ಕರೀನಾ ಕಪೂರ್ ವರ್ಷಗಟ್ಟಲೆ ಮಾತು ಬಿಡುವಂಥ ಕೆಲಸ ಮಾಡಿದ್ರು ಕರಣ್ ಜೋಹರ್! ಅದೀಗ ಬಹಿರಂಗ
ಹಿಂದೊಮ್ಮೆ ನಿರ್ದೇಶಕ ಕರಣ್ ಜೋಹರ್ ಮತ್ತು ನಟಿ ಕರೀನಾ ಕಪೂರ್ ಒಂದು ವರ್ಷ ಮಾತನಾಡಿರಲಿಲ್ಲ. ಇದಕ್ಕೆ ಕಾರಣವೇನು?
ಸಿನಿ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಬಾಲಿವುಡ್‌ನಲ್ಲಿ (Bollywood) ಯಾವುದೂ ಶಾಶ್ವತವಲ್ಲ. ಸ್ನೇಹವೂ ಅಲ್ಲ, ದ್ವೇಷವೂ ಅಲ್ಲ. ಇಂದು ಒಳ್ಳೆಯ ಸ್ನೇಹಿತರಂತೆ ಕಾಣುವ ಕರಣ್ ಜೋಹರ್ ಮತ್ತು ಕರೀನಾ ಕಪೂರ್ ನಡುವಿನ ಸಂಬಂಧವು ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಹದಗೆಟ್ಟಿತ್ತು. ತಿಂಗಳುಗಟ್ಟಲೆ ಇವರಿಬ್ಬರೂ ಮಾತನಾಡಿಯೇ ಇರಲಿಲ್ಲ. ಅದು ಎಷ್ಟರಮಟ್ಟಿಗೆ ಹೋಗಿತ್ತು ಎಂದರೆ ಈ ಹಿಂದೆ ಕರಣ್ ಚಿತ್ರಕ್ಕೆ ಕರೀನಾ ಕಪೂರ್ ಯೆಸ್ ಹೇಳಿ ನಂತರ ಇಲ್ಲ ಎನ್ನುವ ಸಂದರ್ಭಗಳೂ ಬಂದಿದ್ದವು. ಕೆಲವೊಮ್ಮೆ ಕರಣ್ ಚಿತ್ರಕ್ಕೆ ಯೆಸ್ ಎಂದು ಹೇಳಿ ಕರೀನಾ ಅವರನ್ನು ತೆಗೆದುಕೊಳ್ಳಲಿಲ್ಲ... ಈ ವರೆಗೂ ಇವರಿಬ್ಬರ ನಡುವೆ ತಿಕ್ಕಾಟವಾಗಿತ್ತು. ವಾಸ್ತವವಾಗಿ, ಕರಣ್ ಜೋಹರ್ ಮತ್ತು ಕರೀನಾ ನಡುವಿನ ಸಂಬಂಧವು ಯಾವಾಗಲೂ ಕಭಿ ಹಾ ಕಭಿ ನಾ (ಕೆಲವೊಮ್ಮೆ ಹಾ... ಕೆಲವೊಮ್ಮ ಬೇಡ...) ಪ್ರಕಾರವಾಗಿದೆ. ಈ ಬಗ್ಗೆ ಸ್ವತಃ ಕರಣ್ ಜೋಹರ್ ತಮ್ಮ ಆತ್ಮಕಥೆ ಆನ್ ಅನ್ ಸೂಟಬಲ್ ಬಾಯ್ನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ. ಕರಣ್ (Karan Johar) ಮತ್ತು ಕರೀನಾ ನಡುವೆ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಕರಣ್ ಈ ಪುಸ್ತಕದಲ್ಲಿ ಹೇಳಿದ್ದಾರೆ. ಇದಕ್ಕೆ ಕಾರಣ ದುಡ್ಡು! ಕರಣ್ ಜೋಹರ್ ಅವರ ಪ್ರಕಾರ, ಕರೀನಾ ತಮ್ಮ ಹೋಮ್ ಪ್ರೊಡಕ್ಷನ್ ಚಿತ್ರದಲ್ಲಿ ಕೆಲಸ ಮಾಡಲು ಸಾಕಷ್ಟು ಹಣವನ್ನು ಕೇಳಿದ್ದರು ಮತ್ತು ಅಲ್ಲಿಂದ ತಮ್ಮಿಬ್ಬರ ನಡುವೆ ಬಿರುಕು ಪ್ರಾರಂಭವಾಯಿತು ಎಂದಿದ್ದಾರೆ ಕರಣ್.
ವಾಸ್ತವವಾಗಿ, ಇದು 2002ರಲ್ಲಿ ನಡೆದ ಘಟನೆ. ಕರಣ್ ಜೋಹರ್ ಸಿನಿಮಾದ ವಿಷಯವಾಗಿ ಕರೀನಾಗೆ (Kareena Kapoor)ಕರೆ ಮಾಡಿದ್ದರು, ಯಶ್ ರಾಜ್ ಫಿಲ್ಮ್ಸ್ (YRF) ಅವರ ಮುಝ್ಸೇ ದೋಸ್ತಿ ಕರೋಗೆ ಬಿಡುಗಡೆಯಾದ ವಾರವದು. ಮುಝ್ಸೇ ದೋಸ್ತಿ ಕರೋಗೆ ಚಿತ್ರವನ್ನು ಕುನಾಲ್ ಕೊಹ್ಲಿ ನಿರ್ದೇಶಿಸಿದ್ದಾರೆ, ಅವರು ಒಮ್ಮೆ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಸಹಾಯಕರಾಗಿದ್ದರು. ಚಿತ್ರ ಫ್ಲಾಪ್ ಆಯಿತು. ಇದರಿಂದ ಕರೀನಾ ಸಿಕ್ಕಾಪಟ್ಟೆ ಕೋಪಗೊಂಡಿದ್ದರು. ಅವರ ಕೋಪವಿನ್ನೂ ಶಮನವಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಕರಣ್ ಜೋಹರ್ ಅವರು ಕರೀನಾ ಅವರಿಗೆ ಕರೆ ಮಾಡಿ ಕಲ್ ಹೋ ನಾ ಹೋ ಚಿತ್ರಕ್ಕೆ ಬರುವಂತೆ ಹೇಳಿದರು. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದುದು ನಿಖಿಲ್ ಅಡ್ವಾಣಿ ಅವರ ಸಹಾಯಕರಾಗಿದ್ದರು. ಇದರಿಂದ ಕರೀನಾಗೆ ಉರಿ ಹತ್ತಿತ್ತು. ಒಂದು ಸಹಾಯಕರ ಜೊತೆ ಕೆಲಸ ಮಾಡಿ ಚಿತ್ರ ಫ್ಲಾಪ್ ಆಗಿದ್ದು, ಮತ್ತೆ ಸಹಾಯಕರ ನಿರ್ದೇಶನದ ಚಿತ್ರಕ್ಕೆ ಕರಿಯುತ್ತಿರುವುದರಿಂದ ಕರಣ್ ಜೊತೆ ತೀವ್ರ ಸ್ವರೂಪದಲ್ಲಿ ಜಗಳವಾಡಿರುವುದಾಗಿ ಪುಸ್ತಕದಲ್ಲಿ ಕರಣ್ ಹೇಳಿದ್ದಾರೆ.
ಕರೀನಾ ಕಪೂರ್ ದುರಹಂಕಾರಿ, ಆಕೆ ಅಸಲಿ ಮುಖದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕ
ನಿಖಿಲ್ ನಿರ್ದೇಶನದಲ್ಲಿ ಕರೀನಾ ಕಲ್ ಹೋ ನಾ ಕಲ್ ಚಿತ್ರವನ್ನು ನಿರ್ಮಿಸಲು ಆಫರ್ ಮಾಡಿದಾಗ, ಶಾರುಖ್ ಖಾನ್‌ಗೆ ಸಮಾನವಾದ ಶುಲ್ಕವನ್ನು ನೀಡಿದಾಗ ಮಾತ್ರ ತಾನು ಕೆಲಸ ಮಾಡುತ್ತೇನೆ ಎಂದು ನಂತರ ಕರೀನಾ ಹೇಳಿದ್ದರು. ಇದನ್ನು ಕೇಳಿ ಕರಣ್ ಜೋಹರ್ ಆಶ್ಚರ್ಯಚಕಿತರಾದರು. ಅವರು ಕರೀನಾಗೆ 'ಕ್ಷಮಿಸಿ' ಎಂದು ಸ್ಪಷ್ಟವಾಗಿ ಹೇಳಿದರು. ಕರೀನಾ ಶುಲ್ಕದ ಈ ಬೇಡಿಕೆಯು ತನಗೆ ನೋವುಂಟು ಮಾಡಿದೆ ಎಂದು ಕರಣ್ ಪುಸ್ತಕದಲ್ಲಿ ಹೇಳಿದ್ದಾರೆ. ನಂತರ ಅವರು ಕರೀನಾ ಬದಲಿಗೆ ಪ್ರೀತಿ ಜಿಂಟಾ (Preeti Zinta) ಅವರನ್ನು ಚಿತ್ರದಲ್ಲಿ ಸಹಿ ಮಾಡಿದರು. ಕರಣ್ ಪ್ರಕಾರ, ಅವರ ತಂದೆ ಈ ಚಿತ್ರವನ್ನು ನಿರ್ಮಿಸಿದ್ದರು ಮತ್ತು ಅವರು ಕರೀನಾ ಅವರನ್ನೇ ನಾಯಕಿಯಾಗಿ ಮಾಡಬಯಸಿದ್ದರು. ನಂತರ ತಂದೆಯ ಒತ್ತಾಯದ ಮೇರೆಗೆ ಕರಣ್ ಮತ್ತೆ ಕರೀನಾಗೆ ಕರೆ ಮಾಡಿದರೂ ಕರೀನಾ ಅವರ ಕರೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಕರೀನಾ ಮೇಲೆ ಕರಣ್ ಜೋಹರ್ ಸಿಟ್ಟಿಗೆದ್ದು ಇಬ್ಬರ ನಡುವಿನ ಮಾತುಕತೆ ನಿಂತು ಹೋಗಿತ್ತು. ಸುಮಾರು ಒಂದು ವರ್ಷ ಇಬ್ಬರೂ ಪರಸ್ಪರ ಮಾತನಾಡಿರಲಿಲ್ಲ. ಅನೇಕ ಬಾರಿ ಅವರು ಚಲನಚಿತ್ರ ಪಾರ್ಟಿಗಳಲ್ಲಿ ಒಬ್ಬರನ್ನೊಬ್ಬರು ನೋಡಿದ್ದರೂ ಮಾತುಕತೆ ನಡೆಸಿರಲಿಲ್ಲ.
ಇಬ್ಬರ ಈ ಕೃತ್ಯ ತುಂಬಾ ಬಾಲಿಶ (Childish) ಎಂದು ಕರಣ್ ಪುಸ್ತಕದಲ್ಲಿ ಒಪ್ಪಿಕೊಂಡಿದ್ದಾರೆ. ಕರೀನಾ ಕರಣ್‌ಗಿಂತ ಒಂಬತ್ತು-ಹತ್ತು ವರ್ಷ ಚಿಕ್ಕವಳು. ಆ ದಿನಗಳಲ್ಲಿ ಕರಣ್ ತಂದೆ ಯಶ್ ಜೋಹರ್ (Yash Johar) ಅವರ ಆರೋಗ್ಯ (health) ಹದಗೆಟ್ಟಿತ್ತು. ಅವರು ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಲ್ ಹೋ ನ ಹೋ ನವೆಂಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು ಮತ್ತು ಚಿತ್ರವನ್ನು ಜೂನ್-ಜುಲೈ-ಆಗಸ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕಾಗಿ ಓಡಾಡುವಾಗ ಕರಣ್ ಅವರು ತಮ್ಮ ತಂದೆಯ ಆರೈಕೆಯನ್ನೂ ಮಾಡುತ್ತಿದ್ದರು. ಈ ಮಧ್ಯೆ ಒಂದು ದಿನ ಕರಣ್ ಜೋಹರ್ ಗೆ ಕರೆ ಬಂದಿದ್ದು ಕರೀನಾ, 'ಯಶ್ ಅಂಕಲ್ ಬಗ್ಗೆ ಕೇಳಿದ್ದೇನೆ' ಎಂದು ಹೇಳಿ ಭಾವುಕರಾಗಿ ಅಳಲು ತೋಡಿಕೊಂಡರು. ಇದಾದ ನಂತರ ಕರಣ್ ಮತ್ತು ಕರೀನಾ ತಮ್ಮ ಮನಸ್ತಾಪಗಳನ್ನು ದೂರ ಮಾಡಿ ಮತ್ತೆ ಸ್ನೇಹಿತರಾದರು ಎಂದು ಹೇಳಿದ್ದಾರೆ.
ಅಜಯ್ ದೇವಗನ್ ಜೊತೆ ಲಿಪ್ಲಾಕ್ಗೆ ಕರೀನಾ ಹಿಂಜರಿಯಲು ಇದೇ ಕಾರಣ!