Asianet Suvarna News Asianet Suvarna News

Taali: ಮಂಗಳಮುಖಿಯಾಗಿ ಸುಷ್ಮಿತಾ ಸೇನ್​: ಚಪ್ಪಾಳೆ ಏಕೆ ಎಂದು ವಿವರಿಸಿದ ನಟಿ

ಮಂಗಳಮುಖಿಯರ ಕುರಿತಾದ ಹೊಸ ವೆಬ್​ ಸೀರೀಸ್​ನಲ್ಲಿ ಸುಷ್ಮಿತಾ ಸೇನ್ ಮಂಗಳಮುಖಿಯಾಗಿ ನಟಿಸುತ್ತಿದ್ದಾರೆ. ಅವರು ವಿಡಿಯೋ ಶೇರ್​ ಮಾಡಿ ಹೇಳಿದ್ದೇನು? 
 

Sushmita Sen shares an inspiring video on  Transgender Visibility on new Web series Thali
Author
First Published Apr 1, 2023, 4:23 PM IST

1994ರಲ್ಲಿ ಮಿಸ್​  ಯೂನಿವರ್ಸಲ್​ (Miss Universal) ಆಗಿ ಮಿಂಚಿದ್ದ ಬೆಡಗಿ ಸುಷ್ಮಿತಾ ಸೇನ್​, 1996ರಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇದಾಗಲೇ ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ  ಸುಷ್ಮಿತಾ ಸೇನ್​, ಈಗ ಒಟಿಟಿ ಕ್ಷೇತ್ರದಲ್ಲೂ  ಸಕ್ರಿಯರಾಗಿದ್ದಾರೆ.  ಈಗ ಸುಷ್ಮಿತಾ ಸೇನ್​ ಒಂದು ಹೊಸ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಆ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ   ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮಾಡುತ್ತಿರುವುದು ಮಂಗಳಮುಖಿ (Transgender) ಪಾತ್ರ. ಈ ಸೀರಿಸ್‌ನಲ್ಲಿ ಸುಷ್ಮಿತಾ, ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ತೃತೀಯಲಿಂಗಿ ಗೌರಿ ಸಾವಂತ್‌ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಕಳೆದ ವರ್ಷ ಸುಷ್ಮಿತಾ ಸೇನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ತಾಲಿ ವೆಬ್‌ ಸೀರೀಸ್‌ನ ಫಸ್ಟ್ ಲುಕ್‌ ಪೋಸ್ಟರ್‌ ಹಂಚಿಕೊಂಡಿದ್ದರು. ಈ ಚಿತ್ರದ ಮೂಲಕ 'ಗೌರಿ ಸಾವಂತ್‌ ಅವರ ಜೀವನವನ್ನು ತೆರೆ ಮೇಲೆ ತರಲಾಗುತ್ತಿದೆ. ಗೌರಿ ಅವರ ಪಾತ್ರದಲ್ಲಿ ನಟಿಸುತ್ತಿರುವುದು ಹೆಮ್ಮೆಯಾಗುತ್ತಿದೆ' ಎಂದು ಸುಷ್ಮಿತಾ ಬರೆದುಕೊಂಡಿದ್ದರು. ಇದೀಗ ಆ ಚಿತ್ರದ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

 ಕಳೆದ ತಿಂಗಳಷ್ಟೇ ಹೃದಯಾಘಾತಕ್ಕೆ (Heart Attack) ಒಳಗಾಗಿದ್ದ ನಟಿ, ಈಗ ಚೇತರಿಸಿಕೊಂಡಿದ್ದು, ಈ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.  ತಮಗೆ ಮಾಸಿವ್ ಹಾರ್ಟ್ ಆಟ್ಯಾಕ್ ಆಗಿದ್ದು, 95 % ಬ್ಲಾಕೇಜ್ ಇರುವುದಾಗಿ ಹೇಳಿಕೊಂಡಿದ್ದರು. ನಾನು ಆಕ್ಟೀವ್ ಲೈಫ್‌ಸ್ಟೈಲ್ ಹೊಂದಿದ್ದರಿಂದ ನಾನು ಬದುಕುಳಿದೆ. ನಾನು ತುಂಬಾ ಲಕ್ಕಿ ಎಂದಿದ್ದ ಅವರು, ಮೊನ್ನೆಯಷ್ಟೇ ಮತ್ತೊಂದು ವಿಡಿಯೋ ಶೇರ್​ ಮಾಡಿ ಆಂಜಿಯೋಪ್ಲಾಸ್ಟ್​ ಮಾಡಿ ಒಂದು ತಿಂಗಳು ಪೂರ್ಣಗೊಂಡಿದೆ ಎಂದಿದ್ದರು.  ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲ್ಯಾಕ್​  ಆ್ಯಂಡ್​ ವೈಟ್​ ವಿಡಿಯೋ ಶೇರ್​ (Vedio Share) ಮಾಡಿದ್ದ ಅವರು ಭಯದಿಂದ ಹೊರಗೆ ಬಂದಿರುವುದಾಗಿ ಹೇಳಿದ್ದರು. 

Sushmita Sen: ಮ್ಯಾಸೀವ್​ ಹಾರ್ಟ್​ ಅಟ್ಯಾಕ್​ಗೆ ಒಳಗಾಗಿದ್ದ ನಟಿ ಸುಶ್ಮಿತಾ ಸೇನ್​ ಹೇಳಿದ್ದೇನು?
 
ಇದೀಗ ತಮ್ಮ ಹೊಸ ಪ್ರೊಜೆಕ್ಟ್​ ಕುರಿತು ಸುಷ್ಮಿತಾ (Sushmita Sen) ತಿಳಿಸಿದ್ದಾರೆ. ಸಾಖಿಚಾರ್‌ ಚೌಘಿ ಎಂಬ ಎನ್‌ಜಿಒನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗೌರಿ ಸಾವಂತ್‌ ತೃತೀಯಲಿಂಗಿಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದವರು. ಇದೀಗ ಅವರ ಜೀವನವನ್ನು ವೆಬ್‌ ಸೀರೀಸ್‌ ರೂಪದಲ್ಲಿ ತೆರೆಗೆ ತರಲಾಗುತ್ತಿದೆ. ಗೌರಿ ಸಾವಂತ್‌, ಭಾರತದ ಮೊದಲ ಟಾನ್ಸ್‌ಜೆಂಡರ್‌ ಮದರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಪಟ್ಟ ಕಷ್ಟ, ಅಡೆತಡೆಗಳನ್ನು ಕೂಡಾ ಈ ಸೀರೀಸ್‌ನಲ್ಲಿ ತೋರಿಸಲಾಗಿದೆ. ನಿನ್ನೆ ಅಂದರೆ, ಮಾರ್ಚ್‌ 31 ವಿಶ್ವ ತೃತೀಯ ಲಿಂಗಿಗಳ ದಿನ. ಈ ವಿಶೇಷ ದಿನದಂದು ತೃತೀಯಲಿಂಗಿಗಳ ಹಕ್ಕು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಾ ಬರಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಸಮಾಜಕ್ಕೆ ಸಂದೇಶ ನೀಡಿದ್ದಾರೆ.ಈ  ವೆಬ್​ ಸಿರೀಸ್​ಗೆ ‘ಥಾಲಿ’ (ಚಪ್ಪಾಳೆ) ಎಂದು ಹೆಸರು ಇಡಲಾಗಿದೆ. ಫಸ್ಟ್​ಲುಕ್​ ಕೂಡ ರಿಲೀಸ್​ ಮಾಡಲಾಗಿದೆ. ಇದು ನೈಜ ಘಟನೆಗಳನ್ನು ಆಧರಿಸಿ ಮೂಡಿಬರುತ್ತಿರುವ ವೆಬ್​ ಸಿರೀಸ್​. ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡ ಮಂಗಳಮುಖಿ ಶ್ರೀಗೌರಿ ಸಾವಂತ್​ ಅವರ ಜೀವನದ ವಿವರಗಳನ್ನು ಕೇಂದ್ರವಾಗಿಟ್ಟುಕೊಂಡು ‘ಥಾಲಿ’ ಸಿದ್ಧವಾಗುತ್ತಿದೆ. ಶ್ರೀಗೌರಿ ಸಾವಂತ್ (Shreegowri Sawanth) ಅವರ ಪಾತ್ರದಲ್ಲಿ ತಾವು ಅಭಿನಯಿಸುತ್ತಿರುವುದಾಗಿ ಸುಷ್ಮಿತಾ ಸೇನ್ ಹೇಳಿದ್ದಾರೆ. 

ಈ ವಿಡಿಯೋದಲ್ಲಿ ಮಂಗಳಮುಖಿಯರು ಏಕೆ ಚಪ್ಪಾಳೆ ತಟ್ಟುತ್ತಾರೆ ಎಂಬುದನ್ನು ವಿವರಿಸಲಾಗಿದೆ. ಮಂಗಳಮುಖಿಯರು  ಹಣ ಕೇಳುವುದಕ್ಕೆ,  ಗಮನ ಸೆಳೆಯುವುದಕ್ಕೆ  ಅಥವಾ ಕೋಪವನ್ನು ಹೊರ ಹಾಕುವುದಕ್ಕೆ ಚಪ್ಪಾಳೆ ತಟ್ಟುವುದು ಬೇಡ.  ಇನ್ಮುಂದೆ ಆತ್ಮವಿಶ್ವಾಸವನ್ನು ಹೆಚ್ಚಿಸಲು, ಹೊಸ ಗುರುತು ಸೃಷ್ಟಿಸಲು, ಚಪ್ಪಾಳೆ ಸದ್ದಿನಿಂದ ಆಕಾಶವನ್ನು ಗೆಲ್ಲುವುದಕ್ಕೆ ಚಪ್ಪಾಳೆ ತಟ್ಟೋಣ, ಕೇವಲ ಕೈಗಳನ್ನು ಜೋಡಿಸಲು ಮಾತ್ರವಲ್ಲ ಪರಸ್ಪರ ಹೃದಯಗಳನ್ನು ಬೆಸೆಯಲು ಚಪ್ಪಾಳೆ ತಟ್ಟೋಣ ಎಂದಿದ್ದಾರೆ  ಸುಷ್ಮಿತಾ. ಅವರ ದತ್ತು ಪುತ್ರಿ ರಿನೀ ಸೇನ್​ಗೆ ಈಗ 23 ವರ್ಷ ವಯಸ್ಸು. ಅವರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ‘ಅಮ್ಮ.. ನಿಮ್ಮನ್ನು ಕಂಡರೆ ತುಂಬ ಹೆಮ್ಮೆ ಎನಿಸುತ್ತಿದೆ. ನಿಮ್ಮನ್ನು ತುಂಬ ಪ್ರೀತಿಸುತ್ತೇನೆ’ ಎಂದು ಅವರು ಕಮೆಂಟ್​ ಮಾಡಿದ್ದಾರೆ.

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!

 ಮರಾಠಿ ಫಿಲ್ಮ್‌ ಮೇಕರ್‌ ರವಿ ಜಾಧವ್‌ ಈ ವೆಬ್‌ ಸೀರೀಸ್‌ಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಸೀರೀಸ್‌ನಲ್ಲಿ ತಾಯಿ-ಮಗಳ ಬಾಂಧವ್ಯದ ಕಥೆ ಕೂಡಾ ಇದೆ. ಈ ವೆಬ್‌ ಸೀರೀಸ್ ಎಪಿಸೋಡ್‌ಗಳನ್ನು ಒಳಗೊಂಡಿದೆ. ಸುಷ್ಮಿತಾ ಅವರ ದತ್ತು ಪುತ್ರಿ ರಿನೀ ಸೇನ್​ಗೆ ಈಗ 23 ವರ್ಷ ವಯಸ್ಸು. ಅವರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ‘ಅಮ್ಮ.. ನಿಮ್ಮನ್ನು ಕಂಡರೆ ತುಂಬ ಹೆಮ್ಮೆ ಎನಿಸುತ್ತಿದೆ. ನಿಮ್ಮನ್ನು ತುಂಬ ಪ್ರೀತಿಸುತ್ತೇನೆ’ ಎಂದು ಅವರು ಕಮೆಂಟ್​ ಮಾಡಿದ್ದಾರೆ.

 

Follow Us:
Download App:
  • android
  • ios