ಖುಷಿ ಕಪೂರ್‌ ತನ್ನ ದೇಹದ ನಾಲ್ಕಾರು ಕಡೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಅದರಲ್ಲಿ ಆಕೆಯ ಬಾಯ್‌ಫ್ರೆಂಡ್‌ ಟ್ಯಾಟೂ ಕೂಡ ಇದೆಯಾ? ಖುಷಿ ಏನ್‌ ಹೇಳ್ತಾಳೆ? 

ನಟಿ ಶ್ರೀದೇವಿಯ ‌(sridevi) ಎರಡನೇ ಮಗಳು, ಜಾನ್ವಿ ಕಪೂರ್‌ (Jahnvi kapoor) ತಂಗಿ ಖುಷಿ ಕಪೂರ್‌ (khushi kapoor) ಕೆಲವು ಹೊಸ ಹಿಂದಿ ಚಿತ್ರಗಳ ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಆಗಾಗ ತನ್ನ ಹಾಟ್‌ ಹಾಟ್‌ ಫೋಟೋಗಳನ್ನು ಹಾಕುವ ಖುಷಿ ಕಪೂರ್‌ ದೇಹದಲ್ಲಿ ನಾಲ್ಕಾರು ಕಡೆ ಟ್ಯಾಟೂ ಹಾಕಿಸಿಕೊಂಡಿದಾಳಂತೆ. ಎಲ್ಲೆಲ್ಲಿದೆ ಈ ಟ್ಯಾಟೂ?

ಖುಷಿ ತೋಳಿನ ಮೇಲೆ, ಹೊಟ್ಟೆಯ ಬಳಿ ಮತ್ತು ಬೆನ್ನಿನ ಸ್ವಲ್ಪ ಕೆಳಭಾಗದಲ್ಲಿ ಹಚ್ಚೆಗಳನ್ನು (tattoo) ಹಾಕಿಸಿಕೊಂಡಿದ್ದಾಳೆ. ಒಂದು ಕಡೆ ರೋಮನ್ ಅಂಕಿಗಳಲ್ಲಿ ತನ್ನ ಸಹೋದರಿ ಜಾನ್ವಿ ಕಪೂರ್, ತಂದೆ ಬೋನಿ ಕಪೂರ್ ಮತ್ತು ತಾಯಿ ಶ್ರೀದೇವಿ ಅವರ ಜನ್ಮದಿನಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಆಕೆಯ ಬಾಯ್‌ಫ್ರೆಂಡ್‌ ಹೆಸರನ್ನೂ ಬರೆಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ಇದು ಜಾನ್ವಿ- ಖುಷಿ ಇಬ್ಬರ ಚೈಲ್ಡ್‌ಹುಡ್‌ ಫ್ರೆಂಡ್‌ ಅಕ್ಷತ್‌ ಹೆಸರೇನಾ ಎಂಬುದು ಸ್ಪಷ್ಟವಾಗಿಲ್ಲ.

ಶಾರುಖ್ ಖಾನ್ ಸಿನಿಮಾಗಾಗಿ ಹಾಟ್ ಆದ ದೀಪಿಕಾ; ಸ್ವಿಮ್‌ಸೂಟ್ ಫೋಟೋ ವೈರಲ್

ತುಂಬಾ ವಿಶೇಷವಾಗಿರೋದು ಅವಳ ಕೆಳ ಬೆನ್ನಿನ ಮೇಲಿರುವ ಟ್ಯಾಟೂ. ಅದರಲ್ಲಿ "ಖುದ್ ಕಿ ರಾಹ್ ಬನಾವೋ" (ನಿನ್ನದೇ ಹಾದಿಯನ್ನು ನಿರ್ಮಿಸಿಕೋ) ಅಂತ ಬರೆದಿದೆ. ಖುಷಿ ಇನ್ನೂ ಮೂರು ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾಳೆ. ಅವಳ ಬಲಗೈಯ ಒಳಗಿನ ಭಾಗದಲ್ಲಿ ಒಂದು ಹೂವಿನ ವಿನ್ಯಾಸವಿದೆ. ಇನ್ನೊಂದು ಎಡ ಮಣಿಕಟ್ಟಿನ ಒಳಭಾಗದಲ್ಲಿ ಈವಿಲ್‌ ಐ ಇದೆ. ಖುಷಿಯ ಬಲ ಮಣಿಕಟ್ಟಿನ ಮೇಲೆ ಇಂಗ್ಲಿಷ್‌ನಲ್ಲಿ ಲವ್‌ ಸಿಂಬಲ್‌ ಇದೆ. 2021ರಲ್ಲಿ, ಅರ್ಜುನ್ ಕಪೂರ್‌ ಸಹೋದರಿ ಅಂಶುಲಾ ಕಪೂರ್ ಜತೆಗೆ ಖುಷಿ ಹೊಂದಾಣಿಕೆಯ ಟ್ಯಾಟೂವನ್ನು ಹಾಕಿಸಿಕೊಂಡಳು. ಅಂಶುಲಾ ಜತೆಗೆ ತೆಗೆಸಿಕೊಂಡ ತಮ್ಮ ಹಚ್ಚೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಳು.

21 ವರ್ಷದ ಖುಷಿ ಇನ್ನೂ ಯಾವುದೇ ಗಮನ ಸೆಳೆಯುವ ಸಿನಿಮಾದಲ್ಲಿ ನಟಿಸಿಲ್ಲವಾದ್ರೂ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾಳೆ. ಸಹೋದರಿ ಜಾನ್ವಿ ಥರವೇ ಈಕೆ ಕೂಡ ತುಂಬಾ ಒಳ್ಳೇ ಫ್ಯಾಶನ್‌ ಸೆನ್ಸ್‌ ಹೊಂದಿದ್ದಾಳೆ. ಆಕೆಯಷ್ಟೇ ಹಾಟ್‌ ಪಿಕ್‌ಗಳನ್ನು ಹಂಚಿಕೊಳ್ತಾಳೆ. ಖುಷಿ ಬಾಲಿವುಡ್‌ಗೆ ಅಡಿಯಿಡುತ್ತಿದ್ದಾಳೆ. ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾಳೆ. ಈ ಚಿತ್ರದ ನಿರ್ದೇಶಕರು ಜೋಯಾ ಅಖ್ತರ್‌. ಈ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಆಕೆ ಸಖತ್ ಮಿಂಚುತ್ತಿದ್ದಾಳೆ.

ಸೀತೆಯಾಗಿ ಬಾಲಿವುಡ್‌ಗೆ ಹಾರಲು ಸಜ್ಜಾದ ಸಾಯಿ ಪಲ್ಲವಿ; ಇಲ್ಲಿದೆ ಮಾಹಿತಿ

ಈ ನಡುವೆ ಖುಷಿ- ಜಾನ್ವಿಗೆ ಸಂಬಂಧಿಸಿದ ಒಂದು ಗಾಸಿಪ್‌ ಕೂಡ ಜೋರಾಗಿ ಹರಿದಾಡಿತ್ತು. ತನ್ನ ಅಕ್ಕ ಜಾನ್ವಿ ಕಪೂರ್ (Janhvi Kapoor) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಅಕ್ಷತ್ ರಾಜನ್ ಅವರ ಜೊತೆ ಖುಷಿ ಕೂಡ ರೊಮ್ಯಾಂಟಿಕ್‌ ಸಂಬಂಧ ಹೊಂದಿದ್ದಳು; ಇವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಕೂಡ ವರದಿಯಾಗಿತ್ತು. ಅಕ್ಷತ್ ರಾಜನ್ ಅವರೊಂದಿಗೆ ಖುಷಿ ಕಪೂರ್‌ ನಡೆಸಿದ ರೊಮ್ಯಾಂಟಿಕ್‌ ಸಂಭಾಷಣೆ ಕೂಡ ಸಖತ್‌ ವೈರಲ್‌ ಆಗಿತ್ತು. ಅಕ್ಷತ್ ರಾಜನ್‌ ಜೊತೆ ಖುಷಿ ಫೋಟೋಗೆ ಪೋಸ್ ನೀಡಿದ್ದು ಕಂಡುಬಂದಿದೆ. ಖುಷಿ ಮತ್ತು ಅಕ್ಷತ್ ನಡುವಿನ 'ಐ ಲವ್ ಯೂ' ವಿನಿಮಯ ಎಲ್ಲರ ಗಮನ ಸೆಳೆದಿದೆ. ಆದರೆ ಅಕ್ಷತ್‌ ತಮ್ಮ ಚೈಲ್ಡ್‌ಹುಡ್‌ ಫ್ರೆಂಡ್‌, ನಮ್ಮ ನಡುವೆ ಅಂಥದ್ದೇನಿಲ್ಲ ಎಂದು ಕೂಡ ಜಾನ್ವಿ ಹೇಳಿಕೊಂಡಿದ್ದಾಳೆ.

ʼದಿ ಆರ್ಚೀಸ್‌ʼನಲ್ಲಿ (the Archies) ಖುಷಿ ಜೊತೆಗೆ ಶಾರುಖ್ ಖಾನ್ (Sharukh Khan) ಅವರ ಮಗಳು ಸುಹಾನಾ ಖಾನ್, ಅಮಿತಾಭ್‌ (Amitabh) ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ಕೂಡ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡುತ್ತಾರೆ. ಆರ್ಚೀಸ್ 1960ರ ದಶಕದಲ್ಲಿ ನಡೆಯುವ ಮ್ಯೂಸಿಕ್‌ ಡ್ರಾಮಾ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಯುವ ನಟರು ಆರ್ಚಿ ಕಾಮಿಕ್ಸ್‌ನ ಪ್ರಸಿದ್ಧ ಪಾತ್ರಗಳನ್ನು ನಿರ್ವಹಿಸುತ್ತಾರೆ. ಜೊತೆಗೆ, ಮಿಹಿರ್ ಅಹುಜಾ, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.