Asianet Suvarna News Asianet Suvarna News

ಮಾಜಿ ಪತಿಯೊಂದಿಗೆ ಕರಿಷ್ಮಾ ಕಪೂರ್​ ಡೇಟಿಂಗ್​: ಇದೆಂಥನಪ್ಪ ಅಂತಿದ್ದಾರೆ ಫ್ಯಾನ್ಸ್​!

ತಮ್ಮ ಪತಿ ಸಂಜಯ್​ ಕಪೂರ್​ ಅವರಿಗೆ ವಿಚ್ಛೇದನ ಕೊಟ್ಟು ಒಂಟಿಯಾಗಿ ವಾಸಿಸುತ್ತಿರುವ ನಟಿ ಕರಿಷ್ಮಾ ಕಪೂರ್​ ಪುನಃ ಮಾಜಿ ಪತಿ ಜೊತೆ ಡಿನ್ನರ್​ ಡೇಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.
 

Users furious over Karishma Kapoors dinner date at 48 with ex husband
Author
First Published May 28, 2023, 3:04 PM IST

90 ರ ದಶಕದಲ್ಲಿ ಕರಿಷ್ಮಾ ಕಪೂರ್ (Karishma Kapoor) ನಟನಾ ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿದ್ದರು. ಗೋವಿಂದ, ಶಾರುಖ್ ಖಾನ್ ರಂತಹ ಸ್ಟಾರ್ ಗಳ ಜೊತೆ ಸಿನಿಮಾ ಮಾಡಿದ್ದಾರೆ. ಅವರು 'ರಾಜಾ ಬಾಬು', 'ಕೂಲಿ ನಂಬರ್ ಒನ್', 'ಸಾಜನ್ ಚಲೇ ಸಸುರಾಲ್' ಮತ್ತು 'ಜೀತ್' ನಂತಹ ಚಿತ್ರಗಳೊಂದಿಗೆ ಸ್ಟಾರ್‌ಡಮ್ ಗಳಿಸಿದರು. ಅಮೀರ್ ಖಾನ್ ಜೊತೆಗಿನ 'ರಾಜಾ ಹಿಂದೂಸ್ತಾನಿ' ಮತ್ತು ಶಾರುಖ್ ಖಾನ್ ಜೊತೆಗಿನ 'ದಿಲ್ ತೋ ಪಾಗಲ್ ಹೈ' ಆಕೆಯನ್ನು ಟಾಪ್ ಸ್ಟಾರ್‌ಗಳ ಪಟ್ಟಿಯಲ್ಲಿ ಸೇರಿದವರು. ಕರಿಷ್ಮಾ ಕಪೂರ್ ಈಗ ಚಿತ್ರರಂಗದಿಂದ ದೂರವಿರಬಹುದು, ಆದರೆ ಅವರು  ಸದಾ ಜನಮನದಲ್ಲಿದ್ದಾರೆ. ಕೆಲವೊಮ್ಮೆ ಅವರ ಫಿಟ್​ನೆಸ್​ ಬಗ್ಗೆ, ಕೆಲವೊಮ್ಮೆ ಅವರ ಪಾರ್ಟಿ ಬಗ್ಗೆ ಮತ್ತು ಕೆಲವೊಮ್ಮೆ ಅವರ ವೈಯಕ್ತಿಕ ಜೀವನದ ಬಗ್ಗೆ  ಚರ್ಚೆಗಳು ನಡೆಯುತ್ತಲೇ ಇರುತ್ತವೆ.  ಈಗ ಇತ್ತೀಚೆಗೆ, ನಟಿ ತಮ್ಮ ಮಾಜಿ ಪತಿ ಸಂಜಯ್ ಕಪೂರ್ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.  ಈ ಕಾರಣದಿಂದಾಗಿ ನಟಿ ಮತ್ತೆ ಬೆಳಕಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ, ಕರಿಷ್ಮಾ ಜೊತೆಗೆ ಅವರ ಮಗಳು ಸಮೈರಾ, ಮಗ ಕಿಯಾನ್ ಮತ್ತು ಚಂಕಿ ಪಾಂಡೆ ಅವರ ಕಿರಿಯ ಮಗಳು ಸಹ ಹಾಜರಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಅಂದಹಾಗೆ ಕರಿಷ್ಮಾ ಅವರಿಗೆ ಈಗ 48 ವರ್ಷ ವಯಸ್ಸು. 

ಈಗ ಮಾಜಿ ಪತಿ ಸಂಜಯ್ ಕಪೂರ್ ಜೊತೆ ಕರಿಷ್ಮಾ ಡಿನ್ನರ್ ಡೇಟ್ (Dinner date) ಮಾಡಿರುವುದು ಅದು ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ಭೇಟಿಯ ಬಗ್ಗೆ ಹಲವು ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.  ಕೆಲವರು ವಿಚ್ಛೇದನದ ನಂತರವೂ ತಮ್ಮ ನಡುವಿನ ಪರಸ್ಪರ ತಿಳಿವಳಿಕೆಯನ್ನು ಹೊಗಳಿದರೆ, ಕೆಲವರು ವಿಚ್ಛೇದನದ ನಂತರ ಸ್ನೇಹವನ್ನು ತೆಗಳುತ್ತಿದ್ದಾರೆ. 

'ಬ್ರೌನ್​'ಗಾಗಿ ರಾತ್ರಿ ಊಟ ತೊರೆದು ಮದ್ಯ ಸೇವಿಸ್ತಿದ್ದ ಕರಿಷ್ಮಾ ಕಪೂರ್​!

ಕರಿಷ್ಮಾ ಮತ್ತು ಸಂಜಯ್ ಕಪೂರ್ (Sanjay Kapoor) ಅವರ ಡಿವೋರ್ಸ್​ ನಂತರದ ಡೇಟಿಂಗ್​ ಕುರಿತು ಕೆಲವರು 'ಇದು ವಿಚಿತ್ರ ಪದ್ಧತಿಯಾಗಿದೆ. ಮದುವೆಯಾಗುವುದು,  ನಂತರ  ವಿಚ್ಛೇದನ ಮಾಡುವುದು, ನಂತರ ಸ್ನೇಹಿತರಾಗುವುದು ಕೇಳಲು ಅಸಂಬಂಧ ಎನಿಸುತ್ತದೆ ಎಂದಿದ್ದರೆ ಇನ್ನು ಕೆಲವರು, ದಂಪತಿ ನಡುವೆ ಏನೇ ಇರಲಿ. ಮಕ್ಕಳಿಗಾಗಿ   ಪರಸ್ಪರ ಸಂಪರ್ಕದಲ್ಲಿರಲು ಇದು ಅವಶ್ಯಕವಾಗಿದೆ ಮತ್ತು ಈ ನಿಟ್ಟಿನಲ್ಲಿ ಕರಿಷ್ಮಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.  ಕರಿಷ್ಮಾ ತಮ್ಮ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರನ್ನೂ ಡಿನ್ನರ್​ ಡೇಟ್​ನಲ್ಲಿ ಕರೆದುಕೊಂಡು ಹೋಗಿರುವುದನ್ನು ಅವರು ಶ್ಲಾಘಿಸುತ್ತಿದ್ದಾರೆ.

ಅಂದಹಾಗೆ, ಕರಿಷ್ಮಾ ಕಪೂರ್ 2003 ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು ಮತ್ತು 2016 ರಲ್ಲಿ ಇಬ್ಬರೂ ಬೇರ್ಪಟ್ಟರು. ವಿಚ್ಛೇದನದ ನಂತರ, 48 ವರ್ಷದ ಕರಿಷ್ಮಾ ತನ್ನ ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸುತ್ತಿದ್ದಾರೆ.

ಇನ್ನು ಕರಿಷ್ಮಾ ಕಪೂರ್ (Karisma Kapoor) ಚಿತ್ರರಂಗದ ಕುರಿತು ಹೇಳುವುದಾದರೆ,  1991ರಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಕರಿಷ್ಮಾ ಬಹಳ ದಿನಗಳ ನಂತರ ಮತ್ತೆ ನಟನಾ ಲೋಕಕ್ಕೆ ಮರಳಲಿದ್ದಾರೆ. ಅವರು ಈಗ 'ಬ್ರೌನ್' ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ರೀಟಾ ಬ್ರೌನ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ವಹಿಸಿದ್ದಾರೆ.  ಕರಿಷ್ಮಾ ಕಪೂರ್​ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಬಹಳ  ತ್ಯಾಗ ಮಾಡಿರುವ ಬಗ್ಗೆ ಹೇಳಿಕೊಂಡಿದ್ದರು.

ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಬ್ರೌನ್​ (Brown) ವೆಬ್​ಸೀರಿಸ್​ಗಾಗಿ ಅದರಲ್ಲಿನ ರೀಟಾ ಪಾತ್ರಕ್ಕಾಗಿ ರಾತ್ರಿಯಲ್ಲಿ ತಿನ್ನುವುದನ್ನು ತ್ಯಜಿಸಿರುವುದು ಮಾತ್ರವಲ್ಲದೇ ಮದ್ಯ ಸೇವನೆ ಮಾಡುತ್ತಿದ್ದೆ ಎಂದಿದ್ದ ನಟಿ, ಇದೆಲ್ಲವರೂ ಸಿನಿಮಾದಲ್ಲಿನ ಪಾತ್ರಕ್ಕಾಗಿ ಎಂದು  ಬಹಿರಂಗಪಡಿಸಿದ್ದರು. 'ಗ್ಲಾಮರಸ್ ಇಮೇಜ್ ಬಿಟ್ಟು ಮೇಕಪ್ ಇಲ್ಲದೆ ಕಾಣಿಸಿಕೊಳ್ಳಲು ಹೇಳಿದ್ದರೆ ನೀವು ಒಪ್ಪಿಕೊಳ್ಳುತ್ತಿದ್ದಿರಾ' ಎಂಬ ಪ್ರಶ್ನೆಯನ್ನು  ಕರಿಷ್ಮಾ ಅವರಿಗೆ  ಕೇಳಿದಾಗ,  ಕರಿಷ್ಮಾ, ‘ಈ ಪಾತ್ರ ಹೇಗಿದೆ ಎಂಬುದನ್ನು ತೋರಿಸಲು ಬಯಸಿದ್ದೆ. ಮೇಕ್ಅಪ್ (Make up) ಇಲ್ಲದೆ ಕಾಣಿಸಿಕೊಳ್ಳಲು ನನಗೆ ಯಾವುದೇ ತೊಂದರೆ ಇರಲಿಲ್ಲ. ನಟಿಯಾಗಿ ಪ್ರತಿದಿನ ಬೆಳೆಯುವುದು, ಕಲಿಯುವುದನ್ನು  ನನ್ನ ವೃತ್ತಿಜೀವನದುದ್ದಕ್ಕೂ ನಾನು ಅಳವಡಿಸಿಕೊಂಡು ಬಂದವಳು ಎಂದಿದ್ದರು. 

Follow Us:
Download App:
  • android
  • ios