Asianet Suvarna News Asianet Suvarna News

NBK108: ಒಂದು ಹಾಡಿಗೆ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ ನಟಿ ತಮನ್ನಾ?

ಚಿತ್ರವೊಂದರಲ್ಲಿ ಒಂದು ಹಾಡಿನಲ್ಲಿ ನಟಿಸಲು ನಟಿ ತಮನ್ನಾ ಭಾಟಿಯಾ ಐದು ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ನಟಿ ಹೇಳಿದ್ದೇನು? 
 

Did Tamannaah Bhatia demand a whopping sum to perform  in  NBK108 Actress reacts
Author
First Published May 21, 2023, 2:38 PM IST | Last Updated May 21, 2023, 2:38 PM IST

ಮಿಲ್ಕಿ ಬ್ಯೂಟಿ (Milky beauty) ಎಂದೇ ಫೇಮಸ್​ ಆಗಿರುವ ಬಾಲಿವುಡ್​ ನಟಿ ತಮನ್ನಾ ಭಾಟಿಯಾ,  ತೆಲುಗು , ತಮಿಳು ಚಿತ್ರರಂಗದಲ್ಲಿಯೂ ಸಕತ್​ ಫೇಮಸ್​.  73 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದವರು. ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳ ದಕ್ಷಿಣ ನಾಮನಿರ್ದೇಶನಗಳನ್ನು ಪಡೆದ ಅಪರೂಪದ ನಟಿ ತಮನ್ನಾ. ವಿಶೇಷ ಏನೆಂದರೆ, ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 2010 ರಲ್ಲಿ ಕಲೈಮಾಮಣಿ ಮತ್ತು 2022 ರಲ್ಲಿ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. 34 ವರ್ಷಗಳ ಈ ಚೆಲುವೆ ಸಹಜವಾಗಿಯೇ ಚಿತ್ರರಂಗದಲ್ಲಿ ಸಕತ್​ ಬೇಡಿಕೆ ನಟಿಯಾಗಿದ್ದು, ಇವರ ಸಂಭಾವನೆ ಕೂಡ ಕೋಟಿಯನ್ನು ಮೀರುತ್ತದೆ. ಅನೇಕ ಸ್ಟಾರ್​ ನಟಿಯರ ಜೊತೆ ಗುರುತಿಸಿಕೊಂಡಿರುವ ನಟಿ ತಮನ್ನಾ, ಆ ನಟಿಯರಂತೆಯೇ ತಮ್ಮ ಚಿತ್ರಕ್ಕೆ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಇದೀಗ ಅವರ ಭಾರಿ ಸುದ್ದಿಯಲ್ಲಿ ಇರುವುದು ಬಾಲಯ್ಯ ಅವರ NBK108 ಸಿನಿಮಾದಲ್ಲಿ ಅವರು ಪಡೆದುಕೊಂಡಿದ್ದಾರೆ ಎನ್ನಲಾದ ಸಂಭಾವನೆ ಕುರಿತು.

ಅಂದ ಹಾಗೆ ಬಾಲಯ್ಯ (Balayya) ಅವರ NBK108 ಸಿನಿಮಾದಲ್ಲಿ ನಟಿ ತಮನ್ನಾ ನಾಯಕಿಯಾಗಿಲ್ಲ. ಬದಲಿಗೆ ಒಂದು ಚಿತ್ರದಲ್ಲಿ ಸೊಂಟ ಬಳುಕಿಸಿದ್ದಾರೆ. ಅದೇ ಕಳೆದ ಕೆಲವು ದಿನಗಳಿಂದ  ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶಿದ್ದು, ಇದು  ಬಾಲಯ್ಯ ಅವರ ಚಿತ್ರ ಕ್ಷೇತ್ರದಲ್ಲಿ  ಪ್ರಮುಖ ಸಿನಿಮಾ ಆಗಿರಲಿದೆ. ಇದೆ ಕಾರಣಕ್ಕೆ ತಮನ್ನಾ ಅವರನ್ನು ಒಂದು ಹಾಡಿನಲ್ಲಿ ಸೇರಿಸಿಕೊಳ್ಳಲಾಗಿದೆ. ತಮನ್ನಾ ಹಾಡಿಗೆ ಸೊಂಟ ಬಳಕಿಸಿರುವುದು ಸುದ್ದಿಯಲ್ಲ, ಬದಲಿಗೆ ಈ ಒಂದೇ ಒಂದು ಹಾಡಿಗೆ ಅವರು ಪಡೆದಿರುವ ಸಂಭಾವನೆ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​? ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ ಇನ್​ಸ್ಟಾಗ್ರಾಮ್​ ಪೋಸ್ಟ್​!

ಅಷ್ಟಕ್ಕೂ, ಈ ಹಾಡಿಗೆ ತಮನ್ನಾ  5 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದ್ದು, ಇದು ಬಹುದೊಡ್ಡ ಚರ್ಚೆಯಾಗುತ್ತಿದೆ.  ಒಬ್ಬ ನಟಿ ಇಡೀ ಚಿತ್ರಕ್ಕೂ ಇಷ್ಟು ಸಂಭಾವನೆ ಕೇಳದಿದ್ದಾಗ, ಒಂದು ಚಿತ್ರಕ್ಕೆ ಇಷ್ಟೊಂದು ಪರಿಯ ಸಂಭಾವನೆಯೇ ಎಂದು ಹಲವರು ಹುಬ್ಬರಿಸುತ್ತಿದ್ದು, ನಟಿಯ ವಿರುದ್ಧ ಟ್ರೋಲ್​ ಮಾಡುತ್ತಿದ್ದಾರೆ. ಅನಿಲ್ ರವಿಪುಡಿ ಅವರು ತಮ್ಮ ಮುಂಬವರು ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಮಾಡಲು ತಮನ್ನಾ ಭಾಟಿಯಾ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ನಟಿ ಸಾಂಗ್ ಮಾಡಲು ಒಪ್ಪಿಕೊಂಡಿದ್ದರೂ 5 ಕೋಟಿ ರೂ. ಸಂಭಾವನೆ ಕೇಳಿದ್ದಾರೆ. ಹಾಗಾಗಿ ನಿರ್ದೇಶಕರಿಗೆ ಬೇಸರವಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ ಅಸಲಿಗೆ ಇದು ನಿಜವೇ ಎಂದು ಖುದ್ದು ನಟಿ ತಮನ್ನಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ತಮನ್ನಾ ಭಾಟಿಯಾ (Tamannaah Bhatia) ತುಂಬಾ ನೊಂದುಕೊಂಡು ಕಮೆಂಟ್ ಮಾಡಿ ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ನನಗೆ ಅನಿಲ್ ರವಿಪುಡಿ (Anil Ravipudi) ಸರ್ ಜೊತೆ ಕೆಲಸ ಮಾಡುವುದು ಇಷ್ಟ. ನಂದಮೂರಿ ಬಾಲಕೃಷ್ಣ ಸರ್ ಹಾಗೂ ಅನಿಲ್ ರವಿಪುಡಿ ಬಗ್ಗೆ ನನಗೆ ತುಂಬಾ ಗೌರವ ಇದೆ. ಹಾಗಾಗಿ ನನ್ನ ಕುರಿತು ಹಾಗೂ ಅವರ ಸಿನಿಮಾದ ಒಂದು ಹಾಡಿನ ಕುರಿತು ಈ ರೀತಿ ಆಧಾರ ರಹಿತ ಸುದ್ದಿ ಓದುವುದು ತುಂಬಾ ನೋವಾಗುತ್ತದೆ. ಆರೋಪಗಳನ್ನು ಮಾಡುವ ಮುನ್ನ ಸತ್ಯ ತಿಳಿದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ ನಟಿ. ತಮನ್ನಾ ಜೊತೆ ಒಳ್ಳೆಯ ಬಾಂಡಿಂಗ್ ಇರುವುದರಿಂದ ನಟಿ ಕೇಳಿದಷ್ಟು ನೀಡಲು ನಿರ್ಮಾಪಕರನ್ನು ನಿರ್ದೇಶಕ ಅನಿಲ್ ರವಿಪುಡಿ ಕನ್ವಿನ್ಸ್ ಮಾಡಿದ್ದಾರೆ ಎನ್ನಲಾಗಿತ್ತು. ಈ ಹಿಂದೆ ತಮನ್ನಾ ಅನಿಲ್ ರವಿಪುಡಿ ಅವರ ಎಫ್2 ಹಾಗೂ ಎಫ್​3ನಲ್ಲಿ ನಟಿಸಿದ್ದಾರೆ. ಮಹೇಶ್ ಬಾಬು ಅವರ ಸರಿಲೇರು ನೀಕೆವರು ಸಿನಿಮಾದಲ್ಲಿ ಕೂಡಾ ತಮನ್ನಾ ಸ್ಪೆಷಲ್ ಸಾಂಗ್ (Secial song) ಮಾಡಿದರು. ಹಾಗೆಂದು ತಾವು ಇಷ್ಟೊಂದು ದೊಡ್ಡ ಮೊತ್ತದ ಹಣ ಕೇಳುವ ನಟಿಯಲ್ಲ. ಇದರಿಂದ ನನಗೆ ತುಂಬಾ  ಎಂದು ತಮನ್ನಾ ಹೇಳಿದ್ದಾರೆ.
 
Udita Goswami: ಮೈಚಳಿ ಬಿಟ್ಟು ಹೆಚ್ಚು ರೊಮಾನ್ಸ್‌ ಮಾಡಿದ ಬಾಲಿವುಡ್‌ ನಟಿಯೇ ಈಗ ಇಮ್ರಾನ್‌ ಹಶ್ಮಿ ಅತ್ತಿಗೆ!

 

Latest Videos
Follow Us:
Download App:
  • android
  • ios