Asianet Suvarna News Asianet Suvarna News

ಪುಷ್ಪಾ ಶೂಟಿಂಗ್​ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಪತ್ನಿ ಆಲಿಯಾ ಎದುರೇ ಕಿಸ್​ ಕೊಟ್ಟ ರಣಬೀರ್​- ವಿಡಿಯೋ ವೈರಲ್

 ಪುಷ್ಪಾ ಶೂಟಿಂಗ್​ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಆಲಿಯಾ ಎದುರೇ ರಶ್ಮಿಕಾಗೆ ಕಿಸ್​ ಕೊಟ್ಟ ರಣಬೀರ್​. ಇದರ ವಿಡಿಯೋ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್ಸ್​ ಬರುತ್ತಿವೆ. 
 

Ranbir Kapoor  with wife Alia Bhatt and mother Neetu Kapoor for Animal success party suc
Author
First Published Jan 7, 2024, 1:26 PM IST

ಸದ್ಯ ಅನಿಮಲ್​ ಚಿತ್ರದ ಭರಾಟೆ ತಣ್ಣಗಾಗಿದ್ದರೂ, ಕಳೆದ ಕೆಲವು ವಾರಗಳಿಂದ ಇದು ಸೃಷ್ಟಿಸಿದ ಕೋಲಾಹರ ಅಷ್ಟಿಷ್ಟಲ್ಲ. 'ರಣಬೀರ್​ ಕಪೂರ್​, ಬಾಬಿ ಡಿಯೋಲ್​, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್​ ಚಿತ್ರ ಡಿಸೆಂಬರ್​ 1ರಂದು ಬಿಡುಗಡೆಯಾಗಿ ನಾಗಾಲೋಟದಿಂದ ಓಡಿತು,  ಈ ಚಿತ್ರದಲ್ಲಿ  ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ.  ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್‌ ಕಪೂರ್‌   ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್‌ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ.  ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಇವೆಲ್ಲ ಆರೋಪ ಮಾಡುತ್ತಲೇ ವೀಕ್ಷಕರು ಈ ಚಿತ್ರವನ್ನು ಭರ್ಜರಿಯಾಗಿ ಯಶಸ್ವಿ ಮಾಡಿದ್ದಾರೆ.

ಇದೀಗ ಚಿತ್ರ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಿನ್ನೆ ಅನಿಮಲ್​ ಸಕ್ಸಸ್​ ಪಾರ್ಟಿ ಅರೇಂಜ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಒಂದೆಡೆ ಪೂರ್ತಿ ಬೆತ್ತಲಾದ ತೃಪ್ತಿ ಡಿಮ್ರಿ ಮತ್ತು ಅರೆಬೆತ್ತಲಾಗಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಸದ್ಯ ಎಲ್ಲರ ಫೆವರೆಟ್​ ಆಗಿದ್ದಾರೆ. ಅನಿಮಲ್ ನಂತರ ರಶ್ಮಿಕಾ  ಪುಷ್ಪ 2 ಸಿನಿಮಾದ ಶೂಟಿಂಗ್​ನಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಬೇಗ ಮುಗಿಸಲು ಚಿತ್ರತಂಡ ಭಾರೀ ಶ್ರಮ ವಹಿಸುತ್ತಿದ್ದು ತ್ವರಿತವಾಗಿ ಶೂಟಿಂಗ್ ಕಂಪ್ಲೀಟ್ ಮಾಡುತ್ತಿದೆ. ಇದರ ನಡುವೆಯೇ ಅನಿಮಲ್​ ಯಶಸ್ಸಿನ ಪಾರ್ಟಿಗಾಗಿ ರಶ್ಮಿಕಾ  ಹೈದರಾಬಾದ್​ನಿಂದ ಮುಂಬೈಗೆ ಹೋಗಿದ್ದರು. 

ಕಟ್ಟಡದಿಂದ ಜಿಗಿಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ 'ಅನಿಮಲ್'​ ನಟ: ವಿಡಿಯೋ ವೈರಲ್​

ಈ ಸಂದರ್ಭದಲ್ಲಿ ಅನಿಮಲ್​ ತಂಡದ ಜೊತೆಗೆ, ರಣಬೀರ್​ ಕಪೂರ್​ ಪತ್ನಿ ಆಲಿಯಾ ಭಟ್​, ರಣಬೀರ್​ ತಾಯಿ ನೀತು ಕಪೂರ್​ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಶ್ಮಿಕಾರನ್ನು ನೋಡುತ್ತಿದ್ದಂತೆಯೇ ರಣಬೀರ್​ ಅವರಿಗೆ ಪ್ರೀತಿ ಉಕ್ಕಿ ಹರಿದಿದೆ. ಅನಿಮಲ್​ ತಂಡದ ಈಕೆಯ ನಟನೆಯ ಕುರಿತು ಶ್ಲಾಘನೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಣಬೀರ್​ ಪ್ರೀತಿಯಲ್ಲಿ ಆಲಿಯಾ ಎದುರೇ ರಶ್ಮಿಕಾ ಕೆನ್ನೆಗೆ ಮುತ್ತಿಕ್ಕಿದ್ದು, ಇದರ ವಿಡಿಯೋ ವೈರಲ್​  ಆಗುತ್ತಿದೆ. ಇದನ್ನು ನೋಡಿ ಕೆಲವರು ಕಾಲೆಳೆಯುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿ ಕಿಸ್ ಕೊಟ್ಟಿದ್ದು ಸಾಲದೇ ವೇದಿಕೆ ಮೇಲೆ ಹೀಗೆ ಮಾಡೋದಾ ಅಂತಿದ್ದಾರೆ. ಇನ್ನು ಕೆಲವರು ನಟರಿಗೆ ಇದೇನು ದೊಡ್ಡ ವಿಷಯವಲ್ಲ, ಹೀಗೆ ಮುತ್ತು ಕೊಡುವುದು ವಿದೇಶಿ ಸಂಸ್ಕೃತಿಯಾಗಿದ್ದು, ಅದನ್ನು ಭಾರತೀಯರು ಧಾರಾಳವಾಗಿ ಬಳಸುತ್ತಿದ್ದಾರೆ. ಅದರಲ್ಲೇನು ವಿಶೇಷ ಅನ್ನುತ್ತಿದ್ದಾರೆ. 

  ಚಿತ್ರದಲ್ಲಿ ರಣಬೀರ್ ಕಪೂರ್, ತೃಪ್ತಿ ಡಿಮ್ರಿ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೀಗ ಈ ಸಂಭ್ರಮಾಚರಣೆಯ ವಿಡಿಯೊ ವೈರಲ್‌ ಆಗಿದ್ದು ನಟರು, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಪ್ಪು ಬಣ್ಣದ ಡ್ರೆಸ್​ನಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. 

ತಾವೇ ಬೀಸಿದ ಗಾಳಕ್ಕೆ ಬಿದ್ದುಬಿಟ್ಟರಾ ನಟಿ ಜಾಕ್ವೆಲಿನ್​? ಸುಕೇಶ್​ ಜೊತೆಗಿನ ಚಾಟ್​ಗಳು ತನಿಖಾಧಿಕಾರಿಗಳ ಕೈಗೆ!

Follow Us:
Download App:
  • android
  • ios