ಆಮೀರ್ ಖಾನ್ ಸಿನಿಮಾಗೆ ಬೆಂಬಲ; ಚಿರಂಜೀವಿ ವಿರುದ್ಧ ನಟಿ ವಿಜಯಶಾಂತಿ ಕಿಡಿ

ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ವಿಜಯಶಾಂತಿ, ಆಮೀರ್ ಖಾನ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯಶಾಂತಿ 'ಅಮೀರ್ ಖಾನ್ ಅವರು 2015 ರಲ್ಲಿ ದೇಶವಿರೋಧಿ ಹೇಳಿಕೆಗಳ ಫಲಿತಾಂಶವನ್ನು ಪ್ರಸ್ತುತ ವೀಕ್ಷಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.ಅಲ್ಲದೆ ತೆಲುಗಿನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಖ್ಯಾತ ನಟ ಚಿರಂಜೀವಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ. 

Vijayashanthi Indirectly Hits Chiranjeevi for supporting aamir Khan Laal Singh Chadha sgk

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸದ್ಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಆಮೀರ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಇದೇ ತಿಂಗಳು ರಿಲೀಸ್ ಆಗುತ್ತಿದೆ.ಆಮೀರ್ ಖಾನ್ ಸದ್ಯ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಆಮೀರ್ ಖಾನ್ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿ ಟ್ರೆಂಡ್ ಮಾಡಲಾಗುತ್ತಿದೆ. ಅಂದಹಾಗೆ ಆಮೀರ್ ಖಾನ್ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯಿಸಿ ಟ್ರೆಂಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಅನೇಕ ಬಾರಿ ನೆಟ್ಟಿಗರು ಆಮೀರ್ ಖಾನ್ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯ ಮಾಡಿದ್ದರು.  

ಇದಕ್ಕೆ ಕಾರಣ ಆಮೀರ್ ಖಾನ್ ಈ ಹಿಂದೆ ದೇಶದ ಬಗ್ಗೆ ನೀಡಿರುವ ಹೇಳಿಕೆ. ಭಾರತದಲ್ಲಿ ಅಸಹಿಷ್ಣತೆ ಹೆಚ್ಚಾಗುತ್ತಿದೆ ಹಾಗಾಗಿ ದೇಶ ಬಿಟ್ಟುಹೋಗುವ ನಿರ್ಧಾರ ಮಾಡಿರುವುದಾಗಿ ಆಮೀರ್ ಖಾನ್ ಹೇಳಿದ್ದರು. ಇದು ಆಮೀರ್ ಖಾನ್ ಗೆ ಮುಳುವಾಗಿದೆ. ಈ ಹೇಳಿಕೆ ಬಳಿಕ ಆಮೀರ್ ಖಾನ್ ವಿರುದ್ಧ ಭಾರಿ ವಿರೋದ ವ್ಯಕ್ತವಾಗಿತ್ತು. ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯ ಕೇಳಿಬರುತ್ತದೆ. ಇದೀಗ ಲಾಲ್ ಸಿಂಗ್ ಚಡ್ಡಾ ಸಮದಲ್ಲೂ  #BoycottLalSinghChaddha ಟ್ರೆಂಡ್ ಆಗುತ್ತಿದೆ.

ಈ ನಡುವೆ ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ವಿಜಯಶಾಂತಿ, ಆಮೀರ್ ಖಾನ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯಶಾಂತಿ 'ಅಮೀರ್ ಖಾನ್ ಅವರು 2015 ರಲ್ಲಿ ದೇಶವಿರೋಧಿ ಹೇಳಿಕೆಗಳ ಫಲಿತಾಂಶವನ್ನು ಪ್ರಸ್ತುತ ವೀಕ್ಷಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.ಅಲ್ಲದೆ ತೆಲುಗಿನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಖ್ಯಾತ ನಟ ಚಿರಂಜೀವಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ. 

ವಾರದಲ್ಲಿ ಒಮ್ಮೆಯಾದ್ರೂ ರೀನಾ-ಕಿರಣ್‌ರನ್ನ ಭೇಟಿಯಾಗುತ್ತೇನೆ; ಮಾಜಿ ಪತ್ನಿಯರ ಬಗ್ಗೆ ಆಮೀರ್ ಮಾತು

ಈ ಬಗ್ಗೆಯೂ ವಿಜಯಶಾಂತಿ ಕಿಡಿಕಾರಿದ್ದಾರೆ. ಪರೋಕ್ಷವಾಗಿ ನಟ ಚಿರಂಜೀವಿ ಅವರಿಗೆ ವಿಜಯಶಾಂತಿ ತಿವಿದಿದ್ದಾರೆ. 'ನಮ್ಮ ದೇಶದ ಜನರು ವಾಸ್ತವದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಮತ್ತು ಸಿನಿಮಾವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ದುರದೃಷ್ಟವಶಾತ್, ಕೆಲವು ಸೌತ್ ಹೀರೋಗಳು ಟಿವಿ ಶೋಗಳಲ್ಲಿ ಲಾಲ್ ಸಿಂಗ್ ಚಡ್ಡಾವನ್ನು ಪ್ರಚಾರ ಮಾಡುವ ಮೂಲಕ ಜನರ ಭಾವನೆಗಳ ಬಗ್ಗೆ ತಿಳಿದಿಲ್ಲ ಎಂಬಂತೆ ವರ್ತಿಸುತ್ತಾರೆ. ಅವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ' ಎಂದು ಅವರು ಬಹಿರಂಗಪಡಿಸಿದರು.

ಸಿನಿಮಾ ವೀಕ್ಷಿಸಿದ ಸೌತ್ ಸ್ಟಾರ್ಸ್ 

ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಈಗಾಗಲೇ ಚಿರಂಜೀವಿ, ನಾಗಾರ್ಜುನ, ರಾಜಮೌಳಿ ಸೇರಿದಂತೆ ಕೆಲವು ಸೌತ್ ಸೆಲೆಬ್ರಿಟಿಗಳು  ಸಿನಿಮಾ ವೀಕ್ಷಿಸಿದ್ದಾರೆ.ಸೌತ್ ಸೆಲೆಬ್ರಿಟಿಗಳ ಪ್ರತಿಕ್ರಿಯೆಗೆ ಆಮೀರ್ ಖಾನ್ ಭಾವುಕರಾಗಿದ್ದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ವೀಕ್ಷಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಈ ನಡುವೆ ವಿಜಯಶಾಂತಿ ಅವರ ಹೇಳಿಕೆ ಮತ್ತು ಆಮೀರ್ ಖಾನ್ ಮತ್ತುಚಿರಂಜೀವಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.


'ಲಾಲ್ ಸಿಂಗ್ ಚಡ್ಡಾ' ವೀಕ್ಷಿಸಿದ ರಾಜಮೌಳಿ, ಚಿರಂಜೀವಿ, ನಾಗಾರ್ಜುನ; ಸ್ಟಾರ್‌ಗಳ ಪ್ರತಿಕ್ರಿಯೆಗೆ ಆಮೀರ್ ಕಣ್ಣೀರು

ನನ್ನ ಸಿನಿಮಾ ಬಹಿಷ್ಕರಿಸಬೇಡಿ ಆಮೀರ್ ಮನವಿ 

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕರಿಸಿ, ಆಮೀರ್ ಖಾನ್  ಬಹಿಷ್ಕರಿಸಿ ಎಂದು ಟ್ರೆಂಡ್ ಆಗುತ್ತಿರುವ ಬಗ್ಗ ಪ್ರತಿಕ್ರಿಯೆ ನೀಡಿದ್ದ ಆಮೀರ್ ಖಾನ್, ದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ. ನೀವು ಹೇಗೆ ಹೇಳಲು ಕಾರಣ ನಾನು ಈ ದೇಶದ ವಿರೋದಿ ಎನ್ನುವ ಭಾವನೆ ನಿಮ್ಮಲ್ಲಿ ಇದೆ. ಅದರೆ ಅದು ಸುಳ್ಳು. ನಾನು ಈ ದೇಶವನ್ನು ತುಂಬಾ ಇಷ್ಟಪಡುತ್ತೇನೆ. ದಯವಿಟ್ಟು ನನ್ನ ನೋಡಿ' ಎಂದು ಕೇಳಿಕೊಂಡಿದ್ದರು. ಆದರೂ ಆಮೀರ್ ಖಾನ್ ಸಿನಿಮಾವನ್ನು ಬಹಿಷ್ಕರಿಸುಂತೆ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. 

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಇದೇ ಆಗಸ್ಟ್ 11 ರಂದು ರಿಲೀಸ್ ಆಗುತ್ತಿದೆ.ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. 3 ಈಡಿಯಟ್ಸ್ ಬಳಿಕ  ಕರೀನಾ ಕಪೂರ್ ಮತ್ತೆ ಆಮೀರ್ ಖಾನ್ ಜೊತೆ ನಟಿಸಿದ್ದಾರೆ.  

Latest Videos
Follow Us:
Download App:
  • android
  • ios