ರಾಖಿ ಸಾವಂತ್​ ಟೊಮ್ಯಾಟೊ ಕೃಷಿ: 15 ದಿನದಲ್ಲೇ ಫಲ! ವಿಡಿಯೋ ನೋಡಿ ನೆಟ್ಟಿಗರು ಕಿಡಿ

ರಾಖಿ ಸಾವಂತ್​ ಹೀಗೆ ಟೊಮ್ಯಾಟೊ ಬೆಳೆಯಬಹುದು ಎಂದು ತೋರಿಸಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಅಷ್ಟಕ್ಕೂ ಅವರು ಮಾಡಿದ್ದೇನು?
 

Rakhi Sawant  Wasting Tomatoes Irks Netizens suc

ದೇಶದ ಹಲವು ನಗರಗಳಲ್ಲಿ ತರಕಾರಿ ಬೆಲೆ ವಿಪರೀತ ಗಗನಕ್ಕೇರಿದೆ. ಅದರಲ್ಲಿಯೂ 10-20 ರೂಪಾಯಿಗಳಲ್ಲಿ ಸಿಗುತ್ತಿದ್ದ ಟೊಮ್ಯಾಟೋ ದರ 120-130 ರೂಪಾಯಿಗೆ ಏರಿದೆ. ಇದರ ವಿರುದ್ಧ ಇದಾಗಲೇ ಹಲವಾರು ಮಂದಿ ದನಿ ಎತ್ತಿದ್ದರೆ, ಡ್ರಾಮಾ  ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ನಟಿ ರಾಖಿ ಸಾವಂತ್​, ಇತ್ತೀಚೆಗೆ ಬೆಲೆ ಏರಿಕೆ ವಿರುದ್ಧ ಮಾತನಾಡಿದ್ದರು. ಈ ರೀತಿಯ ಬೆಲೆ ಏರಿಕೆ ನೋಡಿದರೆ ನಾವೇ ಟೊಮ್ಯಾಟೋ ಸೇರಿದಂತೆ ಎಲ್ಲಾ ತರಕಾರಿಗಳನ್ನು ಬೆಳೆಯಬಹುದು ಎಂದಿದ್ದರು.  ತಮ್ಮ ಸ್ವಂತ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸುವೆ ಎಂದೂ ಹೇಳಿದ್ದರು. ನಾನು ಒಂದಯ ತೋಟವನ್ನು ಖರೀದಿಸಿ ಅದರಲ್ಲಿ ತರಕಾರಿಗಳನ್ನು ಬೆಳೆಸಯತ್ತೇನೆ ಎಂದಿದ್ದರು. ಹೇಳಿಕೇಳಿ ಅವರ ಹೆಸರೇ ಡ್ರಾಮಾ ಕ್ವೀನ್​. ಇನ್ನು ಕೇಳಬೇಕೆ? ತೋಟ, ಹೊಲವನ್ನು ಖರೀದಿ ಮಾಡದಿದ್ದರೂ ಪಾಟ್​ನಲ್ಲಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ ರಾಖಿ ಸಾವಂತ್​. ಇದರ ಫೋಟೋ ವೈರಲ್​ ಆಗಿದ್ದು, ಇದನ್ನು ನೋಡಿ ಫ್ಯಾನ್ಸ್​ ಸುಸ್ತಾಗಿದ್ದಾರೆ.

ಇದಕ್ಕೆ ಕಾರಣ, ರಾಖಿ ಸಾವಂತ್​ ಪಾಟ್​ನಲ್ಲಿ ಟೊಮ್ಯಾಟೊ (Tomato) ಹಣ್ಣುಗಳನ್ನು ಇಟ್ಟು ಅದಕ್ಕೆ ನೀರು ಹಾಕುತ್ತಿರುವ ಫೋಟೋ ಶೇರ್​  ಮಾಡಿಕೊಂಡಿದ್ದಾರೆ. ಎರಡು ಫೋಟೋಗಳು ವೈರಲ್​ ಆಗಿವೆ. ಅದರಲ್ಲಿ ಒಂದರಲ್ಲಿ ಕೈಯಲ್ಲಿ ಟೊಮ್ಯಾಟೊಗಳನ್ನು ಹಿಡಿದುಕೊಂಡಿರುವ ರಾಖಿ ಯಾವುದೋ ಗಿಡ ಇರುವ ಪಾಟ್​ ಇನ್ನೊಂದು ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಎರಡನೆಯ ಫೋಟೋದಲ್ಲಿ ಪಾಟ್​ನಲ್ಲಿ ನಾಲ್ಕು ಟೊಮ್ಯೊಟೊ ಹಣ್ಣುಗಳನ್ನು ಹಾಕಲಾಗಿದೆ. ಅದಕ್ಕೆ ರಾಖಿ ನೀರು ಹಾಕುತ್ತಿದ್ದಾರೆ. ಇದರ ವಿಡಿಯೋದಲ್ಲಿ ಒಂದು ಪಾಟ್​ನಲ್ಲಿ ಟೊಮ್ಯಾಟೋ ಹಣ್ಣುಗಳನ್ನು ಹಾಕಿ ಅದರ ಮೇಲೆ ಮಣ್ಣು ಹಾಕಿ ಮೇಲಿನಿಂದ ಟೊಮ್ಯಾಟೋ ಗಿಡವನ್ನು ನೆಟ್ಟಿರುವ ರಾಖಿ, ಈ ಗಿಡದಲ್ಲಿ 15 ದಿನದಲ್ಲಿ ಹಣ್ಣು ಬರುತ್ತದೆ ಎಂದಿದ್ದಾರೆ. ಇದಕ್ಕೆ ಸಕತ್​ ಟ್ರೋಲ್​ ಆಗುತ್ತಿದ್ದಾರೆ. ಟೊಮ್ಯಾಟೋ ದುಬಾರಿಯಾಗಿರುವ ಈ ದಿನಗಳಲ್ಲಿ ಸುಮ್ಮನೇ ಅದನ್ನು ವೇಸ್ಟ್​ ಮಾಡುತ್ತಿದ್ದಾರೆ ಎಂದು ಅನೇಕರು ನಟಿ ವಿರುದ್ಧ  ಕಿಡಿ ಕಾರಿದ್ದಾರೆ.  

ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡ ರಾಖಿ ಸಾವಂತ್​: ಅಷ್ಟಕ್ಕೂ ಫಕ್ಕಡ್​ ಬಾಬಾ ಹೇಳಿದ ಗುಟ್ಟೇನು?

ಅದೇನೆ ಇದ್ದರೂ ರಾಖಿ ಸಾವಂತ್​  ಮಾತ್ರ ಇಂಥ ಹುಚ್ಚು ಹುಚ್ಚು ಘಟನೆಗಳಿಂದ ವೈರಲ್​ ಆಗುತ್ತಲೇ ಇರುತ್ತಾರೆ.  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  

ನಿನ್ನೆಯಷ್ಟೇ  ಈ ಡ್ರಾಮಾ ಕ್ವೀನ್​ (Drama Queen) ತಲೆಯ ಮೇಲೆ ಐದು ಮೊಟ್ಟೆ ಒಡೆದುಕೊಂಡು ಸುದ್ದಿಯಅಗಿದ್ದಾರೆ.  ಇದರ ಬಗ್ಗೆ ಕಾರಣ ಕೇಳಿದಾಗ ಅವರು,  ಒಳ್ಳೆಯ ಪತಿ ಸಿಗಬೇಕು ಎಂದರೆ ತಲೆ ಮೇಲೆ ಐದು ಮೊಟ್ಟೆ ಒಡೆದುಕೊಳ್ಳಬೇಕು ಎಂದು ಫಕ್ಕಡ್​ ಬಾಬಾ ಹೇಳಿದ್ದಾರೆ. ಅದರಂತೆ ಮಾಡಿದ್ದೇನೆ ಎಂದಿದ್ದಾರೆ.  'ನಾನು ತಲೆ ಮೇಲೆ ಐದು ಮೊಟ್ಟೆಯನ್ನು ಒಡೆದುಕೊಂಡರೆ ನನಗೆ ಒಳ್ಳೆಯ ಪತಿ ಸಿಗುತ್ತಾನೆ, ಅವನು ಅಯಸ್ಕಾಂತದ ರೀತಿ ನನಗೆ ಜೀವನಪರ್ಯಂತ ಅಂಟಿಕೊಂಡಿರುತ್ತಾನೆ ಎಂದು ಹೇಳಿದ್ದರು. ಅದರಂತೆ ನಾನು ತಲೆ ಮೇಲೆ ಐದು ಮೊಟ್ಟೆ ಒಡೆದುಕೊಂಡಿದ್ದೇನೆ' ಎಂದು ಹೇಳಿದ್ದಾರೆ. ತಲೆ ಮೇಲೆ ಮೊಟ್ಟೆಯನ್ನು (Egg) ಒಡೆದುಕೊಳ್ಳುವ ಸಮಯದಲ್ಲಿ ಅವರು,  'ಓ ದೇವರೇ ನನಗೆ ಒಳ್ಳೆಯ ಗಂಡನನ್ನು ದಯಪಾಲಿಸು.  ಅವನು ನನ್ನನ್ನು ಯಾವತ್ತೂ ಬಿಟ್ಟು ಹೋಗಬಾರದು' ಎಂದಿದ್ದಾರೆ. ಅಷ್ಟೊತ್ತಿಗಾಗಲೇ  ಮಳೆ ಬರಲು ಶುರುವಾಯಿತು. ಇದರಿಂದ ಖುಷಿಗೊಂಡ ರಾಖಿ ಸಾವಂತ್​, 'ನಾನು ನನ್ನ ತಲೆಯನ್ನು ತೊಳೆದುಕೊಳ್ಳಬೇಕು, ದೇವರು ನನ್ನ ಆಸೆಯನ್ನು ಈಡೇರಿಸುತ್ತಾನೆ ಎಂದು ನಂಬಿದ್ದೇನೆ' ಎಂದಿದ್ದಾರೆ.  

ಮದ್ವೆನೇ ಆಗಲ್ಲ ಎಂದಿದ್ದ ರಾಖಿಗೆ ಡಿವೋರ್ಸ್​ಗೂ ಮುನ್ನವೇ ಸಿಕ್ಕನಂತೆ ಮತ್ತೊಬ್ಬ- ಯಾರೀತ?

Latest Videos
Follow Us:
Download App:
  • android
  • ios