Asianet Suvarna News Asianet Suvarna News

ದಾವೂದ್​ಗೆ ಬಾಲಿವುಡ್​ ಲಿಂಕ್​? ಆತ್ಮಕಥೆಯಲ್ಲಿ ನಟ ರಿಷಿ ಕಪೂರ್​ ಬಹಿರಂಗಪಡಿಸಿದ್ದರೊಂದು ಸತ್ಯ!

ಭೂಗತ ಪಾತಕಿ ದಾವೂದ್​ ಇಬ್ರಾಹಿಂಗೂ ಬಾಲಿವುಡ್​ಗೂ ಲಿಂಕ್​ ಇರುವಂಥ ಇಂಟರೆಸ್ಟಿಂಗ್​ ವಿಷ್ಯ ನಟ ರಿಷಿ ಕಪೂರ್​ ಆತ್ಮಕಥೆಯಿಂದ ತಿಳಿದುಬಂದಿದೆ. ಏನದು? 
 

Dawood Ibrahim called  actor Rishi kapoor and ask if he need money suc
Author
First Published Dec 18, 2023, 4:16 PM IST

 ಕೆಲವೇ ವರ್ಷಗಳ ಹಿಂದಿನವರೆಗೂ ಬಾಲಿವುಡ್​ ಸಂಪೂರ್ಣ ಭೂಗತಲೋಕದ (under world) ಕೈಯಲ್ಲಿತ್ತು ಎನ್ನುವ ವಿಷಯವೇನೂ ಹೊಸತಲ್ಲ. 90ರ ದಶಕಕ್ಕೂ ಮುಂಚೆ ಬಾಲಿವುಡ್ ಸಂಪೂರ್ಣವಾಗಿ ಭೂಗತ ಲೋಕದ ಕಪಿಮುಷ್ಠಿಯಲ್ಲಿತ್ತು. ಸಿನಿಮಾ ಪಾರ್ಟಿಗಳಲ್ಲಿ ಭೂಗತ ಪಾತಕಿಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾ ನಾಯಕಿಯರೊಟ್ಟಿಗೆ ಈ ಪಾತಕಿಗಳು ಆತ್ಮೀಯ ಸಂಬಂಧ ಹೊಂದಿದ್ದರು. ತಮ್ಮ ಮೆಚ್ಚಿನ ನಟಿಯರಿಗೆ ಹೆಚ್ಚು ಸಿನಿಮಾಗಳು ಸಿಗುವಂತೆ ಮಾಡುತ್ತಿದ್ದರು. ಸಿನಿಮಾ ನಿರ್ಮಾಪಕರಿಗೆ ಬೆದರಿಕೆ ಹಾಕಿ ಸಿನಿಮಾ ಲಾಭದಲ್ಲಿ ಪಾಲು ಪಡೆಯುತ್ತಿದ್ದರು. ಆದರೆ 90ರ ದಶಕದ ಬಳಿಕ ಬಾಲಿವುಡ್​ ಮೇಲೆ ಮಾಫಿಯಾದ ಹಿಡಿತ ಕೈತಪ್ಪಿತು ಎಂದೇ ಹೇಳಲಾಗುತ್ತಿದ್ದರೂ, ಇದು ಸಂಪೂರ್ಣ ಸತ್ಯವಲ್ಲ ಎನ್ನುವ ಮಾತೂ ಇದೆ. ಈಗಲೂ ಬಾಲಿವುಡ್​ ಅವರದ್ದೇ ಕೈಯಲ್ಲಿದೆ ಎನ್ನುವುದಕ್ಕೆ ಆಗಾಗ್ಗೆ ಹಲವಾರು ಸಾಕ್ಷ್ಯಾಧಾರಗಳೂ ಸಿಗುತ್ತಿವೆ ಎಂಬ ಮಾತಿದೆ. ನಟ-ನಟಿಯರ ದಿನನಿತ್ಯದ ಆಗುಹೋಗು ಮಾತ್ರವಲ್ಲದೇ, ನಟ-ನಟಿಯರ ಮದುವೆಯ ವಿಷಯದಲ್ಲಿಯೂ ಇವರು ಭೂಗತ ಜಗತ್ತಿನವರನ್ನೇ ಅನುಸರಿಸಬೇಕು ಎಂಬ ಮಾತೂ ಇದೆ. ಇದೇ ಕಾರಣಕ್ಕೆ, ಬಾಲಿವುಡ್​ನಲ್ಲಿ ನಡೆಯುವ ಕೆಲವು ವಿಚಿತ್ರ ಮದುವೆಗಳೂ ಸಾಕ್ಷಿಯಾಗಿವೆ. ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದರೆ ಇದು ಮಾಮೂಲು ಎನ್ನುತ್ತಾರೆ.  ಇದೇ ವಿಷಯವನ್ನು ಕೆಲ ತಿಂಗಳ ಹಿಂದೆ ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ಕೂಡ ವಿವರಿಸಿದ್ದರು.

90ರ  ದಶಕದಲ್ಲಿ ಬಾಲಿವುಡ್​, ಭೂಗತ ಲೋಕದ ಕಪಿಮುಷ್ಠಿಗೆ ಸಹ ಸಿಲುಕಿಕೊಂಡಿತ್ತು. ಅಬು ಸಲೇಂ, ದಾವೂದ್ ಇಬ್ರಾಹಿಂ, ಚೋಟಾ ಶಕೀಲ್ ಸೇರಿದಂತೆ ಹಲವು ಭೂಗತ ಲೋಕದ ಪಾತಕಿಗಳು ಬಾಲಿವುಡ್​ ಆಳುತ್ತಿದ್ದರು.  ಸಲ್ಮಾನ್ ಖಾನ್, ಸಂಜಯ್ ದತ್, ಅನಿಲ್ ಕಪೂರ್, ರಾಮ್ ಗೋಪಾಲ್ ವರ್ಮಾ ಇನ್ನೂ ಹಲವಾರು ಮಂದಿ ಸ್ಟಾರ್ ನಟ, ನಿರ್ದೇಶಕರು ಇವರಿಗೆ ಒಳಪಟ್ಟಿದ್ದರು.  ಬಾಲಿವುಡ್ ಸಿನಿಮಾಗಳಿಗೆ  ಕಪ್ಪು ಹಣ ತೊಡಗಿಸಿದ್ದರು.  ಅವರು ಹೇಳಿದಂತೆಯೇ ಹೀರೋ, ಹೀರೋಯಿನ್​ಗಳನ್ನು ಹಾಕಿ ಸಿನಿಮಾ ಮಾಡಬೇಕಿತ್ತು. ತಮ್ಮ ಮಾತು ಕೇಳದ ನಿರ್ಮಾಪಕರನ್ನು ಸಾಯಿಸಿದ ಉದಾಹರಣಗಳೂ ಇವೆ ಎಂದು ಸಂಜಯ್ ಗುಪ್ತಾ ವಿವರಿಸಿದ್ದರು. ಇದೀಗ ಭೂಗತ ಲೋಕದ ಪಾತಕಿ ದಾವೂದ್​ ಇಬ್ರಾಹಿಂಗೆ ವಿಷಪ್ರಾಶನ ಆಗಿ ಆಸ್ಪತ್ರೆಗೆ ಸೇರಿರುವ ಬೆನ್ನಲ್ಲೇ ಭೂಗತಲೋಕ ಮತ್ತು ಬಾಲಿವುಡ್​ನ ವಿಷಯ ಮತ್ತೊಮ್ಮೆ ಬೆಳಕಿಗೆ ಬಂದಿದೆ. 

ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಪಾಕ್‌ ಆಸ್ಪತ್ರೆಗೆ ದಾಖಲು!

ಈಗ ಸದ್ದು ಮಾಡುತ್ತಿರುವುದು ಒಂದು ಕಾಲದಲ್ಲಿ ಬಾಲಿವುಡ್​​ ಆಳಿದ್ದ, 2020ರಲ್ಲಿ ನಿಧನರಾದ ನಟ ರಿಷಿ ಕಪೂರ್​ ಅವರು ದಾವೂದ್​ ಇಬ್ರಾಹಿಂ ಕುರಿತು ಹೇಳಿರುವ ಮಾತು. ರಿಷಿ ಕಪೂರ್ ಅವರು ತಮ್ಮ ಜೀವನ ಚರಿತ್ರೆ ಖುಲ್ಲಂ ಖುಲ್ಲಾದಲ್ಲಿ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಹಂಚಿಕೊಂಡಿದ್ದರು. ಬಾಲಿವುಡ್​​ನ ತಮ್ಮ ಪಯಣದ ಕುರಿತು ಹಾಗೂ ಜೀವನದಲ್ಲಿ ತಾವು ಸಿಕ್ಕಿರುವ ಹಲವು ವಿಚಿತ್ರ ವ್ಯಕ್ತಿಗಳ ಕುರಿತೂ ಇದರಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ರಿಷಿ ಕಪೂರ್​ ಅವರು, ಇದ್ದದ್ದನ್ನು ಇದ್ದ ಹಾಗೆ ಹೇಳುವ ನೇರ ವ್ಯಕ್ತಿ ಎಂದೇ ಹೆಸರು ಮಾಡಿದವರು. ಇರುವ ವಿಷಯ ಹೇಳಲು ಅವರು ಯಾವುದೇ ಮುಜುಗರಪಟ್ಟುಕೊಳ್ಳುತ್ತಿರಲಿಲ್ಲ. ಇದೇ ಆತ್ಮಕಥೆಯಲ್ಲಿ ಅವರು ತಾವು ದಾವೂದ್​ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದ ಬಗ್ಗೆ ವಿವರಿಸಿದ್ದಾರೆ. 

ಪುಸ್ತಕದ ಒಂದು ಅಧ್ಯಾಯದಲ್ಲಿ, ಅವರು ತಮ್ಮ ಜೀವನದಲ್ಲಿ ಎರಡು ಬಾರಿ ದಾವೂದ್ ಇಬ್ರಾಹಿಂನನ್ನು ಭೇಟಿಯಾದ ಬಗ್ಗೆ ಬರೆದಿದ್ದಾರೆ. ಬಾಲಿವುಡ್​ಗೂ ಭೂಗತ ಲೋಕಕ್ಕೂ ನೇರಾನೇರ ನಂಟು ಇದೆ ಎಂಬ ಕಾಲಘಟ್ಟದಲ್ಲಿ ಈ ಭೇಟಿ ನಡೆದಿತ್ತು. ಈ ಭೇಟಿ ಹೇಗೆ ಆಯಿತು ಹಾಗೂ ದಾವೂದ್​ ತಮ್ಮ ಮುಂದೆ ಹೇಳಿದ್ದೇನೆ ಎಂಬ ಬಗ್ಗೆ ವಿವರಣೆ ನೀಡಿರುವ ರಿಷಿ ಕಪೂರ್​ ಅವರು, ಪರೋಕ್ಷವಾಗಿ ಬಾಲಿವುಡ್​ಗೆ ಇರುವ ಲಿಂಕ್​ ಕುರಿತು ಮಾತನಾಡಿದ್ದಾರೆ.  'ಕೆಲವು ಸ್ನೇಹಿತರೊಂದಿಗೆ ಸಂಗೀತ ಕಾರ್ಯಕ್ರಮಕ್ಕಾಗಿ ದುಬೈನಲ್ಲಿದ್ದಾಗ ಅಪರಿಚಿತರು ಫೋನ್​ ಮಾಡಿದ್ದರು. ಅದರಲ್ಲಿ ಅವರು  ಭಾಯ್ ನಿಮ್ಮೊಂದಿಗೆ  ಮಾತನಾಡಲು ಬಯಸುತ್ತಾರೆ ಎಂದು ಹೇಳಿದರು. ನಂತರ, ನನ್ನನ್ನು ಮತ್ತು  ಸ್ನೇಹಿತರನ್ನು ಆ ಭಾಯ್ ಎನಿಸಿಕೊಂಡಿದ್ದ ಡಾನ್ ದಾವೂದ್​ ಇಬ್ರಾಹಿಂ ಚಹಕ್ಕೆ ಆಹ್ವಾನಿಸಿದ್ದರು ಎಂದು  ಹೇಳಿದ್ದಾರೆ. 

ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ? ನಟ ಜಗ್ಗೇಶ್​ ಟ್ವೀಟ್​ ವೈರಲ್​

 ಅಷ್ಟಕ್ಕೂ ಅವರು ನನ್ನನ್ನು ಆಹ್ವಾನಿಸಿದ್ದು,  1993ರ ಬಾಂಬೆ ಬಾಂಬ್ ಸ್ಫೋಟಕ್ಕೂ ಮೊದಲು. ಆ ಸಂದರ್ಭದಲ್ಲಿ ನನ್ನನ್ನು ಕರೆದಿದ್ದ ಅವರು,   ನಿಮಗೆ ಭಾರತದಿಂದ ಎಂದಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದರು. ಈ ಮಾತನ್ನು ಕೇಳಿ ನನಗೆ ಅಚ್ಚರಿಯಾಗಿತ್ತು. ಆದರೆ ಇವರ ಲಿಂಕ್​ ಬಗ್ಗೆ ಸಾಕಷ್ಟು ನನಗೆ ತಿಳಿದಿದ್ದರಿಂದ ಸುಮ್ಮನಿದ್ದೆ. ಹೊರಡುವ ಮುನ್ನ ಅವರು,  ನಿಮಗೆ ಏನಾದರೂ ಸಹಾಯ ಬೇಕಿದ್ದರೆ ಕೇಳಿ,  ಹಣದ ಅಗತ್ಯವಿದ್ದರೂ ತಿಳಿಸಿ,  ನನ್ನನ್ನು ಕೇಳಲು ಹಿಂಜರಿಯಬೇಡಿ ಎಂದಿದ್ದರು.  ಆದರೆ ನನಗೆ ಅದು ಬೇಕಿರಲಿಲ್ಲ. ನಾನು ಅದನ್ನು ನಿರಾಕರಿಸಿದೆ ಎಂದಿರುವ ನಟ,  1989 ರಲ್ಲಿ ದುಬೈನ ಲೆಬನಾನಿನ ಅಂಗಡಿಯಲ್ಲಿ ನೀತು ಕಪೂರ್ ಅವರೊಂದಿಗೆ ಶಾಪಿಂಗ್ ಮಾಡುವಾಗ ದಾವೂದ್ ಅವರನ್ನು ಭೇಟಿಯಾದ ಬಗ್ಗೆ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ,  ರಾಜ್ ಕಪೂರ್ ಅವರ ಅಂತ್ಯಕ್ರಿಯೆಗೆ ದಾವೂದ್ ಇಬ್ರಾಹಿಂ ತನ್ನ ಪ್ರತಿನಿಧಿಯನ್ನು ಕಳುಹಿಸಿದ್ದನ್ನು ರಿಷಿ ಕಪೂರ್ ಒಪ್ಪಿಕೊಂಡಿದ್ದಾರೆ. ಅವರನ್ನು ಭೇಟಿಯಾಗಿದ್ದ ಬಗ್ಗೆ ಬಹಳ ವರ್ಷಗಳ ನಂತರ ಪಶ್ಚಾತ್ತಾಪ ಎನ್ನಿಸಿದ್ದೂ ಇದೆ ಎಂದು ನಟ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. 

Follow Us:
Download App:
  • android
  • ios