Asianet Suvarna News Asianet Suvarna News

ಅಲ್ಲು ಅರ್ಜುನ್ ಬದಲು ಶಾರುಖ್ ಖಾನ್ ಸಿನಿಮಾ ಸೇರಿದ್ದೇಕೆ ವಿಜಯ್ ಸೇತುಪತಿ?

ವಿಜಯ್ ಸೇತುಪತಿ, ಶಾರುಖ್ ಖಾನ್ ಮತ್ತು ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದಲ್ಲಿನ ನಟನೆಯ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ವಿಜಯ್ ಸೇತುಪತಿ ಅರ ಪಿಆರ್ ಯುವರಾಜ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ರಿವೀಲ್ ಮಾಡಿದ್ದಾರೆ.

Vijay Sethupathi confirms he is in Shah Rukh Khans Jawan and Denies Pushpa 2 sgk
Author
Bengaluru, First Published Aug 14, 2022, 11:58 AM IST

ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಸದ್ಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರಿ ಬೇಡಿಕೆಯ ನಟ ವಿಜಯ್ ಸೇತುಪತಿ ಹೆಸರು ಅನೇಕ ಸ್ಟಾರ್ ನಟರ ಸಿನಿಮಾಗಳಿಗಲ್ಲಿ ಕೇಳಿಬರುತ್ತಿದೆ. ವ್ರಮುಖವಾಗಿ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಮತ್ತು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲಿನ ವಿಜಯ್ ಸೇತುಪತಿ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು. ಈ ಸಿನಿಮಾ ಬಳಿಕ ಸೇತುಪತಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ವಿಜಯ್ ಸೇತುಪತಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಎಷ್ಟೆ ಬೇಡಿಕೆ ಇದ್ದರೂ ವಿಜಯ್ ಸೇತುಪತಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ.  

 ಇದೀಗ ಸೇತುಪತಿ, ಶಾರುಖ್ ಖಾನ್ ಅವರ ಜವಾನ್ ಮತ್ತು ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದಲ್ಲಿನ ನಟನೆಯ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ವಿಜಯ್ ಸೇತುಪತಿ ಅವರ ಪಿಆರ್ ಯುವರಾಜ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ರಿವೀಲ್ ಮಾಡಿದ್ದಾರೆ. ವಿಜಯ್ ಸೇತುಪತಿ ಮುಂದೆ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿದರು. ವಿಜಯ್ ಸೇತುಪತಿ ಸದ್ಯ ಶಾರುಖ್ ಖಾನ್ ಅವರ ಜವಾನ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಸದ್ಯ ಹರಿದಾಡುತ್ತಿರುವ ವದಂತಿ ಪ್ರಕಾರ ಇನ್ನು ಯಾವುದೇ ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'ದಿಂದ ವಿಜಯ್ ಸೇತುಪತಿ ಔಟ್ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ನಾಗಚೈತನ್ಯ

ಈ ಮೂಲಕ ಬಾಲಿವುಡ್  ನಟ ಶಾರುಖ್ ಖಾನ್ ಸಿನಿಮಾದಲ್ಲಿ ಸೌತ್ ಸ್ಟಾರ್ ವಿಜಯ್ ಸೇತುಪತಿ ನಟಿಸುವುದು ಖಚಿತವಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಸಹ ನಟಿಸಿುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ತಮಿಳಿನ ಖ್ಯಾತ ನಟಿ, ಲೇಡ್ ಸೂಪರ್ ಸ್ಟಾರ್ ನಯನತಾರಾ ಕಾಣಿಸಿಕೊಂಡಿದ್ದಾರೆ. ಈ ಮೊದಲು ಜವಾನ್ ತಂಡ ರಾಣಾ ದಗ್ಗುಬಾಟಿಯನ್ನು ಆಯ್ಕೆ ಮಾಡಿದ್ದು, ರಾಣಾ ಬ್ಯುಸಿ ಇದ್ದ ಕಾರಣ ಜವಾನ್ ನಲ್ಲ ನಟಿಸಲು ಸಾಧ್ಯವಾಗಿಲ್ಲ. ಬಳಿಕ ವಿಜಯ್ ಸೇತುಪತಿ ಅವರನ್ನು ಅಪ್ರೋಚ್ ಮಾಡಲಾಗಿದ್ದು, ಸೇತುಪತಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಸೇತುಪತಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ನಟ ಶಾರುಖ್ ಖಾನ್‌ಗೆ ವಿಲನ್ ಆದ ಸೌತ್ ಸ್ಟಾರ್ ವಿಜಯ್ ಸೇತುಪತಿ

ಇನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪ- ಸಿನಿಮಾಗೆ ವಿಜಯ್ ಸೇತುಪತಿ ಹೆಸರು ಬಲವಾಗಿ ಕೇಳಿಬರುತ್ತಿತ್ತು. ಆದರೀಗ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವುದು ಅಧಿಕೃತವಾಗಿದೆ. ಪುಷ್ಪ ಮೊದಲ ಭಾಗಕ್ಕೆ ವಿಜಯ್ ಸೇತುಪತಿ ಆಯ್ಕೆಯಾಗಿದ್ದರು. ಆದರೆ ನಂತರ ಸಿನಿಮಾದಿಂದ ಹೊರನಡೆದಿದ್ದರು. ಬಳಿಕ ಪುಷ್ಪ-2 ನಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿತ್ತು. ಆದರೀಗ ಅಲ್ಲು ಅರ್ಜುನ್ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದರೆ ಪುಷ್ಪ ಸಿನಿಮಾದಿಂದ ವಿಜಯ್ ಸೇತುಪತಿ ಔಟ್ ಆಗಿದ್ದೇಕೆ ಎನ್ನುವ ಅಸಲಿ ಕಾರಣ ಬಹಿರಂಗವಾಗಿಲ್ಲ. 

Follow Us:
Download App:
  • android
  • ios