ದುಡಿಯೋಕೆ ಬಾಲಿವುಡ್, ವಾಸಿಸೋಕೆ ಫಾರಿನ್: ಈ ಸೆಲೆಬ್ರಿಟಿಗಳ ದೇಶ ಯಾವ್ದು ಗೊತ್ತಾ?

ಇವರು ಕೋಟ್ಯಂತರ ಭಾರತೀಯರು ಆರಾಧಿಸೋ ಸೂಪರ್‌ಸ್ಟಾರ್‌ಗಳು. ಬಾಲಿವುಡ್‌ ಸೆಲೆಬ್ರಿಟಿಗಳು. ಆದರೆ ಇವರು ಭಾರತೀಯ ಪೌರರೇ ಅಲ್ಲ!

 

bollywood celebrities who don't citizenship of India

ಹಿಂದಿಯಲ್ಲಿ ಕೆಲವು ಸೂಪರ್‌ಸ್ಟಾರ್‌ಗಳಿದಾರೆ. ಅವರು ನಟಿಸುವುದು ಹಿಂದಿ ಸಿನಿಮಾಗಳಲ್ಲಿ. ಅವರನ್ನು ಸ್ಟಾರ್‌ಗಳನ್ನಾಗಿ ಮಾಡಿರೋದು ಭಾರತೀಯ ಪ್ರೇಕ್ಷಕರು. ಅವರ ಗಳಿಕೆಯೆಲ್ಲ ಭಾರತೀಯ ಪ್ರೇಕ್ಷಕರಿಂದ ಬಂದಿರೋದು. ಆದರೆ ಅವರು ವಾಸಿಸುವುದು ಕೆನಡಾ, ಇಂಗ್ಲೆಂಡ್, ಅಮೆರಿಕಾ ಮುಂತಾದ ಕಡೆ. ಅಂಥ ಹಲವಾರು ಸೆಲೆಬ್ರಿಟಿಗಳು ಬಾಲಿವುಡ್‌ನಲ್ಲಿದ್ದಾರೆ. ಇತರ ಭಾಷೆಗಳಲ್ಲೂ ಇದಾರೆ. ಅವರ್ಯಾರು ಅಂತ ತಿಳಿಯೋಣ ಬನ್ನಿ.
ಅಲಿಯಾ ಭಟ್‌: ಈಕೆಯ ತಾಯಿ ಸೋನಿ ರಾಜ್ದಾನ್ ಹೊಂದಿರುವುದು ಬ್ರಿಟಿಷ್‌ ಪೌರತ್ವ. ಹೀಗಾಗಿ ಈಕೆ ಕೂಡ ಬ್ರಿಟಿಷ್‌ ಪೌರತ್ವ ಹೊಂದಿದಾಳೆ. ಬ್ರಿಟಿಷ್ ಪಾಸ್‌ಪೋರ್ಟ್ ಬಳಸುತ್ತಾಳೆ. ಬ್ರಿಟನ್‌ನಲ್ಲಿ ಒಳ್ಳೆಯ ಮನೆಯನ್ನೂ ಹೊಂದಿದ್ದಾಳೆ.

ಅಕ್ಷಯ್ ಕುಮಾರ್‌: ಅಕ್ಷಯ್ ಕುಮಾರ್ ಅವರು ನಟಿಸಿರುವ ದೇಶಭಕ್ತಿ ಪ್ರಚೋದಕ ಫಿಲಂಗಳನ್ನು ನೋಡಿ ನೀವು ಮಾರುಹೋಗಿರಬಹುದು. ದೇಶಪ್ರೇಮ ಅಂದರೆ ಅಕ್ಷಯ್, ಅಕ್ಷಯ್‌ ಅಂದ್ರೆ ದೇಶಪ್ರೇಮ ಎಂಬಂತಾಗಿದೆಯಲ್ಲವೇ. ಆದರೆ ಅಕ್ಷಯ್ ಬಳಿ ಇರುವುದು ಕೆನಡಾದ ಪಾಸ್‌ಪೋರ್ಟ್. ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಇವರ ಮೂಲ ಹೆಸರು ರಾಜೀವ್ ಹರಿ ಓಮ್ ಭಾಟಿಯಾ. ಕೆನಡಾದ ಗೌರವ ಪೌರತ್ವ ಪಡೆದುಕೊಂಡಿದ್ದಾರೆ.

bollywood celebrities who don't citizenship of India
ಕತ್ರಿನಾ ಕೈಫ್: ಬಾಲಿವುಡ್‌ನ ಬಾರ್ಬಿ ಚೆಲುವೆ ಕತ್ರಿನಾ ಕೈಫ್ ಹುಟ್ಟಿದ್ದು ಹಾಂಕಾಂಗ್‌ನಲ್ಲಿ. ನಟಿಸಿ ಪ್ರಸಿದ್ಧಿ ಗಳಿಸಿರುವುದು ಬಾಲಿವುಡ್‌ನಲ್ಲಿ. ಆದರೆ ಆಕೆಯ ತಾಯಿಯ ಮೂಲ ಬ್ರಿಟನ್. ಹೀಗಾಗಿ ಈಕೆ ಪಡೆದುಕೊಂಡಿರುವುದು ಬ್ರಿಟನ್‌ ಪೌರತ್ವ. ಈಕೆಯ ತಂದೆ ಕಾಶ್ಮೀರಿ ಪ್ರಜೆ.

ಸೈಫ್‌ ಎಕ್ಸ್‌ ವೈಫ್‌ ಅಮೃತಾ ಸಿಂಗ್‌ ಹಾಗೂ ಕರೀನಾ ಸಂಬಂಧ ಹೇಗಿದೆ? 

ಜಾಕ್ವೆಲಿನ್‌ ಫರ್ನಾಂಡಿಸ್: ಹಲವು ಫಿಲಂಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡು, ಈಗ್ಲೂ ಹಲವು ಆಫರ್‌ಗಳನ್ನು ಹೊಂದಿರುವ ಜಾಕ್ವೆಲಿನ್ ಫರ್ನಾಂಡಿಸ್ ಮೂಲತಃ ಶ್ರೀಲಂಕಾದವಳು. ಮಿಸ್ ಶ್ರೀಲಂಕಾ ಸ್ಪರ್ಧೆಯಲ್ಲೂ ವಿನ್ನರ್‌ ಆಗಿದ್ದಳು. ಈಗ ಮುಂಬಯಿಯಲ್ಲಿ ನೆಲೆಸಿದ್ದರೂ ಪೌರತ್ವ ಮಾತ್ರ ಶ್ರೀಲಂಕದ್ದು.
ಸನ್ನಿ ಲಿಯೋನ್: ಈಕೆ ಭಾರತೀಯಳಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅಮೆರಿಕದ ಪೋರ್ನ್ ಇಂಡಸ್ಟ್ರಿಯಲ್ಲಿ ಪ್ರಖ್ಯಾತ ತಾರೆಯಾಗಿದ್ದ ಈಕೆ ಬಾಲಿವುಡ್‌ನಲ್ಲಿ ನಟಿಯಾಗಿ ಮರುಹುಟ್ಟು ಪಡೆದಿದ್ದರೂ, ನೆಲೆಸಿರುವುದು ಮಾತ್ರ ಕೆನಡಾದ ತಮ್ಮ ಮನೆಯಲ್ಲಿ.
ನರ್ಗಿಸ್ ಫಕ್ರಿ: ಈಕೆಯದೊಂದು ಕುತೂಹಲಕಾರಿ ಹಿನ್ನೆಲೆ. ಈಕೆಯ ತಂದೆ ಪಾಕಿಸ್ತಾನಿ, ತಾಯಿ ಝೆಕೊಸ್ಲಾವಾಕಿಯಾದವಳು. ಆದರೆ ಈಕೆ ಈ ಎರಡೂ ದೇಶಗಳಿಗೆ ಸೇರದೆ, ಅಮೆರಿಕದ ಪೌರತ್ವ ಹೊಂದಿದಳು. ಯಾಕೆಂದರೆ ತಂದೆ ತಾಯಿ ಇಬ್ಬರೂ ನೆಲೆಸಿದ್ದು ಅಮೆರಿಕದಲ್ಲಿ, ಈಕೆ ನಟಿಸಿ ಹೆಸರು ಮಾಡಿರುವುದು ಮಾತ್ರ ಹಿಂದಿಯಲ್ಲಿ.

ಆದ್ಯವೀರ ಒಡೆಯರ್‌ ಹುಟ್ಟಿದ ದಿನ ಬರ್ತ್‌ಡೇ ಆಚರಿಸಲ್ಲ..! ಇದರ ಹಿಂದಿದೆ ... 

ಮನೀಷಾ ಕೊಯಿರಾಲಾ: ಈಕೆಯ ಮೂಲ ನೇಪಾಳ. ದಿಲ್ ಸೆ ಫಿಲಂನಲ್ಲಿ ಶಾರುಕ್ ಖಾನ್ ಜೊತೆ ನಟಿಸಿದ ನಂತರ ಬಾಲಿವುಡ್‌ನಲ್ಲಿ ಹೆಸರು ಮಾಡಿದಳು. ಇತ್ತೀಚೆಗೆ ಭಾರತದ ನೆಲವನ್ನು ಅತಿಕ್ರಮಿಸಿ ತನ್ನದು ಎಂದು ನೇಪಾಳ ಹೇಳಿಕೊಂಡಾಗ ಈಕೆ ಅದನ್ನು ಬೆಂಬಲಿಸಿದ್ದಳು. ಈಕೆ ಈಗಲೂ ನೇಪಾಳದ ಪ್ರಜೆ.
ಇಮ್ರಾನ್‌ ಖಾನ್‌: ಅಮೀರ್‌ ಖಾನ್‌ನ ಅಳಿಯ ಇಮ್ರಾನ್ ಖಾನ್ ಮೂಲತಃ ಅಮೆರಿಕದ ಪ್ರಜೆ. ಅಲ್ಲಿ ನೆಲೆಸಿರುವ ತಂದೆ ತಾಯಿಗಳ ಡೈವೋರ್ಸ್ ಬಳಿಕ ಮುಂಬಯಿಗೆ ಬಂದು ನೆಲೆಯಾಗಿದ್ದಾನೆ.
ಕಲ್ಕಿ ಕೋಖ್ಲೀನ್: ಒಳ್ಳೆಯ ಅಭಿನೇತ್ರಿ ಎಂದು ಹೆಸರು ಮಾಡಿರುವ ಕಲ್ಕಿ ಕೋಖ್ಲೀನ್ಳ ತಂದೆ ತಾಯಿ ಫ್ರೆಂಚ್ ಮೂಲದವರು. ಹೀಗಾಗಿ ಈಕೆಗೂ ಫ್ರೆಂಚ್ ಪೌರತ್ವ ದೊರೆತಿದೆ. ಆದರೆ ಹುಟ್ಟಿದ್ದು ಬೆಳೆದಿದ್ದು ಎಲ್ಲ ಪುದುಚೇರಿಯಲ್ಲಿ. 

ಕುರೂಪಿ ಎಂದಿದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳೋಲ್ಲ ಶಾರುಖ್ ಮಗಳು! 

Latest Videos
Follow Us:
Download App:
  • android
  • ios