ಪ್ರಧಾನಿಯಾಗಲು ರಾಹುಲ್ ಗಾಂಧಿ ಏನ್ ಮಾಡ್ಬೇಕು? ರಾಖಿ ಸಾವಂತ್ ಕೊಟ್ಟ ಟಿಪ್ಸ್ ಇದು
ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಆಗಬೇಕೆಂದ್ರೆ ಏನು ಮಾಡಬೇಕು ಎಂದು ನಟಿ ರಾಖಿ ಸಾವಂತ್ ಸುಲಭದ ಟಿಪ್ಸ್ ಕೊಟ್ಟಿದ್ದಾರೆ.
ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಇನ್ನೊಂದು ಅರ್ಥದಲ್ಲಿ ಸುದ್ದಿಯಾಗುವ ಸಲುವಾಗಿಯೇ ವಿವಾದ ಸೃಷ್ಟಿಸಿಕೊಳ್ಳುತ್ತಾರೆ, ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಸದಾ ಟ್ರೋಲ್ ಆಗುತ್ತಲೇ ಖುಷಿ ಪಡುತ್ತಾರೆ. ಮೈಸೂರಿನ ಯುವಕ ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಇವರ ಮದುವೆಯ ಕಥೆ ಈಗ ಹಳತಾಗಿದೆ. ಆದಿಲ್ ಖಾನ್ ರಾಖಿಯನ್ನು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅದಾದ ಬಳಿಕ ಮದುವೆಯೇ ಆಗುವುದಿಲ್ಲ ಎಂದಿದ್ದ ರಾಖಿ, ಒಬ್ಬ ಹುಡುಗ ತಮ್ಮ ಬಾಳಲ್ಲಿ ಎಂಟ್ರಿ ಕೊಟ್ಟಿರೋದಾಗಿ ನಟಿ ಹೇಳಿಕೊಂಡಿದ್ದರು. 'ನಾನೊಬ್ಬರನ್ನು ಭೇಟಿಯಾಗಿದ್ದೇನೆ, ಆದರೆ ಅವರ ಜೊತೆ ಹೊಸ ಜೀವನ ಶುರು ಮಾಡಲು ಭಯ ಆಗುತ್ತಿದೆ, ನಾನಿನ್ನೂ ರೆಡಿ ಇಲ್ಲ. ಆದರೆ ಅವರನ್ನೇ ಮದ್ವೆಯಾಗುವ ಯೋಚನೆ ಮಾಡಿದ್ದೇನೆ ಎಂದಿದ್ದರು. ಇಷ್ಟೇ ಸಾಲದು ಎಂದು ನಿನ್ನೆಯಷ್ಟೇ ಇನ್ನೊಂದು ಹೈಡ್ರಾಮಾ ಮಾಡಿದ್ದರು. ತಲೆಯ ಮೇಲೆ ಐದು ಮೊಟ್ಟೆ ಒಡೆದುಕೊಂಡಿದ್ದರು. ಮುಂಬೈನಲ್ಲಿ (Mumbai) ಜಿಮ್ ಜೊರಗಡೆ ಕಾಣಿಸಿಕೊಂಡ ರಾಖಿ ಸಾವಂತ್ ಅವರು, ಮೊಟ್ಟೆ ಒಡೆದುಕೊಂಡು ಸುದ್ದಿಯಾಗಿದ್ದಾರೆ. ಇದರ ಬಗ್ಗೆ ಕಾರಣ ಕೇಳಿದಾಗ ಅವರು, ಒಳ್ಳೆಯ ಪತಿ ಸಿಗಬೇಕು ಎಂದರೆ ತಲೆ ಮೇಲೆ ಐದು ಮೊಟ್ಟೆ ಒಡೆದುಕೊಳ್ಳಬೇಕು ಎಂದು ಫಕ್ಕಡ್ ಬಾಬಾ ಹೇಳಿದ್ದಾರೆ. ಅದರಂತೆ ಮಾಡಿದ್ದೇನೆ ಎಂದಿದ್ದರು. 'ನಾನು ತಲೆ ಮೇಲೆ ಐದು ಮೊಟ್ಟೆಯನ್ನು ಒಡೆದುಕೊಂಡರೆ ನನಗೆ ಒಳ್ಳೆಯ ಪತಿ ಸಿಗುತ್ತಾನೆ, ಅವನು ಅಯಸ್ಕಾಂತದ ರೀತಿ ನನಗೆ ಜೀವನಪರ್ಯಂತ ಅಂಟಿಕೊಂಡಿರುತ್ತಾನೆ ಎಂದು ಹೇಳಿದ್ದರು. ಅದರಂತೆ ನಾನು ತಲೆ ಮೇಲೆ ಐದು ಮೊಟ್ಟೆ ಒಡೆದುಕೊಂಡಿದ್ದೇನೆ' ಎಂದು ಹೇಳಿದ್ದರು.
ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡ ರಾಖಿ ಸಾವಂತ್: ಅಷ್ಟಕ್ಕೂ ಫಕ್ಕಡ್ ಬಾಬಾ ಹೇಳಿದ ಗುಟ್ಟೇನು?
ಇವೆಲ್ಲಾ ತಮ್ಮ ಬಗ್ಗೆ ಹೇಳಿಕೊಂಡದ್ದು ಆದರೆ ಈಗ ನೇರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ () ವಿಷಯಕ್ಕೆ ಬಂದಿದ್ದಾರೆ! ಹೌದು. ಕಾಂಗ್ರೆಸ್ ಪಕ್ಷದ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್ ಗಾಂಧಿಯವರು ಪ್ರಧಾನಿ ಪಟ್ಟ ಏರಲು ಏನು ಮಾಡಬೇಕು ಎಂದು ರಾಖಿ ಸಾವಂತ್ ಟಿಪ್ಸ್ ಕೊಟ್ಟಿದ್ದಾರೆ. ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಹೇಗಾದರೂ ಮಾಡಿ ಬಿಜೆಪಿಯನ್ನು ಕೆಳಕ್ಕಿಳಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಂಡಿರುವ ಸಮಯದಲ್ಲಿಯೇ ರಾಖಿ ಸಾವಂತ್ ರಾಹುಲ್ ಗಾಂಧಿಯವರು ಪ್ರಧಾನಿಯಾಗಲು ಏನು ಮಾಡಬೇಕು ಎಂದು ಸುಲಭದ ಟಿಪ್ಸ್ ಕೊಟ್ಟಿದ್ದಾರೆ.
ಅಷ್ಟಕ್ಕೂ ರಾಖಿ ಹೇಳಿದ್ದೇನೆಂದರೆ, ರಾಹುಲ್ ಗಾಂಧಿಯವರು ಬಿಗ್ಬಾಸ್ಗೆ (Bigg Boss) ಒಮ್ಮೆ ಹೋಗಬೇಕು ಎನ್ನುವುದು! ನೀಲಿ ತಾರೆಯಾಗಿಯೂ ಗುರುತಿಸಿಕೊಂಡಿರುವ ರಾಖಿ ಸಾವಂತ್, ನಂತರ ಕೆಲವೊಂದು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿದ್ದು ಬಿಗ್ಬಾಸ್. ಬಿಗ್ಬಾಸ್ ಮನೆಯಲ್ಲಿ ಹೋಗಿ ಹಂಗಾಮಾ ಸೃಷ್ಟಿಸಿ ವಾಪಸ್ ಬಂದ ಮೇಲೆಯೇ ಇವರು ಸಕತ್ ಸುದ್ದಿ ಮಾಡಿದ್ದು. ಇದೇ ಕಾರಣಕ್ಕೆ ರಾಹುಲ್ ಗಾಂಧಿಯವರು ಬಿಗ್ಬಾಸ್ ಮನೆಯೊಳಕ್ಕೆ ಹೋದರೆ ಅವರ ಕೀರ್ತಿ ಹೆಚ್ಚುತ್ತದೆ. ಅವರು ಪ್ರಧಾನಿಯಾಗುತ್ತಾರೆ ಎಂದಿದ್ದಾರೆ ರಾಖಿ. ಬಿಗ್ಬಾಸ್ ಹಲವರಿಗೆ ಭವಿಷ್ಯ ನೀಡಿದೆ. ಅದೇ ರೀತಿ ರಾಹುಲ್ ಗಾಂಧಿಯವರಿಗೂ ನೀಡುತ್ತದೆ ಎಂದಿದ್ದಾರೆ.
Drama Queen ರಾಖಿ ಸಾವಂತ್ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು