ಆಕೆಯಿಂದ 100 ರೂಪಾಯಿ ಸಾಲ ಪಡೆದ ಸೈಫ್ ಅಲಿ ಖಾನ್ ಆಕೆಗೆ ಕೊಟ್ಟದ್ದು 5 ಲಕ್ಷ ರೂಪಾಯಿ ಮಾತ್ರ!
ಬಾಲಿವುಡ್ ನಟ ಸೈಫ್ ಅಲಿ ಖಾನ್ ಇತ್ತೀಚೆಗೆ ಚೂರಿ ಇರಿತಕ್ಕೊಳಗಾದ ಘಟನೆಯ ನಂತರ, ಅವರ ಮಾಜಿ ಪತ್ನಿ ಅಮೃತಾ ಸಿಂಗ್ ಜೊತೆಗಿನ ಲವಿ ಡವಿ, ಮದುವೆ, ವಿಚ್ಛೇದನದ ಕತೆಗಳೆಲ್ಲಾ ಆಚೆ ಬರುತ್ತಿವೆ. ಅದರಲ್ಲಿ ನೂರು ರೂಪಾಯಿ ಸಾಲದ ಕತೆ ಇಂಟರೆಸ್ಟಿಂಗ್ ಆಗಿದೆ.

ಬಾಲಿವುಡ್ ಹೀರೋ ಸೈಫ್ ಅಲಿ ಖಾನ್ ಇತ್ತೀಚೆಗೆ ಚೂರಿ ಇರಿತಕ್ಕೊಳಗಾದರು. ಆಗ ಅವರ ಆಸ್ತಿ ಮೊತ್ತ ಎಷ್ಟಿರಬಹುದು ಎಂಬ ವಿವರ ಹೊರಬಂತು. ಆತ 1200 ಕೋಟಿ ರೂಪಾಯಿ ಒಡೆಯ. ಆದರೆ ತನ್ನ ಮೊದಲ ಪತ್ನಿ ಅಮೃತಾ ಜೊತೆಗೆ ಡೈವೋರ್ಸ್ ಆದಾಗ ಆತ ಆಕೆಗೆ ಕೊಟ್ಟ ಮೊತ್ತ ಎಷ್ಟಿರಬಹುದು? ಮೆಟ್ಟಿಬೀಳಬೇಡಿ, ಅದು 5 ಲಕ್ಷ ರೂಪಾಯಿ ಮಾತ್ರ!
ಸೈಫ್ ಅಲಿಖಾನ್ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಜನವರಿ 16, 2025ರ ಮುಂಜಾನೆ ನಟನ ಮೇಲೆ ದುಷ್ಕರ್ಮಿಯೊಬ್ಬ ಸೈಫ್ ಮನೆಯಲ್ಲೇ ಚೂರಿಯಿಂದ ಕ್ರೂರವಾಗಿ ಹಲ್ಲೆ ನಡೆಸಿದ. ದಾಳಿಯ ನಂತರ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಸೈಫ್ ಚೇತರಿಸಿಕೊಳ್ಳುತ್ತಿದ್ದು, ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ದಾಳಿಯಿಂದಾಗಿ ಸೈಫ್ ಸುದ್ದಿಯಾಗುತ್ತಿದ್ದಂತೆ, ಅವರ ಕೆಲವು ಹಳೆಯ ಸಂದರ್ಶನಗಳು ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡವು. ಈ ಸಂದರ್ಶನಗಳಲ್ಲಿ ಒಂದರಲ್ಲಿ ಸೈಫ್ ತಮ್ಮ ಮಾಜಿ ಪತ್ನಿ ಅಮೃತಾ ಸಿಂಗ್ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು ತಮ್ಮ ವಿಚ್ಛೇದನದ ಪರಿಹಾರ ಮೊತ್ತ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದರು.
ಸೈಫ್ ಮತ್ತು ಅಮೃತಾ ಇಬ್ಬರೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ಪ್ರಸಿದ್ಧ ನಟರಾಗಿದ್ದವರು. ಸೈಫ್, ಅಮೃತಾ ಸಿಂಗ್ ಅವರಿಗಿಂತ 12 ವರ್ಷ ಚಿಕ್ಕವರಾಗಿದ್ದರೂ 1991ರಲ್ಲಿ ಇಬ್ಬರೂ ವಿವಾಹವಾದರು. ಅವರಿಗೆ ಇಬ್ರಾಹಿಂ ಅಲಿ ಖಾನ್ ಮತ್ತು ಸಾರಾ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ 2004ರಲ್ಲಿ ಡೈವೋರ್ಸ್ ಪಡೆದುಕೊಂಡರು. ನಂತರ ಕರೀನಾ ಕಪೂರ್ ಅವರನ್ನು ಸೈಫ್ ಮದುವೆಯಾದರು.
2005ರಲ್ಲಿ ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ, ಸೈಫ್ ತಮ್ಮ ವಿಚ್ಛೇದನದ ಜೀವನಾಂಶದ ಭಾಗವಾಗಿ ಅಮೃತಾಗೆ ಒಟ್ಟು 5 ಕೋಟಿ ರೂಪಾಯಿಗಳನ್ನು ಪಾವತಿಸಲು ನಾನು ಬಾಧ್ಯತೆ ಹೊಂದಿದ್ದೇನೆ. ಅದರಲ್ಲಿ ಅರ್ಧದಷ್ಟು ಹಣವನ್ನು ಈಗಾಗಲೇ ಪಾವತಿಸಿದ್ದೇನೆ ಎಂದರು. “ನಾನು ಅಮೃತಾಗೆ 5 ಕೋಟಿ ರೂಪಾಯಿಗಳನ್ನು ನೀಡಬೇಕಾಗಿತ್ತು. ಅದರಲ್ಲಿ ನಾನು ಈಗಾಗಲೇ ಸುಮಾರು 2.5 ಕೋಟಿ ರೂಪಾಯಿಗಳನ್ನು ನೀಡಿದ್ದೇನೆ. ಅಲ್ಲದೆ, ನನ್ನ ಮಗನಿಗೆ 18 ವರ್ಷವಾಗುವವರೆಗೆ ನಾನು ತಿಂಗಳಿಗೆ 1 ಲಕ್ಷ ರೂಪಾಯಿ ಪಾವತಿಸಲಿದ್ದೇನೆ. ನಾನು ಶಾರುಖ್ ಖಾನ್ ಅಲ್ಲ. ನನ್ನ ಬಳಿ ಅದಕ್ಕಿಂತ ಹೆಚ್ಚಿನ ಹಣವಿಲ್ಲ.”
ಮುಂದುವರಿಸಿ ಸೈಫ್ ಹೇಳಿದ್ದು: "ನಾನು ಅವಳಿಗೆ ಭರವಸೆ ನೀಡಿದ್ದೇನೆ- ಉಳಿದ ಹಣವನ್ನು ನಾನು ಪಾವತಿಸುತ್ತೇನೆ ಅಂತ. ನಾನು ಸಾಯುವವರೆಗೂ ದುಡಿಯಬೇಕಾಗಿದ್ದರೂ ಸಹ ಅದನ್ನು ಮಾಡುತ್ತೇನೆ. ಜಾಹೀರಾತುಗಳು, ಸ್ಟೇಜ್ ಶೋಗಳು ಮತ್ತು ಚಲನಚಿತ್ರಗಳಿಂದ ನಾನು ಗಳಿಸಿದ್ದನ್ನು ನನ್ನ ಮಕ್ಕಳಿಗಾಗಿ ನೀಡಲಾಗುತ್ತಿದೆ. ನನ್ನ ಬಳಿ ಹೆಚ್ಚಿನ ಹಣವಿಲ್ಲ. ನಮ್ಮ ಬಂಗಲೆ ಅಮೃತಾ ಮತ್ತು ಮಕ್ಕಳಿಗಾಗಿ ಕೊಡಲಾಗುತ್ತಿದೆ. ನನ್ನ- ಅವಳ ವಿಚ್ಛೇದನದ ನಂತರ ಅವಳೊಂದಿಗೆ ಸೇರಿಕೊಂಡ ಸಂಬಂಧಿಕರನ್ನು ಲೆಕ್ಕಿಸಬೇಡಿ" ಎಂದ.
ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ವಿವಾಹದ ಸ್ವೀಟ್ಸ್ ವಾಪಸ್ ಕಳಿಸಿದರಂತೆ ಈ ಸ್ಟಾರ್!
ಸೈಫ್ ಅಲಿ ಖಾನ್ 1991ರಲ್ಲಿ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಪಯಣವನ್ನು ಪ್ರಾರಂಭಿಸಿದರು. ಆಗ ಆತ ಕಾಜೋಲ್ ಎದುರು ತನ್ನ ಚೊಚ್ಚಲ ಪ್ರವೇಶ ಮಾಡಬೇಕಿತ್ತು. ಆದರೆ ವೃತ್ತಿಪರತೆಯಿಲ್ಲದೆ ಕೇರ್‌ಲೆಸ್ ಆಗಿದ್ದ ಸೈಫ್‌ನನ್ನು ಬದಲಾಯಿಸಲಾಯಿತು. ಅವನ ಕಷ್ಟದ ದಿನಗಳಲ್ಲಿ, ಅವನ ಮಾಜಿ ಪತ್ನಿ ಅಮೃತಾ ಸಿಂಗ್ ನೆರವಾದಳು. ಆಗಲೇ ಅಮೃತಾ ಬಾಲಿವುಡ್‌ನಲ್ಲಿ ಖ್ಯಾತಳಾಗಿದ್ದಳು. ಫೋಟೋಶೂಟ್ ಸಮಯದಲ್ಲಿ ಸೈಫ್ ಮತ್ತು ಅಮೃತಾ ಮೊದಲು ಭೇಟಿಯಾದಾಗ ಮತ್ತು ಸ್ನೇಹಿತರಾಗಿದ್ದರು.
ಒಮ್ಮೆ ಸೈಫ್, ಅಮೃತಾಳ ಮನೆಯಲ್ಲಿ 2 ದಿನಗಳನ್ನು ಕಳೆದ. ಅವನು ಶೂಟಿಂಗ್‌ಗೆ ಹೋಗಬೇಕಾಗಿತ್ತು. ಆದರೆ ಅವನ ಬಳಿ ಹಣವಿರಲಿಲ್ಲ. ಕಾರಣ ಆಕೆಯಿಂದ 100 ರೂ. ಸಾಲ ಪಡೆದನಂತೆ. ನನ್ನ ಕಾರು ತೆಗೆದುಕೊಂಡು ಹೋಗು ಎಂದು ಅಮೃತಾ ಒತ್ತಾಯಿಸಿದಳು. ಆದರೆ ಆತ ಕಾರು ಕೊಂಡೊಯ್ಯಲಿಲ್ಲ. ಕಾರನ್ನು ಹಿಂತಿರುಗಿಸಲು ಸೈಫ್ ಮರಳಿ ಬರುತ್ತಾನೆ ಎಂಬುದು ಅಮೃತಾ ಇರಾದೆಯಾಗಿತ್ತು!
ಸೈಫ್ ಅಲಿ ಖಾನ್‌ರನ್ನ ಆಸ್ಪತ್ರೆಗೆ ಕರೆದೊಯ್ದಿದ್ದ ಆಟೋ ಚಾಲಕನಿಗೆ ಸಿಕ್ತು ನಗದು ಬಹುಮಾನ