ಗರ್ಭಿಣಿ ಅನುಷ್ಕಾ ಶರ್ಮಾ ಮನದಲ್ಲಿ ಏನು ಬಯಕೆಯಿದೆ ಗೊತ್ತಾ?
ಅನುಷ್ಕಾ ಶರ್ಮಾ ಗರ್ಭಿಣಿಯಾದ ಬಳಿಕ ನಟನೆಯಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದಾರೆ. ಆದರೆ ಆಕೆಯ ಮನದಲ್ಲಿರುವ ಬಯಕೆಗಳಿಗೆ ಕಡಿವಾಣ ಹಾಕಿಲ್ಲ.
ಅನುಷ್ಕಾ ಶರ್ಮಾ ಈಗ ಗರ್ಭಿಣಿ. ಗಂಡ ವಿರಾಟ್ ಕೊಹ್ಲಿ ಜೊತೆಗೆ ಈಕೆ ಸೇರಿ ತೆಗೆಸಿಕೊಂಡ, ಅನುಷ್ಕಾ ಕಪ್ಪು ದಿರಿಸಿನಲ್ಲಿರುವ, ಬೇಬಿ ಬಂಪ್ ಪ್ರದರ್ಶಿಸುತ್ತಿರುವ ಕ್ಯೂಟ್ ಫೋಟೋ, ಸಕತ್ ವೈರಲ್ ಆಗಿತ್ತು. ೨೦೨೧ರ ಜನವರಿಯಲ್ಲಿ ಮನೆಗೆ ನೂತನ ಸದಸ್ಯನ ಆಗಮನ ಅಂತ ಇಬ್ಬರೂ ಫೋಟೋದ ಜೊತೆಗೆ ಹಾಕಿಕೊಂಡಿದ್ದರು. ಅಂದರೆ ಅನುಷ್ಕಾಗೆ ಈಗ ಐದು ತಿಂಗಳು, ಗರ್ಭಿಣಿ, ಈ ಹಂತದಲ್ಲಿ ಆಕೆಗೆ ನಾನಾ ತರಹದ ತಿಂಡಿ, ಬಟ್ಟೆ, ಜಾಗ ಸುತ್ತಾಟದ ಬಯಕೆಗಳು ಸಹಜ. ಸದ್ಯಕ್ಕಂತೂ ಗಂಡ ವಿರಾಟ್ ಕೊಹ್ಲಿ ದೇಶದಲ್ಲಿಲ್ಲ. ಐಪಿಎಲ್ ಪಂದ್ಯಗಳನ್ನು ಆಡ್ತಾ ದುಬೈಯಲ್ಲಿದ್ದಾನೆ. ಹೀಗಾಗಿ ಸುತ್ತಾಡೋಕೆ ಆತ ಬರುವವರೆಗೂ ಕಾಯಬೇಕು.
ಸದ್ಯ ಯಾರೋ ಅನುಷ್ಕಾಗೆ, ನೀವೀಗ ಯಾವ ಫುಡ್ ತಿನ್ನಬಯಸ್ತೀಯಾ ಅಂತ ಕೇಳಿದ್ದಾರೆ. ಈಕೆಗೆ ಚಿಕನ್ ಬಟರ್ ಮಸಾಲಾ ಇಷ್ಟ. ಆದರೆ ಆಕೆಗೆ ಈಗ ತಿನ್ನಬೇಕೆನಿಸುತ್ತಿರುವ ಫುಡ್‌ಗಳು ಪಹಾಡಿ ಶೈಲಿಯದ್ದು. ಯಾಕೆಂದರೆ ಈಕೆಯ ತಾಯಿ ಉತ್ತರಾಂಚಲದ ಘಡವಾಲಿ ಸಮುದಾಯದವರು. ತಂದೆ ಬ್ರಾಹ್ಮಣ. ತಾಯಿ ಪಹಾಡಿ ಶೈಲಿಯ ಅಡುಗೆಯನ್ನು ಚೆನ್ನಾಗಿ ಮಾಡಬಲ್ಲರು. ಅದು ಅನುಷ್ಕಾಗೆ ತುಂಬ ಇಷ್ಟ. ಈಗ ತಾಯಿಯ ಕೈಯಡುಗೆ ತಿನ್ನಬೇಕೆನಿಸುತ್ತಿದೆಯಂತೆ ಅನುಷ್ಕಾಗೆ. ಹಾಗೆ ಆಕೆ ಬಯಸುತ್ತಿರುವ ಫುಡ್‌ಗಳು ಚೈಸು, ಫಾದುನ್, ಮೂಲಿ ಕಿ ಥಿಚವಾನಿ, ಪಹಾಡಿ ಪಾಲಕ್.
ಸ್ವಿಮ್ ಸೂಟ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಅನುಷ್ಕಾ..!
ಚೈಸು ಎಂಬುದು ಕಪ್ಪು ಕಡಲೆಕಾಳಿನಿಂದ ಮಾಡುವ ಒಂದು ಪದಾರ್ಥ. ಅದನ್ನು ಹುರಿದುಕೊಂಡು, ಕಡೆಯುವ ಕಲ್ಲಿನಲ್ಲೇ ಕಡೆದು ಬೇಯಿಸಿ ಪಾಕ ಮಾಡಿಕೊಳ್ಳಲಾಗುತ್ತದೆ. ಮಿಕ್ಸಿಯಲ್ಲೋ ಗ್ರೈಂಡರ್‌ನಲ್ಲೋ ಕಡೆದರೆ ಒರಿಜಿನಲ್ ರುಚಿ ಬರುವುದಿಲ್ಲವಂತೆ. ಫಾದುನ್ ಎಂಬುದು ಹಸಿರು ಹೆಸರುಬೇಳೆಯಿಂದ ಮಾಡುವ ಒಂದು ಖಾದ್ಯ. ಇದನ್ನು ಬೇಯಿಸುವ ಮುನ್ನ ನಾಲ್ಕರಿಂದ ಐದು ಗಂಟೆ ಕಾಲ ಬೇಳೆಯನ್ನು ನೀರಿನಲ್ಲಿ ನೆನೆಹಾಕಲಾಗುತ್ತದೆ. ಉತ್ತರಾಂಚಲದ ಇನ್ನೊಂದು ಸಿಗ್ನೇಚರ್ ಖಾದ್ಯ ಮೂಲಿ ಕಿ ಥಿಚವಾನಿ. ಇದನ್ನು ಮೂಲಂಗಿ ಮತ್ತು ಬೇಕಿದ್ದರೆ ಬಟಾಟೆ ಸೇರಿಸಿ ಮಾಡಲಾಗುತ್ತದೆ. ಥಿಚಾ ಎಂದರೆ ಜಜ್ಜಿ ಉಂಡೆ ಮಾಡಿಕೊಳ್ಳುವುದು. ಪಹಾಡಿ ಪಾಲಕ್ ಎಂಬುದು ನಮ್ಮ ಪತ್ರೊಡೆಯಂಥ ತಿಂಡಿ. ಅಕ್ಕಿಹಿಟ್ಟು, ಕೊಂಚ ಬೇಳೆ, ಮೆಣಸು, ಇತ್ಯಾದಿಗಳೊಂದಿಗೆ ಸೇರಿಸಿ, ಬೇಯಿಸಲಾಗುತ್ತದೆ. ಚೆನ್ನಾಗಿ ಬೆಂದರೆ ಒಂದು ರುಚಿ. ಅರ್ಧ ಬೇಯಿಸಿದರೆ ಇನ್ನೊಂದು ರುಚಿ, ಹಾಗೂ ಪಾಲಕ್‌ನ ಪೌಷ್ಟಿಕ ಗುಣಗಳು ಹಾಗೇ ಉಳಿದುಕೊಳ್ಳುತ್ತವೆ. ಇದರ ಜೊತೆಗೆ ಆಕೆಗೆ ಬೇಕೆನಿಸುವುದು ಮೊಮೋಸ್ ಹಾಗೂ ಪಾನಿಪುರಿ. ಪಾನಿಪುರಿ ಮನೆಯಲ್ಲಿ ಮಾಡಿದ್ದು ರುಚಿಸೊಲ್ಲ, ಮುಂಬಯಿಯ ಭಯ್ಯಾ ಹುಡುಗನೇ ಗೋಲಗಪ್ಪೆ ಮಾಡಿ ಕೊಡಬೇಕು.
ಕೊಹ್ಲಿ ಅನುಷ್ಕಾ **** ಜತೆ ಅಭ್ಯಾಸ ಮಾಡಿದ್ದಾರೆ ಎಂದ ಗವಾಸ್ಕರ್..! ಕಿಡಿಕಾರಿದ ಅನುಷ್ಕಾ .
ಇನ್ನು ಅನುಷ್ಕಾಳ ಫೇವರಿಟ್ ಈಟೌಟ್ ಔಟಿಂಗ್ ಸ್ಪಾಟ್ ಅಂದ್ರೆ ಇಟಲಿಯ ಒಂದು ರೆಸ್ಟಾರೆಂಟು. ಇಟಲಿಯ ಸೊರೆಂಟೊದಲ್ಲಿರುವ ಅದರ ಹೆಸರು ಲಾಂಟಿಕಾ ಟ್ರಟೋರಿಯಾ. ಇಲ್ಲಿ ಸಿಗುವ ಒಂದು ಬಗೆಯ ಊಟವನ್ನು ಈಕೆ ಇಷ್ಟಪಡುತ್ತಾಳೆ. ಆದರೆ ಇಲ್ಲಿಗೆ ತುಸು ವಿರಾಮದಲ್ಲಿ ಹೋಗಬೇಕು. ಯಾಕೆಂದರೆ ಇದು ಏಯ್ಟ್ ಕೋರ್ಸ್ ಮೀಲ್. ಅದರೆ ಎಂಟು ವೆರೈಟಿಯ ಖಾದ್ಯಗಳಿಂದ ಕೂಡಿದ, ಎಂಟು ಹಂತಗಳಲ್ಲಿ ಸರ್ವ್ ಮಾಡಲಾಗುವ ಊಟ. ಇದನ್ನು ವಿರಾಮದಲ್ಲಿ ಮುಗಿಸೋಕೆ ಮೂರು ಗಂಟೆ ಬೇಕಂತೆ. ಹಿಂದಿನ ಬಾರಿ ಅಲ್ಲಿಗೆ ಹೋದಾಗ ತುಸು ಬೇಗ ಬೇಗ ಸರ್ವ್ ಮಾಡುವಂತೆ ಅನುಷ್ಕಾ ಸರ್ವರ್ ಬಾಯ್‌ಗೆ ಹೇಳಿದ್ದರಂತೆ. ಅದಕ್ಕೆ ಆತ ನಸುನಕ್ಕು "ರಿಲ್ಯಾಕ್ಸ್ ಮೇಡಂ' ಎಂದಿದ್ದನಂತೆ.
ಹಾಗೇ ಅನುಷ್ಕಾ ಇನ್ನಷ್ಟು ಖುಷಿಯಲ್ಲಿ ತಂಪು ಪಾನೀಯಗಳನ್ನು ಸವಿಯಲು ಬಯಸುವ ಹಾಗ ಅಂದ್ರೆ ಗೋವಾ. ಅಲ್ಲಿನ ಸುಂದರ ಬೀಚ್‌ಗಳು, ಬಿಸಿಲು ಹಾಗೂ ಸೆಕೆಯ ಹವೆ, ಅತ್ಯುತ್ತಮ ತಂಪು ಪಾನೀಯಗಳನ್ನು ಸವಿಯುವ ಹಾಗೆ ಮಾಡುತ್ತವಂತೆ.
ಆದ್ರೆ ಇದನ್ನೆಲ್ಲಾ ಮಾಡೋಕೆ ಅನುಷ್ಕಾ, ವಿರಾಟ್ ಬರೋಕೆ ಕಾಯಬೇಕು.
ವಿರುಷ್ಕಾ ಜೋಡಿ ಮೇಲೆ ಟೀಕೆ: ಕೊನೆಗೂ ಸ್ಪಷ್ಟನೆ ಕೊಟ್ಟ ಸುನಿಲ್ ಗವಾಸ್ಕರ್..!