ್ಯವಾದ ಹೇಳಲೇಬೇಕು ಎಂದಿದ್ದಾರೆ ಸಮೀರಾ. ಎಷ್ಟೋ ಮಂದಿ ನಟಿಯರು ಇದನ್ನು ಮಾಡಿಸಿಕೊಳ್ಳುವುದು ಮಾಮೂಲು. ಅದು ಅವರ ಆಯ್ಕೆ. ಅದು ಅವರಿಗೆ ಸಂತೋಷವನ್ನುಂಟುಮಾಡಿದರೆ, ಯಾರೂ ಏನೂ ಹೇಳಲು ಆಗದು, ಹೀಗೆ ಮಾಡಬೇಡಿ ಎನ್ನಲು ನಾವ್ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ತಾವು ಇಂಥದ್ದೊಂದು ನಿರ್ಧಾರಕ್ಕೆ ಬರದುದಕ್ಕೆ ಖುಷಿಯಾಗಿದೆ ಎಂದಿದ್ದಾರೆ. ಹಲವು ಸಂದರ್ಭಗಳಲ್ಲಿ ಈ ಕಾರಣದಿಂದ ಒಳ್ಳೊಳ್ಳೆ ಅವಕಾಶಗಳು ತಪ್ಪುವುದು ಉಂಟು. ಆದರೆ ಮನಸ್ಸಿಗೆ ವಿರುದ್ಧವಾಗಿ ದೇಹವನ್ನು ವಿನ್ಯಾಸಮಾಡಿಕೊಳ್ಳಲು ನನಗಂತೂ ಇಷ್ಟವಿಲ್ಲ ಎಂದಿದ್ದಾರೆ. 2014 ರಂದು ಉದ್ಯಮಿ ಅಕ್ಷಯ್ ವಾರ್ಡೆ (Akshay Warde) ಅವರನ್ನು ಸಮೀರಾ ವಿವಾಹವಾಗಿದ್ದು ಈ ದಂಪತಿಗೆ ಈಗ ಇಬ್ಬರು ಮಕ್ಕಳು.