ಅಜಯ್ ದೇವಗನ್ ಜೊತೆ ಲಿಪ್ಲಾಕ್ಗೆ ಕರೀನಾ ಹಿಂಜರಿಯಲು ಇದೇ ಕಾರಣ!
ಅಜಯ್ ದೇವಗನ್ ಜೊತೆ ಕೆಲವು ಚಿತ್ರಗಳಲ್ಲಿ ನಿರ್ದಾಕ್ಷಿಣ್ಯವಾಗಿ ಲಿಪ್ಲಾಕ್ ಸೀನ್ನಲ್ಲಿ ಕಾಣಿಸಿಕೊಂಡಿದ್ದ ನಟಿ ಕರೀನಾ ಕಪೂರ್ ಏಕಾಏಕಿ ಈ ಸೀನ್ಗೆ ನಿರಾಕರಿಸಿದ್ದು ಏಕೆ?
ಈಗಿನ ಬಹುತೇಕ ಚಿತ್ರತಾರೆಯರು ತಮ್ಮ ದೇಹ ಪ್ರದರ್ಶನ ಮಾಡಲು ಪೈಪೋಟಿಗೆ ನಿಂತಿದ್ದಾರೆ. ಸಾಧ್ಯವಾದಷ್ಟು ದೇಹ ಪ್ರದರ್ಶನ ಮಾಡಿದರೆ ಮಾತ್ರ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯ ಎಂಬ ಪರಿಕಲ್ಪನೆಯೋ ಗೊತ್ತಿಲ್ಲ, ಹಲವು ಸಲ ತೀರಾ ಅಶ್ಲೀಲ ಎನ್ನುವಷ್ಟರ ಮಟ್ಟಿಗೆ ಅಂಗಾಂಗ ಪ್ರದರ್ಶನ ಮಾಡಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ನಟಿಯರಂತೂ ವಯಸ್ಸು ಹೆಚ್ಚಿದಂತೆ ಅದನ್ನು ಮರೆಮಾಚುವುದಕ್ಕಾಗಿ ಈಗಿನ ನಟಿಯರ ಜೊತೆ ದೇಹ ಪ್ರದರ್ಶನದಲ್ಲಿ ಪೈಪೋಟಿಗೆ ಬೀಳುವುದೂ ಇದೆ. ಎಷ್ಟೇ ಬೋಲ್ಡ್ (Bold) ಆಗಿ ಡ್ರೆಸ್ ಮಾಡಿಕೊಂಡರೂ ಕೆಲವು ನಟಿಯರಿಗೆ ಚಿತ್ರಗಳಲ್ಲಿ ನಾಯಕ ಜೊತೆ ಲಿಪ್ ಲಾಕ್ನಂಥ ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ಸ್ವಲ್ಪ ಕಷ್ಟ ಎನ್ನಬಹುದು. ಈಗಿನ ಬಹುತೇಕ ನಟಿಯರು ಯಾವುದೇ ಮುಲಾಜು ಇಲ್ಲದೇ ಇದನ್ನು ಅಷ್ಟೇ ಬೋಲ್ಡ್ ಆಗಿ ಮಾಡುತ್ತಿದ್ದರೂ, ಕೆಲವು ನಟಿಯರು ಇನ್ನೂ ಸ್ವಲ್ಪ ಮರ್ಯಾದೆ ಉಳಿಸಿಕೊಂಡಿರುವ ಕಾರಣ, ಇಂಥ ದೃಶ್ಯಗಳನ್ನು ಮಾಡಲು ಹಿಂಜರಿಯುತ್ತಾರೆ.
ಅಂಥದ್ದೇ ಒಂದು ಸಮಸ್ಯೆ ಹಿಂದೊಮ್ಮೆ ಕರೀನಾ ಕಪೂರ್ (Kareena Kapoor) ಅವರಿಗೆ ಎದುರಾಗಿತ್ತಂತೆ. ಕರೀನಾ ಕಪೂರ್ ಇಬ್ಬರು ಮಕ್ಕಳ ತಂದೆ ಸೈಫ್ ಅಲಿ ಖಾನ್ರನ್ನು ಮದುವೆಯಾಗಿ ಕಪೂರ್ ಸರ್ನೇಮ್ ಮುಂದೆ ಖಾನ್ ಸೇರಿಸಿಕೊಂಡ ಮೇಲೂ ಬೋಲ್ಡ್ ಡ್ರೆಸ್ಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ, ಕೆಲವೊಮ್ಮೆ ಅವರು ಡ್ರೆಸ್ನಿಂದಾಗಿ ಟ್ರೋಲ್ಗೆ ಒಳಗಾಗುವುದೂ ಇದೆ. ಆದರೆ ಈಗ ಕೆಲ ವರ್ಷಗಳ ಹಿಂದಿನ ಘಟನೆಯೊಂದನ್ನು ಅವರು ಮೆಲುಕು ಹಾಕಿದ್ದಾರೆ. 2013ರಲ್ಲಿ 'ಸತ್ಯಾಗ್ರಹ' ಸಿನಿಮಾದಲ್ಲಿ ಅಜಯ್ ದೇವಗನ್ (Ajay Devgan) ಅವರನ್ನು ಚುಂಬಿಸುವ ದೃಶ್ಯ ಮಾಡಲು ನಿರಾಕರಿಸಿದ್ದ ಘಟನೆ ಇದಾಗಿದೆ. ಕರೀನಾ ಮತ್ತು ಅಜಯ್ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರೂ ಒಳ್ಳೆ ಫ್ರೆಂಡ್ಸ್. ಹಿಂದೆ ಇವರು ಬಿಂದಾಸ್ ಆಗಿ ಲಿಪ್ಲಾಕ್ ಸೀನ್ ಮಾಡಿದ್ದರು. ಆದರೆ 'ಸತ್ಯಾಗ್ರಹ' ಸಿನಿಮಾದ ಲಿಪ್ ಲಾಕ್ ಸೀನ್ ಗೆ ಕರೀನಾ ನಿರಾಕರಿಸಿದ್ದರು.
ಸೈಫ್ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor
2006ರಲ್ಲಿ ಬಂದ ‘ಓಂಕಾರ’ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ಅಜಯ್ ದೇವಗನ್ ಎದುರು ಕರೀನಾ ಕಪೂರ್ ನಟಿಸಿದ್ದರು. ಚಿತ್ರದಲ್ಲಿ ಇಬ್ಬರ ನಡುವೆ ಇಂಟಿಮೇಟ್ ದೃಶ್ಯವನ್ನೂ ಚಿತ್ರೀಕರಿಸಲಾಗಿದೆ. ಆದರೆ ವಿಶಾಲ್ ಭಾರದ್ವಾಜ್ ಅವರ ಈ ಚಿತ್ರದ ನಂತರ ಪ್ರಕಾಶ್ ಝಾ (Prakash Jha) 2013 ರಲ್ಲಿ 'ಸತ್ಯಾಗ್ರಹ' ತಂದಾಗ, ಸಮೀಕರಣವೇ ಬದಲಾಯಿತು. ಚಿತ್ರದಲ್ಲಿನ 'ಚುಂಬನದ ದೃಶ್ಯ'ದ ಬಗ್ಗೆ ಕರೀನಾ ಅಸಮಾಧಾನಗೊಂಡರು ಮತ್ತು ಅದನ್ನು ಮಾಡಲು ನಿರಾಕರಿಸಿದರು. 'ಓಂಕಾರ' ಅಲ್ಲದೆ, ಕರೀನಾ ಅವರು, ಅಜಯ್ ಜೊತೆ 'ಸಿಂಗಂ' ಮತ್ತು 'ಗೋಲ್ಮಾಲ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಂಥದ್ದೇ ದೃಶ್ಯಗಳನ್ನಾದರೂ ಇಬ್ಬರೂ ಆರಾಮವಾಗಿ ಮಾಡಿದ್ದಾರೆ.
‘ಓಂಕಾರ’ದಲ್ಲಿ ಇಂಟಿಮೇಟ್ ದೃಶ್ಯದ ವೇಳೆ ಅವರಿಗೆ ಯಾವುದೇ ಸಮಸ್ಯೆ ಎದುರಾಗದೇ ಇದ್ದಾಗ 'ಸತ್ಯಾಗ್ರಹ' ಚಿತ್ರದಲ್ಲಿ ಆಕೆ ಸತ್ಯಾಗ್ರಹ ಮಾಡಿದ್ದು ಏಕೆ ಎನ್ನುವ ಹಿಂದೆ ಕುತೂಹಲದ ಕಾರಣವಿದೆ. 16 ಅಕ್ಟೋಬರ್ 2012 ರಂದು ಕರೀನಾ ಸೈಫ್ ಅಲಿ ಖಾನ್ (Saif Ali Khan) ಅವರನ್ನು ವಿವಾಹವಾದರು. ಇದಾದ ನಂತರವೇ ಕರೀನಾ ಚಿತ್ರಗಳಲ್ಲಿ 'ಚುಂಬನದ ದೃಶ್ಯ'ದ ಕರೀನಾ ಬಗ್ಗೆ ಮನಸ್ಸು ಬದಲಾಯಿಸಿದರು. ಮದುವೆಯಾದ ಕೆಲವೇ ದಿನಗಳಲ್ಲಿ ‘ಸತ್ಯಾಗ್ರಹ’ (Satyagrah) ಚಿತ್ರೀಕರಣ ನಡೆಯುತ್ತಿತ್ತು. ಒಂದು ಹಾಡಿನ ಸಮಯದಲ್ಲಿ ಕರೀನಾ ಕಪೂರ್ ಮತ್ತು ಅಜಯ್ ಲಿಪ್ಲಾಕ್ ಮಾಡಬೇಕಾಯಿತು. ಹೀಗಿರುವಾಗ ಕರೀನಾ ಮದುವೆಯ ನಂತರ ಈ ಸೀನ್ ಮಾಡೋಕೆ ಆಗುತ್ತಿಲ್ಲ. ಮದುವೆಗಿಂತ ಮೊದಲು ಮಾಡಿದ ಹಾಗೆ ಈಗ ಮಾಡಲು ಸಾಧ್ಯವಿಲ್ಲ ಎಂದುಬಿಟ್ಟರು. ಈ ದೃಶ್ಯವನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಕಾಶ್ ಝಾಗೆ ಅವರು ಹೇಳಿದರು. ಬೆಬೋಗಾಗಿ ಪ್ರಕಾಶ್ ಝಾ ದೃಶ್ಯವನ್ನು ಬದಲಾಯಿಸಬೇಕಾಯಿತು. ಈ ಹಿಂದೆ ಇಮ್ರಾನ್ ಹಶ್ಮಿ ಜೊತೆಗಿನ ‘ಬಡ್ತಮೀಜ್ ದಿಲ್’ ಚಿತ್ರದಲ್ಲಿ ಚುಂಬನದ ದೃಶ್ಯಕ್ಕೆ ಕರೀನಾ ನಿರಾಕರಿಸಿದ್ದರು.
‘ಜೆಹ್ ಸಿಕ್ಕಾಪಟ್ಟೆ ಕಿಲಾಡಿ, ತೈಮೂರ್ ಪ್ರೀತಿಯ ಪ್ರತಿರೂಪ ಎಂದ ಕರೀನಾ ಕಪೂರ್