Asianet Suvarna News Asianet Suvarna News

ಮಲೈಕಾ ಅರೋರಾ ಕಂಡು ಹುಚ್ಚೆದ್ದ ದುಬೈ ಫ್ಯಾನ್ಸ್​: ಬಾಡಿಗಾರ್ಡ್​ಗಳೂ ಸುಸ್ತು!

ನಟಿ ಮಲೈಕಾ ಅರೋರಾ ದುಬೈಗೆ ಹೋದ ಸಂದರ್ಭದಲ್ಲಿ ಅವರ ಫ್ಯಾನ್ಸ್​ ಮುತ್ತಿಗೆ ಹಾಕಿ ಚಿತ್ರಹಿಂಸೆ ಕೊಟ್ಟಿರುವ ವಿಡಿಯೋ ವೈರಲ್​ ಆಗಿದೆ. 
 

Viral Video of Malaika Arora mobbed by fans in Dubai
Author
First Published Apr 27, 2023, 5:11 PM IST

ಬಾಲಿವುಡ್‌ನ ಜನಪ್ರಿಯ ನಟಿ ಮಲೈಕಾ ಅರೋರಾ (Malaika Arora ) ಈ ದಿನಗಳಲ್ಲಿ ದುಬೈನಲ್ಲಿದ್ದಾರೆ. ಇತ್ತೀಚೆಗೆ ಅವರು ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರು ತುಂಬಾ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದ ನಂತರ, ಮಲೈಕಾ ಕೂಡ ತನ್ನ ಅಭಿಮಾನಿಗಳನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು, ಆದರೆ ಆ ಸಮಯದಲ್ಲಿ ಮಲೈಕಾ ಕೋಪಗೊಂಡ ಘಟನೆಯೊಂದು ನಡೆಯಿತು. ಇದರ ವಿಡಿಯೋ ಈಗ ವೈರಲ್​ ಆಗಿದೆ.  ಈ ವೈರಲ್​ ವಿಡಿಯೋದಲ್ಲಿ ಅಭಿಮಾನಿಗಳು ಮಲೈಕಾ ಅವರನ್ನು ಸುತ್ತುವರೆದಿರುವುದನ್ನು ನೋಡಬಹುದು.  ವಾಸ್ತವವಾಗಿ, ಮಲೈಕಾವನ್ನು ನೋಡಿದ ನಂತರ, ಅವರ ಅಭಿಮಾನಿಗಳು ಹುಚ್ಚರಾದರು ಮತ್ತು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಉತ್ಸುಕರಾಗಿದ್ದರು. ಇದರಿಂದಾಗಿ ಗಲಾಟೆ ಆರಂಭವಾಯಿತು. ಅಷ್ಟೊಂದು ಜನಜಂಗುಳಿಯನ್ನು ಕಂಡು ಮಲೈಕಾ ಕೂಡ ಗಲಿಬಿಲಿಗೊಂಡು ಅಭಿಮಾನಿಯೊಬ್ಬರನ್ನು (Fan) ನಿಲ್ಲಿಸುವ ಭರದಲ್ಲಿ ‘ಟೇಕ್ ಇಟ್ ಈಸಿ, ಟೇಕ್ ಇಟ್ ಈಸಿ ಎನ್ನುತ್ತಲೇ ಇದ್ದರು. ದಯವಿಟ್ಟು ತಳ್ಳಬೇಡಿ ಎನ್ನುತ್ತಿದ್ದರು.

ಆದರೆ ಅಭಿಮಾನಿಗಳು ಕೇಳಬೇಕಲ್ಲ.  ಈ ಸಮಯದಲ್ಲಿ ಮಲೈಕಾ ಅವರ ಅನೇಕ ಭದ್ರತಾ ಸಿಬ್ಬಂದಿಗಳು ಅವಳನ್ನು ರಕ್ಷಿಸುವಲ್ಲಿ ನಿರತರಾಗಿದ್ದರು. ಇಷ್ಟಾದರೂ ಭದ್ರತಾ ಸಿಬ್ಬಂದಿಯೂ (Body Guard) ಒಂದು ಹಂತದಲ್ಲಿ ಸುಸ್ತಾಗಿ ಹೋದರು. ಇಷ್ಟಾದರೂ ಅನೇಕ ಹೊತ್ತು ಮಲೈಕಾ ಸಂಯಮ ಕಳೆದುಕೊಳ್ಳದೇ ಫ್ಯಾನ್ಸ್​ಗೆ ನಗುಮೊಗದಿಂದ ಸೆಲ್ಫಿಗೆ ಪೋಸ್​ ಕೊಡುತ್ತಲೇ ಇದ್ದರು. ಇಷ್ಟಾಗುತ್ತಿದ್ದಂತೆಯೇ ಅಭಿಮಾನಿಗಳ ಹುಚ್ಚು ಹೆಚ್ಚಾಗಿ ಗುಂಪು ಗುಂಪಾಗಿ ಕೂಡಿದರು. ಇದರಿಂದ ಒಂದು ಹಂತದಲ್ಲಿ ಬಾಡಿಗಾರ್ಡ್​ಗಳೂ ಸುಸ್ತಾದರೆ, ಮಲೈಕಾ ಕೋಪಗೊಂಡರು.

ಪ್ರೀ ಹನಿಮೂನ್​ ಬಳಿಕ ಮದುಮಗಳಾಗಲು ರೆಡಿಯಾದ ನಟಿ ಮಲೈಕಾ!
 
ಹಿಂದೆ ಕೂಡ ಅನೇಕ ನಟರಿಗೆ ಇದೇ ರೀತಿಯಾಗಿದ್ದು ಇದೆ. ಅವರ ಬಾಡಿಗಾರ್ಡ್​ಗಳು ಜನರನ್ನು ತಳ್ಳಿದಾಗ ಅದು ದೊಡ್ಡ ಸುದ್ದಿಯಾಗಿ ನಟರು ಮತ್ತು ಬಾಡಿಗಾರ್ಡ್​ಗಳಿಗೆ ಹಿಡಿಶಾಪ ಹಾಕುವುದು ಇದೆ. ಆದರೆ ಮಲೈಕಾ ಹಲವು ಹೊತ್ತು ಸಂಯಮದಿಂದ ವರ್ತಿಸಿರುವುದನ್ನು ನೋಡಿದ ನೆಟ್ಟಿಗರು ಈ ಘಟನೆಯಲ್ಲಿ ಮಾತ್ರ 'ಜನರು ನಟರಿಗೆ (Actors) ಹೀಗೆ ಮಾಡಬಾರದು. ಅವರು ಕೂಡ ಮನುಷ್ಯರೇ ಎಂದು ಬರೆದಿದ್ದಾರೆ. ಈ ರೀತಿ ಫ್ಯಾನ್ಸ್​  ತಳ್ಳಾಟಗಳನ್ನು ಮಾಡಬಾರದು, ಇದು ಸರಿಯಾದ ಮಾರ್ಗವಲ್ಲ' ಎಂದು ಹಲವರು ಹೇಳಿದ್ದಾರೆ.  

ಹಾಗೆ ನೋಡಿದರೆ, ಸಿನಿ ತಾರೆಯರು ಎಂದರೆ ಅವರಿಗೆ ರಕ್ಷಣೆ ಸದಾ ಅಗತ್ಯವಿರುತ್ತದೆ. ರಾಜಕಾರಣಿಗಳಂತೆಯೇ ಪ್ರಸಿದ್ಧ ನಟ ನಟಿಯರು ಬಾಡಿಗಾರ್ಡ್​ಗಳನ್ನು (Body Guard) ನೇಮಕ ಮಾಡಿಕೊಳ್ಳುತ್ತಾರೆ. ರಾಜಕಾರಣಿಗಳಿಗೆ ಜೀವ ಭಯವಿದ್ದರೆ, ಸಿನಿಮಾ ನಟ -ನಟಿಯರು ಹೋದ ಕಡೆಗಳಲ್ಲಿ ಅಭಿಮಾನಿಗಳು ಮುತ್ತಿಕೊಂಡು ತೊಂದರೆ ಕೊಡುವ ಸಾಧ್ಯತೆ ಇರುವುದರಿಂದ ತಮ್ಮ ರಕ್ಷಣೆಗೆ ಹಲವು ತಾರೆಯರು ಬಾಡಿಗಾರ್ಡ್​ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಈ ಅಭಿಮಾನದ ಕಾರಣದಿಂದಾಗಿಯೇ ಖ್ಯಾತಿ ಹೆಚ್ಚಿದಂತೆ ಚಿತ್ರ ನಟರಿಗೆ ರಕ್ಷಣೆಯ ಅಗತ್ಯ ಕಂಡುಬರುತ್ತದೆ. ಅದೇ ಇನ್ನೊಂದೆಡೆ ಅಭಿಮಾನಿಗಳೂ ಅತಿರೇಕದಿಂದ ವರ್ತಿಸಿ ನಟ ನಟಿಯರನ್ನು ಕಂಡಾಗ ಹುಚ್ಚರಂತಾಗುತ್ತಾರೆ. ಅವರಿಗೂ ಖಾಸಗಿ ಲೈಫ್​ ಇದೆ ಎನ್ನುವುದನ್ನು ಮರೆತು ನೂಕು ನುಗ್ಗಾಟ ಮಾಡಿ ಹಿಂಸೆ ಕೊಡುತ್ತಾರೆ. ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದು ಹಿಂಸೆ ನೀಡುವ ವಿಡಿಯೊಗಳು ಸಾಕಷ್ಟು ವೈರಲ್​ ಆಗಿವೆ. 

Arjun Kapoor, Malaika Arora: ಮದುವೆ ಹಿಂಟ್​ ಕೊಡುತ್ತಲೇ ಅಜ್ಞಾತ ಸ್ಥಳಕ್ಕೆ ಎಸ್ಕೇಪ್​!

ಇನ್ನು ಮಲೈಕಾ ಅರೋರಾ ಅವರ ಬಗ್ಗೆ ಹೇಳುವುದಾದರೆ, ಅವರು  ಇತ್ತೀಚೆಗೆ ತಮ್ಮ OTT ಚೊಚ್ಚಲ ರಿಯಾಲಿಟಿ ಶೋ 'ಮೂವಿಂಗ್ ಇನ್ ವಿತ್ ಮಲೈಕಾ'ದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಗುರು ರಾಂಧವಾ ಅವರ ಸಂಗೀತ ವೀಡಿಯೊ 'ತೇರಾ ಕಿ ಖಯಾಲ್' ನಲ್ಲಿ ಕಾಣಿಸಿಕೊಂಡರು. ಈ ವೀಡಿಯೊದಲ್ಲಿ ಮಲೈಕಾ ಅವರ ಮನಮೋಹಕ ಅವತಾರವನ್ನು ಅವರ ಅಭಿಮಾನಿಗಳು ಚೆನ್ನಾಗಿ ಸ್ವೀಕರಿಸಿದ್ದಾರೆ.

Follow Us:
Download App:
  • android
  • ios