Asianet Suvarna News Asianet Suvarna News

ಭಾರತದ ನಂ.1 ಶ್ರೀಮಂತ ವ್ಯಕ್ತಿಯ ಮಗ ಅನಂತ್‌ ಅಂಬಾನಿಯ ಫಸ್ಟ್ ಸ್ಯಾಲರಿ ಎಷ್ಟು?

ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅಂಬಾನಿ ಮಕ್ಕಳು ಸಹ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ ಹೊಂದಿದ್ದಾರೆ. ಆದ್ರೆ ಶಾರೂಕ್‌ ಖಾನ್‌, ಅನಂತ್ ಅಂಬಾನಿ ಬಳಿ ನಿಮ್ಮ ಮೊದಲ ಸಂಬಳ ಎಷ್ಟೆಂದು ಕೇಳಿದಾಗ ಅವ್ರು ಹೇಳಿದ್ದೇನು ಗೊತ್ತಾ?

What Anant Ambani said when Shah Rukh Khan asked him about his first salary Vin
Author
First Published Apr 27, 2024, 6:14 PM IST

ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 966142 ಕೋಟಿ ರೂಪಾಯಿಗಳ ಬೃಹತ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅಂಬಾನಿ ಮಕ್ಕಳಾದ ಆಕಾಶ್‌, ಇಶಾ ಹಾಗೂ ಅನಂತ್ ಅಂಬಾನಿ ಸಹ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ ಹೊಂದಿದ್ದಾರೆ. ಅಂಬಾನಿ ಕುಟುಂಬದ ಎಲ್ಲಾ ಮಕ್ಕಳನ್ನು ಆಗಸ್ಟ್ 2023 ರಲ್ಲಿ RIL ನ ನಿರ್ದೇಶಕರ ಮಂಡಳಿಗೆ ಸೇರಿಸಿಕೊಳ್ಳಲಾಯಿತು, ಅನಂತ್ ಅಂಬಾನಿ ರಿಲಯನ್ಸ್ ನ್ಯೂ ಎನರ್ಜಿಯ ಉಸ್ತುವಾರಿ ವಹಿಸಿದ್ದರು. ಅವರ ಭವಿಷ್ಯದ ಯೋಜನೆ ಈಗಾಗಲೇ ಚಾಲನೆಯಲ್ಲಿದೆ. ಈ ಹಿಂದೆ ಶಾರೂಕ್ ಖಾನ್‌, ಅನಂತ್ ಅಂಬಾನಿ ಬಳಿ ಅವರ ಮೊದಲ ಸ್ಯಾಲರಿ ಎಷ್ಟೆಂದು ಕೇಳಿದರು..

ಶಾರುಖ್ ಖಾನ್ ದಶಕಗಳಿಂದ ಅಂಬಾನಿಗಳಿಗೆ ಆತ್ಮೀಯ ಸ್ನೇಹಿತರಾಗಿದ್ದಾರೆ. ಅನಂತ್ ಅಂಬಾನಿಯನ್ನು  ಬಾಲ್ಯದಿಂದಲೂ ತಿಳಿದಿದ್ದಾರೆ. ಈ ಹಿಂದೆ ಅಂಬಾನಿ ಹೋಸ್ಟ್ ಮಾಡಿದ ಇವೆಂಟ್‌ನ ಜೋಡಿಯ ಹಳೆಯ ವೀಡಿಯೊದಲ್ಲಿ, ಶಾರೂಕ್‌ ಖಾನ್‌, ಅನಂತ್ ಅಂಬಾನಿ ಜೊತೆಗೆ ಮೊದಲ ಸಂಬಳದ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ. ಶಾರೂಕ್‌, ಅನಂತ್ ಅಂಬಾನಿ ಬಳಿ ನಿಮ್ಮ ಮೊದಲ ಸಂಬಳ ಎಷ್ಟೆಂದು ಕೇಳುತ್ತಾರೆ. ಇದಕ್ಕೆ ಅನಂತ್‌, ಇರಲಿ ಬಿಡಿ ನಿಮಗೆ ಮುಜುಗರವಾಗಬಹುದು ಎನ್ನುತ್ತಾರೆ.

ಲಂಡನ್‌, ಅಬುಧಾಬಿ ಯಾವ್ದೂ ಅಲ್ಲ, ಮುಂಬೈನಲ್ಲಿ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ!

ಕಿಂಗ್‌ ಖಾನ್‌ ತನ್ನ ಮೊದಲ ಸಂಬಳ ರೂ 50 ಎಂದು ಬಹಿರಂಗಪಡಿಸಿದರು. ಜೀವನ ನಡೆಸಲು ಸಿನಿಮಾ ಟಿಕೆಟ್‌ಗಳನ್ನು ಕೇವಲ 50 ರೂಪಾಯಿಗೆ ಚಿತ್ರಮಂದಿರಗಳಲ್ಲಿ ಮಾರಾಟ ಮಾಡುತ್ತಿದ್ದೆ ಎಂದು ಶಾರೂಕ್‌ ಬಹಿರಂಗಪಡಿಸಿದ್ದಾರೆ. ನಂತರ ಸಿನಿಮಾದಲ್ಲಿ ಉತ್ತಮ ಅವಕಾಶಗಳು ದೊರಕಿದ ಕಾರಣ ಜೀವನಶೈಲಿ ಬದಲಾಯಿತು ಎಂಬುದನ್ನು ತಿಳಿಸಿದರು. ಶಾರೂಕ್ ಖಾನ್‌ ಇದೀಗ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ ಪ್ರತಿ ಚಲನಚಿತ್ರಕ್ಕೆ ರೂ 150-250 ಕೋಟಿ ಗಳಿಸುತ್ತಿದ್ದಾರೆ. ಫೋರ್ಬ್ಸ್ ಪ್ರಕಾರ ರೂ 6400 ಕೋಟಿಗಳ ಬೃಹತ್ ನಿವ್ವಳ ಮೌಲ್ಯದೊಂದಿಗೆ ದೇಶದ ಶ್ರೀಮಂತ ನಟರಾಗಿದ್ದಾರೆ.

ಮತ್ತೊಂದೆಡೆ, ಅಂಬಾನಿಗಳು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಫೋರ್ಬ್ಸ್ ಪ್ರಕಾರ, ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಕೇಶ್ ಅಂಬಾನಿ ಆಸ್ತಿ ಮೌಲ್ಯ ಬರೋಬ್ಬರಿ 9.6 ಲಕ್ಷ ಕೋಟಿ) ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.  ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನಲ್ಲಿ 0.12% ಪಾಲನ್ನು ಹೊಂದಿದ್ದಾರೆ.

ಅನಂತ್ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ ವೆಚ್ಚ ಭರ್ತಿ 1200 ಕೋಟಿ, ಮದುವೆಗೆ ಖರ್ಚು ಮಾಡ್ತಿರೋದೆಷ್ಟು?

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಅವರೊಂದಿಗೆ ಜುಲೈನಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಗುಜರಾತ್‌ನ ಜಾಮ್ನಾ ನಗರದಲ್ಲಿ ನಡೆದ ಅವರ ಅದ್ದೂರಿ ಮೂರು ದಿನಗಳ ಪೂರ್ವ ವಿವಾಹ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಭಾಗವಹಿಸಿದ್ದರು. ಶಾರೂಕ್‌ ಖಾನ್ ಹಾಗೂ ಅವರ ಕುಟುಂಬ ಸದಸ್ಯರು ಸಹ ಈ ಪ್ರಿ-ವೆಡ್ಡಿಂಗ್‌ ಇವೆಂಟ್‌ನಲ್ಲಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios