ವಾರದಲ್ಲಿ ಒಮ್ಮೆಯಾದ್ರೂ ರೀನಾ-ಕಿರಣ್‌ರನ್ನ ಭೇಟಿಯಾಗುತ್ತೇನೆ; ಮಾಜಿ ಪತ್ನಿಯರ ಬಗ್ಗೆ ಆಮೀರ್ ಮಾತು
ಆಮೀರ್ ಖಾನ್ ತನ್ನ ಇಬ್ಬರು ಮಾಜಿ ಪತ್ನಿಯ ಮೇಲೆ ತುಂಬಾ ಗೌರವವಿದೆ ಎಂದು ಹೇಳಿದರು. 'ವಾರದಲ್ಲಿ ಒಮ್ಮೆಯಾದರೂ ಇಬ್ಬರನ್ನು ಭೇಟಿಯಾಗುತ್ತೇನೆ. ನಾವು ಯಾವಾಗಲೂ ಒಂದೇ ಕುಟುಂಬವಾಗಿರುತ್ತೇವೆ' ಎಂದು ಕಾಫಿ ವಿತ್ ಕರಣ್ ಶೋನಲ್ಲಿ ಹೇಳಿದರು.
ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸದ್ಯ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಆಮೀರ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಲಾಲ್ ಸಿಂಗ್ ಚಡ್ಡಾ ಇದೇ ತಿಂಗಳು ರಿಲೀಸ್ ಆಗುತ್ತಿದೆ.ಆಮೀರ್ ಖಾನ್ ಸದ್ಯ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದಾರೆ. ಕರಣ್ ಜೋಹರ್ ಬಳಿ ಆಮೀರ್ ಖಾನ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಅದೇ ಸಮಯಕ್ಕೆ ಇಬ್ಬರು ಮಾಜಿ ಪತ್ನಿಯರಾದ ರಿನಾ ದತ್ತ ಮತ್ತು ಕಿರಣ್ ರಾವ್ ಬಗ್ಗೆಯೂ ಮಾತನಾಡಿದ್ದಾರೆ.
ಆಮೀರ್ ಖಾನ್ ಕಾಫಿ ವಿತ್ ಕರಣ್ ಶೋಗೆ ಸಹ ನಟಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ನಾಯಕಿ ಕರಿನಾ ಕಪೂರ್ ಜೊತೆ ಹಾಜರಾಗಿದ್ದರು.ಸದ್ಯ ಆಮೀರ್ ಖಾನ್ ಎಪಿಸೋಡ್ ನ ಪ್ರೋಮೋ ರಿಲೀಸ್ ಆಗಿದ್ದು ಆಮೀರ್ ಖಾನ್ ಮಾತುಗಳು ವೈರಲ್ ಆಗಿದೆ. ಮಾಜಿ ಪತ್ನಿಯ ಬಗ್ಗೆಯೂ ಮಾತನಾಡಿದ್ದಾರೆ. ಆಮೀರ್ ಖಾನ್ ಮಾಜಿ ಪತ್ನಿಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿಚ್ಛೇದನ ಬಳಿಕವೂ ಇಬ್ಬರ ಜೊತೆಯೂ ಸ್ನೇಹದಿಂದ ಇದ್ದಾರೆ.ಆಗಾಗ ಇಬ್ಬರನ್ನೂ ಭೇಟಿಯಾಗುತ್ತಿರುತ್ತಾರೆ.ಈ ಬಗ್ಗೆ ಕರಣ್ ಮುಂದೆ ಬಿಚ್ಚಿಟ್ಟಿದ್ದಾರೆ. ಇಬ್ಬರು ಮಾಜಿ ಪತ್ನಿಯ ಮೇಲೆ ತುಂಬಾ ಗೌರವವಿದೆ ಎಂದು ಹೇಳಿದರು. 'ವಾರದಲ್ಲಿ ಒಮ್ಮೆಯಾದರೂ ಇಬ್ಬರನ್ನು ಭೇಟಿಯಾಗುತ್ತೇನೆ. ನಾವು ಯಾವಾಗಲೂ ಒಂದೇ ಕುಟುಂಬವಾಗಿರುತ್ತೇವೆ' ಎಂದು ಹೇಳಿದರು.
ನಿಂಗ್ಯಾಕೆ ಸೆಲೆಬ್ರಿಟಿ ಸೆಕ್ಸ್ ಬಗ್ಗೆ ಕ್ಯೂರಿಯಾಸಿಟಿ? ಕರಣ್ ಜೋಹರ್ ಕಾಲೆಳೆದ ಆಮೀರ್ ಖಾನ್
ಕಿರಣ್ ರಾವ್ ಅವರನ್ನು ಮದುವೆಯಾಗುವ ಮೊದಲು ಅಮೀರ್ ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು.ರಿನಾ ದತ್ತಾ ಮತ್ತು ಆಮೀರ್ ಸಂಬಂಧಕ್ಕೆ ಇಬ್ಬರು ಮಕ್ಕಳಿದ್ದಾರೆ. ಇರಾ ಖಾನ್ ಮತ್ತು ಜುನೈದ್ ಖಾನ್. ರಿನಾ ದತ್ತಾ ಜೊತೆಗಿನ ವಿಚ್ಛೇದನದ ಬಳಿಕ ಮೀರ್ ಖಾನ್ ಕಿರಣ್ ರಾವ್ ಜೊತೆ ಮದುವೆಯಾದರು.ಆದರೆ ಎರಡನೇ ಪತ್ನಿ ಜೊತೆಯು ಆಮೀರ್ ಖಾನ್ ತುಂಬಾ ವರ್ಷ ಸಂಸಾರ ನಡೆಸಲಿಲ್ಲ. ಕಳೆದ ವರ್ಷ ಕಿರಣ್ ರಾವ್ ಜೊತೆಗಿನ ವೈವಾಹಿಕ ಜೀವನ ಕಡಿದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಇನ್ಮುಂದೆ ಗಂಡ-ಹೆಂಡತಿ ಅಲ್ಲ ಎಂದು ಬಹಿರಂಗ ಪಡಿಸಿದರು. ಆದರೆ ಮಗ ಆಜಾದ್ ರಾವ್ ಖಾನ್ ಗೆ ಪೋಷಕರಾಗುವುದಾಗಿ ಹೇಳಿದರು.
ಆಮೀರ್ ಖಾನ್ ಮಾಜಿ ಪತ್ನಿಯ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎನ್ನುವ ವದಂತಿಯನ್ನು ನಿರಾಕರಿಸಿದ ಆಮೀರ್ ಖಾನ್, 'ನಾವು ಎಷ್ಟೇ ಬ್ಯುಸಿಯಾಗಿದ್ದರೂ ಸಹ ವಾರಕ್ಕೊಮ್ಮೆ ನಾವೆಲ್ಲರೂ ಒಟ್ಟಿಗೆ ಸೇರುತ್ತೇವೆ. ಪರಸ್ಪರರ ಬಗ್ಗೆ ಸಾಕಷ್ಟು ನಿಜವಾದ ಕಾಳಜಿ, ಪ್ರೀತಿ ಮತ್ತು ಗೌರವವಿದೆ' ಎಂದರು.
'ಲಾಲ್ ಸಿಂಗ್ ಚಡ್ಡಾ' ವೀಕ್ಷಿಸಿದ ರಾಜಮೌಳಿ, ಚಿರಂಜೀವಿ, ನಾಗಾರ್ಜುನ; ಸ್ಟಾರ್‌ಗಳ ಪ್ರತಿಕ್ರಿಯೆಗೆ ಆಮೀರ್ ಕಣ್ಣೀರು
ಕರಣ್ ಕಾಲೆಳೆದ ಆಮೀರ್ ಖಾನ್
ಅದೇ ವೇಳೆ ಸೆಕ್ಸ್ ಬಗ್ಗೆ ಪ್ರಶ್ನೆ ಮಾಡಿದ ಕರಣ್ ಜೋಹರ್‌ನನ್ನು ತರಾಟೆ ತೆಗೆದುಕೊಂಡರು. ಕರಣ್ ಜೋಹರ್, ನಟಿ ಕರಿನಾಗೆ ಮಗುವನ್ನು ಪಡೆದ ಬಳಿಕ ಕ್ವಾಲಿಟಿ ಸೆಕ್ಸ್ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಕರೀನಾ ಪ್ರತಿಕ್ರಿಯೆ ನೀಡಿ ಕರಣ್ ನಿಮಗೂ ಅವಳಿ ಮಕ್ಕಳಿದ್ದಾರೆ ಅಂದಮೇಲೆ ನಿಮಗೂ ತಿಳಿದಿದೆ ಎಂದರು. ಕರೀನಾ ಮಾತಿಗೆ ಕರಣ್, ನನ್ನ ತಾಯಿ ಈ ಶೋ ನೋಡುತ್ತಿರುತ್ತಾರೆ ಹಾಗಾಗಿ ಈ ಬಗ್ಗೆ ಮಾತನಾಡಲ್ಲ ಎಂದರು. ತಕ್ಷಣ ಆಮೀರ್ ಖಾನ್, 'ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ಮಾತನಾಡುವುದರ ಬಗ್ಗೆ ಏನು ಆಗಲ್ವಾ? ಏನಿವು ಪ್ರಶ್ನೆಗಳು' ಎಂದು ಕರಣ್ ಜೋಹರ್ ಕಾಲೆಳೆದರು.