Asianet Suvarna News Asianet Suvarna News

ಪ್ಲೀಸ್​ ನನ್ನನ್ನು ಹಾಗೆಲ್ಲಾ ಕರೆಯಬೇಡಿ... ಅಭಿಮಾನಿಗಳಲ್ಲಿ ವಿಜಯ್​ ಸೇತುಪತಿ ಹೀಗೊಂದು ಮನವಿ...

ಪ್ಲೀಸ್​ ನನ್ನನ್ನು ಹಾಗೆಲ್ಲಾ ಕರೆಯಬೇಡಿ ಎಂದು ಅಭಿಮಾನಿಗಳಲ್ಲಿ ವಿಜಯ್​ ಸೇತುಪತಿ ಮನವಿ ಮಾಡಿಕೊಂಡದ್ದೇಕೆ? 
 

Vijay Sethupathi wants to end this misconception about his simplicity requests fans suc
Author
First Published Jan 14, 2024, 5:32 PM IST

ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ವಿಜಯ್​ ಸೇತುಪತಿ ಅವರು ಸದ್ಯ ಕರೀನಾ ಕಪೂರ್​ ಜೊತೆಗೆ ಮೆರ್ರಿ ಕ್ರಿಸ್​ಮಸ್​ ಸಿನಿಮಾದ ಖುಷಿಯಲ್ಲಿದ್ದಾರೆ. ದಕ್ಷಿಣದಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ ನಂತರ, ವಿಜಯ್ ಸೇತುಪತಿ ಹಿಂದಿ ಮಾರುಕಟ್ಟೆಯನ್ನೂ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಅವರು ಇತ್ತೀಚೆಗೆ ಎಸ್‌ಆರ್‌ಕೆ ಅಭಿನಯದ ಜವಾನ್‌ನಲ್ಲಿ ಕಾಣಿಸಿಕೊಂಡರು ಮತ್ತು ಅವರ ನಕಾರಾತ್ಮಕ ಪಾತ್ರದಿಂದ ಜನರನ್ನು ಸೆಳೆದರು. ಇದೀಗ ಇವರ ಮೆರ್ರಿ ಕ್ರಿಸ್​ಮಸ್​ ಚಿತ್ರ ಇದೇ 12ರಂದು ಬಿಡುಗಡೆಯಾಗಿದ್ದು, ಸರಿಸುಮಾರು ಕಲೆಕ್ಷನ್​ ಮಾಡುತ್ತಿದೆ.  ಚಿತ್ರ ಏನೇ ಇದ್ದರೂ, ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಅತ್ಯಂತ ಸರಳ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ವಿಜಯ್​ ಸೇತುಪತಿ ಅವರು ಬರೀ ನಟನಾಗಿ ಮಾತ್ರವಲ್ಲದೇ  ಸಮಾಜಮುಖಿ ಕೆಲಸಗಳಿಂದಲೂ ಫೇಮಸ್​ ಆಗಿದ್ದಾರೆ. ಅತ್ಯಂತ ಸರಳ ವ್ಯಕ್ತಿ ಎನ್ನುವ ಬಿರುದು ಇವರಿಗೆ ಮೊದಲಿನಿಂದಲೂ ಇದೆ.  ಎಷ್ಟೋ ಸಂದರ್ಭದಲ್ಲಿ ಸ್ಟಾರ್​ ನಟ ಎಂಬ ಬಿರುದನ್ನು ಪಕ್ಕಕ್ಕಿಟ್ಟು ಎಷ್ಟೋ ಬಾರಿ ಸರಳತೆಯಿಂದ ನಡೆದುಕೊಂಡಿದ್ದೂ ಇದೆ.  ಇತ್ತೀಚೆಗೆ ಅವರ ಸರಳತೆಯ ಬಗ್ಗೆ ಭಾರಿ ಚರ್ಚೆಯಾಗಿದ್ದು ಮೆರ್ರಿ ಕ್ರಿಸ್​ಮಸ್​  ಪ್ರಚಾರದ ಸಂದರ್ಭದಲ್ಲಿ ಅವರು ತೊಟ್ಟಿದ್ದ ಬಟ್ಟೆ ಹಾಗೂ ಚಪ್ಪಲಿ. 

 ಚಿತ್ರತಂಡ ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಈ ವೇಳೆ ನಟಿ ಕತ್ರಿನಾ ಸೇರಿದಂತೆ ಚಿತ್ರತಂಡವು ಹೈಫೈ ಡ್ರೆಸ್​, ದುಬಾರಿ ಶೂಸ್​ ಧರಿಸಿದ್ದರೆ,  ವಿಜಯ್​ ಸೇತುಪತಿ ಅವರು ಸಾಮಾನ್ಯ ಜನರು ಧರಿಸುವ ಚಪ್ಪಲಿ ಹಾಕಿಕೊಂಡಿದ್ದರು.  ವಿಜಯ್​ ಅವರು ಧರಿಸಿದ್ದ ಶರ್ಟ್ಸ್​ ಮತ್ತು ಪ್ಯಾಂಟ್​ ಕೂಡ ಸಾಮಾನ್ಯರ ವೇಷಭೂಷಣದಂತೆ ಇತ್ತು. ತಮ್ಮ ಸರಳತೆಯಿಂದ ವಿಜಯ್​ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಜಯ್​ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಆಮೀರ್​ ಖಾನ್​ ಪುತ್ರಿ ಇರಾ ರಿಸೆಪ್ಷನ್​ನಲ್ಲಿ ಜೈ ಶ್ರೀರಾಮ್​ ಎಂದು ಜಪಿಸಿದ ಕಂಗನಾ: ವಿಡಿಯೋ ವೈರಲ್

ಆದರೆ ಈ ವಿಷಯವನ್ನೇ ಅವರ ಅಭಿಮಾನಿಯೊಬ್ಬರು ಹೇಳಿದಾಗ ತಾವೊಬ್ಬ ಸರಳ ವ್ಯಕ್ತಿ ಎಂಬುದನ್ನು ಸಾರಾ ಸಗಟಾಗಿ ನಟ ನಿರಾಕರಿಸಿದರು. ದಯವಿಟ್ಟು ಇಂಥದ್ದೊಂದು ಬಿರುದು ತಮಗೆ ಕೊಡಬೇಡಿ ಎಂದು ಹೇಳಿದರು. ಸಂದರ್ಶನವೊಂದರಲ್ಲಿ ಅವರ ಸರಳತೆಗಾಗಿ ಅಭಿಮಾನಿಯೊಬ್ಬರು ಅವರನ್ನು ಹೊಗಳಿದಾಗ, ವಿಜಯ್ ಸೇತುಪತಿ ಅವರು, ದಯವಿಟ್ಟು ನನಗೆ ಹೀಗೆ ಹೇಳಿ ಮುಜುಗರ ಮಾಡಬೇಡಿ. ನಾನು ಸರಳ ವ್ಯಕ್ತಿ ಎಂದು ಎಲ್ಲರೂ ಹೇಳುತ್ತಾರೆ. ನಾನು ಖಂಡಿತವಾಗಿಯೂ ಹಾಗಲ್ಲ. ನಾನು ದುಬಾರಿ ಬಟ್ಟೆಗಳನ್ನೇ ಧರಿಸುತ್ತೇವೆ. ಇದು ನನಗೆ ಕನ್​ಫರ್ಟ್​ ಇರುತ್ತದೆ ಅಷ್ಟೇ.  ಉಳಿದ ಡ್ರೆಸ್​ಗಳು ಕನ್​ಫರ್ಟ್​ ಅಲ್ಲ ಎಂದು ಧರಿಸುವುದಿಲ್ಲ. ನನಗೆ ಏನು ಆರಾಮದಾಯಕ ಎನ್ನಿಸುತ್ತದೆಯೋ ಅದನ್ನೇ ಧರಿಸುತ್ತೇನೆ. ಹಾಗೆಂದು ನಾನು ಸರಳ ವ್ಯಕ್ತಿ ಎಂದಲ್ಲ. ಇದು ಕೂಡ ಸಾಕಷ್ಟು ದುಬಾರಿಯಾಗಿದೆ ಎಂದರು.  
 
ಇದೇ ವೇಳೆ ಕತ್ರಿನಾ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ವಿಜಯ್, "ನಾನು ಕತ್ರಿನಾ ಕೈಫ್ ಜೊತೆ ಕೆಲಸ ಮಾಡುತ್ತೇನೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಕತ್ರಿನಾ ಅವರ ದೊಡ್ಡ ಅಭಿಮಾನಿ. ಮೊದಲ ದಿನ ನಾನು ಅವಳನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು ಮತ್ತು ನನಗೆ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಕತ್ರಿನಾ ಅವರು  ತುಂಬಾ ಚಿಂತನಶೀಲ ನಟಿ.  ದೃಶ್ಯವನ್ನು ಉತ್ತಮಗೊಳಿಸಲು ಅವರು ಸಾಕಷ್ಟು ಪ್ರಯತ್ನ ಮಾಡುತ್ತಾರೆ ಎಂದಿದ್ದಾರೆ.  

ಯೂ ಲವ್​ ಐ... ಎಂದಿದ್ದ ಶ್ರದ್ಧಾ ಕಪೂರ್- ಶಾಕ್​ನಲ್ಲಿ ಪ್ರೀತಿಯನ್ನೇ ತಿರಸ್ಕರಿಸಿ ಓಡಿದ್ದ ವರುಣ್​ ಧವನ್​..!

 

Follow Us:
Download App:
  • android
  • ios