ಒಡಿಯಾ ಭಾಷಾ ನಟ ಬಿಜಯ್ ಮೊಹಂತಿ ಹೈದರಾಬಾದ್‌ನ ಮಗಳ ಮನೆಯಲ್ಲಿ ಲಾಕ್‌ಡೌನ್‌‌ ಕಾರಣದಿಂದ ಲಾಕ್ ಆಗಿ, ಸಮಯ ಕಳೆಯುತ್ತಿದ್ದರು. ಆದರೆ ಮೇ.25ರಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಈ ಬಗ್ಗೆ ಎಲ್ಲಿಯೂ ಬಹಿರಂಗ ಮಾಡಬಾರದು ಎಂದು ಕುಟುಂಬಸ್ಥರು ಈ ವಿಚಾರವಾಗಿ ಮೌನವಾಗಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವದಂತಿಗೆ ಪತ್ನಿ ಬಿಜಯ್ ಅನಾರೋಗ್ಯದ ಬಗ್ಗೆ ಮಾತನಾಡಿ, ಸ್ಪಷ್ಟನೆ ನೀಡಿದ್ದಾರೆ.

ಹಿರಿಯ ನಟಿ ವಾಣಿಶ್ರೀಗೆ ಪುತ್ರಶೋಕ, ಮಗ ವೆಂಕಟೇಶ್ ನಿಧನ

ಒಡಿಯಾ ಸಿನಿ ಆರ್ಟಿಸ್ಟ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಶ್ರೀತಮ್‌ ದಾಸ್‌ ಆರೋಗ್ಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 'ಈ ಹಿಂದೆಯೇ ಮೊಹಂತಿಗೆ  ಆರೋಗ್ಯ ಸರಿ ಇರಲಿಲ್ಲ. ಅದರ ಸಲುವಾಗಿ ಟೆಸ್ಟ್‌ ಮಾಡಿಸಿಕೊಳ್ಳಲು ಹೋಗಿದ್ದರು. ಕಾಂಪ್ಲಿಕೇಟೆಡ್‌ ಅಪೆಂಡೊಕ್ಟಮಿ ಇದ್ದ ಕಾರಣ ಕೊಂಚ ಡಿಪ್ರೆಸ್‌ ಆಗಿದ್ದರು. ಅದರ ಟ್ರೀಟ್ಮೆಂಟ್‌ ಪಡೆದು ಮನೆಗೆ ಹಿಂದಿರುಗುವಾಗ ಹೃದಯಾಘಾತವಾಗಿದೆ. ತಕ್ಷಣವೇ ICUಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್‌ ಅಳವಡಿಸಲಾಗಿದೆ.  ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ,' ಎಂದು ತಿಳಿಸಿದ್ದಾರೆ.

ಹಾರ್ಟ್ ಅಟ್ಯಾಕ್‌ಗೂ ಮುನ್ನ ದೇಹ ಕೊಡುತ್ತೆ ಈ ಸೂಚನೆ 

ಬಿಜಯ್ ಮೊಹಂತಿಗೆ ವೆಂಟಿಲೇಟರ್ಸ್‌ ಹಾಕಿರುವ ಕಾರಣ ಅವರ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಿದಾಡುತ್ತಿದ್ದವು. ಅದರಲ್ಲಿಯೂ ಕೊರೋನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಕೋವೀಡ್ ಎಂದೇ ತಪ್ಪು ತಿಳಿಯಲು ಆರಂಭಿಸಿದ್ದರು. 'ಅವರು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ದಯವಿಟ್ಟು ಯಾರೂ ತಪ್ಪು ಸುದ್ದಿ ಹರಡಿಸಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.

1977ರಲ್ಲಿ ಚಿಲಿಕಾ ಟೀರೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅನೇಕ ಹಿಟ್‌ ಸಿನಿಮಾಗಳನ್ನು ನೀಡಿರುವ ಹೆಗ್ಗಳಕೆ ಇವರದ್ದು. ಅಷ್ಟೇ ಅಲ್ಲದೇ ರಾಜಕೀಯದಲ್ಲಿಯೂ ಈ ನಟ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.