ಪ್ರೀ ಹನಿಮೂನ್ ಬಳಿಕ ಮದುಮಗಳಾಗಲು ರೆಡಿಯಾದ ನಟಿ ಮಲೈಕಾ!
ಹಲವು ವರ್ಷಗಳಿಂದ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿರೋ ನಟಿ ಮಲೈಕಾ ಅರೋರಾ, ಕೊನೆಗೂ ಮದುವೆಯಾಗುವ ಹಿಂಟ್ ನೀಡಿದ್ದಾರೆ. ಅವು ಹೇಳಿರುವುದೇನು?
ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಫೇರ್ ಎಲ್ಲರಿಗೂ ತಿಳಿದದ್ದೇ. ಮಲೈಕಾಗೆ 49 ವರ್ಷ ವಯಸ್ಸಾಗಿದ್ದರೆ, ಅರ್ಜುನ್ ಅವರಿಗಿಂತ 12 ವರ್ಷ ಚಿಕ್ಕವರು. ವಯಸ್ಸು 49 ಆದರೂ ಫಿಟ್ನೆಸ್ (Fitness) ಕಾಪಾಡಿಕೊಂಡಿರುವ ನಟಿ ಮಲೈಕಾ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ. ರಿಯಾಲಿಟಿ ಷೋಗಳಿಗೆ ಜಡ್ಜ್ ಆಗಿ ಬರುವುದರಿಂದ ಹಿಡಿದು ಹೊರಗಡೆ ಎಲ್ಲಿಯೇ ಹೋಗುವುದಿದ್ದರೂ ಅರ್ದಂಬರ್ಧ ಡ್ರೆಸ್ ಧರಿಸುತ್ತಾರೆ. ಇತರ ಯುವ ನಟಿಯರ ಜೊತೆ ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಾ ತಿರುಗಾಡುವುದು ಇವರಿಗೆ ತುಂಬಾ ಇಷ್ಟ. ಇದಕ್ಕಾಗಿ ಸಾಕಷ್ಟು ಬಾರಿ ಟ್ರೋಲ್ಗೆ ಒಳಗಾಗಿದ್ದರೂ, ಅದರಿಂದಲೇ ಇನ್ನಷ್ಟು ಫೇಮಸ್ ಆಗುತ್ತಿರುವವರು ನಟಿ ಮಲೈಕಾ. ಅರ್ಬಾಜ್ ಖಾನ್ ಅವರಿಗೆ ಡಿವೋರ್ಸ್ ಕೊಟ್ಟು ನಟ ಅರ್ಜುನ್ ಕಪೂರ್ ಜೊತೆ ಬಹಳ ವರ್ಷಗಳಿಂದ ಡೇಟಿಂಗ್ನಲ್ಲಿದ್ದಾರೆ ಮಲೈಕಾ (Malaika Arora). ಇವರಿಬ್ಬರ ಡೇಟಿಂಗ್ ವಿಷಯ ಬಿಗ್-ಟೌನ್ನಲ್ಲಿ ಬಹಳ ಹಳತಾಗಿದ್ದಾಗಿದೆ. ಮಾಜಿ ಪತಿಯ ಜೊತೆ ಮಧುರ ಸ್ನೇಹವನ್ನು ಇಟ್ಟುಕೊಂಡು, ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಬಹಳ ವರ್ಷಗಳಿಂದ ಡೇಟಿಂಗ್ನಲ್ಲಿರುವ ನಟಿ ಮಲೈಕಾ ತಮ್ಮಿಬ್ಬರ ಸಂಬಂಧದ ಕುರಿತು ಕೆಲ ದಿನಗಳ ಹಿಂದೆ ಮುಕ್ತವಾಗಿ ಮಾತನಾಡಿದ್ದರು. ನಾವು ಮದುವೆಯಾಗದಿದ್ದರೇನು, ಪ್ರೀ ಹನಿಮೂನ್ ಹಂತವನ್ನು ಅನಭವಿಸುತ್ತಿದ್ದೇವೆ ಎಂದಿದ್ದರು. ಅರ್ಜುನ್ ಕಪೂರ್ ಜೊತೆ ಮದುವೆ ಆಗುವುದಿಲ್ಲವೆ ಎಂದು ಕೇಳಿದಾಗ, ಮದುವೆ ಯಾಕೆ? ಪ್ರೀ ಹನಿಮೂನ್ ಆನಂದ ಅನುಭವಿಸುತ್ತಿದ್ದೇವೆ. ಮದುವೆ ಎನ್ನುವುದು ಇಬ್ಬರ ನಡುವೆ ಚರ್ಚೆಯಾಗುವ ವಿಷಯ. ನಮಗೆ ಅನಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ, ಆದರೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದಿದ್ದರು.
ವಯಸ್ಸಾದರೂ ದೇಹವನ್ನು ಫಿಟ್ ಆಗಿಟ್ಟುಕೊಂಡು ಯುವತಿಯಂತೆಯೇ ಮಿಂಚುತ್ತಿದ್ದಾರೆ ಮಪಲೈಕಾ. ಸಿನಿ ತಾರೆಯರು ಸದಾ ವ್ಯಾಯಾಮ, ಯೋಗ, ಡಯೆಟ್ (Diet) ಎನ್ನುತ್ತಾ ತಮ್ಮ ದೇಹವನ್ನು ಸುಂದರವಾಗಿಟ್ಟುಕೊಳ್ಳುವುದು ಹೊಸ ವಿಷಯವಲ್ಲ. ಅದರಂತೆಯೇ ಮಲೈಕಾ ಕೂಡ ದೇಹಕ್ಕೆ ಅಗತ್ಯವಾಗಿ ಬೇಕಾದ ಯೋಗ, ವ್ಯಾಯಾಮ ಮಾಡುತ್ತಾ ಶರೀರವನ್ನು ಫಿಟ್ ಆಗಿ ಇರಿಸಿಕೊಕೊಳ್ಳುವ ನಟಿಯರು ಕೆಲವರಿದ್ದಾರೆ. ಅವರ ಪೈಕಿ ಬಾಲಿವುಡ್ ನಟಿ ಮಲೈಕಾ ಕೂಡ ಫಿಟ್ ಆಗಿದ್ದಾರೆ. ಡಯೆಟ್ ಆಹಾರದ ಜೊತೆ ನಿಯಮಿತ ವ್ಯಾಯಾಮ ಮತ್ತು ಯೋಗ (Yoga) ಮಾಡುವ ಮೂಲಕ ಮಲೈಕಾ ಅಷ್ಟೊಂದು ವಯಸ್ಸಾದಂತೆ ಕಾಣುತ್ತಿಲ್ಲ. ಇದೀಗ ಅರ್ಧ ಸೆಂಚುರಿ ಹತ್ತಿರ ವಯಸ್ಸಾಗಿದ್ದರೂ ಇದೇ ಕಾರಣಕ್ಕೆ ಇದೀಗ ಮದುಮಗಳಾಗಲು ಈಕೆ ರೆಡಿಯಾಗಿದ್ದಾರೆ.
Arjun Kapoor ಜತೆಗಿನ ಪ್ರೀ ಹನಿಮೂನ್ ಅನುಭವ ಹಂಚಿಕೊಂಡ ನಟಿ ಮಲೈಕಾ!
ಹಲವರು ಅರ್ಜುನ್ ಕಪೂರ್ ಜೊತೆ ಇವರ ಮದುವೆಯಾಗಿದ್ದಾರೆ (Marraige) ಎಂದೇ ಅಂದುಕೊಂಡಿದ್ದಾರೆ. ಆದರೆ ಅಸಲಿಗೆ ಇವರಿನ್ನೂ ಮದುವೆಯಾಗಲಿಲ್ಲ. ಬದಲಿಗೆ ಡೇಟಿಂಗ್ನಲ್ಲಿ ಇದ್ದಾರಷ್ಟೇ. ಈ ನಡುವೆ ಮಲೈಕಾ ಗರ್ಭಿಣಿ ಎನ್ನುವ ಸುದ್ದಿ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಆದರೆ ಅದು ಸುಳ್ಳು ಎನ್ನುವುದು ಸಾಬೀತಾಗಿದೆ. ಅದೇನೆ ಇದ್ದರೂ ಇದೀಗ ಮಲೈಕಾ ಸಂದರ್ಶನವೊಂದರಲ್ಲಿ ಅರ್ಜುನ್ ಕಪೂರ್ ಅವರನ್ನು ಮದುವೆಯಾಗಲು ರೆಡಿ ಎಂದು ಹೇಳಿದ್ದಾರೆ. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದೆ. ಆದರೆ ಇದು ನಮ್ಮ ನಡುವೆ ಎಂದಿಗೂ ಸಮಸ್ಯೆಯಾಗಿಲ್ಲ. ಅರ್ಜುನ್ ಕಪೂರ್ ಬಹಳ ವಿವೇಚನೆ ಹಾಗೂ ಕಾಳಜಿಯುಳ್ಳ ವ್ಯಕ್ತಿ. ನಾನು ಅವನ ಗುಣಗಳನ್ನು ಹೆಚ್ಚು ಮೆಚ್ಚುತ್ತೇನೆ ಎಂದು ಮಲಿಕಾ ಅರೋರಾ ಬ್ರೈಡ್ಸ್ ಟುಡೇಗೆ ತಿಳಿಸಿದ್ದಾರೆ. ಅರ್ಜುನ್ ಜೊತೆ ನಾನು ಹೊಂದಿರುವ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಾನು ಇಷ್ಟಪಡುತ್ತೇನೆ. ಇಬ್ಬರೂ ಗೃಹಸ್ಥಾಶ್ರಮಕ್ಕೆ ಕಾಲಿಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
ಅಂದಹಾಗೆ ಮಲೈಕಾ 19 ವರ್ಷಗಳ ದಾಂಪತ್ಯದ ನಂತರ 2017ರಲ್ಲಿ ಅರ್ಬಾಜ್ ಖಾನ್ಗೆ (Arbaz Khan) ವಿಚ್ಛೇದನ ನೀಡಿದ್ದರು. ಆ ಬಳಿಕ 12 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಜೊತೆ ಸಂಬಂಧ ಹೊಂದಿದ್ದರು. ಇದರ ಹೊರತಾಗಿಯೂ ಮಾಜಿ ಪತಿಯ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ತಮ್ಮ ಮಗನ ಸಲುವಾಗಿ ಇಬ್ಬರೂ ಒಳ್ಳೆಯ ಸಂಬಂಧದಲ್ಲಿ ಇದ್ದುದಾಗಿ ಹೇಳಿಕೊಂಡಿದ್ದ ಮಲೈಕಾ, ಮಗನನ್ನು ಏರ್ಪೋರ್ಟ್ಗೆ ಕಳಿಸಿ ಬರುವಾಗ ಮಾಜಿ ಪತಿಯನ್ನು ತಬ್ಬಿಕೊಂಡು ಕಿಸ್ ಕೊಟ್ಟಿದ್ದ ದೃಶ್ಯ ಕಳೆದ ತಿಂಗಳು ಸಕತ್ ಸೌಂಡ್ ಮಾಡಿತ್ತು. ಇದೀಗ ಬಹು ವರ್ಷಗಳ ಗೆಳೆಯ ಅರ್ಜುನ್ ಕಪೂರ್ಗೆ ಪತ್ನಿಯಾಗಲು ರೆಡಿಯಾಗಿದ್ದಾರೆ.
ದಿವಾ ಯೋಗದ ಮಹತ್ವ ತಿಳಿಸಿದ ಮಲೈಕಾ, ನಗ್ನ ಯೋಗ ಬೆಸ್ಟ್ ಅನ್ನೋದಾ ನೆಟ್ಟಿಗರು?