ಗಾಯಕ ಕುಮಾರ್ ಸನು ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ ಮೀನಾಕ್ಷಿ ಶೇಷಾದ್ರಿ!
80- 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ಮೀನಾಕ್ಷಿ ಶೇಷಾದ್ರಿ ಹಿಂದೊಮ್ಮೆ ಗಾಯಕ ಕುಮಾರ್ ಸಾನು ಅವರ ಬಾಳಲ್ಲಿ ಇವರು ಹೇಗೆ ಬಿರುಗಾಳಿ ಎಬ್ಬಿಸಿದರು ಎನ್ನುವ ವಿಷಯ ಈಗ ಬಹಿರಂಗಗೊಂಡಿದೆ.
80- 90ರ ದಶಕದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಾಬಲ್ಯ ಮೆರೆದ ಅನೇಕ ನಟಿಯರಿದ್ದರು. ರವೀನಾ ಟಂಡನ್ ಅವರಿಂದ ಹಿಡಿದು ಕರಿಷ್ಮಾ ಕಪೂರ್, ಜೂಹಿ ಚಾವ್ಲಾವರೆಗೆ ಬಾಲಿವುಡ್‌ನ ಎಲ್ಲಾ ಸೂಪರ್‌ಸ್ಟಾರ್‌ಗಳೊಂದಿಗೆ (Super stars) ಕೆಲಸ ಮಾಡಿದ ನಟಿಯರು, ಮಾತ್ರವಲ್ಲದೇ ಎಲ್ಲಾ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಅವರಲ್ಲಿ 80- 90ರ ದಶಕದಲ್ಲಿ ಹಿರಿತೆರೆ ಮತ್ತು ಬಾಕ್ಸ್ ಆಫೀಸ್ ಅನ್ನು ಆಳುತ್ತಿದ್ದ ನಟಿಯರ ಪೈಕಿ ಮೀನಾಕ್ಷಿ ಶೇಷಾದ್ರಿ ಕೂಡ ಒಬ್ಬರು. ತಮಿಳು ಬ್ರಾಹ್ಮಣ ಕುಟುಂಬದಲ್ಲಿ 16 ನವೆಂಬರ್ 1963ರಲ್ಲಿ ಬಿಹಾರದಲ್ಲಿ ಜನಿಸಿದ ಮೀನಾಕ್ಷಿ ಶೇಷಾದ್ರಿ ಮೊದಲ ಹೆಸರು ಶಶಿಕಲಾ ಶೇಷಾದ್ರಿ. ಮಾಡೆಲಿಂಗ್‌ನಲ್ಲೂ ಗುರುತಿಸಿಕೊಂಡಿದ್ದ ಮೀನಾಕ್ಷಿ (Meenakshi Sheshadri) ಅವರು 17ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದನ್ನು ಹೊರತುಪಡಿಸಿ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಮೀನಾಕ್ಷಿ ರಾಂಪ್ ವಾಕ್ ಮಾಡಿದ್ದರು. ಇಂದು ಅವರು ಉದ್ಯಮದಿಂದ ದೂರವಿದ್ದಾರೆ.
ಶಾಸ್ತ್ರೀಯ ನೃತ್ಯ ಕಲಾವಿದೆಯೂ ಆಗಿರುವ ಮೀನಾಕ್ಷಿ ಸದ್ಯ ಅಮೆರಿಕದಲ್ಲಿ ನೆಲೆಸಿದ್ದು, ಇಲ್ಲಿ ಭರತನಾಟ್ಯ, ಕಥಕ್ ಮತ್ತು ಒಡಿಸಿ ನೃತ್ಯಗಳನ್ನು ಕಲಿಸುತ್ತಿದ್ದಾರೆ. ಇವರು ಮನೋಜ್ ಕುಮಾರ್ ಅವರ ಮಗ ರಾಜೀವ್ ಗೋಸ್ವಾಮಿ ಅವರೊಂದಿಗೆ ಪೇಂಟರ್ ಬಾಬು(1982) ಎಂಬ ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಅವರ ಸಿನಿಮಾ ವೃತ್ತಿಯನ್ನು ಆರಂಭಿಸಿದರು. ಶುಭಾಷ್ ಘಾಯ್ ನಿರ್ದೇಶನದ ಮೆಗಾಹಿಟ್ ಚಿತ್ರ ಹೀರೋ (1983) (Hero) ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಅದರಲ್ಲಿಯೂ ಅವರು ಸಕತ್ ಪ್ರಸಿದ್ಧಿಗೆ ಬಂದದ್ದು ನಟಿ ಸನ್ನಿ ಡಿಯೋಲ್ ಜೊತೆಗಿನ 'ದಾಮಿನಿ' ಚಿತ್ರಕ್ಕಾಗಿ. ಈ ಚಿತ್ರದಿಂದ ಅವರು ವಿಶೇಷವಾಗಿ ಪ್ರಶಂಸಿಸಲ್ಪಟ್ಟರು.
Siddharth Anand: ಬೇಷರಂ ರಂಗ್ಗೆ ಕೇಸರಿ ಬಿಕಿನಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಮೌನ ಮುರಿದ ನಿರ್ದೇಶಕ
ಮೀನಾಕ್ಷಿ ಶೇಷಾದ್ರಿ ಅವರು ತಮ್ಮ ಚಲನಚಿತ್ರಗಳಿಂದ ಸಾಕಷ್ಟು ಖ್ಯಾತಿಯನ್ನು ಗಳಿಸಿದವರು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲೂ ಮುಖ್ಯಾಂಶಗಳಲ್ಲಿ ಉಳಿದರು. ವರದಿಗಳ ಪ್ರಕಾರ, ಇವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಪ್ರಸಿದ್ಧ ಗಾಯಕ ಕುಮಾರ್ ಸಾನು ಅವರನ್ನು ಪ್ರೀತಿಸುತ್ತಿದ್ದರು. ಆ ದಿನಗಳಲ್ಲಿ ಗಾಯಕರೊಂದಿಗೆ ನಟಿಯರ ಪ್ರೀತಿಯ ಕಥೆಗಳು ಸಾಮಾನ್ಯವಾಗಿದ್ದವು. ಅದೇ ರೀತಿ ಗಾಯಕ ಕುಮಾರ್ ಸಾನು ಮತ್ತು ಮೀನಾಕ್ಷಿ ಶೇಷಾದ್ರಿ ಅವರ ಸಂಬಂಧ ಸಾಕಷ್ಟು ಚರ್ಚೆಯಾಯಿತು. ಮೀನಾಕ್ಷಿ ಮತ್ತು ಕುಮಾರ್ ಸಾನು ಪ್ರೀತಿಯ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವಾಗ, ನಟಿ 'ಜುರ್ಮ್' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು. ಈ ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಇವರಿಬ್ಬರ ಪ್ರೇಮದ ಚರ್ಚೆಗಳು ಎಲ್ಲೆಡೆ ಹರಿದಾಡಿದವು. ಆದರೆ ಅದಾಗಲೇ ಕುಮಾರ್ ಸಾನು ಅವರಿಗೆ ಮದುವೆ ಆಗಿತ್ತು.
ಮೀನಾಕ್ಷಿ ಶೇಷಾದ್ರಿ ಮತ್ತು ಕುಮಾರ್ ಸಾನು (Kumar Sanu) ಅವರ ನಡುವಿನ ಸಂಬಂಧ ಬಿ ಟೌನ್ನಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತಲೇ ಈ ಸುದ್ದಿ ಗಾಯಕನ ಪತ್ನಿಗೂ ತಲುಪಿತು. ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಯಿತು. ದಂಪತಿ ನಡುವೆ ಭಾರಿ ಗದ್ದಲವೂ ಉಂಟಾಯಿತು. ಕೊನೆಗೆ ಇದು ಎಲ್ಲಿಯವರೆಗೆ ತಲುಪಿತು ಎಂದರೆ ಕುಮಾರ್ ಸಾನು ಅವರ ಪತ್ನಿ ತಮ್ಮ ಪತಿಗೆ ವಿಚ್ಛೇದನ ನೀಡಿದರು. ಆದರೆ ದುರದೃಷ್ಟವಶಾತ್, ಮೀನಾಕ್ಷಿ ಮತ್ತು ಕುಮಾರ್ ಸಾನು ಸಂಬಂಧವೂ ಹಳಸತೊಡಗಿತು. ಇವರ ಸಂಬಂಧ ಮುರಿದುಬಿತ್ತು.
Taali: ಮಂಗಳಮುಖಿಯಾಗಿ ಸುಷ್ಮಿತಾ ಸೇನ್: ಚಪ್ಪಾಳೆ ಏಕೆ ಎಂದು ವಿವರಿಸಿದ ನಟಿ
ಕುಮಾರ್ ಸಾನು ಅವರಿಂದ ಬೇರ್ಪಟ್ಟ ನಂತರ ಮೀನಾಕ್ಷಿ ಶೇಷಾದ್ರಿ ಅವರು ಮೈಸೂರಿನ ಬ್ಯಾಂಕರ್ ಹರೀಶ್ (Banker Harish) ಅವರನ್ನು ವಿವಾಹವಾದರು ಮತ್ತು ಬಾಲಿವುಡ್‌ನಿಂದ ದೂರವಾದರು. ಹರೀಶ್ ಅವರನ್ನು ಮದುವೆಯಾದ ನಂತರ ಮೀನಾಕ್ಷಿ ಬಾಲಿವುಡ್ ಮಾತ್ರವಲ್ಲದೆ ಭಾರತವನ್ನೇ ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ. ಆದಾಗ್ಯೂ, ಕೆಲವು ಸಮಯದ ಹಿಂದೆ ನಟಿ ರಿಯಾಲಿಟಿ ಶೋ ಒಂದಕ್ಕಾಗಿ ಭಾರತಕ್ಕೆ ಬಂದಿದ್ದರು, ಅಲ್ಲಿ ಅವರು ಮದುವೆಯ ನಂತರದ ಜೀವನದ ಬಗ್ಗೆ ಬಹಿರಂಗವಾಗಿ ಚರ್ಚಿಸಿದರು.