'ದಯಾವನ್' ಚಿತ್ರದಲ್ಲಿ ವಿನೋದ್ ಖನ್ನಾ, ಮಾಧುರಿ ದೀಕ್ಷಿತ್ ಜೊತೆಗಿನ ರೊಮ್ಯಾಂಟಿಕ್ ದೃಶ್ಯದಲ್ಲಿ ಮಿತಿಮೀರಿದ್ದರು. ಚಿತ್ರೀಕರಣದ ವೇಳೆ ನಿಯಂತ್ರಣ ತಪ್ಪಿ ಮಾಧುರಿಯ ತುಟಿ ಕಚ್ಚಿ ರಕ್ತ ಬರಿಸಿದ್ದರು. ಈ ಘಟನೆ ವಿವಾದ ಸೃಷ್ಟಿಸಿ, ದೃಶ್ಯ ತೆಗೆಯಲು ಕಾನೂನು ನೋಟಿಸ್ ಕಳುಹಿಸಲಾಗಿತ್ತು. ಖನ್ನಾ ನಂತರ ಕ್ಷಮೆ ಯಾಚಿಸಿದ್ದರು. ಇದಕ್ಕೂ ಮುನ್ನ ಹಲವು ನಟಿಯರ ಜೊತೆ ಇದೇ ರೀತಿ ವರ್ತಿಸಿದ್ದರು ಎನ್ನಲಾಗಿದೆ.
ವಿನೋದ್ ಖನ್ನಾ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ದಯಾವನ್' ಚಿತ್ರದಲ್ಲಿ ಇಂಟಿಮೇಟ್ ದೃಶ್ಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. 'ಆಜ್ ಫಿರ್ ತುಮ್ಹೆ ಪ್ಯಾರ್ ಆಯಾ ಹೈ' ಹಾಡು ಕೂಡ ಭಾರಿ ಜನಪ್ರಿಯತೆ ಗಳಿಸಿತು. ಈ ಹಾಡನ್ನು ಇಂದಿಗೂ ಹಲವರು ಗುನುಗುನಿಸುತ್ತಲೇ ಇರುತ್ತಾರೆ. ಈ ಹಾಡನ್ನು 'ಹೇಟ್ ಸ್ಟೋರಿ 2' ಗಾಗಿ ರೀಮಿಕ್ಸ್ ಕೂಡ ಮಾಡಲಾಗಿದೆ. ಆದರೆ ಆ ಸಮಯದಲ್ಲಿ ಮಾತ್ರ ಇದು ಸಕತ್ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಮಾಧುರಿ ದೀಕ್ಷಿತ್ ಜೊತೆ ರೊಮಾನ್ಸ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ನಟ ವಿನೋದ್ ಖನ್ನಾ ಮಾಧುರಿ ದೀಕ್ಷಿತ್ಗೆ ಭಾರಿ ಹಾನಿ ಉಂಟು ಮಾಡಿದ್ದರು! ಅವರು ಎಲ್ಲೆ ಮೀರುತ್ತಿದ್ದಾರೆ ಎನ್ನುವುದು ತಿಳಿದಿದ್ದರಿಂದ ನಿರ್ದೇಶಕರು ಕಟ್ ಕಟ್ ಎಂದ ನಂತರವೂ 20 ವರ್ಷದ ಮಾಧುರಿಯ ತುಟಿಗೆ ಮುತ್ತಿಡುತ್ತಲೇ ಇದ್ದ ವಿನೋದ್ ಖನ್ನಾ, ಕೊನೆಗೆ ಮಾಧುರಿಯ ತುಟಿಯನ್ನು ಕಚ್ಚಿ ರಕ್ತ ಕೂಡ ಬರಿಸಿದ್ದರು!
1988ರಲ್ಲಿ ನಡೆದ ಚಿತ್ರದ ಶೂಟಿಂಗ್ ಕಥೆ ಇದು. ಆ ಸಮಯದಲ್ಲಿ ಮಾಧುರಿ ಅವರಿಗೆ ಕೇವಲ 20 ವರ್ಷ ವಯಸ್ಸು. ಬಾಲಿವುಡ್ ಶಾಡಿಸ್.ಕಾಮ್‌ನ ಪ್ರಕಾರ, 'ದಯಾವನ್' ಚಿತ್ರೀಕರಣದ ವೇಳೆ ಮಾಧುರಿ ಇನ್ನೂ ಸಿನಿ ಕ್ಷೇತ್ರಕ್ಕೆ ಹೊಸಬರಾಗಿದ್ದರು, ಉದ್ಯಮದಲ್ಲಿ ಒಂದು ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದರು. ಮತ್ತೊಂದೆಡೆ, ವಿನೋದ್ ಖನ್ನಾ ಒಬ್ಬ ಸೂಪರ್‌ಸ್ಟಾರ್ ಆಗಿದ್ದರು. ಆ ಸಮಯದಲ್ಲಿ ಹಲವಾರು ವರದಿಗಳು ಖನ್ನಾ ಮಾಧುರಿಗೆ ಐದು ನಿಮಿಷಗಳ ಕಾಲ ಮುತ್ತಿಟ್ಟರು ಮತ್ತು ಅವರ ತುಟಿಗಳನ್ನು ಕಚ್ಚಿದರು ಎಂದು ತಿಳಿಸಿವೆ. ನಟಿ ರಕ್ತಸ್ರಾವದಿಂದ ಬಳಲುತ್ತಿದ್ದರು ಮತ್ತು ಚಿತ್ರೀಕರಣದ ನಂತರ ಅಳುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇಷ್ಟೆಲ್ಲಾ ಆದ ಬಳಿಕ ವಿನೋದ್ ಖನ್ನಾ ನಿಯಂತ್ರಣಕ್ಕೆ ಬಂದು ಕ್ಷಮೆಯಾಚಿಸಿದ್ದರಂತೆ!
ಮಾಧುರಿ ಒಪ್ಪದಿದ್ರೂ ಬಲವಂತದಿಂದ ರೇ* ಮಾಡ್ಲೇಬೇಕಾಯ್ತು: ಶೂಟಿಂಗ್ನಲ್ಲಿ ನಡೆದದ್ದನ್ನು ಹೇಳಿದ ನಟ ರಂಜೀತ್
ಚಿತ್ರದ ನಿರ್ದೇಶಕ ಫಿರೋಜ್ ಖಾನ್ ಅವರಿಗೆ ಆ ದೃಶ್ಯ ಬಿಡುಗಡೆಯ ಸಮಯದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದ ನಂತರ ಅದನ್ನು ತೆಗೆದುಹಾಕಲು ಕಾನೂನು ನೋಟಿಸ್ ಕಳುಹಿಸಲಾಗಿತ್ತು. ಮಾಧುರಿ ಕೂಡ ಆ ದೃಶ್ಯವನ್ನು ತೆಗೆದುಹಾಕುವಂತೆ ವಿನಂತಿಸಿದರು. ಆದಾಗ್ಯೂ, ನಟ, ನಿರ್ದೇಶಕರು ಚಿತ್ರದಲ್ಲಿನ ದೃಶ್ಯವನ್ನು ಉಳಿಸಿಕೊಳ್ಳಲು 1 ಕೋಟಿ ರೂ.ಗಳ ಆಫರ್ ನೀಡಿ ಅದನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ವಿನೋದ್ ಖನ್ನಾ ಅವರು ಇದೇ ಮೊದಲಲ್ಲ. ಹಲವು ನಟಿಯರ ಜೊತೆ ಹೀಗೆಯೇ ಮಾಡಿದ್ದಾರೆ ಎನ್ನುವ ವರದಿ ಇದೆ. ಡಿಂಪಲ್ ಕಪಾಡಿಯಾ ಅವರೊಂದಿಗಿನ ದೃಶ್ಯದ ಸಮಯದಲ್ಲಿಯೂ ಖನ್ನಾ ತಮ್ಮ ನಿಯಂತ್ರಣವನ್ನು ಕಳೆದುಕೊಂಡಿದ್ದರು.
ಈ ವಿಷಯವನ್ನು ಹಿಂದೊಮ್ಮೆ ಖುದ್ದು ವಿನೋದ್ ಖನ್ನಾ ಒಪ್ಪಿಕೊಂಡಿದ್ದರು. ಹಳೆಯ ಸಂದರ್ಶನವೊಂದರಲ್ಲಿ, ಮಹಿಳೆಯರ ವಿಷಯದಲ್ಲಿ ತಾನು ಸಂತನಲ್ಲ ಎಂದು ಅವರು ಹೇಳಿದ್ದರು. "ನಾನು ಬ್ರಹ್ಮಚಾರಿಯಾಗಿದ್ದೆ, ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ನಾನು ಸಂತನಲ್ಲ. ಬೇರೆಯವರಂತೆ ನನಗೂ ಲೈಂಗಿಕತೆ ಬೇಕು. ಮಹಿಳೆಯರಿಲ್ಲದೆ ನಾವು ಇಲ್ಲಿ ಇರುವುದಿಲ್ಲ, ಲೈಂಗಿಕತೆ ಇಲ್ಲದೆ ನಾವು ಇಲ್ಲಿ ಇರುವುದಿಲ್ಲ, ಹಾಗಾದರೆ ನಾನು ಮಹಿಳೆಯರೊಂದಿಗೆ ಇರುವುದನ್ನು ಯಾರಾದರೂ ಏಕೆ ಆಕ್ಷೇಪಿಸಬೇಕು" ಎನ್ನುವ ಮೂಲಕ ನಟಿಯರ ಜೊತೆ ಶೂಟಿಂಗ್ ಮಾಡುವ ಸಮಯದಲ್ಲಿ ಹದ್ದು ಮೀರಿ ವರ್ತಿಸುತ್ತಿದ್ದ ಹಲವು ಘಟನೆಗಳು ಇವೆ ಎನ್ನಲಾಗಿದೆ.
ಕಾಣಬಾರದ್ದೆಲ್ಲಾ ಕಂಡೋಯ್ತಮ್ಮಾ, ಈಗೇನ್ ಡ್ರೆಸ್ ಸರಿಮಾಡ್ಕೋತ್ಯಾ? ತುಪ್ಪದ ಬೆಡಗಿ ರಾಗಿಣಿ ಟ್ರೋಲ್- ವಿಡಿಯೋ ವೈರಲ್
