ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ
ತಾವು 15 ವರ್ಷದವಳಿರುವಾಗ ನಾಯಕ ಚಿತ್ರವೊಂದರಲ್ಲಿ ಹೇಳದೇ ಕೇಳದೇ ಬಿಗಿಯಾಗಿ ತಬ್ಬಿ ಚುಂಬಿಸಿದ ಕರಾಳ ಘಟನೆಯನ್ನು ನೆನಪಿಸಿಕೊಂಡ ನಟಿ ರೇಖಾ.
80-90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ರೇಖಾ. ಹಲವಾರು ಹಿಟ್ ಚಿತ್ರಗಳನ್ನು, ಬ್ಲಾಕ್ಬಸ್ಟರ್ ಚಿತ್ರ ಕೊಟ್ಟವರು. ಎಷ್ಟೋ ಫ್ಯಾನ್ಸ್ ನಿದ್ದೆ ಕದ್ದವರು. ವಯಸ್ಸಾದರೂ ಚಿರ ಯೌವನ ಇವರದ್ದು, ನಟಿ ರೇಖಾಗೆ ಈಗ ವಯಸ್ಸು 68. ಆದರೂ ಇಂದಿಗೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮೊಗದಲ್ಲಿ ಅದೇ ವರ್ಚಸ್ಸು ಕಾಣಿಸುತ್ತದೆ. ಇಂತಿಪ್ಪ ರೇಖಾ ತಮ್ಮ ಖಾಸಗಿ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಸದ್ದಾ ಸುದ್ದಿಯಲ್ಲಿ ಇದ್ದವರು, ಈಗಲೂ ಅವರ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಅವರ ಜೀವನ ಸಾಕಷ್ಟು ನಿಗೂಢತೆಯಿಂದ ಕೂಡಿದೆ. ತಮಿಳಿನ ಸೂಪರ್‌ಸ್ಟಾರ್ ಜೆಮಿನಿ ಗಣೇಶನ್ ಹಾಗೂ ನಟಿ ಕೆ ಪುಷ್ಪವಲ್ಲಿ ಅವರ ಮಗಳಾಗಿ ಜನಿಸಿದ್ದ ರೇಖಾ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಸ್ಟಾರ್ ಕಿಡ್ ಎಂಬ ಹೆಸರಿನಿಂದ ಬಂದವರಲ್ಲ. 70ರ ದಶಕದ ವರೆಗೂ ತಮ್ಮ ಕುಟುಂಬದ ಹಿನ್ನೆಲೆಯನ್ನೇ ರೇಖಾ ಹೇಳಿಕೊಂಡಿರಲಿಲ್ಲ. ನಂತರ ಇವರ ಜೀವನ ನೋವಿನ ಸರಮಾಲೆಯಾಗಿಯೇ ಉಳಿತು. ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amithabh Bhacchan) ಮತ್ತು ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ. ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಅವರು ಬರೆದಿರುವ ತಮ್ಮ ಆತ್ಮಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ (Rekha The Untold Story) ಚಿತ್ರರಂಗದ ಹಾಗೂ ತಮ್ಮ ಬದುಕಿನ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸುಮಾರು 53 ವರ್ಷಗಳ ಕಾಲ ಸಿನಿಜರ್ನಿಯಲ್ಲಿ ರೇಖಾ ತಮ್ಮ ಸಿನಿಮಾಗಳಿಂದಲೇ ಮೆಚ್ಚುಗೆ ಗಳಿಸಿದ್ದರು. ಹಾಗೇ ಅವರ ಪ್ರೇಮ ಪ್ರಕರಣಗಳು ಕೂಡ ಅಷ್ಟೇ ಸದ್ದು ಮಾಡಿದ್ದವು. ರೇಖಾ ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ 1969 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅಂಜಾನಾ ಸಫರ್ ಎಂಬ ಸಿನಿಮಾದಲ್ಲಿ ನಟಿಸುವಾಗ ನಟ ಬಿಸ್ವಜಿತ್ ಚಟರ್ಜಿಯು ಶೂಟಿಂಗ್ ವೇಳೆ ಬಲವಂತವಾಗಿ ತಮಗೆ ಚುಂಬಿಸಿದ್ದರು ಎಂಬ ಬಗ್ಗೆ ರೇಖಾ ಹೇಳಿಕೊಂಡಿದ್ದಾರೆ.
ಅಮಿತಾಭ್ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ
'ಅಂಜಾನಾ ಸಫರ್' (Anjana Safar) 1979ರಲ್ಲಿ ತೆರೆಕಂಡಿತ್ತು. ಕುತೂಹಲದ ಸಂಗತಿ ಎಂದರೆ, ಈ ಚಿತ್ರದಲ್ಲಿ ರೇಖಾ ಅವರು ಅಮಿತಾಭ್ ಬಚ್ಚನ್ ಸೊಸೆ ನಟಿಸಿದ್ದರು. ಆ ವೇಳೆ ರೇಖಾ ವಯಸ್ಸು ಕೇವಲ 15 ವರ್ಷ ಮಾತ್ರ. ಆದರೆ, ಈ ಸಿನಿಮಾ ಹೀರೊಗೆ 33 ವರ್ಷ ವಯಸ್ಸಾಗಿತ್ತು. ಆ ಸಿನಿಮಾದ ಒಂದು ದೃಶ್ಯದಲ್ಲಿ ರೇಖಾಗೆ ಮುತ್ತಿಡುವ ದೃಶ್ಯವಿದೆ. ಈ ಬಗ್ಗೆ ಸಿನಿಮಾ ಶೂಟಿಂಗ್ ಮಾಡುವಾಗ ನಿರ್ದೇಶಕರು ಮಾಹಿತಿಯನ್ನೇ ನೀಡಿರಲಿಲ್ಲ. ನಿರ್ಮಾಪಕ ಕುಲ್ಜೀತ್ ಪಾಲ್ ಕಿಸ್ಸಿಂಗ್ ದೃಶ್ಯವನ್ನು ತೆಗೆಯಲು ಮೊದಲೇ ಯೋಜನೆ ರೂಪಿಸಿದ್ದರು. ಈ ಕುರಿತು ಚಿತ್ರದ ನಾಯಕನಾಗಿದ್ದ ಬಿಸ್ವಜಿತ್ ಚಟರ್ಜಿ ಅವರಿಗೂ ತಿಳಿಸಿದ್ದರು. ಈ ದೃಶ್ಯ ಹೇಗೆ ಮಾಡಬೇಕು ಎಂದು ಹೇಳಿದ್ದರು. ಆದರೆ ರೇಖಾ ಅವರಿಗೆ ಮೊದಲೇ ತಿಳಿಸಿದರೆ ಬೇಡ ಎನ್ನುವ ಸಾಧ್ಯತೆ ಇದ್ದುದರಿಂದ ಆಕೆಗೆ ಹೇಳಿರಲಿಲ್ಲ. ಆ ಸಿನಿಮಾ ನಟ ಬಿಸ್ವಜೀತ್, (Biswajith) ತಮ್ಮನ್ನು ಬಲವಂತವಾಗಿ ಎಳೆದು ಅವಳ ತುಟಿಗಳಿಗೆ ಗಟ್ಟಿಯಾಗಿ ಮುತ್ತಿಟ್ಟಿದ್ದರು ಎಂಬ ಬಗ್ಗೆ ರೇಖಾ ಹೇಳಿದ್ದಾರೆ.
ಶೂಟಿಂಗ್ ಆರಂಭ ಆಗುತ್ತಿದ್ದಂತೆ ತಮ್ಮನ್ನು ಎಳೆದುಕೊಂಡು 5 ನಿಮಿಷಗಳ ಕಾಲ ಕಿಸ್ ಮಾಡುತ್ತಲೇ ಇದ್ದರು. ಶೂಟಿಂಗ್ ನಗೆಯುತ್ತಲೇ ಇತ್ತು. ನಾನು ಮಾತ್ರ ಗಾಬರಿಯಾಗಿ ಹೋಗಿದ್ದೆ. ಈ ದೃಶ್ಯದ ಬಳಿಕ ಸೆಟ್ಟಿನಲ್ಲಿ ಇದ್ದವರೆಲ್ಲಾ ಶಿಳ್ಳೆ ಹೊಡೆಯುತ್ತಿದ್ದರು. ಆದರೆ ನಾನು ಮಾತ್ರ ಜೋರಾಗಿ ಅತ್ತಿದ್ದೆ ಎಂದಿದ್ದಾರೆ ರೇಖಾ. ನೈರೋಬಿ ಮೂಲದ ಉದ್ಯಮಿ ಕುಲ್ಜಿತ್ ಪಾಲ್ ಈ ಸಿನಿಮಾ ಮಾಡಿದ್ದರು. ಆಗ ಜೆಮಿನಿ ಸ್ಟುಡಿಯೋದಲ್ಲಿ ಅವರ ಕಣ್ಣಿಗೆ ಬಿದ್ದಿದ್ದೇ ರೇಖಾ. ಆ ಬಳಿಕ ರೇಖಾ ಜೊತೆ 5 ವರ್ಷ ಕಾಂಟ್ರ್ಯಾಕ್‌ಗೆ (Contract) ಸಹಿ ಮಾಡಿಕೊಂಡಿದ್ದರು. ಈ ಸಿನಿಮಾ ಒಪ್ಪಿಕೊಂಡು ಅಂದಿನ ಬಾಂಬೆ ತೆರಳಿದ್ದ ರೇಖಾ, ಅಲ್ಲೇ ನಾಯಕಿಯಾಗಿ ಮೊದಲ ಸಿನಿಮಾ 'ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999'ನಲ್ಲಿ ನಟಿಸಿದ್ದರು. ರಾಜ್‌ಕುಮಾರ್ ಚಿತ್ರದ ನಾಯಕ. ಈ ಸಿನಿಮಾ ರೇಖಾಗೆ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು.
ಅಮಿತಾಭ್ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!