Virat Kohli: ಅನುಷ್ಕಾಗೂ ಮೊದಲು ಕೊಹ್ಲಿ ಲೈಫ್​ಗೆ ಎಂಟ್ರಿ ಕೊಟ್ಟ ಐವರು ಲಲನೆಯರು ಇವರು

ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗುವ ಮೊದಲು   ವಿರಾಟ್​ ಕೊಹ್ಲಿ ಐವರು ನಟಿಯರ ಜೊತೆ ಡೇಟಿಂಗ್ ನಡೆಸಿದ್ದರು ಎನ್ನಲಾಗಿದೆ. ಅವರು ಯಾರು ಯಾರು? 
 

Five Women Cricketer Virat Kohli dated before Actress Anushka Sharma

ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ  ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ.  ಇತ್ತೀಚೆಗಷ್ಟೇ  ಅಂದರೆ ಮೇ 1ರಂದು  ಅನುಷ್ಕಾ ಶರ್ಮಾ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ,  ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ, ಪತಿ ವಿರಾಟ್ ಕೊಹ್ಲಿ (Virat Kohli) ಬರುವ ಡಿಸೆಂಬರ್​ನಲ್ಲಿ 35ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಜೋಡಿ  ಸುಖಿ ದಾಂಪತ್ಯ ನಡೆಸುತ್ತಿದೆ. ಮದುವೆಯಾದ ಮೇಲೆ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಎಂದೇ ಫೇಮಸ್​ ಆಗಿದೆ.  ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ  ಈ ಜೋಡಿ  ಅವರ ಅಪರೂಪದ ಜೋಡಿ  2017 ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.  ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ (Dating) ಮಾಡಿದ್ದ ವಿರಾಟ್​ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್​ ಜೋಡಿಗೆ  2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು. 
 
ಅಷ್ಟಕ್ಕೂ ಇವರಿಬ್ಬರ ಲವ್​ ಸ್ಟೋರಿ ಕೂಡ ಇಂಟರೆಸ್ಟಿಂಗ್​ ಆಗಿದೆ.  ಮೊದಲು ಸ್ನೇಹ, ನಂತರ ಪ್ರೀತಿ ಇಲ್ಲಿಯವರೆಗೆ ಮಾಮೂಲು ಪ್ರೇಮಿಗಳಂತೆ ಇತ್ತು. ಕೊನೆಗೆ ಇವರ  ಸಂಬಂಧ ಮುರಿದುಬಿತ್ತು. ನಂತರ ಜೋಡಿ ಒಂದಾದದ್ದು ಹೇಗೆ ಎನ್ನುವುದೇ ಕುತೂಹಲ. ಅಂದಹಾಗೆ, 2013 ರಲ್ಲಿ ಶಾಂಪೂ ಒಂದರ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಅನುಷ್ಕಾ ಅವರನ್ನು  ಮೊದಲ ಸಲ ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ ಎಂದು ವಿರಾಟ್ ಈಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.  ಈ ವೇಳೆ ವಿರಾಟ್ ನರ್ವಸ್ ಆಗಿರುವುದು ಅನುಷ್ಕಾಗೆ ಅರ್ಥವಾಗಿತ್ತು. ಹೀಗಿರುವಾಗ ಅಲ್ಲಿನ ವಾತಾವರಣ ತಿಳಿಗೊಳಿಸಲು ಅನುಷ್ಕಾ ಜೋಕ್ ಹೇಳಿದ್ದರು. ಅಲ್ಲಿಂದಲೇ ಲವ್​ ಶುರುವಾಗಿತ್ತು. ಹೌದು. ಅನುಷ್ಕಾ ಮತ್ತು ವಿರಾಟ್ ಲವ್ ಸ್ಟೋರಿ (Love Story) ತುಂಬಾ ಆಸಕ್ತಿದಾಯಕವಾಗಿದೆ. ಮೊದಲು ಸ್ನೇಹ, ನಂತರ ಪ್ರೀತಿ ಇಲ್ಲಿಯವರೆಗೆ ಮಾಮೂಲು ಪ್ರೇಮಿಗಳಂತೆ ಇತ್ತು.

ಕೊನೆಗೆ ಇವರ  ಸಂಬಂಧ ಮುರಿದುಬಿತ್ತು. ನಂತರ ಜೋಡಿ ಒಂದಾದದ್ದು ಹೇಗೆ ಎನ್ನುವುದೇ ಕುತೂಹಲ. ಅಂದಹಾಗೆ, 2013 ರಲ್ಲಿ ಶಾಂಪೂ ಒಂದರ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಅನುಷ್ಕಾ ಅವರನ್ನು  ಮೊದಲ ಸಲ ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ ಎಂದು ವಿರಾಟ್ ಈಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.  ಈ ವೇಳೆ ವಿರಾಟ್ ನರ್ವಸ್ ಆಗಿರುವುದು ಅನುಷ್ಕಾಗೆ ಅರ್ಥವಾಗಿತ್ತು. ಹೀಗಿರುವಾಗ ಅಲ್ಲಿನ ವಾತಾವರಣ ತಿಳಿಗೊಳಿಸಲು ಅನುಷ್ಕಾ ಜೋಕ್ ಹೇಳಿದ್ದರು. ಅಲ್ಲಿಂದಲೇ ಲವ್​ ಶುರುವಾಗಿತ್ತು. ನಡುವೆ ಬ್ರೇಕಪ್​ ಆಗಿತ್ತು ಎಂದು ಸುದ್ದಿಯಾಗಿದ್ದರೂ ಕೊನೆಗೆ ಜೋಡಿ ಒಂದಾಗಿತ್ತು.

ವಿರಾಟ್​ ಕೊಹ್ಲಿಜೀ... ಪ್ಲೀಸ್​ ಹೆಂಡ್ತಿಗೆ ಒಂದು ಚಡ್ಡಿ ಕೊಡಿಸಿ ಅಂತಿದ್ದಾರೆ ನೆಟ್ಟಿಗರು​!

ಇದೀಗ ವಿರಾಟ್​   ಕೊಹ್ಲಿ (Virat Kohli)  ಬಗ್ಗೆ ಹೊಸ ಸುದ್ದಿಯೊಂದು ಭಾರಿ ಚರ್ಚೆಯಾಗುತ್ತಿದೆ. ಅದೇನೆಂದರೆ,  ಅನುಷ್ಕಾ ಶರ್ಮಾಗೂ ಮೊದಲು ವಿರಾಟ್ ಐವರು ನಾಯಕಿಯರೊಂದಿಗೆ ಡೇಟ್ ಮಾಡಿದ್ದರಂತೆ.  ಅವರ್ಯಾರಪ್ಪ ಎಂದರೆ, ಮೊದಲಿಗೆ ನಿಲ್ಲುವುದು, 2007ರಲ್ಲಿ ಮಿಸ್ ಇಂಡಿಯಾ ಆಗಿದ್ದ ನಟಿ  ಸಾರಾ ಜೇನ್ ಡಯಾಸ್. ಅವರು ಬಾಲಿವುಡ್​ಗೆ ಎಂಟ್ರಿ ಕೊಟ್ಟ ಮೇಲೆ  ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡಿದ್ದರು ಎಂಬ ಸುದ್ದಿ ಇದೆ.  ಈ ಕುರಿತು ಹಲವು ಮನರಂಜನಾ ಪೋರ್ಟಲ್​ಗಳು ಮತ್ತು ಮಾಧ್ಯಮ ಸಂಸ್ಥೆಗಳು ಸುದ್ದಿ ಹರಡಿತ್ತು.

ಪವನ್ ಕಲ್ಯಾಣ್ ಅಭಿನಯದ ಪಂಜಾ ಚಿತ್ರದಲ್ಲೂ ಸಾರಾ ನಾಯಕಿಯಾಗಿ ನಟಿಸಿದ್ದರು. ಇದಾದ ಮೇಲೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಜೊತೆ  ಕೊಹ್ಲಿ ಹೆಸರು ಥಳಕು ಹಾಕಿಕೊಂಡಿತ್ತು.  ಮೊಬೈಲ್ ಫೋನ್​ ಜಾಹೀರಾತಿನಲ್ಲಿ ನಟಿಸಿದ ನಂತರ ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ  ಹರಡಿತ್ತು. ಜಾಹೀರಾತಿನಲ್ಲಿ ವಿರಾಟ್ ಮತ್ತು ತಮನ್ನಾ ಇಬ್ಬರನ್ನೂ ಒಟ್ಟಿಗೆ ನೋಡಿ ಅಭಿಮಾನಿಗಳು ಖುಷ್ ಆಗಿದ್ದರು.

ಇಷ್ಟಾಗುತ್ತಿದ್ದಂತೆಯೇ, ನಟಿ ಮತ್ತು ರೂಪದರ್ಶಿ ಸಂಜನಾ ಗಲ್ರಾನಿ ಅವರ ಜೊತೆಯೂ ಕೊಹ್ಲಿ ಹೆಸರು ಕೇಳಿಬಂದಿತ್ತು.  ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ತಂಡ ಸೇರಿದಾಗ ಕ್ರಿಕೆಟಿಗನನ್ನು ಪ್ರೀತಿ ಮಾಡುತ್ತಿದ್ದರು ಎನ್ನುವ ಗಾಳಿ ಸುದ್ದಿ ಹರಡಿತ್ತು. ಉದ್ಯಮಿ ವಿಜಯ್ ಮಲ್ಯ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜನಾ ಕೊಹ್ಲಿಯನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ಬಂದಿದ್ದವು. ಇಷ್ಟಕ್ಕೇ ಮುಗಿಯಲಿಲ್ಲ. ವಿರಾಟ್ ಮತ್ತು ಇಸಾಬೆಲ್ಲೆ ಲೈಟ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನುವುದೂ ಬಹಳ ವೈರಲ್​ ಆಗಿತ್ತು.  ಈ ಜೋಡಿ 2012 ರಿಂದ 2014ರ ವರೆಗೆ ಡೇಟಿಂಗ್ ನಡೆಸಿದ್ದರು ಎನ್ನಲಾಗಿತ್ತು. ಇಸಾಬೆಲ್ಲೆ ಸಂದರ್ಶನವೊಂದರಲ್ಲಿ ಕೊಹ್ಲಿಯೊಂದಿಗಿನ ಸಂಬಂಧದ ಬಗ್ಗೆ ಮಾತಾಡಿದ್ದರು.  ನಾವು ಎರಡು ವರ್ಷ ಡೇಟಿಂಗ್ ಮಾಡಿ ಬ್ರೇಕಪ್ ಮಾಡಿಕೊಳ್ಳೋದಾಗಿ ಹೇಳಿದ್ದರು.  ಇದಾದ ಬಳಿಕ ಐದನೆಯ ನಟಿ ಎಂದರೆ  ಸಾಕ್ಷಿ ಅಗರ್​ವಾಲ್​. (Sakshi Agarwal)  ತಮಿಳು ನಟಿಯಾಗಿರುವ ಸಾಕ್ಷಿ, ಕೊಹ್ಲಿ ಜೊತೆ ಡೇಟಿಂಗ್ ಮಾಡುತ್ತಿದ್ದರೂ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು ಎನ್ನಲಾಗಿದೆ. 

VIRUSHKA: ಮದ್ವೆಗೂ ಮುಂಚೆಯೇ ಬ್ರೇಕಪ್​! ಇವರದ್ದು ಕುತೂಹಲದ Love Story

Latest Videos
Follow Us:
Download App:
  • android
  • ios