Asianet Suvarna News Asianet Suvarna News

ನಟ ವಿಜಯ್​ಗೂ ಮುನ್ನ ತಮನ್ನಾ ಲೈಫಲ್ಲಿ ವಿರಾಟ್​ ಕೊಹ್ಲಿ ಎಂಟ್ರಿ? ನಟಿ ಹೇಳಿದ್ದೇನು?

ಪ್ರೇಮದ ವಿಚಾರಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ತಮನ್ನಾ ಈಗ ನಟ ವಿಜಯ್​ ಜೊತೆಗಿನ ಸಂಬಂಧ ಒಪ್ಪಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್​ ಕೊಹ್ಲಿ ಜೊತೆ ಏನಾಗಿತ್ತು? 
 

When Tamannaah Bhatia Spoke About Virat Kohli Dating Rumours suc
Author
First Published Jun 17, 2023, 11:13 AM IST

ಮಿಲ್ಕಿ ಬ್ಯೂಟಿ (Milky beauty) ಎಂದೇ ಫೇಮಸ್​ ಆಗಿರುವ ಬಾಲಿವುಡ್​ ನಟಿ ತಮನ್ನಾ ಭಾಟಿಯಾ,  ತೆಲುಗು , ತಮಿಳು ಚಿತ್ರರಂಗದಲ್ಲಿಯೂ ಸಕತ್​ ಫೇಮಸ್​.  73 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದವರು. ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳ ದಕ್ಷಿಣ ನಾಮನಿರ್ದೇಶನಗಳನ್ನು ಪಡೆದ ಅಪರೂಪದ ನಟಿ ತಮನ್ನಾ. ವಿಶೇಷ ಏನೆಂದರೆ, ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 2010 ರಲ್ಲಿ ಕಲೈಮಾಮಣಿ ಮತ್ತು 2022 ರಲ್ಲಿ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. 34 ವರ್ಷಗಳ ಈ ಚೆಲುವೆ ಸಹಜವಾಗಿಯೇ ಚಿತ್ರರಂಗದಲ್ಲಿ ಸಕತ್​ ಬೇಡಿಕೆ ನಟಿಯಾಗಿದ್ದು, ಇವರ ಸಂಭಾವನೆ ಕೂಡ ಕೋಟಿಯನ್ನು ಮೀರುತ್ತದೆ. ಸದ್ಯ ವೆಬ್ ಸೀರಿಸ್‌ಗಳಲ್ಲಿ ತಮನ್ನಾ (Tamanna Batia) ಬ್ಯುಸಿಯಾಗಿದ್ದು, ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅದರಲ್ಲಿಯೂ ಲಸ್ಟ್ ಸ್ಟೋರಿ 2 ಮತ್ತು ಜೀ ಕರ್ದ ಸೀರಿಸ್‌ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿವೆ. ಈ ಎರಡೂ ಚಿತ್ರಗಳಲ್ಲಿ ತಮನ್ನಾ ಹಿಂದೆಂದಿಗಿಂತಲೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಂತಿಪ್ಪ ನಟಿಯ ಜೊತೆ ಇದಾಗಲೇ ಕೆಲವು ನಟರ ಹೆಸರು ಥಳಕು ಹಾಕಿಕೊಂಡಿವೆ. ಆದರೆ ಎಲ್ಲಕ್ಕಿಂತ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ತಮನ್ನಾ ಮತ್ತು ನಟಿ ಅನುಷ್ಕಾ ಶರ್ಮಾ ಪತಿ, ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ ಡೇಟಿಂಗ್​ ವದಂತಿ ಕುರಿತು.  ವಿರಾಟ್ ಕೊಹ್ಲಿ ಜೊತೆಗೆ ತಮನ್ನಾ ಭಾಟಿಯಾ ಹೆಸರು ಕೂಡ ಕೇಳಿಬರುತ್ತಿದೆ. ಜಾಹೀರಾತೊಂದರ ಚಿತ್ರೀಕರಣದ ವೇಳೆ ವಿರಾಟ್ (virat Kohli) ಮತ್ತು ತಮನ್ನಾ ಭೇಟಿಯಾಗಿದ್ದರು. ಇದಾದ ನಂತರ ಇವರಿಬ್ಬರ ಅಫೇರ್ ಸುದ್ದಿಗೆ ವೇಗ ಸಿಕ್ಕಿತ್ತು. ಈ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

NBK108: ಒಂದು ಹಾಡಿಗೆ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ ನಟಿ ತಮನ್ನಾ?

ಇದು ಹಲ ವರ್ಷಗಳಿಂದ ಕೇಳಿಬರುತ್ತಿದೆ. 2018 ರಲ್ಲಿ, ತಮನ್ನಾ ಭಾಟಿಯಾ ಸಂದರ್ಶನವೊಂದರಲ್ಲಿ (Interview) ತಾನು ಮತ್ತು ಕೊಹ್ಲಿ ಎಂದಿಗೂ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜಾಹೀರಾತು ಚಿತ್ರದ ಸಮಯದಲ್ಲಿ ನಾವು ಮಾತನಾಡಿದ್ದೇವೆ ಅಷ್ಟೇ.  ಅದರ ನಂತರ ನಾನು ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಲೇ ಇಲ್ಲ. ವಿರಾಟ್ ಕೊಹ್ಲಿ ಜೊತೆ ಬಾಲಿವುಡ್‌ನಲ್ಲಿ ಕೆಲಸ ಮಾಡುವುದು  ಅನೇಕ ನಟರಿಗಿಂತಲೂ ಉತ್ತಮವಾಗಿತ್ತು ಎಂದಿದ್ದರೇ ವಿನಾ ಡೇಟಿಂಗ್​ ಸುದ್ದಿಯನ್ನು ಮಾತ್ರ ಅಲ್ಲಗಳೆದಿದ್ದರು. ಕೊನೆಗೆ  ವಿರಾಟ್ ಕೊಹ್ಲಿ ಅವರು  ಅನುಷ್ಕಾ ಷರ್ಮಾ ಅವರನ್ನು ಮದುವೆಯಾದ ಬಳಿಕ ನಿಮಗೇನೆನ್ನಿಸಿತು ಎಂಬ ಪ್ರಶ್ನೆಗೂ ಉತ್ತರಿಸಿದ ತಮನ್ನಾ,  ಇಬ್ಬರ ಜೋಡಿ ಚೆನ್ನಾಗಿದೆ. ಅವರ ದಾಂಪತ್ಯ ಜೀವನ ತುಂಬಾ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದು, ಅದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ,  ನಟ ವಿಜಯ್ ವರ್ಮಾ ಜೊತೆಗಿನ ಪ್ರೀತಿಯನ್ನು ನಟಿ ಒಪ್ಪಿಕೊಂಡಿದ್ದು, ಹಿಂದಿನ ಕಥೆಯನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. 

ತಮನ್ನಾ ಇಂಡಸ್ಟ್ರಿಗೆ ಬಂದು 18 ವರ್ಷಗಳಾಗಿವೆ. ಆದಾಗ್ಯೂ, ತಾನು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಗೆ. ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡುತ್ತಾ, ಲಸ್ಟ್ ಸ್ಟೋರೀಸ್ 2 (Lust stories 2) ರ ಸೆಟ್‌ನಲ್ಲಿ ಅವಳಿಗೆ ಮತ್ತು ವಿಜಯ್‌ಗೆ ವಿಷಯಗಳು ಬದಲಾಗಿವೆಯೇ ಎಂದು ಕೇಳಲಾಯಿತು. ತಮನ್ನಾ ತಮ್ಮ ಪ್ರಣಯವನ್ನು ಒಪ್ಪಿಕೊಂಡರು ಮತ್ತು "ಹೌದು" ಎಂದು ಹೇಳಿದರು.

Virat Kohli: ಅನುಷ್ಕಾಗೂ ಮೊದಲು ಕೊಹ್ಲಿ ಲೈಫ್​ಗೆ ಎಂಟ್ರಿ ಕೊಟ್ಟ ಐವರು ಲಲನೆಯರು ಇವರು

 ಅನುಷ್ಕಾ ಶರ್ಮಾ (Anushka Sharma) ಜೊತೆ ಮದುವೆಗೂ ಮುನ್ನ ವಿರಾಟ್ ಕೊಹ್ಲಿ ಹೆಸರು ಹಲವು ನಟರು ಮತ್ತು ಮಾಡೆಲ್‌ಗಳ ಜೊತೆ ಸೇರಿಕೊಂಡಿತ್ತು. ತಮನ್ನಾ ಭಾಟಿಯಾ ಹೊರತುಪಡಿಸಿ, ವಿರಾಟ್ ಕೊಹ್ಲಿಯ ಹೆಸರು ಬ್ರೆಜಿಲಿಯನ್ ಮಾಡೆಲ್ ಇಸಾಬೆಲ್ಲೆ ಲೈಟ್‌ನೊಂದಿಗೆ ಮುಖ್ಯಾಂಶಗಳಲ್ಲಿತ್ತು. ಕೊಹ್ಲಿ ಜೊತೆಗೆ ಕಾಲಿವುಡ್ ನಟಿ ಸಾಕ್ಷಿ ಅಗರ್ವಾಲ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ  ವಿವಾಹವಾದರು.

Follow Us:
Download App:
  • android
  • ios