ಸಿನಿಮಾ ಶೂಟಿಂಗ್​ ವೇಳೆ ಅವಘಡ ಸಂಭವಿಸಿದ್ದು, ಕಬ್ಬಿಣದ ರಾಡ್​ ಬಿದ್ದು ನಟ ವರುಣ್​ ಧವನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆಗಾಗ್ಗೆ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಖ್ಯಾತ ಬಾಲಿವುಡ್ ನಟ ವರುಣ್​ ಧವನ್​ ಅವರ ಕಾಲಿನ ಮೇಲೆ ಕಬ್ಬಿಣದ ರಾಡ್​ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಕಾಲಿನ ಫೋಟೋ ಶೇರ್ ಮಾಡಿಕೊಂಡು ಮಾಹಿತಿ ನೀಡಿದ್ದಾರೆ. ಅಂದಹಾಗೆ ವರುಣ್​ ಧವನ್​ ಅವರು, ಚಲನಚಿತ್ರ ನಿರ್ದೇಶಕರಾದ ಡೇವಿಡ್ ಧವನ್ ಅವರ ಪುತ್ರ. 2014 ರಲ್ಲಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರೆಟಿ 100ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ ಮೊದಲ ಹನ್ನೊಂದು ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದು, ಸದ್ಯ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. 

Add Asianetnews Kannada as a Preferred SourcegooglePreferred

2010ರಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾದಲ್ಲಿ ಕರಣ್ ಜೋಹರ್ ರವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವರುಣ್​ ಅವರು, ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ವ್ಯವಹಾರ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿದವರು. ಕರಣ್​ ಜೋಹರ್​ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಈಚಿತ್ರದ ಮೂಲಕ ಎಂಟ್ರಿ ಕೊಟ್ಟ ಆಲಿಯಾ ಭಟ್​ಗೆ ನಾಯಕರಾದರು. ಅಲ್ಲಿಂದ ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್​ ಫಿದಾ ಆದರು. 2012ರಲ್ಲಿ ಬಿಡುಗಡೆಗೊಂಡ ಈ ಚಿತ್ರದ ಬಳಿಕ, ಬಳಿಕ ಕಳಂಕ್, ಬದ್ರಿನಾಥ್ ಕಿ ದುಲ್ಹನಿಯಾ, ಹಮ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾಗಳಲ್ಲಿ ವರುಣ್-ಆಲಿಯಾ ಜೊತೆಯಾಗಿ ಮಿಂಚಿದ್ದಾರೆ. ನಂತರ ಬವಾಲ್ (Bawal) ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. 

ದಾವೂದ್​ಗೆ ಬಾಲಿವುಡ್​ ಲಿಂಕ್​? ಆತ್ಮಕಥೆಯಲ್ಲಿ ನಟ ರಿಷಿ ಕಪೂರ್​ ಬಹಿರಂಗಪಡಿಸಿದ್ದರೊಂದು ಸತ್ಯ!

2014ರಲ್ಲಿ ಹಮ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಾಯಕನಾಗಿ ಮಿಂಚಿ ಸಕತ್​ ಹೆಸರು ಮಾಡಿದರು. ಅದಾದ ಬಳಿಕ ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅವುಗಳ ಪೈಕಿ ಕೆಲವೊಂದನ್ನು ಹೆಸರಿಸುವುದಾದರೆ 2015ರಲ್ಲಿ ರಿಲೀಸ್ ಆದ ಎಬಿಸಿಡಿ 2. ಇದು ಡಾನ್ಸ್ ಸಿನಿಮಾ ಆಗಿದ್ದರೆ, ಇದೇ ಸಾಲಿನಲ್ಲಿ ಆ್ಯಕ್ಷನ್ ಚಿತ್ರವಾದ ದಿಲ್​ವಾಲೆ ಮತ್ತು 2017ರಲ್ಲಿ ಜುಡ್ವಾ-2ದಲ್ಲಿ ಕಾಣಿಸಿಕೊಂಡರು. ವಿಭಿನ್ನ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ವರುಣ್​ ಅವರು, 2015ರಲ್ಲಿ ಬಿಡುಗಡೆಯಾದ ಕ್ರೈಮ್ ಥ್ರಿಲ್ಲರ್ ಬದ್ಲಾಪುರ್ , ಬಳಿಕ ಭದ್ರಿನಾಥ್ ಕೀ ದುಲ್ಹನಿಯಾ, 'ಅಕ್ಟೋಬರ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯ ಇವರ ಕಾಲುವಳು ಊದುಕೊಂಡು ಕೆಂಪಗಾಗಿರುವುದನ್ನು ಚಿತ್ರದಲ್ಲಿ ನೋಡಬಹುದು. ಕುರ್ಚಿಯ ಮೇಲೆ ವಿಶ್ರಾಂತಿ ಪಡೆದ ಚಿತ್ರವನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಚಿತ್ರದ ವೇಳೆ ಕಬ್ಬಿಣದ ರಾಡ್‌ ಕಾಲಿಗೆ ಬಡಿದಿರುವುದಾಗಿ ತಿಳಿಸಿದ್ದಾರೆ. ಸಿನಿ 1 ಸ್ಟುಡಿಯೋಸ್ ಮತ್ತು ಎ ಫಾರ್ ಆಪಲ್ ಸ್ಟುಡಿಯೋಸ್ ಕೈಜೋಡಿಸಿ ವರುಣ್ ಧವನ್ ನಾಯಕತ್ವದ ತಾರಾಗಣದೊಂದಿಗೆ ಆಕ್ಷನ್ ಎಂಟರ್‌ಟೈನರ್‌ಗಳಲ್ಲಿ ಒಂದನ್ನು ತರಲು ತಂಡ ಕೈಜೋಡಿಸಿದೆ. ಈ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. 

ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ? ನಟ ಜಗ್ಗೇಶ್​ ಟ್ವೀಟ್​ ವೈರಲ್​