ನೇಪಾಳ ಮೂಲದ ಬಾಲಿವುಡ್‌ ನಟಿ ಮನೀಶಾ ಕೊಯಿರಾಲ ಇತ್ತೀಚೆಗೆ ತಮ್ಮ ಕ್ಯಾನ್ಸರ್ ದಿನಗಳ ಆತ್ಮಕತೆಯನ್ನು ಬರೆದಿದ್ದಾರೆ. ಇದರ ಹೆಸರು 'ಹೀಲ್ಡ್: ಹೌ ಕ್ಯಾನ್ಸರ್ ಗೇವ್ ಮಿ ಎ ನ್ಯೂ ಲೈಫ್'. ಇದರಲ್ಲಿ ತನಗೆ ಕ್ಯಾನ್ಸರ್ ಹೇಗೆ ಬಂದಿರಬಹುದು ಎಂಬುದನ್ನೂ ಮನೀಶಾ ಕೊಯಿರಾಲ ಊಹಿಸಿ ಬರೆದಿದ್ದಾರೆ.

ಜೊತೆಗೇ ಈಕೆಯ ಆರೋಗ್ಯ ಸಮಸ್ಯೆಯ ಬಗ್ಗೆ ಮೊದಲೇ ಊಹಿಸಿದ ಒಬ್ಬ ಮಾವೊರಿ ಹೀಲರ್‌ನ ಉಲ್ಲೇಖ ಕೂಡ ಇದರಲ್ಲಿದೆ. ಕ್ಯಾನ್ಸರ್ ಬಂದವರು ನಡೆಸುವ ಹೋರಾಟದ ಬಗ್ಗೆ, ನಮ್ಮ ನಿಮ್ಮ ಲೈಫಿನ ಬಗ್ಗೆಯೂ ಸಾಕಷ್ಟು ಒಳನೋಟ ಕೊಡುವ ಈಕೆಯ ಆತ್ಮಕತೆ ನಿಜಕ್ಕೂ ನಾವು ನೀವೆಲ್ಲ ಓದಬೇಕಾದ್ದು.  ಆದರೆ ಪ್ರಿಯಾಂಕ ಚೋಪ್ರಾಳ ಆತ್ಮಕತೆಯ ಅಬ್ಬರದಲ್ಲಿ ಮನೀಶಾಳ ಪುಸ್ತಕ ನಿಜಕ್ಕೂ ಕಳೆದುಹೋಗುತ್ತಿದೆ.

ಅಮೆರಿಕನ್ ಮಾಡೆಲ್‌ನ ಬಿಕಿನಿ ಫೋಟೋಶೂಟ್ ನೋಡಿ ಭಾರತದ ಲೇಖಕಿ ಹೇಳಿದ್ದಿಷ್ಟು ...

ಮನೀಶಾ ಈ ಪುಸ್ತಕದಲ್ಲಿ ಒಬ್ಬ ಮಾವೊರಿ ಹೀಲರ್‌ ಬಗ್ಗೆ ಬರೆದಿದ್ದಾಳೆ. ಮಾವೊರಿ ಎಂಬುದು ನ್ಯೂಜಿಲೆಂಡ್‌ನ ಒಂದು ಬುಡಕಟ್ಟು ಜನಾಂಗ. ತಮ್ಮದೇ ಆದ ಸಂಸ್ಕೃತಿ, ಜೀವನ ವಿಧಾನ, ವೈದ್ಯಕೀಯ ಪದ್ಧತಿ ಎಲ್ಲ ಅವರಲ್ಲಿವೆ. ಅಲ್ಲಿಂದ ಮಾವೊರಿ ವೈದ್ಯ ಪದ್ಧತಿಗಳನ್ನು ಕಲಿತ ಕೆಲವು ಮಂದಿ, ನಮ್ಮ ಆಯುರ್ವೇದ ಕಲಿತ ವೈದ್ಯರ ಹಾಗೆ, ಜಗತ್ತಿನ ನಾನಾ ಕಡೆ ಇದ್ದಾರೆ. ಇದು ಒಂದು ನಮ್ಮ ನಾಟಿ ಔಷಧ, ಆಯುರ್ವೇದದ ಹಾಗೆಯೇ ಒಂದು ವಿಧಾನ. ಆದರೆ ಇದರಲ್ಲಿ ಸ್ವಲ್ಪ ಪ್ರಮಾಣದ ಅಲೌಕಿಕ ಶಕ್ತಿಯೂ ಸೇರಿಕೊಂಡಂತಿದೆ.

ಮನಿಶಾ, ತನಗೆ ಕ್ಯಾನ್ಸರ್ ಇದೆಯೆಂದು ತಿಳಿಯುವ ಕೆಲವು ವರ್ಷಗಳ ಮೊದಲು ಇಂಥ ಒಬ್ಬ ಮಾವೊರಿ ಹೀಲರ್ ಬಳಿಗೆ ಹೋಗಿದ್ದಳು. ಈಕೆಯನ್ನು ನೋಡಿದ ಕೂಡಲೇ ಆಕೆ, ''ನೀನು ನಿನ್ನ ಗರ್ಭಕೋಶದ ಬಗ್ಗೆ ಯಾಕೆ ಇಷ್ಟೊಂದು ಸಿಟ್ಟಾಗಿರುವೆ? ಹಾಗೆ ಮಾಡಬೇಡ. ನಿನ್ನ ಗರ್ಭಕೋಶಕ್ಕೆ ಧನಾತ್ಮಕ ಸಂಕೇತಗಳನ್ನು ಕಳಿಸು'' ಎಂದು ಹೇಳಿದಳಂತೆ. ಮನೀಶಾಗೆ ಇದೊಂದು ಅಸಂಬದ್ಧ ಮಾತು ಅನಿಸಿತು. ಆಕೆ ಉತ್ತರದ ಗೋಜಿಗೆ ಹೋಗಲಿಲ್ಲ. ಆದರೆ ಕೆಲವು ವರ್ಷಗಳ ಬಳಿಕ ಮನಿಶಾ ಮದುವೆಯಾದಳು. ಆಗ ಮಗು ಮಾಡಿಕೊಳ್ಳಲು ಮುಂದಾದಾಗ ಅದರಲ್ಲಿ ವಿಫಲಳಾದಳು.

ದುಡಿಯೋಕೆ ಬಾಲಿವುಡ್, ವಾಸಿಸೋಕೆ ಫಾರಿನ್: ಈ ಸೆಲೆಬ್ರಿಟಿಗಳ ದೇಶ ಯಾವ್ದು ಗೊತ್ತಾ? ...

ಆಗ ಐವಿಎಫ್‌ ಟ್ರೀಟ್‌ಮೆಂಟ್‌ಗಾಗಿ ಆಕೆ ಹೋಗಬೇಕಾಯಿತು. ಅದು ಕೂಡ ಫಲಿಸಲಿಲ್ಲ. ಆಗ ಮನಿಶಾಗೆ ಅನಿಸಿತು- ಮಾವೊರಿ ಹೀಲರ್ ಹೇಳಿದ್ದು ನಿಜವಿದ್ದರೂ ಇರಬಹುದು ಎಂದು. ಇದಾಗಿ ಕೆಲವು ವರ್ಷಗಳಲ್ಲಿ, ಸರಿಯಾಗಿ ಚೆಕಪ್‌ ಮಾಡಿಸಿದಾಗ ಆಕೆಗೆ ತಿಳಿದುಬಂದುದು- ಆಕೆಗೆ ಗರ್ಭಕೋಶದ ಕ್ಯಾನ್ಸರ್ ಇದೆ ಎಂಬುದು! ಆದರೆ ಅಷ್ಟರಲ್ಲಾಗಲೇ ಕ್ಯಾನ್ಸರ್‌ ತುಂಬಾ ಹರಡಿತ್ತು. ಎಂದರೆ, ಕ್ಯಾನ್ಸರ್ ಎಂಬುದು ಉಂಟಾಗುವುದು ನಮಗೆ ನಮ್ಮ ಮೇಲಿರುವ ನೆಗೆಟಿವ್‌ ಭಾವನೆಯಿಂದಲೇ ಎಂದು ಊಹಿಸಲು ಸಾಧ್ಯವಿದೆ. ಈ ವಿಷಯವನ್ನು ಮನಿಶಾ ಆ ಬಳಿಕ ಮಾವೊರಿ ಹೀಲರ್ ಜೊತೆ ಹಂಚಿಕೊಂಡಾಗ ಸ್ವತಃ ಆಕೆಯೇ ತನ್ನ ಭವಿಷ್ಯದ ಶಕ್ತಿಯ ಬಗ್ಗೆ ಭಯಭೀತಳಾದಳಂತೆ.

ಇದನ್ನೇ ಮನೀಶಾ ಕೊಯಿರಾಲ ತನ್ನ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾಳೆ. ತನ್ನ ಬದುಕಿನಲ್ಲಿ ತುಂಬಾ ನೆಗೆಟಿವ್ ಸಂಗತಿಗಳಿದ್ದವು. ಸ್ಮೋಕ್ ಮಾಡುತ್ತಿದ್ದೆ. ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ. ನನ್ನ ಬಗ್ಗೆಯೇ ನನಗೆ ನೆಗೆಟಿವ್ ಭಾವನೆಗಳಿದ್ದವು. ತುಂಬಾ ಕೀಳರಿಮೆಯ  ವ್ಯಕ್ತಿಯಾಗಿದ್ದೆ. ಎಲ್ಲವೂ ನನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರಬಹುದು. ಜೀವಿಸುತ್ತಿರುವಾಗ ನಾವು ಇವನ್ನೆಲ್ಲಾ ವಿಶ್ಲೇಷಿಸಲು ಹೋಗುವುದಿಲ್ಲ.

'ಅಲ್ಲಿಗೆ ಹೋಗಿ' ನೇಪಾಳ ಕೊಂಡಾಡಿದ ಮನೀಷಾ ಝಾಡಿಸಿದ ನೆಟ್ಟಿಗರು ...

ಸುಮ್ಮನೇ ಘಟನೆಗಳಲ್ಲಿ ಬದುಕುತ್ತ ಹೋಗುತ್ತೇವೆ. ಆದರೆ ಇಂಥ ಒಂದು ಸ್ಟಾಪ್ ಬಂದು ನಿಂತಾಗಲೇ ನಾವು ಜೀವನದ ಬಗ್ಗೆ ಆಳವಾಗಿ ಯೋಚಿಸಲು ಆರಂಭಿಸುವುದು ಅಲ್ಲವೇ? ಹೌದೆನ್ನುತ್ತಾರೆ ಮನಿಶಾ. ಈಕೆ ತೂಕ ಇಳಿಸಿಕೊಳ್ಳಲು ಯತ್ನಿಸಿದಷ್ಟೂ ಆಗಿರಲಿಲ್ಲ. ಒಳ್ಳೆಯ ಸಂಗಾತಿಯನ್ನು ಆರಿಸಿಕೊಳ್ಳಹೋಗಿ ಕೆಟ್ಟ ಸಂಗಾತಿಯನ್ನು ಆರಿಸಿಕೊಂಡುದು ಇತ್ತು. ಇವೆಲ್ಲವೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದವು ಎಂದು ಬರೆದಿದ್ದಾಳೆ ಮನಿಶಾ.