ಕಂಗನಾ ರಾನಾವತ್ ಸಂಸದೆ. ಅವರ ಹಳೆಯ ವೀಡಿಯೋವೊಂದು ಸಖತ್ ಹೈಪ್ ಸೃಷ್ಟಿಸುತ್ತಿದೆ. ಅದರಲ್ಲಿ ಕಂಗನಾ ತಾನು ಅಕ್ಷಯ್ ಖನ್ನಾ ಜೊತೆ ಫ್ಲರ್ಟ್ ಮಾಡ್ತಿದ್ದೆ ಅಂದಿದ್ದಾರೆ. ಇದಕ್ಕೆ ರಹಮಾನ್ ಡಕಾಯತ್ ಪಾತ್ರಧಾರಿಯ ಪ್ರತಿಕ್ರಿಯೆ ಏನಿತ್ತಂತೆ ಗೊತ್ತಾ?
ಕಂಗನಾ ರಾನಾವತ್ ಸಂಸದೆ. ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ ಸೋಷಲ್ ಮೀಡಿಯಾ ಸೆನ್ಸೇಶನ್ ಆಗಿರ್ತಾರೆ. ಅವರು ಸುದ್ದಿ ಮಾಡದೇ ಸುಮ್ಮನಿದ್ರೆ ಅವರ ಹಳೆ ವೀಡಿಯೋಗಳು ಇದ್ದಕ್ಕಿದ್ದ ಹಾಗೆ ಜೀವ ಪಡೆದುಕೊಂಡು ಬಂದು ಮತ್ತೆ ಹೈಪ್ ಕ್ರಿಯೇಟ್ ಮಾಡುತ್ತವೆ. ಸದ್ಯ ಅಂಥಾದ್ದೇ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಕಂಗನಾ ಬೋಲ್ಡ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ತಾನು ನಟನೊಬ್ಬನ ಜೊತೆ ಫ್ಲರ್ಟಿಂಗ್ ಮಾಡಲು ಶುರು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆ ಪುಣ್ಯವಂತ ಬೇರ್ಯಾರೂ ಅಲ್ಲ, ನಮ್ಮ ʼಧುರಂಧರ್ʼ ಸಿನಿಮಾದ ಭಲೇ ಪಾಪ್ಯುಲರ್ ನಟ ಅಕ್ಷಯ್ ಖನ್ನಾ. ಅಕ್ಷಯ್ ಖನ್ನಾ ಅಂದರೆ ಈಗಲೂ ಒಂದಿಷ್ಟು ಮಂದಿಗೆ ಒಂಥರಾ ಫೀಲ್. ʼತಾಲ್ʼ ಸಿನಿಮಾದಲ್ಲಿ ಅವರು ಐಶ್ ಬೇಬಿ ಜೊತೆಗೆ ಏನ್ ರೊಮ್ಯಾಂಟಿಕ್ ಆಗಿ ನಟಿಸಿದ್ರಲ್ಲ ಅಂತ ಆ ಕಾಲದವ್ರು ಹೇಳಿದ್ರೆ, ಧುರಂಧರ್ ನೋಡಿದ ಜೆನ್ ಜೀಗಳು ಕೂಡ ನಮಗೆ ರೆಹಮಾನ್ ಬಲೂಜಿ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟ. ಇದ್ರೆ ಅಂಥಾ ಲೈಫ್ ಪಾರ್ಟನರ್ ಇರಬೇಕು ಅನ್ನೋ ಮಾತು ಹೇಳ್ತಾರೆ. ಇದೀಗ ಬಂದಿರೋ ಅಚ್ಚರಿ ಸುದ್ದಿ ಅಂದರೆ ಈ ಗುಳಿಕೆನ್ನೆ ನಟನಿಗೆ ಬಹಳ ಹಿಂದೆಯೇ ಬೋಲ್ಡ್ ಆಂಡ್ ಬಿಂದಾಸ್ ನಟಿ ಅಂತ ಗುರುತಿಸಿಕೊಂಡಿರುವ ಕಂಗನಾ ರಾನಾವನ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದರು ಅನ್ನೋದು.
ಈ ವಿಷಯ ರಿವೀಲ್ ಆಗಿರೋದು ಕೆಲವು ವರ್ಷಗಳ ಹಿಂದೆ. ಕರಣ್ ಜೋಹರ್ ಅವರ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್'ನಲ್ಲಿ. ಆ ಪ್ರೋಗ್ರಾಂನಲ್ಲಿ ಅವತ್ತಉ ಅನಿಲ್ ಕಪೂರ್ ಮತ್ತು ಸಂಜಯ್ ದತ್ ಅವರೊಂದಿಗೆ ಕಂಗನಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕರಣ್ ಜೋಹರ್, ʼನೀವು ಎಂದಾದರೂ ಯಾರೊಂದಿಗಾದರೂ ಫ್ಲರ್ಟ್ ಮಾಡಲು ಪ್ರಯತ್ನಿಸಿ, ಅವರಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದ ಸಂದರ್ಭ ಇದೆಯೇ?ʼ ಅಂತ ಕಂಗನಾಗೆ ಕೇಳಿದ್ದಾರೆ. ಇದಕ್ಕೆ ಕಂಗನಾ ತಕ್ಷಣವೇ ʼಯೆಸ್ʼ ಅಂತ ಉತ್ತರಿಸಿದ್ದಾರೆ. ಅದು ಯಾರು ಅಂತ ಕೇಳಿದರೆ ಅವರ ಬಾಯಿಂದ ಬಂದ ಉತ್ತರ ʼಅಕ್ಷಯ್ ಖನ್ನಾʼ ಅನ್ನೋದು.
ಅಕ್ಷಯ್ ಖನ್ನಾ ಅವರ ಪ್ರತಿಕ್ರಿಯೆ ಹೇಗಿತ್ತು?
ಕಂಗನಾ ಮತ್ತು ಅಕ್ಷಯ್ ಖನ್ನಾ 2010ರ 'ನೋ ಪ್ರಾಬ್ಲಮ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಕಂಗನಾ ಅವರಿಗೆ ಅಕ್ಷಯ್ ಖನ್ನಾ ಮೇಲೆ ಸ್ವಲ್ಪ ಆಸಕ್ತಿ ಇತ್ತಂತೆ. ಕಂಗನಾ ವಿವರಿಸುತ್ತಾ, ʼನಾನು ಮೊದಲು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ, ನಂತರ ಸ್ವಲ್ಪ ಫ್ಲರ್ಟ್ ಕೂಡ ಮಾಡಿದೆ. ಆದರೆ ಅವರು ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರು ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ, ತಮ್ಮದೇ ಲೋಕದಲ್ಲಿ ಇರುತ್ತಾರೆʼ ಎಂದು ನಗುತ್ತಾ ಹೇಳಿದರು. ಅಕ್ಷಯ್ ಖನ್ನಾ ಬಾಲಿವುಡ್‌ನಲ್ಲಿ ತಮ್ಮ ಮಿತಭಾಷಿ ಮತ್ತು ಗಂಭೀರ ವ್ಯಕ್ತಿತ್ವಕ್ಕೆ ಹೆಸರಾದವರು ಎಂಬುದು ಇಲ್ಲಿ ಇನ್ನೊಮ್ಮೆ ದೃಢಪಟ್ಟಿದೆ.
Related Articles
ಈಗ ವೈರಲ್ ಆಗಲು ಏನು ಕಾರಣ?
ನಟ ಅಕ್ಷಯ್ ಖನ್ನಾ ನಟನೆಯ ಇತ್ತೀಚೆಗೆ ಬಿಡುಗಡೆಯಾದ ʼ'ಧುರಂಧರ್'ʼ (Dhurandhar) ಚಿತ್ರದಲ್ಲಿ 'ರೆಹಮಾನ್ ಡಕಾಯತ್' ಪಾತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಈ ಚಿತ್ರದಲ್ಲಿ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರ ಹಳೆಯ ವಿಡಿಯೋಗಳನ್ನು ಹುಡುಕುತ್ತಿದ್ದು, ಕಂಗನಾ 'ಫ್ಲರ್ಟಿಂಗ್' ಕಥೆ ಮತ್ತೆ ಮುನ್ನೆಲೆಗೆ ಬಂದಿದೆ.
ಇದರ ಜೊತೆಗೆ ಕಂಗನಾ ರನಾವತ್ ಅವರ ಈ ಮುಕ್ತ ಮಾತು ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿವೆ. ಅಕ್ಷಯ್ ಖನ್ನಾ ಅವರಂತಹ 'ರಿಸರ್ವ್ಡ್' ನಟನನ್ನು ಸೆಳೆಯಲು ಕಂಗನಾ ಪ್ರಯತ್ನಿಸಿದ್ದು ಅವರ ಧೈರ್ಯಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.


