Asianet Suvarna News Asianet Suvarna News

ಕಾಜೋಲ್​ ಹುಟ್ಟುಹಬ್ಬ: ನಟಿಯ ಜೊತೆ ಮಂಚ ಏರುವ ಆಸೆ ಇತ್ತಾ ಶಾರುಖ್​ಗೆ? ಹಳೆಯ ವಿಡಿಯೋ ವೈರಲ್​


ಶಾರುಖ್​ ಖಾನ್​ ಮತ್ತು ಕಾಜೋಲ್​ ನಡುವಿನ ಸಂಬಂಧ ಹೇಗಿತ್ತು? ಕಾಜೋಲ್​ ಜೊತೆ ಮಲಗುವ ಆಸೆ ಇತ್ತಾ ಎಂಬ ಪ್ರಶ್ನೆ ನಟನಿಗೆ ಎದುರಾಗಾದ ಅವರು ಹೇಳಿದ್ದೇನು?  
 

When Shah Rukh Khan Angrily Revealed He Didn not Go To Bed With Kajol as she is like sister suc
Author
First Published Aug 5, 2024, 4:10 PM IST | Last Updated Aug 5, 2024, 4:28 PM IST

ಕೃಷ್ಣ ಸುಂದರಿ, ಡಸ್ಕಿ ಬ್ಯೂಟಿ ಎಂದೇ ಫೇಮಸ್​ ಆದವರು ಬಾಲಿವುಡ್​ ನಟಿ ಕಾಜೋಲ್​. ಕೃಷ್ಣ ವರ್ಣದವರಿಗೆ ಇಂಡಸ್ಟ್ರಿಯಲ್ಲಿ ಚಾನ್ಸೇ ಸಿಗಲ್ಲ ಎಂದು ಹೇಳುತ್ತಿರುವ ನಡುವೆಯೇ, ತಮ್ಮ ಬಣ್ಣಕ್ಕಾಗಿಯೇ ಹಲವು ಬಾರಿ ಬಾಡಿ ಷೇಮಂಗ್​ಗೂ ಒಳಗಾಗಿದ್ದರೂ ನಟಿ ಕಾಜೋಲ್​, 80-90ರ ದಶಕಗಳಲ್ಲಿ ಹೇಗೆ ಬಾಲಿವುಡ್​ ಆಳಿದ್ದರು  ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಈಗಲೂ ಸಿನಿಮಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ ನಟಿ. ಅಂದಹಾಗೆ ಇಂದು ಅಂದರೆ ಆಗಸ್ಟ್​ 5 ಕಾಜೋಲ್​ ಅವರಿಗೆ 50ನೇ ಹುಟ್ಟುಹಬ್ಬದ ಸಂಭ್ರಮ 
 
ಅಂದಹಾಗೆ, ಕಾಜೋಲ್​ ಎಂದಾಕ್ಷಣ ಅವರ ಜೊತೆಜೊತೆಗೇ ಬಾಲಿವುಡ್​ನಲ್ಲಿ ಕೇಳಿ ಬರುವ ಹೆಸರು ಶಾರುಖ್​ ಖಾನ್​. ಇವರಿಬ್ಬರ ಕೆಮೆಸ್ಟ್ರಿಯನ್ನು ಮೆಚ್ಚದವರೇ ಇಲ್ಲವೇನೋ. ಅಷ್ಟೊಂದು ರೊಮ್ಯಾಂಟಿಕ್​ ಜೋಡಿ ಇವರದ್ದು. ಸಿನಿ ಇಂಡಸ್ಟ್ರಿಯಲ್ಲಿ ಒಂದಷ್ಟು ಚಿತ್ರಗಳು ಒಟ್ಟಿಗೇ ಹಿಟ್​ ಆದವು ಎಂದರೆ, ಅಲ್ಲಿ ಡೇಟಿಂಗ್​, ಮದುವೆ, ಸಂಬಂಧ ಎಲ್ಲವೂ ಕೇಳಿಬರುವುದು ಮಾಮೂಲು. ಅದರಂತೆಯೇ, ಕಾಜೋಲ್​  ಮತ್ತು ಶಾರುಖ್​ ನಡುವೆಯೂ ಕೇಳಿಬಂದಿತ್ತು. ಕಾಜೋಲ್​ ಮದುವೆಗು ಮುನ್ನ ನೀಡಿದ್ದ ಸಂದರ್ಶನವೊಂದರಲ್ಲಿ ತಮಗೆ ಶಾರುಖ್​ ಮೇಲೆ ಕ್ರಶ್​ ಇರುವುದಾಗಿ ಒಪ್ಪಿಕೊಂಡಿದ್ದರು ಕೂಡ. ಅದಾದ ಬಳಿಕ ಇವರಿಬ್ಬರ ರೊಮಾನ್ಸ್​ ಒಂದು ಹಂತವನ್ನು ದಾಟಿ ಅಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸಿತ್ತು. ಇದರ ನಡುವೆಯೇ, ಕಾಜೋಲ್​ ಅವರು ಅಜಯ್​ ದೇವಗನ್​ ಅವರ ಜೊತೆ  ಮದುವೆಯಾದರು.  ಆಗ ಕಾಜೋಲ್​  ಮತ್ತು ಶಾರುಖ್​ ವಿಷ್ಯ ಅಲ್ಲಿಗೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು.

ನಟಿ ಕಾಜೋಲ್​ ಹಿಂಭಾಗಕ್ಕೆ ಇದೇನಾಗೋಯ್ತು? ವೈರಲ್​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

ಇದೀಗ ಕಾಜೋಲ್​ ಅವರ 50ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿಯ ಕುರಿತು ಶಾರುಖ್​ ಹೇಳಿದ ಮಾತುಗಳು ವೈರಲ್​ ಆಗುತ್ತಿವೆ. ಸಂದರ್ಶನವೊಂದರಲ್ಲಿ ಈ ಪ್ರಶ್ನೆ ಶಾರುಖ್​ಗೆ ಕೇಳಲಾಗಿತ್ತು. ಆ ಸಮಯದಲ್ಲಿ ಶಾರುಖ್​, ಗೌರಿ ಅವರನ್ನು ಮದುವೆಯಾಗಿದ್ದರು. ಆಗ ಅವರಿಗೆ ಕಾಜೋಲ್​ ಜೊತೆಗಿನ ಸಂಬಂಧದ ಕುರಿತು ಕೇಳಲಾಯಿತು. ನೀವು ಮತ್ತು ಕಾಜೋಲ್​ ಡೇಟಿಂಗ್​  ಮಾಡುತ್ತಿದ್ದಿರಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆಗ ಈ ಬಗ್ಗೆ ನೇರವಾಗಿಯೇ ಶಾರುಖ್​ ಉತ್ತರ ನೀಡಿದ್ದಾರೆ. ನೋಡಿ ಕಾಜೋಲ್​ ತುಂಬಾ ಚಿಕ್ಕವಳು. (ಶಾರುಖ್​ಗಿಂತ ಕಾಜೋಲ್​ ಎಂಟು ವರ್ಷ ಚಿಕ್ಕವರು).  ಅಷ್ಟೇ ಅಲ್ಲದೇ ಆಕೆ  ನಟಿ ತನುಜಾ ಅವರ ಮಗಳು. ಈ ಕಾರಣದಿಂದ ಆಕೆ ನನ್ನ ಸಹೋದರಿ ಇದ್ದಂತೆ. ನನಗಷ್ಟೇ ಅಲ್ಲ, ಗೌರಿಗೂ ಕಾಜೋಲ್​ ಅಂದ್ರೆ ಅವಳು ಇಷ್ಟ’ ಎಂದಿದ್ದರು.

ಈ ಬಗ್ಗೆ ಇನ್ನಷ್ಟು ಕೇಳಿದ್ದ ಪ್ರಶ್ನೆಗೆ ಶಾರುಖ್.  ‘ನಾನು ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್​, ಮನಿಷಾ ಕೊಯಿರಾಲಾ, ಶಿಲ್ಪಾ ಶೆಟ್ಟಿ, ಸೋನಾಲಿ ಬೇಂದ್ರೆ, ನಗ್ಮಾ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಹಾಗೆಂದ  ಮಾತ್ರಕ್ಕೆ ಅವರ ಜೊತೆ ಮಂಚ ಏರಿದ್ದೇನೆ ಎಂದು ಅರ್ಥವಲ್ಲ, ಇದೇ ವಿಷಯ ಕಾಜೋಲ್​ಗೂ ಅನ್ವಯ ಆಗುತ್ತದೆ. ನಮ್ಮಿಬ್ಬರ ಕೆಮೆಸ್ಟ್ರಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅನೇಕ ಚಿತ್ರಗಳಲ್ಲಿ ನಟಿಸಿದ್ದೇವೆ ಕೂಡ. ಹಾಗೆಂದು ನಾನು ಕಾಜೋಲ್​ ಜೊತೆ ಮಂಚ ಏರಿದ್ದೇನೆ ಎಂದು ಅರ್ಥವಲ್ಲ ಎಂದಿದ್ದರು. ಗೌರಿಯ ಬಳಿ ಏನು ಬೇಕೋ ಎಲ್ಲಾ ಗುಣಗಳೂ ಇವೆ.  ಆಕೆಯನ್ನು ನಾನು ಮದುವೆಯಾಗಿದ್ದೇನೆ. ಬೇರೆ ಹೆಣ್ಣುಗಳು ನನಗೇಕೆ? ಅವರ ಹಿಂದೆ ಹೋಗುವುದಾದರೂ ಯಾಕೆ ಎಂದು ಪ್ರಶ್ನಿಸಿದ್ದರು. ಇಂಥ ನಾನ್​ಸೆನ್ಸ್​ ಪ್ರಶ್ನೆ ಕೇಳಬೇಡಿ ಎನ್ನುತ್ತಲೇ  ಇದೇ ರೀತಿ ಗಾಸಿಪ್​ ನನ್ನ ಮತ್ತು ಜೂಹಿ ಚಾವ್ಲಾ ನಡುವೆಯೂ ನಡೆದಿತ್ತು. ಇದೇ ಕಾರಣಕ್ಕೆ ಆಕೆಯ ಜೊತೆ  ಸಿನಿಮಾ ಮಾಡೋದು ನಿಲ್ಲಿಸಿದೆ. ಇದೇ ರೀತಿಯ ಸುದ್ದಿ ಮುಂದುವರಿದರೆ ನಾನು ಕಾಜೋಲ್ ಜೊತೆಯೂ ಸಿನಿಮಾ ಮಾಡುವುದಿಲ್ಲವಷ್ಟೇ ಎಂದಿದ್ದರು. 

ಕೃಷ್ಣ ಸುಂದರಿ ಕಾಜೋಲ್​, ಶಸ್ತ್ರಚಿಕಿತ್ಸೆ ಇಲ್ಲದೇ ಬೆಳ್ಳಗಾಗಿದ್ದು ಹೇಗೆ? ಬಿಳುಪಿನ ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ಬ್ಯೂಟಿ
 

Latest Videos
Follow Us:
Download App:
  • android
  • ios