ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ 19 ದಿನಗಳಲ್ಲಿ ₹950 ಕೋಟಿ ಗಳಿಸಿ ₹1000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ. ಆದರೆ ಇತ್ತೀಚೆಗೆ ಗಳಿಕೆ ಕುಸಿದ ಹಿನ್ನೆಲೆಯಲ್ಲಿ ಟಿಕೆಟ್ ಬೆಲೆಯನ್ನು ಶೇ.80ರಷ್ಟು ಇಳಿಕೆ ಮಾಡಲಾಗಿದೆ. ಪ್ರೇಕ್ಷಕರು ಈಗ ಕೇವಲ ₹99ಕ್ಕೆ ಚಿತ್ರವನ್ನು ವೀಕ್ಷಿಸಬಹುದು.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'(Ramayana) ಭಾರತೀಯ ಚಲನಚಿತ್ರರಂಗದಲ್ಲಿ ಧೂಳೆಬ್ಬಿಸಿದೆ. ರಾಮಾಯಣ ಬಿಡುಗಡೆಯಾದ ಕೇವಲ 19 ದಿನಳಲ್ಲಿ ₹950 ಕೋಟಿ ಗಳಿಸಿ ಈಗ ₹1000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ. ಆದರೆ ಮೊದಲು ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದ್ದ ಚಿತ್ರ ಇದೀಗ ಗಳಿಕೆಯಲ್ಲಿ ದಿನೇದಿನೆ ಕಡಿಮೆಯಾಗುತ್ತಿದೆ. ಚಿತ್ರದ ಗಳಿಕೆ ಕಡಿಮೆಯಾಗುತ್ತಿದ್ದಂತೆ ಇದೀಗ ಟಿಕೆಟ್ ಬೆಲೆಗಳನ್ನು ಶೇ.80ರಷ್ಟು ಇಳಿಕೆ ಮಾಡಿದ್ದಾರೆ. ಅಂದರೆ ಈಗ ಕೇವಲ ₹99ಕ್ಕೆ ರಾಮಾಯಣ ಸಿನಿಮಾ ನೋಡಬಹುದಾಗಿದೆ.
'ಕೇವಲ ₹99ಕ್ಕೆ ರಾಮಾಯಣ ಸಿನಿಮಾ ವೀಕ್ಷಿಸಿ
ನವೆಂಬರ್ 5 ರಂದು ರಾಮಾಯಣ ಬಿಡುಗಡೆಯಾದಾಗ 'ರಾಮಾಯಣ' ಟಿಕೆಟ್ಗಳು ಬಲು ದುಬಾರಿಯಾಗಿದ್ದವು. ಟಿಕೆಟ್ ಬೆಲೆ ಕೇಳಿಯೇ ಪ್ರೇಕ್ಷಕರು ಸಿನಿಮಾ ನೋಡಬೇಕೆನಿಸಿದರೂ ಥಿಯೇಟರ್ಗೆ ಹೋಗಿ ನೋಡಲು ಹಿಂದೇಟು ಹಾಕಿದ್ದರು. ಆರಂಭದಲ್ಲಿ ಬೆಲೆಗಳು 2D, 3D, IMAX ಕ್ರಮವಾಗಿ ₹180 - ₹3,170 ವರೆಗೂ ಏರಿಕೆಯಾಗಿತ್ತು. ಬೆಂಗಳೂರಿನಲ್ಲಿ ಸಾಮಾನ್ಯ ಸಿಂಗಲ್ಸ್ ಸ್ಕ್ರೀನ್ ಥಿಯೇಟರ್ಗಳಲ್ಲಿ 2D ಟಿಕೆಟ್ಗಳು ₹180 ರಿಂದ ₹230 ಇದ್ದರೆ, 2D, 3D ಪ್ರದರ್ಶನಗಳಿಗೆ ₹450-₹950 ವರೆಗೆ ಟಿಕೆಟ್ ಬೆಲೆಗಳಿದ್ದವು.
ಟಿಕೆಟ್ ಬೆಲೆ ಹೆಚ್ಚಳದಿಂದಾಗಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ರಾಮಾಯಣ ಸಿನಿಮಾವು ನೂರು ಕೋಟಿ ಕ್ಲಬ್ ಸೇರಿತು. ಆದರೆ ಇಂದಿಗೆ 19 ದಿನಗಳ ಪ್ರದರ್ಶನ ತುಸು ನಿಧಾನವಾಗುತ್ತಿದೆ. 19ನೇ ದಿನದ ಪ್ರದರ್ಶನದಲ್ಲಿ ಒಂದು ದಿನದ ಗಳಿಕೆ ₹12 ಕೋಟಿಗೆ ಕುಸಿದಿದೆ. ಹೀಗಾಗಿ ಟಿಕೆಟ್ ಬೆಲೆ ಶೇ.80ರಷ್ಟು ಕಡಿಮೆ ಮಾಡಿದೆ. ಈ ಬಗ್ಗೆ ಸೋಮವಾರ ಚಿತ್ರದ ಅಧಿಕೃತ Instagram ಖಾತೆಯಲ್ಲಿ ಚಿತ್ರದ ಟಿಕೆಟ್ ಬೆಲೆಗಳ ಕುರಿತು ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಪೋಸ್ಟ್ನ ಶೀರ್ಷಿಕೆ 'ಈ ಮಂಗಳವಾರ ದೊಡ್ಡ ಸ್ಕ್ರೀನ್ ಮೇಲೆ ರಾಮಾಯಣ ಸಿನಿಮಾವನ್ನು ನೋಡಿ ಆನಂದಿಸಿ, ಕೇವಲ ₹99 ರಿಂದ ಟಿಕೆಟ್ ಗಳು ಆರಂಭವಾಗುತ್ತವೆ, ಎಲ್ಲರಿಗೂ ಗುರುಪರ್ವದ ಶುಭಾಶಗಳು' ಎಂದು ಬರೆಯಲಾಗಿದೆ.
















