Asianet Suvarna News Asianet Suvarna News

ಮಯೂರ ಖ್ಯಾತಿಯ ಹಿರಿಯ ಮೇಕಪ್ ಮ್ಯಾನ್ ಕೇಶವಣ್ಣ ನಿಧನ

ಮಯೂರ ಸಿನಿಮಾ ಖ್ಯಾತಿಯ ಹಿರಿಯ ಮೇಕಪ್‌ ಮ್ಯಾನ್‌ ಕೇಶವಣ್ಣ ಇಂದು ನಿಧನರಾಗಿದ್ದಾರೆ. ಇವರು ಸುಮಾರು 53 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು. 

vetern makeup man in kannada film industry Mayura fame keshavanna passes away akb
Author
Bangalore, First Published Jul 15, 2022, 10:48 PM IST | Last Updated Jul 15, 2022, 10:52 PM IST

ಬೆಂಗಳೂರು: ಮಯೂರ ಸಿನಿಮಾ ಖ್ಯಾತಿಯ ಹಿರಿಯ ಮೇಕಪ್‌ ಮ್ಯಾನ್‌ ಕೇಶವಣ್ಣ ಇಂದು ನಿಧನರಾಗಿದ್ದಾರೆ. ಇವರು ಸುಮಾರು 53 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು. ಇವರ ತಂದೆ ಮೇಕಪ್ ಸುಬ್ಬಣ್ಣ , ದಿವಂಗತ ನಟಸಾರ್ವಭೌಮ ಡಾ ರಾಜ್‍ಕುಮಾರ್‌ ರವರ ಮೇಕಪ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಇವರ ಸಹೋದರ ಎಂ ಎಸ್ ರಾಜಶೇಖರ್ ಅವರು 'ನಂಜುಂಡಿ ಕಲ್ಯಾಣ' ಚಿತ್ರದ ನಿರ್ದೇಶಕರಾಗಿದ್ದರು. ಕೇಶವಣ್ಣ 25 ರಿಂದ 30 ವರ್ಷಗಳ ಕಾಲ ರಾಜ್ ಕುಮಾರ್ ರವರ ಕಂಪನಿಯಲ್ಲಿ ಮೇಕಪ್ ಕಲಾವಿದರಾಗಿದ್ದರು. 

ಈಶ್ವರಿ ಪ್ರೊಡಕ್ಷನ್‌ನಲ್ಲಿಯೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಹಾಸ್ಯ ಕಲಾವಿದ ನರಸಿಂಹ ರಾಜು  ಅವರಿಗೆ ಮೊದಲು ಮೇಕಪ್ ಮಾಡಿದ್ದರು. ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರ ಮುನಿ ಹೀಗೆ ಚಿತ್ರರಂಗದ ಅನೇಕ ಮಹಾನ್‌  ಕಲಾವಿದರಿಗೆ ಮೇಕಪ್ ಮ್ಯಾನ್  ಆಗಿ ಕೇಶವಣ್ಣ ಕಾರ್ಯ ನಿರ್ವಹಿಸಿದ್ದರು. 

ದರ್ಶನ್ ನೆಚ್ಚಿನ ಮೇಕಪ್ ಮ್ಯಾನ್ ಶ್ರೀನಿವಾಸ್ ಇನ್ನಿಲ್ಲ, ಕಂಬನಿ ಮಿಡಿದ ದಾಸ

'ನಾನಿನ್ನ ಬಿಡಲಾರೆ' ಚಿತ್ರಕ್ಕೆ ಅನಂತ್ ನಾಗ್ ರವರಿಗೆ ಇವರು ದೆವ್ವದ ಮೇಕಪ್ ಮಾಡಿದ್ದು ಹಾಗೂ ಇದೇ ಚಿತ್ರ ಹಿಂದಿಗೆ ರೀಮೇಕ್ ಆದಾಗ ಆ ಚಿತ್ರಕ್ಕೂ ಇವರನ್ನೇ ಮೇಕಪ್ ಮ್ಯಾನ್ ಆಗಿ ಕರೆಸಲಾಗಿತ್ತು. ಸಾಕ್ಷಾತ್ಕಾರ, ಹಲಿಯ ಹಾಲಿನ ಮೇವು, ಮಯೂರ, ಮುರುವರೆ ವಜ್ರ, ಪ್ರೇಮ ಲೋಕ, ಶಾಂತಿ ಕ್ರಾಂತಿ, ಸಂಗೊಳ್ಳಿ ರಾಯಣ್ಣ ಸಿನಿಮಾಗೂ ಇವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಕುರುಕ್ಷೇತ್ರ ಸಿನಿಮಾಗೆ ಕೊನೆಯ ಬಾರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದರು.

ಗೆಳತಿಯ ಬಾತ್‌ರೂಮ್‌ನಲ್ಲೇ ಹಿಡನ್ ಕ್ಯಾಮರಾ ಇಟ್ಟ ಮೇಕಪ್ ಮ್ಯಾನ್..!

 

Latest Videos
Follow Us:
Download App:
  • android
  • ios