ನನ್ನ ಜೀವನ ಸೆಕ್ಸ್ ಸುತ್ತನೇ ಸುತ್ತುತ್ತಿಲ್ಲ; ಕರಣ್ ಜೋಹರ್ ಶೋ ಬಗ್ಗೆ ಅಗ್ನಿಹೋತ್ರಿ ವ್ಯಂಗ್ಯ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಿಂದಿಯ ಜನಪ್ರಿಯ ಶೋ ಕಾಫಿ ವಿತ್ ಕರಣ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಕರಣ್ ಶೋನಲ್ಲಿ ಭಾಗಿಯಾಗಲು ನನ್ನ ಲೈಫ್ ಏನು ಸೆಕ್ಸ್ ಸುತ್ತನೇ ಸುತ್ತುತ್ತಿಲ್ಲ ಎಂದು ಹೇಳಿದ್ದಾರೆ. 

Vivek Agnihotri about Koffee with Karan he says My life does not revolve around sex sgk

ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಸೂಪರ್ ಸಕ್ಸಸ್ ಬಳಿಕ ವಿವೇಕ್ ಅಗ್ನಿಹೋತ್ರಿ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಆಸ್ಕರ್ ಎಂಟ್ರಿ ಬಗ್ಗೆ ಪ್ರತಿಕ್ರಿಯೆ ನೀಡಿ ಸದ್ದು ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಇದೀಗ ಕರಣ್ ಜೋಹರ್ ಚಾಟ್ ಶೋ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿ  ಕಾಫಿ ವಿತ್ ಕರಣ್ ಶೋ ಬಗ್ಗೆ ಮಾತನಾಡಿದ್ದಾರೆ. 

ಕರಣ್ ಜೋಹರ್ ಶೋ ಬಗ್ಗೆ ವ್ಯಂಗ್ಯವಾಡಿರುವ ಅಗ್ನಿಹೋತ್ರಿ ತನ್ನ ಜೀವನ ಕೇವಲ ಸೆಕ್ಸ್ ಬಗ್ಗೆ ಮಾತ್ರ ಇಲ್ಲ ಎಂದಿದ್ದಾರೆ. 'ನಾನು ಖಂಡಿತ ಅಂತಹ ಶೋಗೆ ಹೋಗಲ್ಲ. ಏಕೆಂದರೆ ನಾನೇನು ಕೊಡುಗೆ ನೀಡಿಲ್ಲ. ಕೃತಕ ಶೋ ಎಂದಿರುವ ಅಗ್ನಿಹೋತ್ರಿ, ನನ್ನ ಜೀವನ ಕೇವಲ ಸೆಕ್ಸ್ ಬಗ್ಗೆಯೇ ಸುತ್ತುವುದಿಲ್ಲ. ಯಾರು ಯಾರ ಜೊತೆ ಸುತ್ತಾಡುತ್ತಿದ್ದಾರೆ, ಯಾರು ಯಾರ ಜೊತೆ ಮಲಗುತ್ತಾರೆ ಎನ್ನುವುದು ನನ್ನ ಜೀವನವಲ್ಲ. ಸೆಕ್ಸ್ ನನ್ನ ಜೀವನದ ಮೊದಲ ಆಧ್ಯತೆ ಅಲ್ಲ' ಎಂದು ಹೇಳಿದರು. 

ನನ್ನನ್ನ ಒಂಟಿಯಾಗಿ ಬಿಟ್ಬಿಡಿ, ಆ ರೇಸ್‌ನಲ್ಲಿ ನಾನಿಲ್ಲ; ಬ್ರಹ್ಮಾಸ್ತ್ರ ಕಲೆಕ್ಷನ್ ವಿರುದ್ಧ ಅಗ್ನಿಹೋತ್ರಿ ಕಿಡಿ

ಬ್ರಹ್ಮಾಸ್ತ್ರ ಕಲೆಕ್ಷನ್ ವಿರುದ್ಧ ಅಗ್ನಿಹೋತ್ರಿ ಕಿಡಿ

ಇತ್ತೀಚಿಗಷ್ಟೆ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಅನೇಕರು ಬ್ರಹ್ಮಾಸ್ತ್ರ ಕಲೆಕ್ಷನ್ ಫೇಕ್ ಎಂದು ಆರೋಪ ಮಾಡಿದ್ದರು. ಬ್ರಹ್ಮಾಸ್ತ್ರ ಸಿನಿಮಾ ಅಗ್ನಿಹೋತ್ರಿ ಅವರ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡಿದೆ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿ ಅದು ಹೇಗೆ ಸಾಧ್ಯ ಎಂದಿದ್ದರು. 'ಹಾಹಾಹಾ..ಅವರು ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹೇಗೆ ಬೀಟ್ ಮಾಡಿದರು ನನಗೆ ಗೊತ್ತಿಲ್ಲ. ದೊಣ್ಣೆ, ಹಾಕಿ ಸ್ಟಿಕ್, ಎಕೆ47 ಅಥವಾ ಹಣನೀಡಿ, ಪ್ರಭಾವಿಗಳಿಂದ ಸೋಲಿಸಿದ್ದಾರಾ? ನನಗೆ ಗೊತ್ತಿಲ್ಲ. ಬಾಲಿವುಡ್ ಸಿನಿಮಾಗಳು ಒಂದಕ್ಕೊಂದು ಪೈಪೋಟಿ ನೀಡಲಿ. ನನ್ನನ್ನು ಒಂಟಿಯಾಗಿ ಬಿಡಿ. ನಾನು ಆ ಸೈಲೆಂಟ್ ರೇಸ್ ನಲ್ಲಿ ಇಲ್ಲ. ಧನ್ಯವಾದಗಳು. ಆದರೆ ಬಾಲಿವುಡ್‌ಗೆ ಅಲ್ಲ' ಎಂದು ಹೇಳಿದರು.  

ನಾನು ಗೋಮಾಂಸ ತಿಂತೀನಿ; ರಣಬೀರ್ ಬಳಿಕ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಹೇಳಿಕೆ ವೈರಲ್

ವಿವೇಕ್ ಅಗ್ನಿಹೋತ್ರಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕಾಶ್ಮೀರ್ ಫೈಲ್ಸ್ ಸೂಪರ್ ಸಕ್ಸಸ್ ಬಳಿಕ ಮತ್ತೊಂದು ನಿರೀಕ್ಷೆಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸದ್ಯ ದೆಹಲಿ ಫೈಲ್ಸ್ ಬಗ್ಗೆ ಸಿನಿಮಾ ಮಾಡುತ್ತಿರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಸದ್ಯ ಚಿತ್ರೀಕಣ ಸಹ ನಡೆಯುತ್ತಿದೆ. ಕಾಶ್ಮೀರ್ ಫೈಲ್ಸ್ ಹಾಗೆಯೇ ಸದ್ದು ಮಾಡಲಿದೆಯಾ ಎಂದು ಕಾದುನೋಡಬೇಕಿದೆ. 

Latest Videos
Follow Us:
Download App:
  • android
  • ios