ಕರೀನಾ ಕಪೂರ್ ದುರಹಂಕಾರಿ, ಆಕೆ ಅಸಲಿ ಮುಖದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕ

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಅವರು ತುಂಬಾ ದುರಹಂಕಾರಿ ಎಂದು ನಿರ್ಮಾಪಕ ಮಹೇಶ್ ತಿಲೇಕರ್ ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳಿದ್ದೇನು?
 

Marathi Filmmaker Mahesh Tilekar slams Kareena Kapoor for her rude behaviour

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಸ್ಟಾರ್​ ನಟಿಯರಲ್ಲಿ ಒಬ್ಬರು. ಆದರೆ ಇವರು ವೈಯಕ್ತಿಕವಾಗಿ ಕೆಲವೊಂದು ಕೆಟ್ಟ ಸ್ವಭಾವ ಹೊಂದಿದ್ದಾರೆ, ಅದರಲ್ಲಿಯೂ ತಮ್ಮ ಅಭಿಮಾನಿಗಳನ್ನು ನಡೆಸಿಕೊಳ್ಳುವ ರೀತಿಯಲ್ಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ ಮರಾಠಿ ಚಿತ್ರಗಳ ನಿರ್ಮಾಪಕ ಮಹೇಶ್ ತಿಲೇಕರ್ .  ಕರೀನಾ ಅವರ ಅಸಲಿ ಮುಖ ಬೇರೆ ಇದೆ ಎಂದು ಆರೋಪಿಸಿರುವ ಅವರು ಈ ಕುರಿತು  ಸಾಮಾಜಿಕ ಜಾಲತಾಣಗಳ ಮೂಲಕ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ.  ವಾಸ್ತವವಾಗಿ ಕರೀನಾ ತಮ್ಮ ಅನೇಕ ಅಭಿಮಾನಿಗಳು ಮತ್ತು ಸಹ ನಟರನ್ನು ನಿರ್ಲಕ್ಷಿಸುತ್ತಾರೆ ಎಂದು ಮಹೇಶ್ ಹೇಳಿದ್ದಾರೆ. ತಮ್ಮ ಸಿನಿಮಾಗಳ ಪ್ರಮೋಷನ್​ ಮಾಡುವ ಸಮಯದಲ್ಲಿ ಕರೀನಾ ಅಭಿಮಾನಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅವರ ವಿರುದ್ಧ ಹೇಗೆ ನಡೆದುಕೊಳ್ಳುತ್ತಾರೆ, ಅಭಿಮಾನಿಗಳನ್ನು ಹೇಗೆಲ್ಲಾ ಕಡೆಗಣಿಸುತ್ತಾರೆ ಎಂಬ ಕಹಿ ಸತ್ಯವನ್ನು ಮಹೇಶ್​ ತಿಲೇಕರ್​ ತೆರೆದಿಟ್ಟಿದ್ದಾರೆ. 

ಇದಕ್ಕೆ ಒಂದು ಉದಾಹರಣೆ ನೀಡಿದ್ದಾರೆ ಮಹೇಶ್​ ತಿಲೇಕರ್​ (Mahesh Tilekhar). ಅದೇನೆಂದರೆ, 'ಇತ್ತೀಚೆಗೆ, ನಾನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಸಂದರ್ಶನವನ್ನು ನೋಡುತ್ತಿದ್ದೆ, ಅದರಲ್ಲಿ ಅವರು ಲಂಡನ್‌ನಿಂದ ಭಾರತಕ್ಕೆ ಹಿಂತಿರುಗುವಾಗ ತಾವು ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನೋಡಿರುವುದಾಗಿ ಹೇಳಿಕೊಂಡರು. ಅಸಲಿಗೆ ಅವರು ಅದನ್ನು ತುಂಬಾ ನೋವಿನಿಂದ ಹೇಳಿದ್ದರು. ವಿಮಾನದಲ್ಲಿ ಅವರು ನಟಿ ಕರೀನಾ ಅವರನ್ನು ನೋಡಿದ್ದರು. ಕರೀನಾ ಕಪೂರ್  ನಾರಾಯಣ ಮೂರ್ತಿ ಅವರ ಮುಂದೆ ಕುಳಿತಿದ್ದರು. ಈ ಸಮಯದಲ್ಲಿ, ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಲು ಅನೇಕ ಜನರು ಬರಲು ಪ್ರಾರಂಭಿಸಿದರು. ಅವರ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕರೀನಾ ಮಾತ್ರ ತಮ್ಮ ಬಳಿ ಬಂದ ಎಲ್ಲಾ ಅಭಿಮಾನಿಗಳನ್ನು ನಿರ್ಲಕ್ಷಿಸಿದ್ದರು, ಅವರನ್ನು ಅತ್ಯಂತ ಕಡೆಗಣ್ಣಿನಿಂದ ನೋಡಿರುವುದಾಗಿ ನಾರಾಯಣ ಮೂರ್ತಿ (Narayana Murthy) ಬೇಸರಿಸಿಕೊಂಡು ಹೇಳಿದ್ದರು ಎಂದಿರುವ ಮಹೇಶ್​ ತಿಲೇಕರ್​ಅಂತಹ ದುರಹಂಕಾರದಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

'ಒಮ್ಮೆ ಮುಟ್ಟುವೆ' ಎಂದು ಕರೀನಾ ಹಿಂದೆ ಓಡಿದ ಫ್ಯಾನ್​: ಮುಂದೇನಾಯ್ತು ನೋಡಿ... 

ಮಹೇಶ್ ಮತ್ತಷ್ಟು ಬರೆದಿದ್ದಾರೆ, 'ಎಂಟು ವರ್ಷಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಚೆಕ್ -ಇನ್ ಲೈನ್‌ನಲ್ಲಿ ಕಾಯುತ್ತಿದ್ದೆವು, ಆ ಸಮಯದಲ್ಲಿ ನಮ್ಮ ಕಾರ್ಯಕ್ರಮದ ನಟಿಯೊಬ್ಬರ (Actress) ಪಕ್ಕದಲ್ಲಿ ಕರೀನಾ ನಿಂತಿರುವುದನ್ನು ನಾನು ನೋಡಿದೆ. ಆ ನಟಿ ಕರೀನಾ ಅವರನ್ನು ಕಂಡು ಖುಷಿಯಿಂದ  ಆಕೆಯನ್ನು ಭೇಟಿಯಾಗಲು ಹೋದರು. ಆಕೆ  ಕರೀನಾ ಜೊತೆ ಚಿತ್ರವನ್ನು ಕ್ಲಿಕ್ಕಿಸಲು ಬಯಸಿದ್ದರು. ಆದರೆ ಕರೀನಾ ಆ ನಟಿಯನ್ನು ನಿರ್ಲಕ್ಷಿಸಿದರು.  ಕರೀನಾ ಅವರ ಈ ವರ್ತನೆಯಿಂದ ನಟಿ ಬೇಸರಗೊಂಡರು. ಅವರು ಸಾಮಾನ್ಯ ಯುವತಿಯಲ್ಲ, ಬದಲಿಗೆ ನಟಿ ಕರೀನಾ ಕಪೂರ್ ಅವರಂತೆಯೇ ಜನಪ್ರಿಯ ಚಿತ್ರದಲ್ಲೂ  ಕೆಲಸ ಮಾಡಿದ ನಟಿ.  ಆದರೆ ಕರೀನಾ ಮಾತ್ರ ಅವರತ್ತ  ತಿರುಗಿಯೂ ನೋಡಲಿಲ್ಲ ಎಂದು ಮಹೇಶ್​ ಗಂಭೀರ ಆರೋಪ ಮಾಡಿದ್ದಾರೆ. 

 'ಈ ಸೆಲೆಬ್ರಿಟಿಗಳು ತಮ್ಮ OTT ಶೋಗಳು ಅಥವಾ ಚಲನಚಿತ್ರಗಳನ್ನು ಪ್ರಚಾರ ಮಾಡುವಾಗ ಅಭಿಮಾನಿಗಳನ್ನು ಭೇಟಿ ಮಾಡಲು ಯಾವುದೇ ಸಮಸ್ಯೆಯಿಲ್ಲ, ಆದರೆ ಉಳಿದ ಸಮಯದಲ್ಲಿ  ಅಭಿಮಾನಿಗಳನ್ನು ಕಡೆಗಣಿಸುತ್ತಾರೆ ಎಂದಿರುವ ಮಹೇಶ್​ ಅವರು, ಇನ್ನೋರ್ವ ನಟಿ  ರಾಧಿಕಾ ಆಪ್ಟೆ ಅವರ  ಬಗ್ಗೆಯೂ ಆಕ್ರೋಶ  ಹೊರಹಾಕಿದ್ದಾರೆಎ. ಒಮ್ಮೆ ರಾಧಿಕಾ ಕೂಡ ಹೀಗೆಯೇ  ಮಾಡಿದ್ದರು. ಅವರು ಆಟೋಗ್ರಾಫ್‌ಗಳಿಗೆ ಸಹಿ ಹಾಕುವುದು ಮತ್ತು ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಇಷ್ಟವಿಲ್ಲ ಎಂದು ಹೇಳಿದ್ದರು, ಆದರೆ ಕೆಲವು ದಿನಗಳ ಹಿಂದೆ ತನ್ನ ಹಿಂದಿ ಚಿತ್ರದ ಪ್ರಚಾರದ ಸಮಯದಲ್ಲಿ, ಕೆಲವು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿಗಳೊಂದಿಗೆ ಸೆಲ್ಫಿ (Selfie) ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ ಎಂದಿದ್ದಾರೆ. 

ಅಜಯ್​ ದೇವಗನ್​ ಜೊತೆ ಲಿಪ್​ಲಾಕ್​ಗೆ ಕರೀನಾ ಹಿಂಜರಿಯಲು ಇದೇ ಕಾರಣ!

Latest Videos
Follow Us:
Download App:
  • android
  • ios