'ಲಾಲ್ ಸಿಂಗ್ ಚಡ್ಡಾ' ವೀಕ್ಷಿಸಿದ ರಾಜಮೌಳಿ, ಚಿರಂಜೀವಿ, ನಾಗಾರ್ಜುನ; ಸ್ಟಾರ್‌ಗಳ ಪ್ರತಿಕ್ರಿಯೆಗೆ ಆಮೀರ್ ಕಣ್ಣೀರು

ಆಮೀರ್ ಖಾನ್ ಇತ್ತೀಚಿಗಷ್ಟೆ ಸೌತ್ ಸ್ಟಾರ್ಸ್ ಗಾಗಿ ಲಾಲ್ ಸಿಂಗ್ ಚಡ್ಡಾ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಹೈದರಾಬಾದ್‌ನ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಆಮೀರ್ ಖಾನ್ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಚಿರಂಜೀವಿ ಮನೆಯಲ್ಲಿ ಲಾಲ್ ಸಿಂಗ್ ಚಡ್ಡಾ ನೋಡಲು ನಾಗಾರ್ಜುನ, ಎಸ್ ಎಸ್ ರಾಜಮೌಳಿ, ಸುಕುಮಾರ್ ಮತ್ತು ನಾಗ ಚೈತನ್ಯ ಅವರೊಂದಿಗೆ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ವೀಕ್ಷಿಸಿದ್ದಾರೆ. 

Chiranjeevi hugs teary eyed Aamir Khan at Laal Singh Chaddha special preview sgk

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಸದ್ಯ ಲಾಸ್ ಸಿಂಗ್ ಚಡ್ಡಾ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಮೇಲೆ ಸ್ವತಃ ಆಮೀರ್ ಖಾನ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಮೀರ್ ಖಾನ್‌ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವ ಆಮೀರ್ ಖಾನ್ ಇತ್ತೀಚಿಗಷ್ಟೆ ಸೌತ್ ಸ್ಟಾರ್ಸ್ ಗಾಗಿ ಲಾಲ್ ಸಿಂಗ್ ಚಡ್ಡಾ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಅಂದಹಾಗೆ ಹೈದರಾಬಾದ್‌ನ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಆಮೀರ್ ಖಾನ್ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಚಿರಂಜೀವಿ ಮನೆಯಲ್ಲಿ ಲಾಲ್ ಸಿಂಗ್ ಚಡ್ಡಾ ನೋಡಲು ನಾಗಾರ್ಜುನ, ಎಸ್ ಎಸ್ ರಾಜಮೌಳಿ, ಸುಕುಮಾರ್ ಮತ್ತು ನಾಗ ಚೈತನ್ಯ ಅವರೊಂದಿಗೆ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಎಲ್ಲಾ ಸ್ಟಾರ್ ಕಲಾವಿದರು ಆಮೀರ್ ಖಾನ್ ಅವರನ್ನು ಹಾಡಿಹೊಗಳಿದರು. ಸೌತ್ ಸ್ಟಾರ್ ಗಳ ಪ್ರತಿಕ್ರಿಯೆ ನೋಡಿ ಆಮೀರ್ ಖಾನ್ ಭಾವುಕರಾಗಿ, ಕಣ್ಣೀರಿಟ್ಟಿದ್ದಾರೆ.  

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಿದ ವಿಡಿಯೋವನ್ನು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡು ಇದು ಭಾವನಾತ್ಮಕ ಪಯಣ ಎಂದು ಹೇಳಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಆಮೀರ್ ಖಾನ್ ಸ್ಟಾರ್ಸ್ ಜೊತೆ ಮಾತನಾಡಿದ್ದಾರೆ. ಆ ಸಮಯದಲ್ಲಿ ಆಮೀರ್ ಖಾನ್ ಕಣ್ಣೀರಿಟ್ಟಿದ್ದಾರೆ. ಬಳಿಕ ಆಮೀರ್ ಖಾನ್ ಅವರನ್ನು ಮೆಗಾಸ್ಟಾರ್ ಚಿರಂಜೀವಿ ಅವರನ್ನು ತಬ್ಬಿಕೊಂಡರು. ಲಾಲ್ ಸಿಂಗ್ ಚಡ್ಡಾ ನೋಡಿ ಸೌತ್ ಸ್ಟಾರ್ಸ್ ಫುಲ್ ಖುಷ್ ಆಗಿದ್ದಾರೆ. ಈ ವಿಡಿಯೋವನ್ನು ನಟ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಹುಡುಗಿ ಪ್ರೀತಿ ರಿಜೆಕ್ಟ್‌ ಮಾಡಿದಕ್ಕೆ ತಲೆ ಬೋಳಿಸಿಕೊಂಡಿದ್ದರು Aamir Khan

ವೀಡಿಯೊವನ್ನು ಹಂಚಿಕೊಂಡು, 'ಕೆಲವು ವರ್ಷಗಳ ಹಿಂದೆ ನನ್ನ ಆತ್ಮೀಯ ಸ್ನೇಹಿತ ಅಮೀರ್ ಖಾನ್ ಅವರನ್ನು ಜಪಾನ್ ನ ಕ್ಯೋಟೋ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಸ್ವಲ್ಪ ಸಮಯ ಚಾಟ್ ಮಾಡಿದ್ದೆ. ಇದೀಗ ನಾನು ಅವರ ಕನಸಿನ ಯೋಜನೆ ಲಾಲ್ ಸಿಂಗ್ ಚಡ್ಡಾ ಭಾಗವಾಗಲು ಕಾರಣವಾಯಿತು. ನನ್ನ ಮನೆಯಲ್ಲಿ ವಿಶೇಷ ಪ್ರದರ್ಶನಕ್ಕಾಗಿ ಆಮೀರ್ ಖಾನ್ ಅವರಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

12 ವರ್ಷ ಕಲಿತದ್ದಕ್ಕಿಂತ 45 ದಿನಗಳಲ್ಲಿ ಆಮೀರ್ ಖಾನ್‌ನಿಂದ ತುಂಬಾ ಕಲಿತೆ; ಮಿಸ್ಟರ್ ಪರ್ಫೆಕ್ಷನಿಸ್ಟ್ ಬಗ್ಗೆ ನಾಗ ಚೈತನ್ಯ ಮಾತು

ಮತ್ತೊಂದು ಟ್ವೀಟ್‌ನಲ್ಲಿ ಚಿರಂಜೀವಿ,  'ಎಲ್ಲಕ್ಕಿಂತ ಹೆಚ್ಚಾಗಿ, ನೀವು ಯಾವ ಚಲನಚಿತ್ರವನ್ನು ನಿರ್ಮಿಸಿದ್ದೀರಿ, ಎಂಥ ಅದ್ಭುತವಾದ ಭಾವನಾತ್ಮಕ ಪ್ರಯಾಣ' ಎಂದು ಸಿನಿಮಾದ ಬಗ್ಗೆ ಹಾಡಿಹೊಗಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್‌ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ನಾಗ ಚೈತನ್ಯ, ಕರೀನಾ ಕಪೂರ್ ಖಾನ್ ಮತ್ತು ಮೋನಾ ಸಿಂಗ್ ಕೂಡ ನಟಿಸಿದ್ದಾರೆ. ಅಮೀರ್ ಖಾನ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ ಈ ಸಿನಿಮಾ ಆಗಸ್ಟ್ 11 ರಂದು ದೇಶ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ. 

Latest Videos
Follow Us:
Download App:
  • android
  • ios