Asianet Suvarna News Asianet Suvarna News

ನಾಯಕನ ತೊಡೆ ಮೇಲೆ ಕೂತ್ಕೊ ಅಂದ್ರು, ಆತ ಕಚ್ಚಿದ ಐಸ್​​ಕ್ರೀಂ ತಿನ್ನು ಅಂದ್ರು: ಆ ದಿನಗಳ ನೆನೆದ ಸುಹಾಸಿನಿ

ನಟಿ ಸುಹಾಸಿನಿ ಶೂಟಿಂಗ್​ ಸಮಯದಲ್ಲಿ ತಮಗಾಗಿದ್ದ ಕೆಟ್ಟ ಅನುಭವಗಳ ಕುರಿತು ಬಹಿರಂಗವಾಗಿ ಹೇಳಿದ್ದಾರೆ. ಅವರು ಹೇಳಿದ್ದೇನು? 
 

Actress Suhasini has opened up about her bad experiences during shooting suc
Author
First Published Oct 22, 2023, 5:39 PM IST

ಬಹುಭಾಷಾ ನಟಿಯಾಗಿರುವ ಸುಹಾಸಿನಿ ಇದಾಗಲೇ ಕನ್ನಡ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಹಲವು ಬ್ಲಾಕ್​ಬಸ್ಟರ್​ ಚಿತ್ರ ನೀಡಿದವರು. ಇವರ ಅಮೃತವರ್ಷಿಣಿ ಚಿತ್ರವಂತೂ ಯಾರೂ ಮರೆಯಲು ಸಾಧ್ಯವಿಲ್ಲ. ಅದ್ಭುತ ನಟನೆ, ಮುಗ್ಧತೆಗೆ ಹೆಸರುವಾಸಿಯಾಗಿರುವ ಸುಹಾಸಿನಿ ಅವರು ತಮ್ಮ ಯಾವುದೇ ಚಿತ್ರಗಳಲ್ಲಿ ಅಶ್ಲೀಲತೆಯನ್ನು ತಂದುಕೊಟ್ಟಿಲ್ಲ. ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸುವ ಇವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಕೆಲ ದಿನಗಳ ಹಿಂದೆ ಅವರು ಓಟಿಟಿ ವೇದಿಕೆಯಲ್ಲಿ ಮಿತಿಮೀರುತ್ತಿರುವ ಅಶ್ಲೀಲತೆ ಕುರಿತು ಅವರು ಬೇಸರ ವ್ಯಕ್ತಪಡಿಸಿದ್ದರು. ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಸಾರ ಆಗುತ್ತಿರುವ ಹಲವು ಕಂಟೆಂಟ್​ಗಳು ಸಮಾಜ ಒಪ್ಪದ ರೀತಿಯಲ್ಲಿ ಇರುತ್ತವೆ. ಇದನ್ನು ಟಾಪ್​ ಕಲಾವಿದರೇ ಮಾಡುತ್ತಿದ್ದಾರೆ ಎಂದು ಬೇಸರಿಸಿದ್ದರು. ಇದೀಗ ಶೂಟಿಂಗ್​ ಸಮಯದಲದಲ್ಲಿ ತಮಗಾಗಿರುವ ಕೆಟ್ಟ ಅನುಭವದ ಕುರಿತು ನಟಿ ಹೇಳಿದ್ದಾರೆ. 

ಅಷ್ಟಕ್ಕೂ ಸಿನಿ ರಂಗದಲ್ಲಿ ನೆಲೆಯೂರಬೇಕು ಎಂದರೆ ಕೆಲವೊಂದು ಕೆಲವು ನಿರ್ದೇಶಕರು, ನಿರ್ಮಾಪಕರು ಹಾಗೂ ಕೆಲವು ನಾಯಕರ ಜೊತೆ ಅವರು ಹೇಳಿದ 'ಅಡ್ಜಸ್ಟ್​ಮೆಂಟ್'ಗೆ ರೆಡಿ ಇರಬೇಕು ಎನ್ನುವ ಮಾತಿದೆ. ಇದರ ಬಗ್ಗೆ ಇದಾಗಲೇ ಹಲವಾರು ನಟಿಯರು ಹೇಳಿಕೊಂಡಿದ್ದಾರೆ. ತಮಗಾಗಿರುವ ಕೆಟ್ಟ ಅನುಭವಗಳು, ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದಾರೆ. ಹೇಗೆ ತಮ್ಮನ್ನು ನೇರವಾಗಿ ಮಂಚಕ್ಕೆ ಕರೆಯಲಾಗಿತ್ತು ಎನ್ನುವುದನ್ನೂ ತಿಳಿಸಿದ್ದಾರೆ. ಇಷ್ಟು ಕೆಟ್ಟ ಅನುಭವ ಅಲ್ಲದಿದ್ದರೂ ಶೂಟಿಂಗ್​ ವೇಳೆ ತಮಗಾಗಿರುವ ಕಹಿ ಅನುಭವಗಳನ್ನು ನಟಿ ಸುಹಾಸಿನಿ ತೆರೆದಿಟ್ಟಿದ್ದಾರೆ.

ಓಟಿಟಿಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್​​ ದೃಶ್ಯಗಳು- ಜನರೂ ರಿಪೋರ್ಟ್​ ಮಾಡಲ್ಲ: ನಟಿ ಸುಹಾಸಿನಿ ಹೇಳಿದ್ದೇನು?

 ಮೂಲತಃ ತಮಿಳಿನವರಾದರೂ ಕನ್ನಡದ್ದೇ ನಟಿಯಾಗಿ ಸುಹಾಸಿನಿ ಗುರುತು ಪಡೆದುಕೊಂಡಿದ್ದಾರೆ. ‘ಬೆಂಕಿಯಲ್ಲಿ ಅರಳಿದ ಗುಲಾಬಿ’, ‘ಬಂಧನ’, ‘ಸುಪ್ರಭಾತ’, ‘ಹಿಮಪಾತ’ ಹೀಗೆ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ಸುಹಾಸಿನಿ ಕನ್ನಡದಲ್ಲಿ ಮಾಡಿದ್ದಾರೆ. ಸುಹಾಸಿನಿ ಹಾಗೂ ವಿಷ್ಣುವರ್ಧನ್ ಜೋಡಿ ಬಹಳ ಜನಪ್ರಿಯವಾಗಿತ್ತು. ಈಗಲೂ ಸಹ ಆಗಾಗ್ಗೆ ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ ಸುಹಾಸಿನಿ. ಸದ್ಯ ಸಿನಿಮಾ ನಿರ್ದೇಶಕ ನಿರ್ಮಾಣದಲ್ಲಿಯೂ ಆಸಕ್ತಿ ಬೆಳೆಸಿಕೊಂಡ ಸುಹಾಸಿನಿ, ಪತಿ ಮಣಿರತ್ನಂ ಅವರ ಜೊತೆ  ಮದ್ರಾಸ್ ಟಾಕೀಸ್ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಇಂತಿಪ್ಪ ಸುಹಾಸಿನಿಯವರ ಆರಂಭದ ಸಿನಿ ಪಯಣದಲ್ಲಿ ಕೆಲವೊಂದು ಕೆಟ್ಟ ಘಟನೆಗಳು ಆಗಿತ್ತಂತೆ. ಅದನ್ನು ಈಗ ಬಹಿರಂಗಪಡಿಸಿದ್ದಾರೆ. 

ತಮಗೆ ಸಿನಿಮಾದಲ್ಲಿ ಛಾನ್ಸ್​ ಸಿಗದಿದ್ದರೂ ಪರವಾಗಿಲ್ಲ. ಆದರೆ ಯಾರ ಮುಲಾಜಿಗೂ ನಟಿ ಜಗ್ಗಲ್ಲ ಎಂದೇ ಹೇಳಲಾಗುತ್ತದೆ. ತಮಗೆ ಸರಿಕಾಣದ್ದನ್ನು ಸ್ಪಷ್ಟವಾಗಿ ಹೇಳುವ, ನಿರಾಕರಿಸುವ ಗುಣವನ್ನು ಆಗಲೇ ತಾವು ಹೊಂದಿರುವುದಾಗಿ ಈಗ ನಟಿ ಕೂಡ ಹೇಳಿದ್ದಾರೆ. ಆ ಕೆಟ್ಟ ಅನುಭವಗಳನ್ನು ಹೇಳಿಕೊಂಡಿದ್ದಾರೆ.  ಆಗಿನ್ನೂ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು ವೃತ್ತಿ ಆರಂಭಿಸಿದ್ದೆಯಷ್ಟೇ. ಸಿನಿಮಾ ಒಂದರ ಚಿತ್ರೀಕರಣದ ಸಂದರ್ಭದಲ್ಲಿ, ನಟನ ತೊಡೆಯ ಮೇಲೆ ಕುಳಿತುಕೊಳ್ಳುವ ದೃಶ್ಯವೊಂದರಲ್ಲಿ ನಟಿಸಬೇಕೆಂದು ನಿರ್ದೇಶಕರು ಹೇಳಿದ್ದರು. ಆದರೆ ನಾನು ಒಪ್ಪಲಿಲ್ಲ. ಅವರು ಎಷ್ಟೇ ಹೇಳಿದರೂ ನಾನು ಅದನ್ನು ಕೇಳಲಿಲ್ಲ. ನನಗೆ ಅದು ಸಾಧ್ಯವಿಲ್ಲ, ಆ  ಸೀನ್ ಬದಲಿಸಿ ಎಂದು ಪಟ್ಟು ಹಿಡಿದಿದ್ದೆ. ಕೊನೆಗೆ ನಿರ್ದೇಶಕರು ನನಗೆ ಮಣಿಯಲೇಬೇಕಾಯಿತು ಎಂದು ನಟಿ ಹೇಳಿದ್ದಾರೆ.

ನಾನು ಮಾಡಿದ್ದು ಸೆಕ್ಸ್​ ಸೀನೆಂದು ಪ್ಲೀಸ್​ ನೋಯಿಸಬೇಡಿ, ಅದು ರೇಪ್​ ಸೀನ್ ಅಷ್ಟೇ​: ನಟಿ ಮೆಹ್ರೀನ್​
 

ಅದೇ ರೀತಿ ನಾಯಕ ಕಚ್ಚಿದ ಐಸ್​ಕ್ರೀಂ ತಿನ್ನುವಂತೆ ಒತ್ತಾಯಿಸಿದ ಘಟನೆಯನ್ನೂ ನಟಿ ಹೇಳಿಕೊಂಡಿದ್ದಾರೆ.  ಚಿತ್ರವೊಂದರ ಶೂಟಿಂಗ್​ ಸಮಯದಲ್ಲಿ ನಾಯಕ ತಿಂದ ಐಸ್​ಕ್ರೀಂ ಅನ್ನು ಹೀರೋಯಿನ್​ ಆಗಿರೋ ನಾನು ತಿನ್ನಬೇಕಿತ್ತು. ಆದರೆ ಅದು ನನಗೆ ಅಸಹ್ಯ ಎನಿಸಿತು. ಹೀಗೆ ಎಂಜಲು ತಿನ್ನುವುದು ನನಗೆ ಅಹಸ್ಯವಾಗಿತ್ತು. ಅದಕ್ಕೆ ತಕರಾರು ತೆಗೆದು ಅದು ಸಾಧ್ಯವೇ ಇಲ್ಲ ಎಂದೆ. ನಿರ್ದೇಶಕರು ಆ ದೃಶ್ಯವನ್ನು ಬದಲಾಯಿಸಿದರು ಎಂದು ಸುಹಾಸಿನಿ ಹೇಳಿದ್ದಾರೆ.   
 

Follow Us:
Download App:
  • android
  • ios