Asianet Suvarna News Asianet Suvarna News

ಶಾರುಖ್ ಖಾನ್ ಸಿನಿಮಾಗಾಗಿ ಹಾಟ್ ಆದ ದೀಪಿಕಾ; ಸ್ವಿಮ್‌ಸೂಟ್ ಫೋಟೋ ವೈರಲ್

ದೀಪಿಕಾ ಪಡುಕೋಣೆ ಅವರ ಹಾಟ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ವಿಮ್ ಸೂಟ್ ನಲ್ಲಿ ಮಿಂಚಿರುವ ದೀಪಿಕಾ ಅವರ ಈ ಲುಕ್ ಪಠಾಣ್ ಸಿನಿಮಾದಾಗಿದೆ.

Deepika Padukone in golden monokini in first look from Pathaan look viral sgk
Author
First Published Dec 9, 2022, 5:41 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ಸಿನಿಮಾ ಮಾಡುತ್ತಿದ್ದಾರೆ. ಸತತ ಸೋಲಿನ ಬಳಿಕ ಶಾರುಖ್ ಖಾನ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಪಠಾಣ್ ಸಿನಿಮಾದ ಶೂಟಿಂಗ್ ಮುಗಿಸಿರುವ ಶಾರುಖ್ ಖಾನ್ ಸದ್ಯ ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೆ ಈಗಾಗಲೇ ಪಠಾಣ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಇದೀಗ ಹಾಡನ್ನು ಬಿಡುಗಡೆ ಮಾಡಲು ಸಿನಿಮಾತಂಡ ಸಜ್ಜಾಗಿದೆ. ಈ ನಡುವೆ ಸಿನಿಮಾದಿಂದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಶಾರುಖ್ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಹಾಟ್ ಲುಕ್ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

ನಟಿ ದೀಪಿಕಾ ಸ್ವಿಮ್ ಸೂಟ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇದು ಪಠಾಣ್ ಸಿನಿಮಾದ ಹಾಡಿನ ಲುಕ್ ಆಗಿದೆ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ಹಾಡಿನಲ್ಲಿ ದೀಪಿಕಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಈ ಲುಕ್ ನೋಡಿದ್ರೆ ಗೊತ್ತಾಗುತ್ತಿದೆ. ಪಠಾಣ್ ಸಿನಿಮಾದ ಮೊದಲ ಹಾಡು ಡಿಸೆಂಬರ್ 12ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ದೀಪಿಕಾ ಲುಕ್ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಿಸಿದೆ. 

ಲೇಡಿ ಸಿಂಗಂ ಆಗಿ ಅಜಯ್ ದೇವಗನ್‌ಗೆ ಟಫ್‌ ಕಾಂಪಿಟೇಷನ್‌ ನೀಡಲಿದ್ದಾರೆ ಡಿಪ್!

ಅಂದಹಾಗೆ ದೀಪಿಕಾ ಲುಕ್‌ನ ಫೋಟೋವನ್ನು ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಡಿಸೆಂಬರ್ 12ರಂದು ಹಾಡು ಬಿಡುಗಡೆಯಾಗುತ್ತಿದೆ. ಜಮನರಿ 25, 2023ರಯಲ್ಲಿ ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಲಭ್ಯ. ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ' ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ತೆರೆಮೇಲೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಮತ್ತು ಶಾರುಖ್ ಖಾನ್ ಜೊತೆಗೆ ಜಾನ್ ಅಬ್ರಹಾಂ ಕೂಡ ನಟಿಸುತ್ತಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಮಿಂಚಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.

'ಜಡೆ' ಹಾಕಿಕೊಂಡು ಬಂದ ದೀಪಿಕಾ ಪಡುಕೋಣೆ: ಸೂಪರ್ ಎಂದ್ರು ಫ್ಯಾಷನ್ ಗುರುಗಳು

ಇನ್ನು ಶಾರುಖ್ ಖಾನ್ ಪಠಾಣ್ ಜೊತೆಗೆ ಇನ್ನು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಲು ನಿರ್ದೇಶಕ ಅಟ್ಲೀ ಕುಮಾರ್ ಜೊತೆ ಜವಾನ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಕೂಡ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ತೆಲುಗು ನಟ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಇನ್ನೂ ಹೃತಿಕ್ ರೋಷನ್ ಜೊತೆ ಫೈಟರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

Follow Us:
Download App:
  • android
  • ios