ಬೆಂಗಳೂರು(ಜು. 13) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಕಪ್ ಮ್ಯಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ನೆಚ್ಚಿನ ಮೇಕಪ್ ಮ್ಯಾನ್ ಅಗಲಿಕೆಗೆ ದಾಸ ಕಂಬನಿ ಮಿಡಿದಿದ್ದಾರೆ.

ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್  ಆಗಿ ಕೆಲಸ ನಿರ್ವಹಿಸುತ್ತಿದ್ದ  ಶ್ರೀನಿವಾಸ್(37)  ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಹೃದಯಾಘಾತ ತಡೆಯುವ ಹತ್ತು ಸಂಗತಿಗಳು

ಬಿಡುಗಡೆಗೆ ಸಿದ್ಧವಾಗಿರುವ ರಾಬರ್ಟ್ ಚಿತ್ರಕ್ಕೂ ಕೆಲಸ ಶ್ರೀನಿವಾಸ್ ಕೆಲಸ ಮಾಡಿದ್ದರು. 'ಮದಗಜ' ಚಿತ್ರತಂಡ ಸಹ ಕಂಬನಿ  ಮಿಡಿದಿದೆ.

ಕೊರೋನಾ ನಡುವೆ ಕನ್ನಡ ಚಿತ್ರರಂಗ ಒಂದಾದ ಮೇಲೆ ಒಂದು ಹೊಡೆತ ತಿನ್ನುತ್ತ ಇದೆ. ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದ್ದರು, ಅದಾದ ಮೇಲೆ ನಟ ಶ್ರೀನಗರ ಕಿಟ್ಟಿ ಸಹೋದರ ಶಿವಶಂಕರ್  ನಿಧನರಾಗಿದ್ದರು.