Asianet Suvarna News Asianet Suvarna News

ಶೂಟಿಂಗ್ ಸ್ಪಾಟ್​​ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಬಾಲಿವುಡ್​ನ ಕರಾಳ ಪದ್ಧತಿಯನ್ನು ಮನ ಬಿಚ್ಚಿ ಮಾತನಾಡಿದ್ದಾರೆ ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ. ಅವರು ಹೇಳಿದ್ದೇನು? 
 

The Kerala Story actress Adah Sharma reveals ugly side of Hindi film industry
Author
First Published May 27, 2023, 4:48 PM IST

ಬಾಲಿವುಡ್ ನಟಿ ಅದಾ ಶರ್ಮಾ  ತನ್ನ ಇತ್ತೀಚಿನ ಚಿತ್ರವಾದ ದಿ ಕೇರಳ ಸ್ಟೋರಿಯ (The Kerala Story) ಯಶಸ್ಸಿನೊಂದಿಗೆ ವಿಶ್ವದ ಅಗ್ರಸ್ಥಾನದಲ್ಲಿದ್ದಾರೆ. ಆದಾಗ್ಯೂ, ಭಾರತೀಯ ಚಲನಚಿತ್ರೋದ್ಯಮದಲ್ಲಿ, ನಿರ್ದಿಷ್ಟವಾಗಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಲಿಂಗ ತಾರತಮ್ಯವನ್ನು ಇಷ್ಟಪಡುವುದಿಲ್ಲ ಎಂದು ನಟಿ ಬಹಿರಂಗಪಡಿಸಿದ್ದಾರೆ. ಅದಾ ಶರ್ಮಾ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂಗಳಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ  'ಒಳ್ಳೆಯ, ಕೆಟ್ಟ ಮತ್ತು ಕೊಳಕು' ಜನರನ್ನು ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇವೆಲ್ಲವುಗಳ ಹೊರತಾಗಿಯೂ ವಿಶೇಷವಾಗಿ ಬಾಲಿವುಡ್​ನಲ್ಲಿ ಇರುವ ಕೆಟ್ಟ ಪದ್ಧತಿಯ ಕುರಿತು ಅವರು ಈಗ ಮನಬಿಚ್ಚಿ ಮಾತನಾಡಿದ್ದಾರೆ. ಬಾಲಿವುಡ್​ನ  ತಾರತಮ್ಯದ ಕುರಿತು ಅವರು ದನಿ ಎತ್ತಿದ್ದಾರೆ. ಅದಾ ಶರ್ಮ್ ಇದನ್ನು ಹಿಂದಿ ಚಿತ್ರರಂಗದ ಕೊಳಕು ಭಾಗ ಎಂದಿದ್ದಾರೆ.

ಇತ್ತೀಚಿನ ಮಾಧ್ಯಮ ಸಂವಾದದಲ್ಲಿ, ಅದಾ ಶರ್ಮಾ (Adah Sharma) ಅವರು ಫಿಲ್ಮ್​ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಬಾಲಿವುಡ್​ನಲ್ಲಿ ಲಿಂಗ ತಾರತಮ್ಯವನ್ನು ಇಷ್ಟಪಡುವುದಿಲ್ಲ ಎಂದು ಬಹಿರಂಗಪಡಿಸಿದರು. ನಿರ್ದೇಶಕರ ಮನೋಭಾವಗಳು ಯಾವುದೇ ಉದ್ಯಮದಲ್ಲಿ ನಟಿಯರನ್ನು  ಆರಾಮದಾಯಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಯಾವುದೇ ಭಾಷೆ ಇರಲಿ,  ನಟರನ್ನು ಮತ್ತು ಸಿಬ್ಬಂದಿಯನ್ನು ಗೌರವಿಸುವ ನಿರ್ದೇಶಕರು ನಟರ ಕೆಲಸದ ಜೀವನವನ್ನು ಸುಲಭಗೊಳಿಸಲು ಸಾಧ್ಯ. ಆದರೆ  ಗೌರವಯುತವಾಗಿ ವರ್ತಿಸದ ವ್ಯಕ್ತಿಯು ನಟರ ಶಕ್ತಿಯನ್ನು ಹಾಳುಮಾಡುತ್ತಾರೆ ಎಂದಿದ್ದಾರೆ ಅದಾ.

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ
 
ಅಷ್ಟಕ್ಕೂ ಲಿಂಗತಾರಮ್ಯದ (Discrimination) ಕುರಿತು ಅವರು ಹೇಳಿದ್ದೇನೆಂದರೆ,  ಮೊದಲು ನಟಿಯರನ್ನು ಸೆಟ್‌ಗೆ ಕರೆದಾಗ ಏನಾಗುತ್ತದೆ ಎನ್ನುವ ಕೆಟ್ಟ ಮನೋಭಾವವನ್ನು ಶೇರ್​  ಮಾಡಿಕೊಂಡಿದ್ದಾರೆ. ಸೆಟ್​ಗೆ ಮೊದಲು ನಟಿಯರು ಬಂದರೆ ಅವರು ನಾಯಕ ನಟ ಬರುವವರೆಗೆ ಕಾಯಲೇಬೇಕು. ಆದರೆ ನಟರಿಗೆ ಈ ರೀತಿ ಇಲ್ಲ. ಅವರು ಬಂದ ತಕ್ಷಣ ಶೂಟಿಂಗ್​ ಶುರುವಾಗುತ್ತದೆ. ಇದೊಂದು ಕೊಳಕು ಮನಸ್ಥಿತಿ. ಇದು ಲಿಂಗ ತಾರತಮ್ಯದ ಒಂದು ರೂಪ ಎಂದಿದ್ದಾರೆ. ಈ ಹಿಂದೆ ಕೂಡ ಹಲವು ನಟಿಯರು ಲಿಂಗ ತಾರತಮ್ಯದ ಕುರಿತು ಮಾತನಾಡಿದ್ದು ಇದೆ. ಸಂಬಳದ ವಿಷಯದಲ್ಲಿ ಬಂದಾಗ  ನಾಯಕಿ-ನಾಯಕನ ಪಾತ್ರಕ್ಕೆ ಒಂದೇ ರೀತಿ ಮಹತ್ವ ಇದ್ದರೂ ನಾಯಕನಿಗೆ ಹೆಚ್ಚು ಸಂಭಾವನೆಯ ಕುರಿತು ಹಲವು ನಟಿಯರು ದನಿ ಎತ್ತಿದ್ದಾರೆ, ಎತ್ತುತ್ತಲೂ ಇದ್ದಾರೆ. ಇದೀಗ ಇನ್ನೊಂದು ಕರಾಳ ಮುಖವನ್ನು ಅದಾ ಬಿಚ್ಚಿಟ್ಟಿದ್ದಾರೆ. 
 
ಪುರುಷ ಮತ್ತು ಮಹಿಳಾ ನಟರಿಗೆ ಸಮಾನ ವೇತನವನ್ನು ಕೇಳುವುದು ಸ್ತ್ರೀವಾದಿಗಳಿಗೆ ಮತ್ತು ಒಟ್ಟಾರೆಯಾಗಿ ಚಲನಚಿತ್ರೋದ್ಯಮಕ್ಕೆ ಅತ್ಯಂತ ಮಹತ್ವದ್ದಾಗಿದೆ. ಆದಾಗ್ಯೂ, ವೇತನ ಸಮಾನತೆಯ ಸಮಸ್ಯೆಯನ್ನು ಸಮರ್ಪಕವಾಗಿ ಪರಿಹರಿಸುವ ಮೊದಲು ಉದ್ಯಮವು ಲಿಂಗ ತಾರತಮ್ಯದ ಬೇರುಗಳನ್ನು ಪರಿಹರಿಸಬೇಕಾಗಿದೆ ಎಂದಿದ್ದಾರೆ  ಅದಾ. ಇನ್ನೊಂದೆಡೆ, ನಾಯಕಿ ಪ್ರಧಾನ ಚಿತ್ರಗಳೂ ಅತಿ ಕಡಿಮೆ ಬರುತ್ತಿವೆ ಎಂದು ಕೆಲ ನಾಯಕಿಯರು ಅಸಮಾಧಾನ ವ್ಯಕ್ತಪಡಿಸಿದ್ದು ಇದೆ. ಅದರಲ್ಲಿಯೂ ಬಾಲಿವುಡ್​ನಲ್ಲಿ ನಾಯಕರೇ (Actresses) ಗ್ರೇಟ್​ ಎನ್ನುವ ಮನಸ್ಥಿತಿ ಇದೆ ಎನ್ನುವುದನ್ನು ಇದಾಗಲೇ ಹಲವು ನಟಿಯರು ಮಾತನಾಡಿದ್ದರು. ಇದು ನಿಜ ಎಂದಿದ್ದಾರೆ ಅದಾ ಶರ್ಮಾ. 

Hansika Motwani: ಆ ನಟ ಪದೇ ಪದೇ ಅದನ್ನೇ ಕೇಳ್ತಿದ್ದ, ಭಯಾನಕ ಅನುಭವ ಬಿಚ್ಚಿಟ್ಟ ನಟಿ!

ಇನ್ನು ದಿ ಕೇರಳ ಸ್ಟೋರಿಯ ಕುರಿತು ಹೇಳುವುದಾದರೆ ಇದು ಬಾಲಿವುಡ್​ನ ಹಲವು ದಾಖಲೆಯನ್ನು ಹಿಂದಕ್ಕಿ 300 ಕೋಟಿ ರೂಪಾಯಿ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ. ಈ ಚಿತ್ರವು  200 ಕೋಟಿಯನ್ನು ಕ್ಲಬ್ ಸೇರಿ ಎರಡು ವಾರಗಳೇ ಕಳೆದಿವೆ.  ವಿಶ್ವಾದ್ಯಂತ  ಈಗಲೂ ಬಾಕ್ಸ್ ಆಫೀಸ್ (Box Office) ರನ್ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ನಾಗಾಲೋಟದಿಂದ ಚಿತ್ರ ಓಡುತ್ತಿದೆ.  ವೀಕೆಂಡ್​ನಲ್ಲಿ   ಸಿನಿಮಾ ಇನ್ನೂ ಹೆಚ್ಚಿನ ರೀತಿಯಲ್ಲಿ ಓಡುತ್ತಿದೆ. ಸುದಿಪ್ತೋ ಸೇನ್ ಅವರು ನಿರ್ದೇಶಿಸಿದ ಸಿನಿಮಾ ಥಿಯೇಟರ್​ನಲ್ಲಿ ಮೇ 5ರಂದು ರಿಲೀಸ್ ಆಗಿತ್ತು. ಟ್ರೈಲರ್ ರಿಲೀಸ್ ಆಗಿ ಸಾಕಷ್ಟು ವಿವಾದ ಸೃಷ್ಟಿಯಾಗಿದ್ದಾಗಲೇ ಅದರ ಮಧ್ಯೆಯೇ ಸಿನಿಮಾ ರಿಲೀಸ್ ನಡೆದಿತ್ತು. ಸಿನಿಮಾವನ್ನು ಆರಂಭದಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಬ್ಯಾನ್ ಮಾಡಲಾಗಿದ್ದು, ಇದರ ನಡುವೆಯೇ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. 

Follow Us:
Download App:
  • android
  • ios