Asianet Suvarna News Asianet Suvarna News

ಮುಂದಿನ ತಿಂಗಳು ರಶ್ಮಿಕಾ ಜತೆ ನಿಶ್ಚಿತಾರ್ಥ ನಿಜನಾ? ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!

ಮುಂದಿನ ತಿಂಗಳು ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ನಿಶ್ಚಿತಾರ್ಥ ನಡೆಯುವುದು ನಿಜನಾ? ಕೊನೆಗೂ ಮೌನ ಮುರಿದ ನಟ ಹೇಳಿದ್ದೇನು?  
 

Vijay Deverakonda finally reacts to engagement rumors with Rashmika Mandanna suc
Author
First Published Jan 20, 2024, 12:32 PM IST

​ ಅನಿಮಲ್​ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್​ ಸುದ್ದಿಯಲ್ಲಿದ್ದಾರೆ. ನಟ ರಣಬೀರ್​ ಕಪೂರ್​ ಜೊತೆಗಿನ ಲಿಪ್​ಲಾಕ್​ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಪಾತ್ರಕ್ಕಾದರೂ ಸೈ ಎನ್ನುವಂಥ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ಜೀವನದಲ್ಲಿ ಯಾರೋ ಎಂಟ್ರಿ ಕೊಟ್ಟ ಹಾಗಿದೆ. ನಿಗೂಢ ಪೋಸ್ಟ್​ ಹಾಕುವ ಮೂಲಕ ನಟಿ, ಅಭಿಮಾನಿಗಳ ತಲೆಗೆ ಈಚೆಗೆ ಹುಳು ಬಿಟ್ಟಿದ್ದರು. ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ, ನನ್ನ ಲೈಫ್​ಗೆ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂಬ ಬರಹ ಇರುವ ಪೋಸ್ಟ್​ ಹಾಕಿದ್ದರು. ಇದು ವಿಜಯ ದೇವರಕೊಂಡ ಅನ್ನುವುದನ್ನು ತಿಳಿದುಕೊಳ್ಳಲು ಅಭಿಮಾನಿಗಳಿಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಅಷ್ಟಕ್ಕೂ, ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ಇಬ್ಬರೂ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಅದೇನೇ ಇದ್ದರೂ ಈ ಜೋಡಿ ಮಾತ್ರ ಆಗಾಗ್ಗೆ ವಿದೇಶಗಳಿಗೆ ಜಾಲಿ ಟ್ರಿಪ್​ ಮಾಡುವುದು ನಡೆಯುತ್ತಲೇ ಇರುವುದು ಅವರ ಫೋಟೋಗಳಿಂದಲೇ ತಿಳಿದುಬರುತ್ತಿವೆ.

ಇದರ ನಡುವೆಯೇ ಇವರಿಬ್ಬರೂ ಬರುವ ಫೆಬ್ರುವರಿಯಲ್ಲಿ ಎಂಗೇಜ್​ಮೆಂಟ್​ ಆಗಲಿದ್ದಾರೆ ಎಂಬ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಇದೇ ವೇಳೆ,  ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವಂತಹ ವೇಣು ಸ್ವಾಮಿ ಈ ಜೋಡಿಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಕೂಡ ಸಾಕಷ್ಟು ವೈರಲ್​ ಆಗಿತ್ತು.  ಸಂದರ್ಶನವೊಂದರಲ್ಲಿ, ವೇಣು ಸ್ವಾಮಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಈ ವಿಚಾರ ವೈರಲ್ ಆಗಿದೆ.  'ರಶ್ಮಿಕಾ ಹಾಗೂ ವಿಜಯ್ ದೇವರೊಂಡ  ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ' ಎಂದು ತಿಳಿಸಿದ್ದರು. 

ಪಕ್ಕದಲ್ಲಿ ರಶ್ಮಿಕಾ ಇರುವಾಗ್ಲೇ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 'ಅನಿಮಲ್'​ ರಿವೇಂಜಾ ಕೇಳ್ತಿದ್ದಾರೆ ನೆಟ್ಟಿಗರು!

ಇವೆಲ್ಲವುಗಳ ನಡುವೆಯೇ, ಇದೀಗ ಕೊನೆಗೂ ಮದುವೆಯ ಬಗ್ಗೆ ಖುದ್ದು ವಿಜಯ್​ ದೇವರಕೊಂಡ ಮೌನ ಮುರಿದಿದ್ದಾರೆ.  ಲೈಫ್‌ಸ್ಟೈಲ್ ಏಷ್ಯಾಗೆ ನೀಡಿದ ಸಂದರ್ಶನದಲ್ಲಿ, ವಿಜಯ್ ದೇವರಕೊಂಡ ನಿಶ್ಚಿತಾರ್ಥ, ಮದುವೆ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.  ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೆ ಶೀಘ್ರ ಮದ್ವೆಯೂ ಆಗುತ್ತಿಲ್ಲ, ಫೆಬ್ರುವರಿಯಲ್ಲಿ ನಿಶ್ಚಿತಾರ್ಥನೂ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.  ಮಾಧ್ಯಮಗಳು ನನ್ನ ಮತ್ತು ರಶ್ಮಿಕಾ ಮದುವೆಯನ್ನು ಆಗ್ಗಾಗ್ಗೆ ಮಾಡಿಸುತ್ತಲೇ ಇರುತ್ತವೆ. ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಮದುವೆ ಮಾಡಿಸುತ್ತವೆ. ಪ್ರತಿ ಬಾರಿಯೂ ನನ್ನ ಮದುವೆ ಸುದ್ದಿ ಬಂದಾಗ ಈ ಬಗ್ಗೆ ಸ್ಪಷ್ಟನೆ ನೀಡುತ್ತಲೇ ಇರುತ್ತೇನೆ. ಇವೆಲ್ಲಾ ಸುಳ್ಳು ಎಂದಿದ್ದಾರೆ. 

ಪುಷ್ಪಾ ಶೂಟಿಂಗ್​ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಪತ್ನಿ ಆಲಿಯಾ ಎದುರೇ ಕಿಸ್​ ಕೊಟ್ಟ ರಣಬೀರ್​- ವಿಡಿಯೋ ವೈರಲ್
 

Follow Us:
Download App:
  • android
  • ios