ಸೀತೆಯಾಗಿ ಬಾಲಿವುಡ್‌ಗೆ ಹಾರಲು ಸಜ್ಜಾದ ಸಾಯಿ ಪಲ್ಲವಿ; ಇಲ್ಲಿದೆ ಮಾಹಿತಿ
ಸೌತ್ ಸುಂದರಿ ಸಾಯಿ ಪಲ್ಲವಿ ಬಾಲಿವುಡ್‌ಗೆ ಹಾರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸೀತೆಯಾಗಿ ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖಮಾಡುತ್ತಿದ್ದಾರೆ ಎನ್ನುವ ಮಾತುಕೇಳಿ ಬಂದಿದೆ.
ಸೌತ್ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಸಾಯಿ ಪಲ್ಲವಿ ಕೊನೆಯದಾಗಿ ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಬಳಿಕ ಸಾಯಿ ಪಲ್ಲವಿ ಯಾವುದೇ ಸಿನಿಮಾಗೆ ಸಹಿ ಮಾಡಿಲ್ಲ. ಸಿನಿಮಾರಂಗದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಹಜ ಸುಂದರಿ ಸಾಯಿ ಪಲ್ಲವಿ ದಿಢೀರ್ ಅಂತ ಸಿನಿಮಾ ನಿಲ್ಲಿಸಿದ್ದು ಅಭಿಮಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ಇದೀಗ ಪ್ರೇಮಂ ಸುಂದರಿ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನಲ್ಲಿ ರಾಮಾಯಣದ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎರಡು ವರ್ಷಗಳಿಂದ ಕೇಳಿ ಬರುತ್ತಿದ್ದು ಇದೀಗ ಮತ್ತೇ ಸುದ್ದಿಯಾಗುತ್ತಿದೆ. ರಾಮಾಯಣ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.
ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸೀತೆ ಪಾತ್ರಕ್ಕೆ ಈಗಾಗಲೇ ಅನೇಕ ಹೆಸರು ಕೇಳಿಬಂದಿದತ್ತು. ದೀಪಿಕಾ ಪಡಕೋಣೆ, ಕರೀನಾ ಕಪೂರ್ ಸೇರಿದಂತೆ ಅನೇಕ ಜನರ ಹೆಸರು ಕೇಳಿಬಂದಿತ್ತು. ಇದೀಗ ಸಾಯಿ ಪಲ್ಲವಿ ಹೆಸರು ವೈರಲ್ ಆಗಿದೆ. ಅಂದಹಾಗೆ ರಾಮಾಯಣ ಸಿನಿಮಾದಲ್ಲಿ ಹೃತಿಕ್ ರೋಷನ್ ರಾವಣನಾಗಿ ನಟಿಸಲಿದ್ದಾರೆ, ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆ ಕಟ್ಟಿಸುತ್ತಿರುವ ಸಾಯಿ ಪಲ್ಲವಿ; ನಟನೆಗೆ ಗುಡ್ ಬೈ ಹೇಳುತ್ತಿರುವುದು ನಿಜವೇ?
ಇದೀಗ ಸಾಯಿ ಪಲ್ಲವಿ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪ್ರೇಮಂ ಸುಂದರಿ ಸೀತೆ ಪಾತ್ರ ಮಾಡುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಸಾಯಿ ಪಲ್ಲವಿ ಇದೀಗ ಇದೀಗ ಸೀತೆಯಾಗಿ ಎಂಟ್ರಿ ಕೊಡುವುದನ್ನು ನೋಡಲು ಕಾತರರಾಗಿದ್ದಾರೆ. ಅಂದಹಾಗೆ ರಾಮಾಯಣ ಮುಂದಿನ ವರ್ಷ ಪ್ರಾರಂಭವಾಗಲಿದೆ ಎನ್ನಲಾಗಿದೆ.
ಇಡೀ ಕುಟುಂಬವನ್ನು ಪ್ರವಾಸಕ್ಕೆ ಕರ್ಕೊಂಡೋದ ಸಾಯಿ ಪಲ್ಲವಿ; ಫೋಟೋ ವೈರಲ್
ಅಂದಹಾಗೆ ರಾಮಾಯಣ ಸಿನಿಮಾ ಸೀತೆಯ ದೃಷ್ಟಿಕೋನದಿಂದ ಮಾಡಲಾಗುತ್ತಿದೆಯಂತೆ. ಹಾಗಾಗಿ ಸೀತೆ ಪಾತ್ರಕ್ಕೆ ಪವರ್ ಫುಲ್ ನಟಿಯ ಹುಡುಕಾಟದಲ್ಲಿದ್ದ ತಂಡಕ್ಕೆ ಸಾಯಿ ಪಲ್ಲವಿ ಪರ್ಫೆಕ್ಟ್ ಆಯ್ಕೆ ಎಂದುಕೊಂಡು ಸಿನಿಮಾತಂಡ ಈಗಾಗಲೇ ಸಾಯಿ ಪಲ್ಲವಿ ಜೊತೆ ಮಾತು ಕತೆ ನಡೆಸಿದೆ. ಸಾಯಿ ಪಲ್ಲವಿ ಕೂಡ ಸೀತೆ ಪಾತ್ರ ಮಾಡಲು ಉತ್ಸುಕರಾಗಿದ್ದು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡಿದ್ರೆ ಅಭಿಮಾನಿಗಳು ಫುಲ್ ಖುಷ್ ಆಗಲಿದ್ದಾರೆ. ರಾಮಾಯಣದಲ್ಲಿ ಇನ್ನು ಯಾರೆಲ್ಲ ನಟಿಸಲಿದ್ದಾರೆ ಎಂದು ಕಾದುನೋಡಬೇಕು.