ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಮಾಧುರಿ ದೀಕ್ಷಿತ್‌ರಿಗಾಗಿ ಕಾಶ್ಮೀರ ಬಿಟ್ಟುಕೊಡುವುದಾಗಿ ಹೇಳಿತ್ತೆಂಬ ಸುದ್ದಿ ಮತ್ತೆ ವೈರಲ್. ಮೇ 15ಕ್ಕೆ 58 ವರ್ಷ ತುಂಬುತ್ತಿರುವ ಮಾಧುರಿ, ೯೦ರ ದಶಕದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಪಾಕಿಸ್ತಾನದಲ್ಲೂ ಅವರಿಗೆ ಅಭಿಮಾನಿಗಳಿದ್ದು, ಅವರ ಚಿತ್ರಗಳಿಂದ ಮನೆಗಳನ್ನು ಅಲಂಕರಿಸುತ್ತಿದ್ದರಂತೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವಾಗ, ಏನು ಬೇಕಾದರೂ ನಡೆಯುವ ಸ್ಥಿತಿ ಇದೆ. ಅದರಲ್ಲಿಯೂ ಕಾಶ್ಮೀರದ ಮೇಲೆ ಪಾಕಿಗಳ ಕಣ್ಣು ನೆಟ್ಟಿರುವುದು ಹೊಸ ವಿಷಯವೇನಲ್ಲ. ಭಾರತದ ಭೂಪಟದಿಂದಲೇ ಸಂಪೂರ್ಣ ಕಾಶ್ಮೀರವನ್ನು ಮಾಯಮಾಡುವ ಅವರ ಹುನ್ನಾರ ಸದ್ಯ ನಡೆಯುತ್ತಿಲ್ಲ. ಇದರ ನಡುವೆಯೇ, ಈ ಹಿಂದೆ ಪಾಕಿಸ್ತಾನವು ಕಾಶ್ಮೀರವನ್ನು ನಿಮಗೆ ಬಿಟ್ಟುಕೊಡುತ್ತೇವೆ, ಮಾಧುರಿ ದೀಕ್ಷಿತ್​ ಅನ್ನು ನಮಗೆ ಕೊಟ್ಟುಬಿಡಿ ಎಂದು ಹೇಳಿತ್ತು! ಆ ಸುದ್ದಿಯೀಗ ಮತ್ತೆ ವೈರಲ್​ ಆಗುತ್ತಿದೆ. ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ಗೆ ನಾಳೆ ಅಂದ್ರೆ, ಮೇ 15ರಂದು 58ನೇ ಹುಟ್ಟುಹಬ್ಬದ ಸಂಭ್ರಮ. ವಯಸ್ಸು ಎನ್ನುವುದು ಬರೀ ಲೆಕ್ಕ ಎನ್ನುವ ಮಾತು ಈ ಬಾಲಿವುಡ್​ ಬೆಡಗಿಗೂ ಅನ್ವಯ ಆಗುತ್ತದೆ. ವಯಸ್ಸು ಇಷ್ಟಾದರೂ ಇನ್ನೂ ಆ ತುಂಟತನ, ಆ ಸೌಂದರ್ಯ, ಫಿಟ್​ನೆಟ್​ ಎಲ್ಲವೂ ಇದೆ ಮಾಧುರಿಯಲ್ಲಿ. 

ಅಂದಹಾಗೆ ಪಾಕಿಸ್ತಾನ ಈ ಬೇಡಿಕೆ ಇಟ್ಟಿದ್ದು 1999ರಲ್ಲಿ. ಅಂದರೆ ಕಾರ್ಗಿಲ್​ ಯುದ್ಧದ ಸಮಯದಲ್ಲಿ. ಆಗ ಈ ಸುದ್ದಿ ಭಾರಿ ಸದ್ದು ಮಾಡಿತ್ತು. ಹಲವು ಬಾಲಿವುಡ್​ ನಟ-ನಟಿಯರಂತೆ ಮಾಧುರಿ ದೀಕ್ಷಿತ್ ಅವರಿಗೆ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲಿಯೂ ಅಪಾರ ಅಭಿಮಾನಿಗಳು ಇದ್ದಾರೆ. (ಅದಕ್ಕೇ ತಾನೇ ಆಪರೇಷನ್​ ಸಿಂದೂರದ ಬಗ್ಗೆ ಹಲವು ಸೆಲೆಬ್ರಿಟಿಗಳು ತುಟಿಕ್​ ಪಿಟಿಕ್​ ಎನ್ನದೇ ಮೌನ ತಾಳಿ ದೇಶಪ್ರೇಮ ಮೆರೆಯುತ್ತಿರುವುದು?). 90ರ ದಶಕದಲ್ಲಿ ಮಾಧುರಿಯ ಕೀರ್ತಿ ಅದೆಷ್ಟು ದೊಡ್ಡ ಮಟ್ಟಿಗೆ ಹೋಗಿತ್ತು ಎಂದರೆ, ಆಕೆಯ ಒಂದು ನಗುವಿಗಾಗಿ ಲಕ್ಷಾಂತರ ಜನರು ತಮ್ಮನ್ನು ತಾವು ತ್ಯಾಗ ಮಾಡಲು ಸಿದ್ಧರಿದ್ದರು ಎನ್ನುವ ಸ್ಥಿತಿ ಇತ್ತು. ಪಾಕಿಸ್ತಾನದ ಹುಡುಗರು ಕೂಡ ತಮ್ಮ ಮನೆಗಳನ್ನು ಮಾಧುರಿ ಅವರ ಚಿತ್ರಗಳ ಪೋಸ್ಟರ್‌ಗಳಿಂದ ಅಲಂಕರಿಸುತ್ತಿದ್ದರು. ಎಲ್ಲರಿಗೂ ಒಂದೇ ಕನಸು ಇತ್ತು. ಅವರ ಕೋಟ್ಯಂತರ ಅಭಿಮಾನಿಗಳಿಗೆ ಹೇಗಾದರೂ ಒಮ್ಮೆ ಮಾಧುರಿಯನ್ನು ಭೇಟಿಯಾಗಬೇಕು ಎನ್ನುವ ಕನಸೂ ಇತ್ತು. ಮಾಧುರಿ ಜೊತೆ ರವಿನಾ ಟಂಡನ್​ ಅವರಿಗೂ ಪಾಕಿಸ್ತಾನ ಬೇಡಿಕೆ ಇಟ್ಟಿತ್ತು ಎನ್ನುವುದಾಗಿ ವರದಿಯಾಗಿದೆ. 

ರೊಮಾನ್ಸ್​ ದೃಶ್ಯದಲ್ಲಿ ನಿಯಂತ್ರಣ ಕಳಕೊಂಡು ಮಾಧುರಿಗೆ ಮಾಡಬಾರದ್ದು ಮಾಡಿದ್ದ ವಿನೋದ್​ ಖನ್ನಾ!

ಆ ಸಮಯದಲ್ಲಿ ನಡೆದಿರುವ ಘಟನೆ ಇದು. ಟೈಮ್ಸ್​ ಆಫ್​ ಇಂಡಿಯಾ ಆಗ ವರದಿ ಮಾಡಿದ್ದ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಕಾರ್ಗಿಲ್​ ಯುದ್ಧ ಪ್ರಾರಂಭವಾದಾಗ, ಪಾಕಿಸ್ತಾನಿಗಳು ನಮಗೆ ಮಾಧುರಿ ದೀಕ್ಷಿತ್ ಅವರನ್ನು ಕೊಟ್ಟರೆ ನಾವು ಕಾಶ್ಮೀರ ಬಿಡುತ್ತೇವೆ ಎಂದು ಹೇಳಿದ್ದರಂತೆ. ಮಾಧುರಿಗೆ ಇದ್ದ ಕ್ರೇಜ್ ಇಲ್ಲಿಯವರೆಗೆ ಯಾವುದೇ ನಾಯಕಿಗೆ ಸಿಕ್ಕಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ತೇಜಾಬ್, ರಾಮ್ ಲಖನ್, ಪರಿಂದಾ, ಸಾಜನ್, ಖಳನಾಯಕ್​, ದಿಲ್, ಬೇಟಾ, ಹಮ್ ಆಪ್ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ, ಲಜ್ಜಾ, ಪುಕಾರ್, ದೇವದಾಸ್ ಮುಂತಾದ ಚಿತ್ರಗಳಲ್ಲಿ ಮಾಧುರಿಯ ನಟನೆ ಎಲ್ಲರ ಮನ ಗೆದ್ದಿತು. ಆಮೀರ್ ಜೊತೆ ದಿಲ್, ಸಲ್ಮಾನ್ ಜೊತೆ ಹಮ್ ಆಪ್ಕೆ ಹೈ ಕೌನ್ ಮತ್ತು ಶಾರುಖ್ ಜೊತೆ ದಿಲ್ ತೋ ಪಾಗಲ್ ಹೈ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿರುವ ಮಾಧುರಿ, ತಮ್ಮ ಕಾಲದ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಮಾಧುರಿಯ ಪ್ರಣಯ ಕಥೆಗಳು ಸಹ ಕಡಿಮೆ ವಿಶೇಷವಾಗಿದ್ದವು. ಒಂದು ಕಾಲದಲ್ಲಿ ಸಂಜಯ್ ದತ್ ಮತ್ತು ಅವರ ಮದುವೆಯ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿದ್ದವು. 'ತಾನೇದಾರ್' ಚಿತ್ರದ ಸೆಟ್‌ಗಳಲ್ಲಿ ಅವರ ಪ್ರೀತಿ ಅರಳಿತು. ಆದರೆ 1993 ರಲ್ಲಿ ಮುಂಬೈ ಬಾಂಬ್ ಸ್ಫೋಟದಲ್ಲಿ ಸಂಜಯ್ ದತ್ ಹೆಸರು ಕೇಳಿ ಬಂದಾಗ, ಮಾಧುರಿ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದರು. ಇನ್ನು ಇವರ ಹುಟ್ಟು, ಬಾಲ್ಯದ ಕುರಿತು ಹೇಳುವುದಾದರೆ, ಮಾಧುರಿ ದೀಕ್ಷಿತ್ 1967 ರ ಮೇ 15 ರಂದು ಮುಂಬೈನಲ್ಲಿ ಜನಿಸಿದರು. ಮರಾಠಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮಾಧುರಿಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬ ಅಣ್ಣ ಇದ್ದಾರೆ. ಮಾಧುರಿ ತಮ್ಮ ಸಿನಿಮಾ ವೃತ್ತಿಜೀವನವನ್ನು 'ಅಬೋಧ್' ಚಿತ್ರದೊಂದಿಗೆ ಪ್ರಾರಂಭಿಸಿದರು. ಆ ಚಿತ್ರ ವಿಫಲವಾಯಿತು ಆದರೆ ಮಾಧುರಿಯ ಅಭಿನಯವನ್ನು ಪ್ರಶಂಸಿಸಲಾಯಿತು. ಮಾಧುರಿ ದೀಕ್ಷಿತ್ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪದ್ಮಶ್ರೀ ಪ್ರಶಸ್ತಿಯ ಹೊರತಾಗಿ, ಮಾಧುರಿ ಅವರಿಗೆ ಡಜನ್​ಗಟ್ಟಲೆ ಪ್ರಶಸ್ತಿಗಳು ಸಿಕ್ಕಿವೆ. ಒಬ್ಬ ಮಹಿಳಾ ಕಲಾವಿದೆಯಾಗಿ ಅವರು ಚಲನಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಅತಿ ಹೆಚ್ಚು ಹಣವನ್ನು ಪಡೆಯುತ್ತಿದ್ದ ಕಾಲವೊಂದಿತ್ತು.

ಮಾಧುರಿ ಒಪ್ಪದಿದ್ರೂ ಬಲವಂತದಿಂದ ರೇ* ಮಾಡ್ಲೇಬೇಕಾಯ್ತು: ಶೂಟಿಂಗ್​ನಲ್ಲಿ ನಡೆದದ್ದನ್ನು ಹೇಳಿದ ನಟ ರಂಜೀತ್​