ಐಶ್ವರ್ಯ ರೈ ಜತೆ ರೊಮಾನ್ಸ್​ಗೆ ಅವಕಾಶವೇ ಸಿಕ್ತಿಲ್ಲ ಎಂದಿದ್ದ ನಟ ಶಾರುಖ್ ಖಾನ್​​, ಐದು ಚಿತ್ರಗಳಿಂದ ನಟಿಯನ್ನು ಹೊರಹಾಕಿದ್ದು ಯಾಕೆ?  

ಶಾರುಖ್​ ಖಾನ್​ ಮತ್ತು ಐಶ್ವರ್ಯ ರೈ, 'ಜೋಶ್', ’ದೇವದಾಸ್’ ಹಾಗೂ ’ಮೊಹಬ್ಬತೆ’ ನಂತಹ ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆದರೆ ಇದಾದ ಬಳಿಕ ಇಬ್ಬರೂ ಒಟ್ಟಿಗೆ ಹಲವು ವರ್ಷ ನಟಿಸಿಯೇ ಇಲ್ಲ. ಐದು ಚಿತ್ರಗಳಲ್ಲಿ ಶಾರುಖ್​ ಮತ್ತು ಐಶ್ವರ್ಯ ರೈ ಜೋಡಿಯಾಗಿ ನಟಿಸುವ ಅವಕಾಶವಿದ್ದರೂ, ಈ ಚಿತ್ರಕ್ಕೆ ನಟಿ ಓಕೆ ಎಂದಿದ್ದರೂ ಶಾರುಖ್​ ಮಾತ್ರ ಐಶ್ವರ್ಯರನ್ನು ರಿಜೆಕ್ಟ್​ ಮಾಡಿಬಿಟ್ಟಿದ್ರಂತೆ! ಈ ಕುರಿತು ಖುದ್ದು ನಟಿ ಐಶ್ವರ್ಯ ರೈ, ಬಾಲಿವುಡ್​ ನಟಿ ಸಿಮಿ ಅಗರ್​ವಾಲ್​ ಚಾಟ್​ ಷೋನಲ್ಲಿ ನೀಡಿರುವ ಸಂದರ್ಶನದ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ಹೌದು! ಶಾರುಖ್​ ಖಾನ್​ ವಿಚಿತ್ರ ಸನ್ನಿವೇಶಗಳಲ್ಲಿ ಐಶ್ವರ್ಯ ರೈ ಜೊತೆ ನಟಿಸೋಕೆ ಒಪ್ಪಲಿಲ್ಲ ಎನ್ನುವುದೇ ವಿಶೇಷವಾಗಿದೆ. ಈ ಬಗ್ಗೆ ನನಗೂ ವಿಚಿತ್ರ ಎನಿಸುತ್ತಿದ್ದು, ಕಾರಣ ಗೊತ್ತಿಲ್ಲ ಎಂದಿದ್ದಾರೆ ಸಂದರ್ಶನದಲ್ಲಿ ಐಶ್ವರ್ಯ ರೈ.

ಅಷ್ಟಕ್ಕೂ ಈ ಮೊದಲು ಉಲ್ಲೇಖ ಮಾಡಿದ ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದ್ದರೂ, ಇಬ್ಬರಿಗೂ ರೊಮಾನ್ಸ್​ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈ ದುಃಖವನ್ನು ಶಾರುಖ್​ ಅವರು ಕೆಲ ವರ್ಷಗಳ ಹಿಂದೆ ’ಲಕ್ಸ್‌ ಗೋಲ್ಡನ್ ರೋಜ್ ಅವಾರ್ಡ್ಸ್‌’ ವೇದಿಕೆ ಮೇಲೆ ಬಹಿರಂಗವಾಗಿ ಹೇಳಿಕೊಂಡಿದ್ದರು. ’ಮೊದಲ ಸಿನಿಮಾ ’ಜೋಶ್’ನಲ್ಲಿ ಐಶ್ವರ್ಯಾ ತಂಗಿಯ ಪಾತ್ರ ಮಾಡಿದ್ದರು. ಎರಡನೇ ಸಿನಿಮಾ ’ದೇವದಾಸ್’ ಸಿನಿಮಾದಲ್ಲಿ ಐಶ್ವರ್ಯ ನನ್ನನ್ನು ಬಿಟ್ಟು ಹೋಗುತ್ತಾರೆ ಹಾಗೂ ಮೂರನೇ ಸಿನಿಮಾ ’ಮೊಹಬ್ಬತೆಂ’ಯಲ್ಲಿ ದೆವ್ವದ ಪಾತ್ರ ಮಾಡಿದ್ದರು. ಆದರೆ ಆಕೆಯೊಂದಿಗೆ ನನಗೆ ಆನ್‌ಸ್ಕ್ರೀನ್‌ನಲ್ಲಿ ರೊಮಾನ್ಸ್​ ಮಾಡುವ ಅವಕಾಶ ಮಾತ್ರ ಸಿಗಲಿಲ್ಲ. ಈ ವಿಚಾರವಾಗಿ ನನಗೆ ಬಹಳ ಬೇಸರ ಇದೆ' ಎಂದಿದ್ದ ಶಾರುಖ್​ ಕೊನೆಗೆ ಐದು ಚಿತ್ರಗಳಲ್ಲಿ ನಟಿಯನ್ನು ರಿಜಿಕ್ಟ್​ ಮಾಡಿದ್ದಾರೆ!

ಶಾರುಖ್ ಖಾನ್​ ಹೆಸರಿಗೆ ಕಪ್ಪುಚುಕ್ಕೆ: ವಿದೇಶದ ನೆಲದಲ್ಲಿ ಮರ್ಯಾದೆ ಕಳೆದುಕೊಂಡ ಬಾದ್​ಶಾಹ್​!

ಅಷ್ಟಕ್ಕೂ, ಐಶ್ವರ್ಯಾ ಹಾಗೂ ಶಾರುಖ್ ಇಬ್ಬರೂ ಬಹಳ ಹಿಂದಿನಿಂದಲೂ ಆತ್ಮೀಯ ಸ್ನೇಹಿತರು. ತಮ್ಮ ಸ್ನೇಹದ ಕುರಿತಾಗಿ ಮಾತನಾಡಿದ್ದ ಶಾರುಖ್​, ’ಈ ಮೊದಲು ನಾವು ಸಿನಿಮಾ ಸೆಟ್‌ನಲ್ಲಿ ಸಿಗುತ್ತಿದ್ದೆವು. ಆದರೀಗ ಮಕ್ಕಳ ಶಾಲೆಯ ಹೊರಗೆ ಭೇಟಿಯಾಗುತ್ತಿದ್ದೇವೆ’ ಎಂದಿದ್ದರು. ಇವರಿಬ್ಬರ ಮಕ್ಕಳು ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆದವರು. ಆದರೆ ಕೊನೆಗೆ ಶಾರುಖ್​ಗೆ ಅದೇನಾಯಿತೋ ಗೊತ್ತಿಲ್ಲ. ಐಶ್ವರ್ಯಾ ರೈ ‘‘ಚಲ್ತೆ ಚಲ್ತೆ ’’ಸಿನಿಮಾಗೆ ಮೊದಲು ಆಯ್ಕೆಯಾಗಿದ್ರು. ಆದರೆ ಇವರ ಬದಲಿಗೆ ರಾಣಿ ಮುಖರ್ಜಿ ಅವರನ್ನು ಹಾಕಿಕೊಳ್ಳಲಾಯಿತು. ಐಶ್ವರ್ಯ ರೈ ಸಲ್ಮಾನ್ ಖಾನ್ ಅವರಿಗೆ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ಅವರ ಮಾತು ಕೇಳಿ ಶಾರುಖ್ ಹೀಗೆ ಮಾಡಿದ್ದರು ಎನ್ನಲಾಗಿತ್ತು. ನಂತರ ವೀರ್​ ಝಾ ಚಿತ್ರದಿಂದಲೂ ನಟಿಯನ್ನು ಹೊರಕ್ಕೆ ಇಡಲಾಯಿತು. ಹೀಗೆ ಒಂದಾದ ಮೇಲೊಂದರಂತೆ ಐದು ಸಿನಿಮಾಗಳಿಂದ ಐಶ್ವರ್ಯಾ ಅವರನ್ನು ದೂರ ಉಳಿಸಿಕೊಂಡಿದ್ದರಂತೆ ಶಾರುಖ್​. ಈ ವಿಚಾರವನ್ನು ಖುದ್ದು ನಟಿ ಹೇಳಿದ್ದಾರೆ.

ಕೆಲವು ಸಿನಿಮಾಗಳಿಂದ ನನ್ನನ್ನು ಹೊರಹಾಕಲಾಯಿತು. ಆದರೆ ಈಗಲೂ ಕಾರಣ ನನಗೆ ತಿಳಿದಿಲ್ಲ. ಯಾರು ಏನೇ ಮಾಡಿದರೂ ಅದು ಏನು, ಯಾಕೆ ಎಂದು ಕೇಳಲು ನಾನು ಹೋಗುವುದಿಲ್ಲ. ಈ ವಿಷಯದಲ್ಲಿಯೂ ನಾನು ಅನವಶ್ಯಕ ಚರ್ಚೆ ಮಾಡಲಿಲ್ಲ. ಕಾರಣ ತಿಳಿದುಕೊಳ್ಳುವ ಉತ್ಸಾಹವೂ ನನ್ನಲ್ಲಿ ಇರಲಿಲ್ಲ ಎಂದಿದ್ದಾರೆ. ಆದರೆ ಈ ಸಂದರ್ಶನದ ಬಳಿಕ ಕರಣ್ ಜೋಹರ್ ಹುಟ್ಟಹಬ್ಬದ ಪಾರ್ಟಿಯಲ್ಲಿ ಶಾರುಖ್ ಖಾನ್ ಈ ವಿಚಾರವಾಗಿ ಐಶ್ವರ್ಯಾ ಅವರೊಂದಿಗೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಶಾರುಖ್​ ಆ ರೀತಿ ಮಾಡಿದ್ದು ಯಾಕೆ ಎನ್ನುವುದು ಮಾತ್ರ ಇನ್ನೂ ನಿಗೂಢ. 

ಥೂ ನಾಚಿಕೆ ಆಗಲ್ವಾ? ನಿಮ್ಮಂಥವರನ್ನು ಹಿಡಿದು ಥಳಿಸಬೇಕು... ಶಾರುಖ್​,ಅಜಯ್ ವಿರುದ್ಧ ಗುಡುಗಿದ 'ಶಕ್ತಿಮಾನ್'​

View post on Instagram