Asianet Suvarna News Asianet Suvarna News

ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್‌ ಓಬಿರಾಯ್‌

ನಟಿ ಐಶ್ವರ್ಯ ರೈ ಅವರಿಂದ ಬೇರ್ಪಟ್ಟ ಮೇಲೆ ತಾವು ಎಷ್ಟು ನೋವು ಅನುಭವಿಸಿದ್ದೆವು ಎನ್ನುವ ಬಗ್ಗೆ ನಟ ವಿವೇಕ್‌ ಓಬಿರಾಯ್‌ ಬಹಿರಂಗಪಡಿಸಿದ್ದಾರೆ. 
 

Vivek Oberois Shocking Confession About Aishwarya Rai And How He Coped With Heartbreak suc
Author
First Published Oct 24, 2023, 3:49 PM IST

ವಿಶ್ವಸುಂದರಿ  ಕಿರೀಟ ಎಷ್ಟೋ ಸುಂದರಿಯರ ಮುಡಿಗೆ ಏರಿದ್ದರೂ, ವಿಶ್ವಸುಂದರಿ ಎಂದಾಕ್ಷಣ ನೆನಪಿಗೆ ಬರುವವರು ನಟಿ ಐಶ್ವರ್ಯಾ ರೈ. ಬರುವ ನವೆಂಬರ್‌ 1 ರಂದು ನಟಿ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಯಸ್ಸು ಇಷ್ಟಾದರೂ ಇಂದಿಗೂ ಅದೇ ಸೌಂದರ್ಯವನ್ನು ಕಾಪಿಟ್ಟುಕೊಂಡಿರುವ ಬೆಡಗಿ ಈಕೆ. ನಟಿ ಐಶ್ವರ್ಯ ಸಿನಿಮಾ ಬದುಕಿನಂತೆಯೇ  ಅವರ ಪ್ರೇಮ ಪ್ರಕರಣಗಳಿಂದಲೂ ಹೆಚ್ಚಿನ ಸುದ್ದಿಯಲ್ಲಿರೋ ನಟಿ, ಅದು ಇಂದಿಗೂ ಚರ್ಚಿತವೇ.  ಸಲ್ಮಾನ್ ಖಾನ್ ಜತೆಗಿನ ವಿವಾದಾತ್ಮಕ ಸಂಬಂಧದಿಂದ ಹಿಡಿದು ಅಭಿಷೇಕ್ ಬಚ್ಚನ್ ಮದುವೆಯವರೆಗೂ ಐಶ್ವರ್ಯಾ ಅವರ ಖಾಸಗಿ ಬದುಕಿನ ವಿಷಯ ಸದಾ ಚರ್ಚೆಯಲ್ಲಿ ಇರುವಂಥದ್ದು. ಇವರು ಕೈಕೊಟ್ಟಿದ್ದರಿಂದಲೇ ಕೊನೆಯವರೆಗೂ ಸಲ್ಮಾನ್‌ ಖಾನ್‌ ಒಂಟಿಯಾಗಿಯೇ ಉಳಿದರು ಎಂದೂ ಹೇಳಲಾಗುತ್ತದೆ.
 
ಈ  ಪ್ರೇಮಕಥೆಯ ಜೊತೆಗೆ ಐಶ್ವರ್ಯ ಹೆಸರು ವಿವೇಕ್ ಒಬೆರಾಯ್ ಅವರ ಜೊತೆಯೂ ಸೇರಿಕೊಂಡಿದೆ.  ಐಶ್ವರ್ಯಾ-ಸಲ್ಮಾನ್ ಪ್ರೇಮ ಸಂಬಂಧದಂತೆಯೇ ಕುತೂಹಲ ಕೆರಳಿಸಿದ್ದು, ಐಶ್ವರ್ಯಾ-ವಿವೇಕ್ ಒಬೆರಾಯ್ ಪ್ರೇಮ ಸಲ್ಲಾಪ. ಇದು ಅಲ್ಪ ಕಾಲದ್ದಾಗಿದ್ದರೂ ಆ ಕಾಲದಲ್ಲಿ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಐಶ್ವರ್ಯಾ ಮತ್ತು ವಿವೇಕ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ವಿವೇಕ್ ಜತೆಗಿನ ಸಂಬಂಧದ ಬಗ್ಗೆ ಐಶ್ವರ್ಯಾ ಎಂದಿಗೂ ಬಾಯಿಬಿಟ್ಟಿಲ್ಲ. ಜತೆಗೆ ಬ್ರೇಕ್‌ಅಪ್‌ಗೂ ಕಾರಣ ತಿಳಿಸಿಲ್ಲ. ಇವರಿಬ್ಬರ ಸಂಬಂಧ  'ಕ್ಯೂನ್ ಹೋ ಗಯಾ ನಾ' ಚಿತ್ರದೊಂದಿಗೆ ಶುರುವಾಗಿತ್ತು.  ಆ ಸಮಯದಲ್ಲಿ ಅವರ ಪ್ರೇಮಕಥೆಯೇ ದೊಡ್ಡ ಗಾಸಿಪ್ ಆಗಿತ್ತು. ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ಬ್ರೇಕಪ್ ಆದಾಗ ಇಬ್ಬರೂ ಪರಸ್ಪರ ಡೇಟಿಂಗ್ ಆರಂಭಿಸಿದರು. ಆದಾಗ್ಯೂ, ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು 2005 ರಲ್ಲಿ ಬೇರ್ಪಟ್ಟರು. 

ಅಪ್ಪನ ವಯಸ್ಸಿನ ಹೀರೋ ಜತೆ ರೊಮ್ಯಾನ್ಸ್‌, ಲಿಪ್‌ಲಾಕ್‌ಗೆ ನಯನತಾರಾ ರೆಡಿ? ಅಯ್ಯೋ ಅಂತಿದ್ದಾರೆ ಫ್ಯಾನ್ಸ್‌

ಇದೀಗ ಬಹಳ ವರ್ಷಗಳ ಬಳಿಕ ಈ ಬಗ್ಗೆ ವಿವೇಕ್‌ ಓಬಿರಾಯ್‌ ಮೌನ ಮುರಿದಿದ್ದಾರೆ.  ಐಶ್ವರ್ಯಾ ಅವರ ಮಾಜಿ ಸ್ನೇಹಿತ ಸಲ್ಮಾನ್ ಖಾನ್ ಅವರು ಐಶ್ವರ್ಯಾ ಜೊತೆ ಡೇಟಿಂಗ್ ಮಾಡದಿದ್ದಕ್ಕಾಗಿ ತಮಗೆ ಬೆದರಿಕೆ ಕೂಡ ಹಾಕಿದ್ದರು ಎಂಬುದನ್ನು ತಿಳಿಸಿದ್ದಾರೆ. ಇದು ತಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತ್ತು ಎಂದಿದ್ದಾರೆ. ಆದರೆ ಐಶ್ವರ್ಯ ರೈ ಅವರ ಹೆಸರನ್ನು ತೆಗೆದುಕೊಳ್ಳದೆ ವಿವೇಕ್ ಐಶ್ವರ್ಯಾ ಕಡೆಗೆ ಹಲವು ಕಡೆ ನಟಿಯ ಸುಳಿವು ನೀಡಿದ್ದಾರೆ. ಇತ್ತೀಚೆಗೆ, ಅನಾಸ್ ಬೌಖಾಶ್ ಅವರ ಪಾಡ್‌ಕಾಸ್ಟ್‌ನೊಂದಿಗಿನ ಸಂಭಾಷಣೆಯಲ್ಲಿ, ವಿವೇಕ್ ಒಬೆರಾಯ್  ಮುಕ್ತವಾಗಿ ಮಾತನಾಡಿದರು.  ನನ್ನ  ಸಂಗಾತಿ  ಮೋಸ ಮಾಡಿದ ಕಾರಣ ಹಲವು ಬಾರಿ ನೊಂದುಕೊಂಡೆ ಎಂದು ಹೇಳಿದ್ದಾರೆ. ಗೆಳತಿ ಕೈಕೊಟ್ಟಾಗ ತುಂಬಾ ಅಸಹಾಯಕನಾಗಿದ್ದೆ. ಇದನ್ನು ನೆನಪಿಸಿಕೊಂಡರೆ ಇಂದಿಗೂ ನೋವಾಗುತ್ತದೆ ಎಂದರು. 
 
ಐಶ್ವರ್ಯಾ ಅಲ್ಲದೆ ವಿವೇಕ್ ಗೆ ಇನ್ನೂ ಇಬ್ಬರು ಗೆಳತಿಯರಿದ್ದಾರೆ.  ಐಶ್ವರ್ಯಾ ಕೈಕೊಟ್ಟ ಬಳಿಕ,  ವಿವೇಕ್ ಒಬೆರಾಯ್ ಮಾಡೆಲ್ ಗುರುಪ್ರೀತ್ ಗಿಲ್ ಜೊತೆ ಡೇಟಿಂಗ್ ಮಾಡಿದರು. ಆಕೆಯ ಜೊತೆಯೂ ಬೇರ್ಪಟ್ಟು  ನಂತರ ಪ್ರಿಯಾಂಕಾ ಆಳ್ವಾ ಅವರನ್ನು ಭೇಟಿಯಾದರು. ವಿವೇಕ್ ಒಬೆರಾಯ್ ಮದುವೆಗೂ ಮುನ್ನ ಸಂಬಂಧಗಳಲ್ಲಿ ಹಲವು ಬಾರಿ ಮನನೊಂದಿದ್ದಾರೆ. ಪ್ರಿಯಾಂಕಾ ಆಳ್ವಾ ಅವರೊಂದಿಗಿನ ಅವರ ವಿವಾಹವು ಅವರ ಜೀವನಕ್ಕೆ ಹೊಸ ಅಧ್ಯಾಯವನ್ನು ಸೇರಿಸಿತು ಮತ್ತು ಅಂದಿನಿಂದ ಅವರು ತಮ್ಮ ಜೀವನವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ. 

ನಾಯಕನ ತೊಡೆ ಮೇಲೆ ಕೂತ್ಕೊ ಅಂದ್ರು, ಆತ ಕಚ್ಚಿದ ಐಸ್​​ಕ್ರೀಂ ತಿನ್ನು ಅಂದ್ರು: ಆ ದಿನಗಳ ನೆನೆದ ಸುಹಾಸಿನಿ
 

Follow Us:
Download App:
  • android
  • ios