ದಾಂಪತ್ಯದಲ್ಲಿ ಬಿರುಕು; ವದಂತಿಗೆ ಬ್ರೇಕ್ ಹಾಕಿದ ನಟ ರಣ್ವೀರ್ ಸಿಂಗ್ 'ಕ್ವೀನ್' ಹೇಳಿಕೆ

ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರಣ್ವೀರ್ ಸಿಂಗ್ ನೀಡಿರುವ ಪ್ರತಿಕ್ರಿಯೆ ವದಂತಿಗೆ ಬ್ರೇಕ್ ಹಾಕಿದೆ. 

Ranveer Singh shuts down separation rumours with Deepika Padukone he calls her my queen sgk

ಕಳೆದ ಕೆಲವುದಿನಗಳಿಂದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ದೀಪಿಕಾ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರು. ಇದರ ಬೆನ್ನಲ್ಲೇ ದೀಪಿಕಾ ಮತ್ತು ರಣ್ವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರ ವೈರಲ್ ಆಗಿತ್ತು. ಸ್ಟಾರ್ ಜೋಡಿಯ ಬಗ್ಗೆ ಇಂಥ ಸುದ್ದಿ ಕೇಳಿ ಅಭಿಮಾನಿಗಳು ಸಹ ಶಾಕ್ ಆಗಿದ್ದರು. ಅನ್ಯೋನ್ಯವಾಗಿದ್ದ ಈ ಜೋಡಿ ಬೇರೆ ಬೇರೆ ಆಗುತ್ತಿದ್ದಾರಾ ಎನ್ನುವ ಸುದ್ದಿ ಅಭಿಮಾನಿಗಳಿಗೆ ನಂಬಲು ಸಾಧ್ಯವಾಗಿರಲಿಲ್ಲ. ದೀಪಿಕಾ ಮತ್ತು ರಣ್ವೀರ್ ಇಬ್ಬರು ದೂರ ದೂರ ಆಗುತ್ತಿದ್ದಾರೆ ಎನ್ನುವ ಸುದ್ದಿಗೆ ಪುಷ್ಠಿ ನೀಡುವಂತೆ ಇತ್ತೀಚಿಗೆ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ, ಸಾಮಾಜಿಕ ಜಾಲತಾಣದಲ್ಲೂ ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡಿಲ್ಲ ಹಾಗಾಗಿ ಈ ಸುದ್ದಿ ನಿಜ ಇರಬಹುದು ಅಂತನೆ ಬಹುತೇಕರು ಅಂದುಕೊಂಡಿದ್ದರು. 

ಇದೀಗ ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ ರಣ್ವೀರ್ ಸಿಂಗ್. ಹೌದು ನಟ ರಣ್ವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ದೀಪಿಕಾರನ್ನು ನನ್ನ ರಾಣಿ ಎಂದು ಕರೆಯುವ ಮೂಲಕ ಎಲ್ಲಾ ಗಾಳಿಸುದ್ದಿಗೂ ಬ್ರೇಕ್ ಹಾಕಿದರು. ದೀಪಿಕಾ ಇತ್ತೀಚಿಗಷ್ಟೆ ಪ್ರಸಿದ್ಧ ಅಂತಾರಾಷ್ಟ್ರೀಯ ಜ್ಯುವೆಲ್ಲರಿ ಬ್ರಾಂಡ್‌ಗೆ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ದೀಪಿಕಾ ಶೇರ್ ಮಾಡಿದ್ದ ಫೋಟೋಗೆ ರಣ್ವೀರ್ ಸಿಂಗ್ ಕಾಮೆಂಟ್ ಮಾಡಿ 'ಮೈ ಕ್ವೀನ್...'ಎಂದು ಹೇಳಿದರು. ಈ ಮೂಲಕ ರಣ್ವೀರ್ ತಮ್ಮ ನಡುವೆ ಎಲ್ಲವೂ ಸರಿ ಇದೆ ಎನ್ನುವ ಸಂದೇಶ ನೀಡಿದ್ದಾರೆ. 

ದೀಪಿಕಾ ಮತ್ತು ರಣ್ವೀರ್ ಸಿಂಗ್ ಇಬ್ಬರು 2012ರಿಂದ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಸದ್ಯ ಇಬ್ಬರ ಸಂಬಂಧಕ್ಕೆ 10 ವರ್ಷ. ಈ ಬಗ್ಗೆ ರಣ್ವೀರ್ ಸಿಂಗ್ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿ,  'ನಾನು ಮತ್ತು ದೀಪಿಕಾ 10 ವರ್ಷಗಳಿಂದ  ಒಟ್ಟಿಗೆ ಇದ್ದೇವೆ. ನಮ್ಮಿಬ್ಬರ ಸಂಬಂಧ ಮತ್ತಷ್ಟು ಆಳವಾಗುತ್ತಿದೆ. ದೀಪಿಕಾ ಬಗ್ಗೆ ನನಗೆ ಸಂತೋಷವಾಗಿದೆ  ಆಕೆಯ ಬಗ್ಗೆ ನನಗೆ ತುಂಬಾ ಗೌರವವಿದೆ' ಎಂದು ರಣವೀರ್‌ ಹೇಳಿದ್ದರು. 

ಗಂಡನ ಬಿಟ್ಟು ತಾಯಿ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ದೀಪಿಕಾ; ಊಹಾಪೋಹಕ್ಕೆ ಮತ್ತೆ ರೆಕ್ಕೆ

2012ರಲ್ಲಿ ದೀಪಿಕಾ ಮತ್ತು ರಣ್ವೀರ್ ಸಿಂಗ್ ಇಬ್ಬರೂ ಡೇಟಿಂಗ್ ಪ್ರಾರಂಭ ಮಾಡಿದರು. ನಾಲ್ಕು ವರ್ಷಗಳ ಪ್ರೀತಿಯ ಬಳಿಕ ಇಬ್ಬರೂ 2018ರಲ್ಲಿ ಹಸೆಮಣೆ ಏರಿದರು. ಅದ್ದೂರಿಯಾಗಿ ನಡೆದ ದೀಪಿಕಾ ಮತ್ತು ರಣ್ವೀರ್ ಸಿಂಗ್ ಮದುವೆ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸ್ಟಾರ್ಸ್ ಭಾಗಿಯಾಗಿದ್ದರು. ದೀಪಿಕಾ ಮತ್ತು ರಣ್ವೀರ್ ಸಿಂಗ್ ಮದುವೆ ಫೋಟೋಗಳು ಈಗಲೂ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

Deepika Padukone ರಣವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು? ಸತ್ಯ ಬಿಚ್ಚಿಟ ನಟ

ಇನ್ನು ದೀಪಿಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಸರ್ಕಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಶಾರುಖ್ ಖಾನ್ ಜೊತೆ ಪಠಾಣ್ ಸಿನಿಮಾದ ಚಿತ್ರೀಕರಣ ಸಹ ಮುಗಿಸಿದ್ದಾರೆ. ಸದ್ಯ ಪ್ರಬಾಸ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ರಣ್ವೀರ್ ಸಿಂಗ್ ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

Latest Videos
Follow Us:
Download App:
  • android
  • ios