ಕರೆಂಟ್ ಇಲ್ಲದ ಸಮಯದಲ್ಲಿ ಅರಮನೆಯಿಂದ ಹೊರ ಮಲಗಬೇಕಿತ್ತು ಎಂದು ಬಾಲ್ಯ ದಿನಗಳನ್ನು ನೆನಪು ಮಾಡಿಕೊಂಡ ಸೋಹಾ ಅಲಿ ಖಾನ್....
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ರಾಜಮನೆತನ ಪಟೌಡಿ ಫ್ಯಾಮಿಲಿಗೆ ಸೇರಿದವರು. ಯಾವುದೇ ಸಂದರ್ಶನದಲ್ಲಿ ಭಾಗಿಯಾದರೂ ಪಟೌಡಿ ಅರಮನೆ ಬಗ್ಗೆ ಆಗಾಗ ಪ್ರಶ್ನೆ ಮಾಡಲಾಗುತ್ತದೆ. ಈಗಲ್ಲೂ ಅದೇ ಹಳೆ ಚಾರ್ಮ್ ಕಾಪಾಡಿಕೊಂಡಿರುವ ಅರಮನೆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅರಮನೆಗೆ ಭೇಟಿ ಕೊಡುವುದರಿಂದ ತಂದೆ ನೆನಪುಗಳು ಹೆಚ್ಚಾಗುತ್ತದೆ ಎಂದು ಸೋಹಾ ಹೇಳಿಕೊಂಡಿದ್ದರು.
ಮಕ್ಕಳಿಗೆ ಶಾಲೆಯಲ್ಲಿ ರಜೆ ಬಂದ್ರೆ ಸ್ಟಾರ್ ಫ್ಯಾಮಿಲಿ ಅವರು ಫಾರಿನ್ ಟ್ರಿಪ್ ಮಾಡುತ್ತಾರೆ ಆದರೆ ಖಾನ್ ಕುಟುಂಬದವರು ತಪ್ಪದೆ ಪಟೌಡಿ ಅರಮನೆಗೆ ಭೇಟಿ ನೀಡುತ್ತಾರೆ. ನಾಲ್ಕು ವರ್ಷದ ಇನಾಯ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಾಳೆ ಎಂದು ತಾಯಿ ಸೋಹಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್ ಅಲಿ ಖಾನ್?
'ನಮ್ಮ ಪಟೌಡಿ ಅರಮನೆಗೆ ಭೇಟಿ ನೀಡಿದಾಗ ನನ್ನ ತಂದೆ ನೆನಪುಗಳು ಹೆಚ್ಚಾಗುತ್ತದೆ ಅಲ್ಲಿದ್ದರೆ ಅವರು ನಮ್ಮೊಟ್ಟಿಗೆ ಇದ್ದಾರೆ ಅನಿಸುತ್ತದೆ. ಅವರ ಸಮಾಧಿಗೆ ಭೇಟಿ ನೀಡಿ ಕೆಲವು ನಿಮಿಷಗಳ ಕಾಲ ಕುಳಿತುಕೊಂಡು ಬರುವೆ. ನನಗೆ ಅದು ಮನೆ ಇದ್ದಂತೆ. ಅರಮನೆ ವಿಚಾರದಲ್ಲಿ ನಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ಬಾಲ್ಯದ ಅತಿ ಹೆಚ್ಚು ದಿನಗಳನ್ನು ಅರಮನೆಯಲ್ಲಿ ಕಳೆದಿದ್ದು. ಕೆಲವೊಮ್ಮೆ ಅರಮನೆಯಲ್ಲಿ ಕರೆಂಟ್ ಇಲ್ಲದಾಗ ನಾವು ಹೊರಗಡೆ ಸೊಳ್ಳೆ ಪರದೆ ಹಾಕಿಕೊಂಡು ಮಲಗಬೇಕಿತ್ತು. ಈಗ ಅಲ್ಲಿ ಎಸಿ ಹಾಕಲಾಗಿದೆ ಆಗ ಎಸಿ ಇರಲಿಲ್ಲ...ನೆಮ್ಮದಿ ಅಂದ್ರೆ ಮೊಬೈಲ್ ಫೋನ್ ಕೂಡ ಇರಲಿಲ್ಲ. ಪ್ರಪಂಚದ ಜೊತೆ ಕಂಪ್ಲೀಟ್ ಕಟ್ ಆಫ್ ಅಗಿತ್ತು' ಎಂದು ಸೋಹಾ ಅಲಿ ಖಾನ್ ಮಾತನಾಡಿದ್ದಾರೆ.
'ಬಾಲ್ಯದಲ್ಲಿ ಹೆಚ್ಚಾಗಿ ಕ್ರಿಕೆಟ್ ಮತ್ತು ಫಾರ್ಮಿಂಗ್ ಮಾಡುತ್ತಿದ್ದೆವು. ಈಗ ನನ್ನ ಮಗಳು ಇನಾಯ ಕೂಡ ಫಾರ್ಮಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾಳೆ. ಆಕೆ ಹೋಗಿ ಆಲೂಗಡ್ಡೆ, ಕ್ಯಾರೆಟ್ ಬೆಳೆಯುತ್ತಾರೆ. ನಾವೇ ಬೆಳೆದ ಸೌತೇಕಾಯಿ ಆಲೂಗಡ್ಡೆ ಕ್ಯಾರೆಟ್ ಬಳಸಿ ಸಲಾಡ್ ಮಾಡುತ್ತೀವಿ. ಅರಮನೆ ಸುತ್ತ ನವಿಲುಗಳಿದೆ ಹಾಗೂ ದತ್ತು ತೆಗೆದುಕೊಂಡಿರುವ ನಾಯಿಗಳು ಇದೆ..ಕೆಲವೊಮ್ಮೆ ಹಾವುಗಳನ್ನು ನೋಡಿದ್ದೀವಿ. ಒಂದು ರೀತಿ ಪ್ರಕೃತಿ ನಡುವೆ ಜೀವನ ನಡೆಸುವ ಹಾಗೆ' ಎಂದು ಸೋಹಾ ಹೇಳಿದ್ದಾರೆ.
ಒಂದು ವೇಳೆ ತಾಯಿನ ಕಳೆದು ಕೊಂಡರೂ ಪರ್ಫ್ಯೂಮ್‌ನಿಂದ ಅವಳನ್ನು ನೆನಪಿಸಿಕೊಳ್ತೀನಿ: ನಟಿ ಸೋಹಾ ಅಲಿ ಖಾನ್
ಹರಿಯಾಣದಲ್ಲಿರುವ ಪಟೌಡಿಯಲ್ಲಿದೆ ಬಿಳಿ ಬಣ್ಣದ ಅರಮನೆ. ಸೈಫ್-ಕರೀನಾ ತಮ್ಮ ಬಿಡುವಿನ ವೇಳೆಯನ್ನು ಇಲ್ಲಿ ಕಳೆಯುತ್ತಾರೆ.ಈ ಅರಮನೆಯನ್ನು ಇಬ್ರಾಹಿಂ ಕೋಠಿ ಎಂದೂ ಕರೆಯುತ್ತಾರೆ. ಒಳಗಿನಿಂದ ಬಹಳ ಐಷಾರಾಮಿ ಹಾಗೂ ಮೂಲೆ ಮೂಲೆಯೂ ಅದ್ಭುತವಾಗಿದೆ . 84 ವರ್ಷಗಳ ಹಿಂದೆ 1935 ರಲ್ಲಿ 8ನೇ ನವಾಬ್ ಮತ್ತು ಭಾರತೀಯ ತಂಡದ ಮಾಜಿ ನಾಯಕ ಇಫ್ತಿಖರ್ ಅಲಿ ಹುಸೇನ್ ಸಿದ್ದಿಕಿ ನಿರ್ಮಿಸಿದರು. ಇದರ ಮೌಲ್ಯ ಸುಮಾರು 800 ಕೋಟಿ ಎಂದು ಅಂದಾಜಿಲಾಗುತ್ತದೆ.150 ಕೊಠಡಿಗಳಿರುವ ಇಲ್ಲಿ ಮುಂಚೆ 100ಕ್ಕೂ ಹೆಚ್ಚು ಸೇವಕರು ಕೆಲಸ ಮಾಡುತ್ತಿದ್ದರಂತೆ.
ಇಫ್ತಿಖರ್ ಅಲಿ ಹುಸೇನ್ ಸಿದ್ದಿಕಿ ನಿರ್ಮಿಸಿದ ಇದನ್ನು ಅವರ ಮಗ 9ನೇ ನವಾಬ್ ಮನ್ಸೂರ್ ಅಲಿ ಅಲಿಯಾಸ್ ನವಾಬ್ ಪಟೌಡಿ ವಿದೇಶಿ ವಾಸ್ತುಶಿಲ್ಪಿಗಳ ಸಹಾಯದಿಂದ ನವೀಕರಿಸಿದರು. 2003ರಲ್ಲಿ ಮನ್ಸೂರ್ ಅಲಿ ಖಾನ್‌ರ ತಾಯಿ ಸಾಜಿದಾ ಸುಲ್ತಾನ್ ಮರಣದ ನಂತರ ಅವರು ಈ ಬಂಗಲೆ ತೊರೆಯಬೇಕಾಯಿತು. ಅದರ ನಂತರ ನವಾಬ್ ಪಟೌಡಿ ಈ ಅರಮನೆಯಲ್ಲಿ ಪತ್ನಿ ಶರ್ಮಿಳಾ ಟ್ಯಾಗೋರ್ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದರು.
