ಅವಾರ್ಡ್ ಮಾಫಿಯಾ ತಿಳಿದು ಶಾಕ್ ಆಯ್ತು; ರಣ್ವೀರ್‌ಗೆ ಪರೋಕ್ಷ ಟಾಂಗ್ ಕೊಟ್ಟ ಅಗ್ನಿಹೋತ್ರಿ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಅವಾರ್ಡ್‌ಗಳ ವಿರುದ್ಧ ಕೆಂಡಕಾರಿದ್ದಾರೆ. ಈ ಬಾರಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ರಣವೀರ್ ಸಿಂಗ್‌ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಆಗಾಗ ಬಾಲಿವುಡ್ ವಿರುದ್ಧ ಸಿಡಿದೇಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಫಿಲ್ಮ್‌ಫೇರ್ ಅವಾರ್ಡ್ ವಿರುದ್ಧ ಕಂಗನಾ ಕೆಂಡಕಾರಿದ್ದರು. ಇದೀಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಅವಾರ್ಡ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಾಲಿವುಡ್ ಅವಾರ್ಡ್ ಮಾಫಿಯಾದ ಬಗ್ಗೆ ತಿಳಿದು ಶಾಕ್ ಆಯಿತು ಎಂದು ಹೇಳಿದ್ದಾರೆ. ಕಂಗನಾ ಬಳಿಕ ಬಾಲಿವುಡ್ ವಿರುದ್ಧ ಆಗಾಗ ಸಿಡಿದೇಳುತ್ತಿರುವ ಅಗ್ನಿಹೋತ್ರಿ ಇದೀಗ ಪ್ರಶಸ್ತಿಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ. ಅಲ್ಲದೇ ಈ ಬಾರಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ರಣವೀರ್ ಸಿಂಗ್‌ಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ರಣವೀರ್ ಸಿಂಗ್ ಹೆಸರು ಹೇಳದೆ ಅಗ್ನಿಹೋತ್ರಿ ಕಲರ್‌ಫುಲ್ ಸ್ಟಾರ್ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಗ್ನಿ ಹೋತ್ರಿ ಹೇಳಿರುವುದು ಪಕ್ಕಾ ರಣವೀರ್ ಸಿಂಗ್‌ಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಸಕ್ಸಸ್ ಬಳಿಕ ನಿರ್ದೇಶಕ ಅಗ್ನಿಹೋತ್ರಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದೀಗ ಬಾಲಿವುಡ್ ಅವಾರ್ಡ್ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಕಲರ್‌ಫುಲ್ ನಟ ಪ್ರೇಕ್ಷಕರಿಂದ ರಿಜೆಕ್ಟ್ ಆಗಿದ್ದರೂ ಸಹ ಅನೇಕ ಅವಾರ್ಡ್‌ಗಳನ್ನು ಗೆದ್ದಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
'ಬಾಲಿವುಡ್ ಅವಾರ್ಡ್ಸ್ ಮಾಫಿಯಾ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದು ನನಗೆ ಆಘಾತವಾಯಿತು. ಉದಾಹರಣೆಗೆ, ಈ ವರ್ಷ ಒಬ್ಬ ಕಲರ್‌ಫುಲ್ ಸ್ಟಾರ್ ಅವರ ಎರಡೂ ಚಿತ್ರಗಳು ಸೋತರೂ ಮತ್ತು ಪ್ರೇಕ್ಷಕರಿಂದ ತಿರಸ್ಕರಿಸಲ್ಪಟ್ಟಿದ್ದರೂ ಸಹ 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಪ್ರಶಸ್ತಿ ಮಾಫಿಯಾ ಎಷ್ಟು ಭ್ರಷ್ಟ ಮತ್ತು ಮಾರಾಟಕ್ಕೆ ಎಂಬುದನ್ನು ಇದು ತೋರಿಸುತ್ತದೆ. ಆದರೆ ಬಾಲಿವುಡ್ ಮೌನವಾಗಿದೆ' ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ದಾಂಪತ್ಯದಲ್ಲಿ ಬಿರುಕು; ವದಂತಿಗೆ ಬ್ರೇಕ್ ಹಾಕಿದ ನಟ ರಣ್ವೀರ್ ಸಿಂಗ್ 'ಕ್ವೀನ್' ಹೇಳಿಕೆ
ವಿವೇಕ್ ಅಗ್ನಿಹೋತ್ರಿ ಈ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ರಣ್ವೀರ್ ಸಿಂಗ್ ಹೆಸರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ರಣ್ವೀರ್ ಸಿಂಗ್ ನಟನೆಯ 83 ಮತ್ತು ಜಯೇಶಭಾಯಿ ಜೋರ್ದಾರ್ ಸಿನಿಮಾ ಎರಡು ಸಹ ಸೋಲು ಕಂಡಿವೆ. ನೆಟ್ಟಿಗರು ಎರಡು ಸಿನಿಮಾಗಳ ಹೆಸರನ್ನು ಕಾಮೆಂಟ್ ಮಾಡಿ ರಣ್ವೀರ್ ಸಿಂಗ್ ಅವರಿಗೆ ಹೇಳುತ್ತಿರುವುದು ಎನ್ನುತ್ತಿದ್ದಾರೆ.
ನನ್ನ ಜೀವನ ಸೆಕ್ಸ್ ಸುತ್ತನೇ ಸುತ್ತುತ್ತಿಲ್ಲ; ಕರಣ್ ಜೋಹರ್ ಶೋ ಬಗ್ಗೆ ಅಗ್ನಿಹೋತ್ರಿ ವ್ಯಂಗ್ಯ
ಇನ್ನು ರಣ್ವೀರ್ ಸಿಂಗ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಸರ್ಕಸ್ ಸಿನಿಮಾ ಮುಗಿಸಿದ್ದಾರೆ. ಇನ್ನು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಅವರ ಕೈಯಲ್ಲಿದೆ. ಈ ಸಿನಿಮಾದಲ್ಲಿ ಅಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಅಲಿಯಾ ಗರ್ಭಿಣಿ ಆಗಿರುವುದರಿಂದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಸಿನಿಮಾಗೆ ಕರಣ್ ಜೋಹರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.