Asianet Suvarna News Asianet Suvarna News

ಶೂಟಿಂಗ್ ವೇಳೆ ಬಿಕ್ಕಿ ಬಿಕ್ಕಿ ಅತ್ತ ನಟಿ, ಈ ಹಾಡಿನ ವೇಳೆ ನಡೆದಿತ್ತು ಬ್ರೇಕ್ ಅಪ್!

ಬಾಲಿವುಡ್‌ನಲ್ಲಿ ಅನೇಕರ ಬ್ರೇಕ್ ಅಪ್ ಆಗಿದೆ. ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡ್ರು ತೆರೆ ಹಿಂದಿನ ಅವರ ಕಥೆ ಭಿನ್ನವಾಗಿರುತ್ತದೆ. ಅದಕ್ಕೆ ಬಾಲಿವುಡ್ ಹಳೆ ಜೋಡಿ ಬಿಪಾಷಾ ಬಸು ಹಾಗೂ ಡಿನೋ ಮೋರಿಯಾ ಉದಾಹರಣೆ.
 

What Vikram Bhatt Said About Bipasha Basu And Dino Morea Break Up roo
Author
First Published Aug 9, 2024, 12:40 PM IST | Last Updated Aug 10, 2024, 10:31 AM IST

ರಾಜ್… ಬಾಲಿವುಡ್ ನ ಹಾರರ್ ಮೂವಿ. ಸೈಲೆಂಡ್ ಆಗಿಯೇ ನಮ್ಮನ್ನು ಭಯಗೊಳಿಸುವ ಚಿತ್ರ ಇದು. ಇದ್ರಲ್ಲಿ ಕಾಣಿಸಿಕೊಂಡಿದ್ದ ಬಿಪಾಷಾ ಬಸು ಹಾಗೂ ಡಿನೋ ಮೋರಿಯಾ, ಅದ್ಭುತ ಆಕ್ಟಿಂಗ್ ಮಾಡಿದ್ದರು. ಮೇ ಅಗರ್ ಸಾಮನೆ ಆಭಿ ಜಾ ಯಾ ಕರೋ….ಹಾಡನ್ನು ಈಗ್ಲೂ ಅನೇಕರು ಗುನುಗ್ತಾರೆ. ಈ ಹಾಡಿನಲ್ಲಿ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದ ಬಿಪಾಷಾ ಹಾಗೂ ಡಿನೋ, ರಿಯಲ್ ಆಗಿ ನೋವಿನಲ್ಲಿದ್ರು. ಇಬ್ಬರ ಮಧ್ಯೆ ಏನೂ ಸರಿ ಇರ್ಲಿಲ್ಲ. ಹಾಡಿನ ಒಂದು ದೃಶ್ಯದಲ್ಲಿ ಬಿಪಾಷಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಿಪಾಷಾ ಹಾಗೂ ಡಿನೋ ಮಧ್ಯೆ ಶೂಟಿಂಗಲ್ಲಿ ನಡೆದ ಘಟನೆಯನ್ನು ನಿರ್ದೇಶಕ ವಿಕ್ರಂ ಭಟ್ ಎಲ್ಲರ ಮುಂದಿಟ್ಟಿದ್ದಾರೆ. 

ಒಂದ್ಕಾಲದಲ್ಲಿ ಬಾಲಿವುಡ್ (Bollywood) ಜೋಡಿ ಹಕ್ಕಿ ಎಂದಾಗ ಡಿನೋ ಮೋರಿಯಾ (Dino Morea) ಮತ್ತೆ ಬಿಪಾಷಾ ಬಸು (Bipasha Basu) ಕೂಡ ಪಟ್ಟಿಯಲ್ಲಿ ಸೇರುತ್ತಿದ್ದರು. ಅವರಿಬ್ಬರ ಪ್ರೀತಿಯ ಅಪ್ಪುಗೆ, ಅಭಿಮಾನಿಗಳಿಗೆ ಇಷ್ಟವಾಗಿತ್ತು. ಈ ಜೋಡಿಯನ್ನು ಅಭಿಮಾನಿಗಳು ಮನಸಾರೆ ಒಪ್ಪಿಕೊಂಡಿದ್ದರು. ಆದ್ರೆ ಬಹುಕಾಲ ಇವರಿಬ್ಬರ ಪ್ರೀತಿ ಜೀವಂತವಾಗಿರಲಿಲ್ಲ. ಕೆಲ ವರ್ಷದಲ್ಲಿಯೇ ಬ್ರೇಕ್ ಅಪ್ (Break Up) ಮಾಡ್ಕೊಂಡು ಇಬ್ಬರು ದೂರವಾದ್ರು. ಈಗ ತಮ್ಮ ಸಂಸಾರದಲ್ಲಿ ಬ್ಯೂಸಿಯಿದ್ರೂ ಬ್ರೇಕ್ ಆದ ಸಮಯದಲ್ಲಿ ಬಾಲಿವುಡ್ ನಟಿ ಬಿಪಾಷಾ ಎಷ್ಟು ನೋವು ತಿಂದಿದ್ರು ಎಂಬುದನ್ನು ನಿರ್ದೇಶಕರು ಹೇಳಿದ್ದಾರೆ. ಸಿನಿಮಾ ಸೆಟ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ಬಿಪಾಷಾ ಬಗ್ಗೆ ನಿರ್ದೇಶಕರು ಮೊದಲ ಬಾರಿ ಮಾತನಾಡಿದ್ದಾರೆ. 

ಮಗನೇ ಜೀವನದ ದಾರಿ ತೋರಿಸುತ್ತಿದ್ದಾನೆ; ಆನಿವರ್ಸರಿ ದಿನ ಗುಡ್‌ ನ್ಯೂಸ್ ಕೊಡುತ್ತಿರುವ ವಿಜಯ್ ರಾಘವೇಂದ್ರ?

ಬಿಪಾಷಾ ಬಸು ಹಾಗೂ ಡಿನೋ ಮೋರಿಯಾ ಬಗ್ಗೆ ನಿರ್ದೇಶಕ ವಿಕ್ರಂ ಭಟ್ ಮಾತನಾಡಿದ್ದಾರೆ. ರಾಜ್ ಸಿನಿಮಾ ರಿಲೀಸ್ ಸಮಯದಲ್ಲಿ ಆದ ಘಟನೆ ಇದು. ರಾಜ್ ಸಿನಿಮಾ ತೆರೆಗೆ ಬರುವ ಮೊದಲು ಬಿಪಾಷಾ ಹಾಗೂ ಡಿನೋ ಮೋರಿಯಾ ಸಂಬಂಧದಲ್ಲಿದ್ರು. ಆದ್ರೆ ಶೂಟಿಂಗ್ ಸಮಯದಲ್ಲಿ ಇಬ್ಬರ ಸಂಬಂಧ ಹಳಸ್ತಾ ಬಂದಿತ್ತು. ಇಬ್ಬರ ಮಧ್ಯೆ ಇದ್ದ ರೊಮ್ಯಾನ್ಸ್ ಕಡಿಮೆ ಆಗಿತ್ತು ಎನ್ನುತ್ತಾರೆ ವಿಕ್ರಂ ಭಟ್.

ಸಿನಿಮಾ ಹಾಡಿಗೆ  ಬಿಕ್ಕಿ ಬಿಕ್ಕಿ ಅತ್ತಿದ್ದ ಬಿಪಾಷಾ : ವಿಕ್ರಂ ಭಟ್ ಪ್ರಕಾರ, ರಾಜ್ ಸಿನಿಮಾದ ಹಾಡಿನ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಅದ್ರಲ್ಲಿ ನಮ್ಮ ಮದುವೆ ಇನ್ನು ತುಂಬಾ ದೂರ ಇಲ್ಲ ಎನ್ನುವ ಸಾಲೊಂದು ಬರುತ್ತದೆ. ಈ ದೃಶ್ಯ ಶೂಟ್ ಮಾಡುವಾಗ ಇಬ್ಬರೂ ಜಗಳ ಮಾಡಿಕೊಂಡಿದ್ರು. ಬಿಪಾಷಾ ಅಳ್ತಿದ್ದರೆ, ಡಿನೋ ದುಃಖದಲ್ಲಿದ್ದರು ಎನ್ನುತ್ತಾರೆ ನಿರ್ದೇಶಕರು. ಇಬ್ಬರ ಮಧ್ಯೆ ಪ್ರವೇಶಿಸಿದ ವಿಕ್ರಂ ಭಟ್, ಶಾಂತವಾಗಿ ಸಿನಿಮಾ ಶೂಟಿಂಗ್ ಮಾಡುವಂತೆ ಕೇಳಿ ಕೊಂಡಿದ್ದರಂತೆ.

ಹಿರೋಯಿನ್ ಪರ್ಸನಲ್ ಜೀವನದಲ್ಲಿ ತಲೆ ಹಾಕುವ ಸ್ವಭಾವ ನನ್ನದಲ್ಲ. ಆದ್ರೆ ಆ ಟೈಂನಲ್ಲಿ ನನಗೇನಾಗಿತ್ತು ಗೊತ್ತಿಲ್ಲ. ನಾನು ಅವರಿಬ್ಬರ ಗಲಾಟೆ ಬಗ್ಗೆ ಮಾತನಾಡಿದ್ದೆ. ಸಿನಿಮಾ ಮಧ್ಯದಲ್ಲೇ ಅವರಿಬ್ಬರ ಸಂಬಂಧ ಹಾಳಾಗಿತ್ತು. ಇದನ್ನು ನೋಡಿದ ನನಗೂ ಬೇಸರವಾಗಿತ್ತು. ಸಿನಿಮಾ ರಿಲೀಸ್ ಆಗ್ತಿದ್ದಂತೆ ಇಬ್ಬರು ಸಂಪೂರ್ಣ ದೂರ ಹೋದ್ರು ಎನ್ನುತ್ತಾರೆ ವಿಕ್ರಂ ಭಟ್.  

ಯೂಟ್ಯೂಬರ್ ಸತೀಶ್‌ ಈರೇಗೌಡ್ರೇ ಯಾವುದೇ ಕಾರಣಕ್ಕೂ ಎಣ್ಣೆ ಕುಡಿಯೋದು ಮಾತ್ರ ಬಿಡ್ಬೇಡಿ; ನೊಂದ ಯುವಕರ ಸಂಘದ ಮನವಿ ವೈರಲ್!

ಬ್ರೇಕ್ ಅಪ್ ನಂತ್ರ ಸ್ವಲ್ಪ ದಿನ ಜಾನ್ ಜೊತೆ ಡೇಟ್ ಮಾಡಿದ್ದ ಬಿಪಾಷಾ ಕೊನೆಯಲ್ಲಿ ಕರಣ್ ಸಿಂಗ್ ಗ್ರೋವರ್ ಮದುವೆ ಆಗಿದ್ದಾರೆ. ಅವರಿಗೆ ಮುದ್ದಾದ ಮಗುವೊಂದಿದೆ. ಸದ್ಯ ಬಿಪಾಷಾ ಯಾವುದೇ ಸಿನಿಮಾದಲ್ಲಿ ನಟಿಸ್ತಿಲ್ಲ. ಇನ್ನು ಡಿನೋ ಮೋರಿಯಾ ಮದುವೆ ಆಗಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಸಿಂಗಲ್ ಫಾದರ್ ಆಗಲು ನನಗೆ ಇಷ್ಟವಿಲ್ಲ. ಸಂಗಾತಿ ಸಿಕ್ಮೇಲೆ ನಾನು ಅಪ್ಪನಾಗ್ತೇನೆ ಎಂದಿದ್ದರು. 

Latest Videos
Follow Us:
Download App:
  • android
  • ios